Tv7 Karnataka

Tv7 Karnataka ಸುದ್ದಿಯ ಔತಣದ ಜೊತೆಗೆ ಬದಲಾವಣೆ ತರುವ ಹೊಸ ?

ಬದಲಾವಣೆ ಜಗದ ನಿಯಮ. ಹೀಗಾಗಿ ಸುದ್ದಿ ಜಗತ್ತು ಕೂಡ ಪ್ರತೀ ನಿತ್ಯ ಬದಲಾವಣೆಯ ತುಡಿತದ ಜೊತೆ ಮಗ್ಗಲು ಬದಲಿಸುತ್ತಿರುತ್ತದೆ. ದಿನೇ ದಿನೇ ಬದಲಾಗುವ ಸಮಾಜದ ಅಂತಃಕರಣದ ಆತ್ಮಸಾಕ್ಷಿಯನ್ನು ಕ್ಷಣಕ್ಷಣಕ್ಕೂ ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಲೇ ಇದೆ. ಈ ಪ್ರಯೋಗದ ಮಧ್ಯೆಯೇ ಕ್ಷಣಕ್ಷಣಕ್ಕೂ ಹೊಸತನಕ್ಕೆ ತೆರೆದುಕೊಳ್ಳುವ ಸಮಾಜದ ಮಧ್ಯೆ ಮಗದೊಂದು ವಿನೂತನ ಆಯಾಮಕ್ಕೆ ಮುನ್ನುಡಿಯಿಡುವ ಪ್ರಯತ್ನವೇ ಟಿವಿ7. ಸುದ್ದಿಯ ಔತಣದ ಜೊತೆಗೆ ವೇಗದ ಜಗತ್ತಿನಲ್ಲಿ ಬದಲಾವಣೆ ತರುವ ಹೊಸ ಹುಮ್ಮಸ್ಸಿನೊಂದಿಗೆ ಸಾಗಲಿದೆ ಟಿವಿ7...ಇದು ಬದಲಾವಣೆಯ ಪ್ರತಿಬಿಂಬ....

05/07/2017

ಉತ್ತಮ ಭವಿಷ್ಯಕ್ಕಾಗಿ...

05/07/2017

ನಮ್ಮ ಕರಾವಳಿ

04/07/2017

ಕನಸುಗಳ ಸಾಕಾರಕ್ಕೆ ಕ್ಷಣಗಣನೆ, ಕೆಲವೇ ದಿನಗಳಲ್ಲಿ ಮನೆ-ಮನೆಗೆ...

04/07/2017

ನಮ್ಮ ಬಗ್ಗೆ...

25/06/2017

ನಾಡಿನ ಸಮಸ್ತ ಜನತೆಗೆ Tv7 ವತಿಯಿಂದ ಈದ್ - ಉಲ್ - ಫಿತರ್ ಹಬ್ಬದ ಶುಭಾಶಯಗಳು.

30/05/2017

Tv7 ಕರ್ನಾಟಕ ಸುದ್ದಿವಾಹಿನಿಯು ಆರ್ಯ ಮೀಡಿಯಾ ನೆಟ್ವರ್ಕ್ಸ್ ನ ಅಂಗ ಸಂಸ್ಥೆ. TV7 ಒಂದು ಉತ್ತಮ ನ್ಯೂಸ್ ಚಾನೆಲ್ ಆಗಿ ಜನರಿಗೆ ಸುದ್ದಿ ನೀಡಲು ಈ ಸಂಸ್ಥೆ ಪಣತೊಟ್ಟಿದೆ. ಮಂಗಳೂರಿನ ಕುಂಟಿಕಾನದಲ್ಲಿ ಕಛೇರಿಯನ್ನ ಹೊಂದಿದ್ದು, ಕಳೆದ ಏಳು ತಿಂಗಳಿನಿಂದ ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಿದೆ . ಕಾರಣಾಂತರಗಳಿಂದ ಕೆಲ ಗೊಂದಲಗಳು ಸೃಷ್ಟಿಯಾಗಿ ಚಾನೆಲ್ ನ ಪ್ರಾರಂಭ ವಿಳಂಬವಾಗಿತ್ತು. ಆದ್ರೆ ಇದೀಗ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ಸದ್ಯದಲ್ಲೇ ಚಾನೆಲ್ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಸ್ಥೆ ಮುಂದಡಿಯಿಟ್ಟಿದೆ. ಹೀಗಾಗಿ TV7ನ ಅಧಿಕೃತ ಫೇಸ್ ಬುಕ್ ಅಕೌಂಟ್ನಲ್ಲಿ ಸಂಸ್ಥೆಗೆ ಕೆಲವು ಸಿಬ್ಬಂದಿಗಳು ಬೇಕು ಅನ್ನೋ ಜಾಹೀರಾತು ನೀಡಲಾಗಿದೆ. ಇದಕ್ಕೆ ಹಲವು ಯುವಕ ಯುವತಿಯರು ನಮ್ಮ ಕಛೇರಿಗೆ ಬಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಆದ್ರೆ ಯಾರೋ ಕಿಡಿಗೇಡಿಗಳು TV7 ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು, ಯಾರೂ ಸಂದರ್ಶನಕ್ಕೆ ಹಾಜರಾಗಬೇಡಿ ಅಂತ ತಪ್ಪು ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ಆದ್ರೆ TV7ನ ನಕಲಿ ಫೇಸ್ಬುಕ್ ಖಾತೆಯಲ್ಲಿ ಹಾಕಿರುವ ಎಲ್ಲಾ ಮಾಹಿತಿಗಳು ಸತ್ಯಕ್ಕೆ ದೂರವಾದ ವಿಚಾರಗಳಾಗಿದ್ದು, ನಮ್ಮ ಸಂಸ್ಥೆಗೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಯಾವುದೋ ಅತೃಪ್ತ ಆತ್ಮಗಳು ಮಾಡಿರೋ ಕೆಲಸವಾಗಿದೆ . TV7 ನ ಅಧಿಕೃತ ಫೇಸ್ಬುಕ್ ಅಕೌಂಟ್ನಲ್ಲಿ ಬರುವ ಸಂದೇಶಗಳನ್ನಷ್ಟೇ ಓದಿ ನಮ್ಮ ಜತೆ ಸಹಕರಿಸಿ . ಹಾಗೊಂದು ವೇಳೆ ಯಾವುದೇ ಗೊಂದಲಗಳಿದ್ದಲ್ಲಿ ನಮ್ಮ ಈ ಮೇಲ್ [email protected] ಸಂದೇಶ ಕಳುಹಿಸಿ, ಅಥವಾ ನಮ್ಮ ಅಧಿಕೃತ ದೂರವಾಣಿ ಸಂಖ್ಯೆಗಳಾದ 0824-2218477 / 9513900777 ಗೆ ಕರೆ ಮಾಡಿ ವಿಚಾರಿಸಿ.

