ಮಾಹಿತಿ ಕೇಂದ್ರ

ಮಾಹಿತಿ ಕೇಂದ್ರ ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ.

30/08/2025
ಸಮಾಜ ಕಲ್ಯಾಣ ಇಲಾಖೆ - 2025-26ನೇ ಸಾಲಿನ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಡ್ರೋನ್ ಉಪಕರಣವ...
28/08/2025

ಸಮಾಜ ಕಲ್ಯಾಣ ಇಲಾಖೆ - 2025-26ನೇ ಸಾಲಿನ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಡ್ರೋನ್ ಉಪಕರಣವನ್ನು ಉಪಯೋಗಿಸುವ ಸಂಬಂಧ 15 ದಿನಗಳ ವಸತಿಯುತ ತರಬೇತಿ ನೀಡುವ ಬಗ್ಗೆ.

ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 5,000ಕ್ಕೂ ಅಧಿಕ Junior Associates (Bank Clerk) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.Any Degr...
24/08/2025

ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 5,000ಕ್ಕೂ ಅಧಿಕ Junior Associates (Bank Clerk) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.Any Degree -ಪದವಿ ಅಂತಿಮ ವರ್ಷದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.20-28 (OBC-31, SC/ST-33) ವರ್ಷದೊಳಗಿನ ಅಭ್ಯರ್ಥಿಗಳು 2025 ಅಗಸ್ಟ್-06 ರಿಂದ 26 ರೊಳಗಾಗಿ ಅರ್ಜಿ ಸಲ್ಲಿಸಬಹುದು,ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಪರೀಕ್ಷಾ ಕೇಂದ್ರಗಳಿವೆ.
Online Preliminary Exam: ಸೆಪ್ಟೆಂಬರ್-2025.
Main Exam: ನವೆಂಬರ್-2025

ಹೆಚ್ಚಿನ ಮಾಹಿತಿಗಾಗಿ:
https://bank.sbi/careers
ಅಥವಾ
https://www.sbi.co.in/careers

ಸಮಾಜ ಕಲ್ಯಾಣ ಇಲಾಖೆಯ ನಿಗಮಗಳ ಅಡಿಯಲ್ಲಿ ಜಾರಿಗೆ ತರಲಾದ ಸ್ವಯಂ ಉದ್ಯೋಗ (ನೇರಸಾಲ) ಯೋಜನೆಗೆ ಅರ್ಜಿ ಆಹ್ವಾನಿಸಿಲಾಗಿದೆ.ಸ್ವಯಂ ಉದ್ಯೋಗ ನೇರಸಾಲ ...
24/08/2025

ಸಮಾಜ ಕಲ್ಯಾಣ ಇಲಾಖೆಯ ನಿಗಮಗಳ ಅಡಿಯಲ್ಲಿ ಜಾರಿಗೆ ತರಲಾದ ಸ್ವಯಂ ಉದ್ಯೋಗ (ನೇರಸಾಲ) ಯೋಜನೆಗೆ ಅರ್ಜಿ ಆಹ್ವಾನಿಸಿಲಾಗಿದೆ.

ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಹಣ್ಣು ಮತ್ತು ತರಕಾರಿ, ಮೀನು ಮಾಂಸ ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ

ಘಟಕ ವೆಚ್ಚ: ರೂ. 1 ಲಕ್ಷ
ಸಹಾಯಧನ: ರೂ. 50,000/-
ಸಾಲ: ರೂ. 50,000/*-
(ಶೇ. 4ರಷ್ಟು ಬಡ್ಡಿದರ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.09.2025

ಈ ಕೆಳಗಿ‌ನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು:
sevasindhu.karnataka.gov.in ಅಥವಾ
ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ  ST ಸಮುದಾಯದವರಿಗೆ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ
23/08/2025

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ST ಸಮುದಾಯದವರಿಗೆ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ

ನೋಂದಾಯಿತ ಕಾರ್ಮಿಕರು ಕಟ್ಟಡ ಕಾಮಗಾರಿಯ ವೇಳೆ ಅಥವಾ ನಿರ್ದಿಷ್ಟ ಪಡಿಸಿದ ಖಾಯಿಲೆಗಳಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದರೆ ಮಂಡಳಿಯು ದು...
21/08/2025

ನೋಂದಾಯಿತ ಕಾರ್ಮಿಕರು ಕಟ್ಟಡ ಕಾಮಗಾರಿಯ ವೇಳೆ ಅಥವಾ ನಿರ್ದಿಷ್ಟ ಪಡಿಸಿದ ಖಾಯಿಲೆಗಳಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದರೆ ಮಂಡಳಿಯು ದುರ್ಬಲತೆ ಪಿಂಚಣಿಯನ್ನು ನೀಡುತ್ತದೆ. ಫಲಾನುಭವಿಯು ಅಗತ್ಯ ದಾಖಲೆಗಳು ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಉತ್ತೇಜನ ನೀಡುವುದರ ಜೊತೆಗೆ ಆರ್ಥಿಕ ಹೊರೆಯನ್ನು ತಗ್ಗಿಸಬೇಕೆಂಬ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಗಳ...
21/08/2025

ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಉತ್ತೇಜನ ನೀಡುವುದರ ಜೊತೆಗೆ ಆರ್ಥಿಕ ಹೊರೆಯನ್ನು ತಗ್ಗಿಸಬೇಕೆಂಬ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸರಳ ವಿವಾಹಕ್ಕೆ ಪ್ರತಿ ಜೋಡಿಗೆ ರೂ. 50 ಸಾವಿರ ನೀಡಲಾಗುವುದು.

ಸೌಲಭ್ಯದ ಪ್ರಯೋಜನ ಪಡೆಯಲು ಷರತ್ತುಗಳು:
• ಅರ್ಜಿ ಸಲ್ಲಿಸುವ ವಧು ವರರು ಕರ್ನಾಟಕ ರಾಜ್ಯಕ್ಕೆ ಸೇರಿದ ಅಲ್ಪಸಂಖ್ಯಾತ ಸಮುದಾಯದವರಾಗಿರಬೇಕು
• ಸಾಮೂಹಿಕ ವಿವಾಹಗಳಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಿರತಕ್ಕದ್ದು
• ಸೌಲಭ್ಯ ಪಡೆಯುವ ವಧುವಿಗೆ ಕನಿಷ್ಠ 18, ಗರಿಷ್ಠ 42 ವರ್ಷ ಹಾಗೂ ವರನಿಗೆ ಕನಿಷ್ಠ 21, ಗರಿಷ್ಠ 45 ವರ್ಷ ವಯಸ್ಸಿನವರಾಗಿರಬೇಕು
• ವಧು-ವರರ ವಾರ್ಷಿಕ ಆದಾಯ ರೂ.2.50ಲಕ್ಷ ಮತ್ತು ಇಬ್ಬರ ಒಟ್ಟು ಆದಾಯ 5 ಲಕ್ಷ ಮೀರುವಂತಿಲ್ಲ
• ವರನಿಗೆ ಈಗಾಗಲೇ ಜೀವಂತ ಪತ್ನಿಯಿದ್ದಲ್ಲಿ ಹಾಗೂ ವಧುವಿಗೆ ಜೀವಂತ ಪತಿಯಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಥವಾ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ

Address

Mangalore

Website

Alerts

Be the first to know and let us send you an email when ಮಾಹಿತಿ ಕೇಂದ್ರ posts news and promotions. Your email address will not be used for any other purpose, and you can unsubscribe at any time.

Share