12/04/2026
ಅನಿತಾ ಪಿ. ತಾಕೊಡೆಯವರಿಗೆ ಕರ್ನಾಟಕ ಲೇಖಕಿಯರ ಸಂಘದ ದತ್ತಿಪ್ರಶಸ್ತಿ ಪ್ರದಾನ
—
ಮುಂಬಯಿ: ಕರ್ನಾಟಕ ಲೇಖಕಿಯರ ಸಂಘವು ಬೆಂಗಳೂರಿನ ಕನ್ನಡ ಭವನದ ಕನ್ನಡ, ಸಂಸ್ಕೃತಿ ಇಲಾಖೆಯ ನಯನ ಸಭಾಂಗಣದಲ್ಲಿ ಎಪ್ರಿಲ್ 9ರಂದು ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಂಬಯಿಯ ಕವಯಿತ್ರಿ ಲೇಖಕಿ ಅನಿತಾ ಪಿ. ತಾಕೊಡೆಯವರಿಗೆ
ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಪಡೆದ ಕೃತಿ ಮೇಣಕ್ಕಂಟಿದ ಬತ್ತಿ ಮುಂಬಯಿಯ ತಾಕೊಡೆ ಎಂಟರ್ಪ್ರೈಸಸ್ ಮೂಲಕ ಪ್ರಕಟವಾದ ಪ್ರಥಮ ಕೃತಿಯಾಗಿದೆ.
ಅಪರಾಹ್ನ ಮೂರರಿಂದ ಸಂಜೆ ಆರರವರೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಖ್ಯಾತ ಪತ್ರಕರ್ತ, ಅವಧಿ ಡಾಟ್ ಕಾಮ್ ನ ಜಿ.ಎನ್.ಮೋಹನ್ ಅವರು ಅನಿತಾ ಪಿ ತಾಕೊಡೆ ಸಹಿತ ಪುರಸ್ಕೃತ ಲೇಖಕಿಯರಿಗೆ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಕಲೇಸಂ ಅಧ್ಯಕ್ಷೆ ಡಾ. ಆರ್ ಸುನಂದಮ್ಮ , ಸಾಹಿತಿ ಡಾ.ಎನ್.ಗಾಯತ್ರಿ, ಸಮಾ ಸತೀಶ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.