Sangatya News - ಸಾಂಗತ್ಯ ನ್ಯೂಸ್

Sangatya News - ಸಾಂಗತ್ಯ ನ್ಯೂಸ್ Kannada News

*ಕೋಟೆಕಾರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ  ಜಮಾಲ್ ಅಜ್ಜಿನಡ್ಕ, ಮ್ಯಾಥ್ ಡಿಸೋಜಾ ಆಯ್ಕೆ*ಮಂಗಳೂರು (ಜು 22): ಕೋಟೆಕಾರು ಪಟ್ಟಣ ಪ...
22/07/2025

*ಕೋಟೆಕಾರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಜಮಾಲ್ ಅಜ್ಜಿನಡ್ಕ, ಮ್ಯಾಥ್ ಡಿಸೋಜಾ ಆಯ್ಕೆ*

ಮಂಗಳೂರು (ಜು 22): ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಿ ವಿಭಾಗದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ ಜಮಾಲ್ ಅಜ್ಜಿನಡ್ಕ ಪುನರಾಯ್ಕೆಗೊಂಡರೆ ಎ ವಿಭಾಗದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಮ್ಯಾಥ್ಯು ಡಿಸೋಜಾ ಆಯ್ಕೆಗೊಂಡರು.

ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೀರಿ ಮ್ಯಾರೇಜ್ ಮಹಲ್ ನಲ್ಲಿ ಉಳ್ಳಾಲ ಬ್ಲಾಕ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಬೋಳಿಯಾರ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಅಶ್ರಫ್ ಕೆಸಿ ರೋಡ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತಾನಾಡಿದ ರಮೇಶ್ ಶೆಟ್ಟಿ ಬೋಳಿಯಾರ್ ಪಕ್ಷ ಸಂಘಟನೆಯಲ್ಲಿ ಕೋಟೆಕಾರು ವಲಯ ಸಮಿತಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಬಾಹುಳ್ಯವನ್ನು ಉಳಿಸಿ ಎಲ್ಲ ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಗೊಳಿಸುವಲ್ಲಿ ಕಾರ್ಯಕರ್ತರು ಮತ್ತು ಬೂತ್ ಅಧ್ಯಕ್ಷರು ಹೆಚ್ಚಿನ ಶ್ರಮ ವಹಿಸಲು ಕರೆ ಕೊಟ್ಟರು.

ಅದೇ ರೀತಿ ಉಳ್ಳಾಲ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರ ಶ್ರಮ ಮತ್ತು ಅಭಿವೃದ್ಧಿಯನ್ನು ಜನ ಮೆಚ್ಚಿ ಕೊಂಡ ಬಗ್ಗೆ ಹಾಗೂ ಕೋಟೆಕಾರು ವಲಯದಲ್ಲಿ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಹೆಚ್ಚಿನ ಪವರ್ ಸ್ಟೇಷನ್ ಗಳನ್ನು ಮಾಡುವಲ್ಲಿ ಗ್ರಾಮದ ಜನರಿಗೆ ಮತ್ತು ಕೋಟೆಕಾರು ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳನ್ನು ಮಾಡಲು ಹೆಚ್ಚಿನ ಅನುದಾನ ನೀಡಿ ಕೆಲಸ ಕಾರ್ಯಗಳನ್ನು ಮಾಡಿಸಿದ ಬಗ್ಗೆ ವಿವರಣೆ ನೀಡಿದರು.

ಈ ವೇಳೆ ಎಲ್ಲಾ ಹಳೇ ಸಮಿತಿಗಳನ್ನು ಬರ್ಖಾಸ್ತು ಮಾಡಿ ಹೊಸ ವಲಯ ಸಮಿತಿಗೆ ಎರಡು ವಿಭಾಗದಲ್ಲಿ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು. ವಲಯ ಒಂದನೆ ವಿಭಾಗಕ್ಕೆ 7 ಬೂತ್ ಗಳ ವಲಯ ಸಮಿತಿ ಮತ್ತು ಎರಡನೆ ವಲಯ ಸಮಿತಿಗೆ 8 ಬೂತ್ ಗಳ ವಲಯ ಸಮಿತಿ ರಚನೆ ಮಾಡಲಾಯಿತು.