26/05/2017

ಸದ್ಯದಲ್ಲೇ ಟಿವಿ7 ನ್ಯೂಸ್ ಚಾನೆಲ್ ನಿಮ್ಮ ಮನೆ ಮನ ತಲುಪಲಿದೆ....
ಜನರ ನಿರೀಕ್ಷೆಯನ್ನ ನಿಜಗೊಳಿಸಲು ಪಣತೊಟ್ಟಿರೋ ತಂಡ ನಮ್ಮದು...
ನಮ್ಮ ಜತೆ ಕೈ ಜೋಡಿಸೋ ಆಸಕ್ತ ಯುವಶಕ್ತಿಗಳಿಗೆ ಹೊಸ ಅವಕಾಶ....
ಹುದ್ದೆಗಳು
ಬುಲೆಟಿನ್ ಪ್ರೊಡ್ಯೂಸರ್ , ಕಾಪಿ ಎಡಿಟರ್, ವರದಿಗಾರರು,ಸುದ್ದಿವಾಚಕರು, ಕಾರ್ಯಕ್ರಮ ನಿರೂಪಕರು, ಕ್ಯಾಮೆರಾಮೆನ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್ ಹುದ್ದೆಗಳಲ್ಲಿ ಅವಕಾಶ ಇದೆ.
ಅರ್ಹತೆ
ಯಾವುದಾದರೂ ಪದವಿಯನ್ನ ಪಡೆದುಕೊಂಡಿರಬೇಕು, ಪತ್ರಿಕೋದ್ಯಮದಲ್ಲಿ ಪದವೀಧರರಿಗೆ ಮೊದಲ ಆದ್ಯತೆ.
ಚೆನ್ನಾಗಿ ಕನ್ನಡ ಮಾತನಾಡಲು ಬರಬೇಕು ಮತ್ತು ಇತರೇ ಬಾಷೆಗಳ ಬಗ್ಗೆಯೂ ಸಾಮಾನ್ಯ ತಿಳುವಳಿಕೆ ಇರಬೇಕು,
ಚೆನ್ನಾಗಿ ಕನ್ನಡ ಟೈಪಿಂಗ್ ಗೊತ್ತಿರಬೇಕು, ಪತ್ರಿಕೆ ಅಥವಾ ಟಿವಿ ಮಾಧ್ಯಮದಲ್ಲಿ ಕನಿಷ್ಟ ಒಂದು ವರ್ಷ ಕೆಲಸ ಮಾಡಿರುವ ಅನುಭವ ಇರಬೇಕು.
ಸಂದರ್ಶನದ ದಿನ5
ಮೇ 27 ಶನಿವಾರ ಮತ್ತು ಮೇ 28 ರವಿವಾರ
ಸಂದರ್ಶನದ ಸ್ಥಳ
TV7,ಕರ್ನಾಟಕ
ಆರ್ಯ ಮೀಡಿಯಾ ನೆಟ್ವರ್ಕ್ಸ್ ,
3 ನೇ ಮಹಡಿ ,
ಲಾರೆನ್ ಸ್ಕ್ವೇರ್ ಬಿಲ್ಡಿಂಗ್,
ಕುಂಟಿಕಾನ ಜಂಕ್ಷನ್, ಬಿಜೈ ಕಾವೂರು ರಸ್ತೆ,
ಮಂಗಳೂರು. 575004
ವಿ.ಸೂ : ಸಂದರ್ಶನಕ್ಕೆ ಬರುವಾಗ ನಿಮ್ಮ ದಾಖಲೆಗಳ ಜತೆ 4 ಪಾಸ್ಪೋರ್ಟ್ ಸೈಝ್ ಫೋಟೊ, ಎಸ್ಎಸ್ಎಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್ ತಪ್ಪದೆ ತನ್ನಿ .

12/03/2017

ಸಮಸ್ತ ಜನತೆಗೆ ಬಣ್ಣದ ಹಬ್ಬದ ಶುಭಾಶಯಗಳು...

08/03/2017
08/03/2017
 #  WOMEN'S DAY # #
08/03/2017

# WOMEN'S DAY # #

08/03/2017

Address

Kuntikana Junction
Mangalore
575001

Alerts

Be the first to know and let us send you an email when Tv7 Karnataka posts news and promotions. Your email address will not be used for any other purpose, and you can unsubscribe at any time.

Share