24/04/2025
ಈ ಪ್ರೀತಿಗೆ ಏನೆನ್ನಬೇಕೋ ಗೊತ್ತಾಗೊಲ್ಲ ❤️🙏 ಭಾವುಕ ಕ್ಷಣ
ಪ್ರಸನ್ನ ಶೆಟ್ಟಿ ಬೈಲೂರು ನಿರ್ದೇಶನದ "ಅಷ್ಟೆಮಿ" ಸೂಪರ್ ಹಿಟ್ ತುಳು ನಾಟಕದ 111 ನೇ ಪ್ರದರ್ಶನದ ಸಂಭ್ರಮಾಚರಣೆಯಲ್ಲಿ ಸರ್ಪ್ರೈಸ್ ಆಗಿ ವೇದಿಕೆಗೆ ಕರೆದು ಪ್ರೀತಿಯಿಂದ ಗೌರವಿಸಿದ ಪ್ರಸನ್ನ ಶೆಟ್ಟರಿಗೆ ತುಂಬು ಹೃದಯದ ಧನ್ಯವಾದಗಳು 🙏
ನುರಿತ ತಂಡದ ನಾಟಕದವೊಂದು 100 ಪ್ರದರ್ಶನ ದಾಟೋದು ಹೊಸತೇನಲ್ಲ , ವಿಶೇಷವೇನಲ್ಲ ಆದರೆ ಹೊಸ ಕಲಾವಿದರ ತಂಡ ಸೃಷ್ಟಿಸಿ ಅವರಿಗೆ ಟ್ರೈನಿಂಗ್ ನೀಡಿ ಆ ನಾಟಕ ಸೂಪರ್ ಹಿಟ್ ಆಗಿರೋದು ಒಂದು ವಿಶೇಷ... ಗೆಲುವಿನ ಕುದುರೆ ಏರಿ ಹೊರಟ ಪ್ರಸನ್ನ ಶೆಟ್ರು ಹೊಸಬರನ್ನು ಜೊತೆ ಕೂಡಿಸಿಕೊಂಡು ಹೋಗುತ್ತಿರುವ ಈ ನಡೆ ಮೆಚ್ಚುವಂಥದ್ದು ಅವರಿಗೆ ಇನ್ನಷ್ಟು ಯಶಸ್ಸು ದೊರಕಲಿ 💐
ಈ ನಾಟಕದ ಮೊದಲ ಪ್ರದರ್ಶನಕ್ಕೆ ಪ್ರಚಾರದ ಸಲುವಾಗಿ ಕರೆಸಿ ವಿಡಿಯೋ ಮಾಡಿಸಿ ಗೆದ್ದ ನಂತರವೂ ಅದನ್ನು ಮನಸ್ಸಲ್ಲಿ ನೆನಪಲ್ಲಿ ಇಟ್ಟುಕೊಂಡು ನಮ್ಮ ಗೆಲುವಲ್ಲಿ ನಿಮ್ಮ ಪಾಲು ಇದೆ ಎಂದು ಗೌರವಿಸುವುದು, ತುಂಬಾ ದೊಡ್ಡ ವಿಷಯ ಆ ವಿಚಾರದಲ್ಲಿ ಪ್ರಸನ್ನ ಶೆಟ್ಟರು ಎತ್ತಿದ ಕೈ... ಒಂದು ಒಳ್ಳೆಯ ಕೆಲಸ ಒಂದಷ್ಟು ಸಮಯ ಮಾತನಾಡುತ್ತದೆ ಎಂದು ಕೇಳಿದ್ದೆ ಆದರೆ ಇದೀಗ ಆಸ್ವಾದಿಸುತ್ತಿದ್ದೇನೆ ❤️🙏