◾ಉಲೆಮಾ ಒಕ್ಕೂಟದ ಸಭೆಯಲ್ಲಿ ರಾಜಕೀಯ ಬೇಕಾ?◾◾ಶಾಫಿ ಸಅದಿ ಬಾಯಿ ಮುಚ್ಚಿಸಿದ ಬಿ. ಕೆ ಹರಿಪ್ರಸಾದ್◾ಇಂದು ಮಂಗಳೂರಿಗೆ ಆಗಮಿಸಿದ್ದ ಎಐಸಿಸಿ ಕಾರ್ಯದರ...
06/06/2025

◾ಉಲೆಮಾ ಒಕ್ಕೂಟದ ಸಭೆಯಲ್ಲಿ ರಾಜಕೀಯ ಬೇಕಾ?◾

◾ಶಾಫಿ ಸಅದಿ ಬಾಯಿ ಮುಚ್ಚಿಸಿದ ಬಿ. ಕೆ ಹರಿಪ್ರಸಾದ್◾

ಇಂದು ಮಂಗಳೂರಿಗೆ ಆಗಮಿಸಿದ್ದ ಎಐಸಿಸಿ ಕಾರ್ಯದರ್ಶಿ ಬಿ. ಕೆ ಹರಿಪ್ರಸಾದ್ ಜಿಲ್ಲೆಯ ಉಲೆಮಾ ಒಕ್ಕೂಟದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಈ ಸಮಯದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿರುವವರ ಪರವಾಗಿ ಶಾಫಿ ಸಅದಿ ಮಾತನಾಡಿ ಶೋಕಾಸ್ ನೋಟಿಸ್ ನೀಡಿರುವುದನ್ನು ಖಂಡಿಸಿದಾಗ ಬಿ. ಕೆ ಹರಿಪ್ರಸಾದ್ ನಾನು ಇಲ್ಲಿ ಕರಾವಳಿಯ ಪರಿಸ್ಥಿತಿ ಅರಿಯಲು ಹಾಗೂ ಅದನ್ನು ಪರಿಹರಿಸಲು ತಮ್ಮನ್ನು ಭೇಟಿಯಾಗಿದ್ದೇನೆ. ಇಲ್ಲಿ ರಾಜಕೀಯ ವಿಷಯಗಳನ್ನು ಪ್ರಸ್ತಾಪಿಸಬೇಡಿ ಎಂದು ಹೇಳಿದ ಘಟನೆ ನಡೆದಿದೆ.

ಮಂಗಳೂರು ಸುದ್ದಿ 24×7

ಕೋಟೆಕಾರ್ ಗ್ರಾಮದಲ್ಲಿ ಪ್ರವಾಹದಲ್ಲಿ ಕುರಿ ಗಳನ್ನು ಕಳೆದು ಕೊಂಡ ವ್ಯಕ್ತಿಗೆ ಪರಿಹಾರ ಬಿಡುಗಡೆ.ಮಂಗಳೂರು ( ಜೂನ್ 2 ) ಕೋಟೆಕಾರ್ ಗ್ರಾಮದಲ್ಲಿ ಉ...
06/06/2025

ಕೋಟೆಕಾರ್ ಗ್ರಾಮದಲ್ಲಿ ಪ್ರವಾಹದಲ್ಲಿ ಕುರಿ ಗಳನ್ನು ಕಳೆದು ಕೊಂಡ ವ್ಯಕ್ತಿಗೆ ಪರಿಹಾರ ಬಿಡುಗಡೆ.

ಮಂಗಳೂರು ( ಜೂನ್ 2 ) ಕೋಟೆಕಾರ್ ಗ್ರಾಮದಲ್ಲಿ ಉಂಟಾದ ಪ್ರವಾಹದಲ್ಲಿ ಕೆಸಿ ರೋಡ್ ಯಾಕೂಬ್ ಎಂಬುವವರ ಕುರಿಗಳು ಮೃತಪಟ್ಟ ಹಿನ್ನಲೆಯಲ್ಲಿ ತಾಲೂಕು ತಹಶೀಲ್ದಾರ್ ತುರ್ತು ಪರಿಹಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ.

ಕೋಟೆಕಾರು ಅಜ್ಜಿನಡ್ಕದಲ್ಲಿ ಯಾಕೂಬ್ ಅವರಿಗೆ ಸೇರಿದ ಒಟ್ಟು 73 ಕುರಿಗಳನ್ನು ಶೆಡ್ ನಲ್ಲಿ ಇಡಲಾಗಿತ್ತು. ರಾತ್ರಿ ಸಮಯದಲ್ಲಿ ಉಂಟಾದ ಏಕಾಏಕಿ ಪ್ರವಾಹದಿಂದ ಒಟ್ಟು 68 ಕುರಿಗಳು ಮೃತಪಟ್ಟಿದ್ದು 5 ಕುರಿಗಳು ಜೀವ ಉಳಿಸಿಕೊಂಡಿತ್ತು. ಈ ಕುರಿತ ಮಾಹಿತಿ ಸಿಕ್ಕ ಕೂಡಲೇ ಹಜ್ ಯಾತ್ರೆಗೆ ತೆರಳಿರುವ ಯುಟಿ ಖಾದರ್ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ತುರ್ತು ಪರಿಹಾರ ಬಿಡುಗಡೆ ಮಾಡುವಂತೆ ಸೂಚಿಸಿದ್ದರು.

Address

Mangalore

Website

Alerts

Be the first to know and let us send you an email when Sangatya News - ಸಾಂಗತ್ಯ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Share