Namma kudla

Namma kudla For business enquiries👇
[email protected]

05/10/2025

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಸೆಲೆಬ್ರಿಟಿಗಳ ಭೇಟಿ
ಚಿತ್ರ ನಟಿ ರಾಗಿಣಿ ದ್ವಿವೇದಿ, ನಟ ರಾಜವರ್ಧನ್ ಅವರಿಂದ ಪ್ರಾರ್ಥನೆ
ಮರದ ಕೆತ್ತನೆಯ ಕಲಾಕುಸುರಿ ಮತ್ತು ಶಿಲಾ ಕೆತ್ತನೆ ಬಗ್ಗೆ ಮೆಚ್ಚುಗೆ

ಕನ್ನಡ ಚಿತ್ರರಂಗದ ನಟಿ ರಾಗಿಣಿ ದ್ವಿವೇದಿ ಮತ್ತು ನಟ ರಾಜವರ್ಧನ್ ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದರುಶನ ಪಡೆದು ಅಮ್ಮನ ಅನುಗ್ರಹ ಪ್ರಸಾದ ಸ್ವೀಕರಿಸಿದರು. ದೇವಳದ ಮರದ ಕೆತ್ತನೆಯ ಕಲಾಕುಸುರಿಗಳನ್ನು ಮತ್ತು ಶಿಲಾ ಕೆತ್ತನೆಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ದೇವಸ್ಥಾನದ ಪ್ರಧಾನ ತಂತ್ರಿ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಮತ್ತು ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ.ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಶೇಕರ ಸಾಲ್ಯಾನ್‌, ಸಿಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

03/10/2025

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜೀ ಆಟಗಾರ , ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ರಿಕೆಟರ್ ಅಜಿಂಕ್ಯ ರಹಾನೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದರು. ಅರ್ಚಕ ಗೋಪಾಲಕೃಷ್ಣ ಭಟ್ ಪ್ರಾರ್ಥನೆ ಸಲ್ಲಿಸಿ ಕ್ರಿಕೆಟರ್ ಅಜಿಂಕ್ಯ ರಹಾನೆ ರವರಿಗೆ ಪ್ರಸಾದ ನೀಡಿದರು.

02/10/2025

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಗೆ ಭೇಟಿ ಕೊಟ್ಟ ಡಿ.ಕೆ. ಶಿವ ಕುಮಾರ್

Sharada Matha ✨Shri Lakshmi Venkataramana Temple, Ponnecheri, Moodbidri
30/09/2025

Sharada Matha ✨
Shri Lakshmi Venkataramana Temple, Ponnecheri, Moodbidri

27/09/2025

ಹುಲಿಯ ತಲೆ ಮುಟ್ಟಿದ ಭಾಗವತರು

24/09/2025

ಕಾಂತಾರ ಚಾಪ್ಟರ್‌ 1 ಟ್ರೈಲರ್‌ ಬಿಡುಗಡೆಗೊಂಡು ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಮಾಡಿದ್ದಾರೆ.
ಪತ್ನಿ ಪ್ರಗತಿ ಜೊತೆಗೆ ಕೊಲ್ಲೂರು ದೇಗುಲಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಂತಾರ ಸಿನಿಮಾ ಯಶಸ್ಸಿಗಾಗಿ ನಟ ಪ್ರಾರ್ಥಿಸಿದ್ದಾರೆ. ಕಾಂತಾರ ಸಿನಿಮಾದ ಚಾಪ್ಟರ್ 1 ಗಾಗಿ ಸಿನಿ ಪ್ರಿಯರು ಕಾಯುತ್ತಿದ್ದಾರೆ. ಚಿತ್ರದ ಟ್ರೈಲರ್‌ ಅನ್ನು ನವರಾತ್ರಿಯ ಆರಂಭದ ದಿನ ಸೋಮವಾರ ಬಿಡುಗಡೆ ಮಾಡಲಾಗಿದ್ದು, ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಟ್ರೈಲರ್‌ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ರಿಲೀಸ್‌ ಆದ ದಿನವೇ 55 ಮಿಲಿಯನ್‌ಗೆ ಹೆಚ್ಚು ವೀಕ್ಷಣೆಯನ್ನು ಟ್ರೈಲರ್‌ ಪಡೆದುಕೊಂಡಿದೆ.

18/09/2025

ಯಕ್ಷಗಾನದಲ್ಲೂ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಫುಲ್ ಹವಾ !..

17/09/2025

ಬೆಟ್ಟ ಹತ್ತಿ ಬಂದೆವಯ್ಯಾ ಗೋವಿಂದ

16/09/2025

ತುಳುವಿನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ

16/09/2025

ವೇದಿಕೆಯಲ್ಲಿ ಹುಲಿ ಕುಣಿದ ವಿರಾಟ್ ಕೊಹ್ಲಿ ಅಂಡ್ ಟೀಮ್ ?

16/09/2025

ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭೇಟಿಕೊಟ್ಟ ವಿರಾಟ್ ಕೊಹ್ಲಿ!

Address

Mangalore

Website

Alerts

Be the first to know and let us send you an email when Namma kudla posts news and promotions. Your email address will not be used for any other purpose, and you can unsubscribe at any time.

Share

Category