08/09/2026
*ಕಸಬಾ ಬೆಂಗ್ರೆಯ ಹದಗೆಟ್ಟ 300 ಮೀಟರ್ ರಸ್ತೆ ಕಾಂಕ್ರೀಟೀಕರಣಕ್ಕೆ DYFI 60ನೇ ವಾರ್ಡ್ ಘಟಕ ವತಿಯಿಂದ ಮನವಿ.*
ಮಂಗಳೂರು, ಸೆ. 8: ಕಸಬಾ ಬೆಂಗ್ರೆಯ ಮುಖ್ಯ ರಸ್ತೆಯ ಹದಗೆಟ್ಟಿರುವ *ಸುಮಾರು 300 ಮೀಟರ್ ರಸ್ತೆಯನ್ನು ಕೂಡಲೇ ಕಾಂಕ್ರೀಟೀಕರಣಗೊಳಿಸುವಂತೆ ಒತ್ತಾಯಿಸಿ DYFI ಬೆಂಗ್ರೆ 60ನೇ ವಾರ್ಡ್ ಘಟಕದ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮಂಗಳವಾರ ಸೆಪ್ಟೆಂಬರ್ 8 ರಂದು ಮನವಿ ಸಲ್ಲಿಸಲಾಯಿತು.*
ತೋಟ ಬೆಂಗ್ರೆಯಿಂದ ಕಸಬಾ ಬೆಂಗ್ರೆಯ ಮುಖ್ಯ ರಸ್ತೆಯ ಕರಾವಳಿ ಸ್ಟೋರ್‌ವರೆಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ರಸ್ತೆ ಕಾಮಗಾರಿ ನಡೆದಿದ್ದು, ಕರಾವಳಿ ಸ್ಟೋರ್‌ನಿಂದ ಸಲೀಂ ಅಂಗಡಿ ಸಮೀಪದವರೆಗೆ ಇರುವ ಸುಮಾರು 300 ಮೀಟರ್ ರಸ್ತೆ ಕಾಮಗಾರಿ ಬಾಕಿ ಉಳಿದಿದೆ. ಈ ಭಾಗದ ರಸ್ತೆ ತೀರಾ ಹದಗೆಟ್ಟಿದ್ದು, ಹಲವೆಡೆ ಗುಂಡಿಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
*ಆದ್ದರಿಂದ ಬಾಕಿ ಉಳಿದಿರುವ ರಸ್ತೆಯನ್ನು ಕೂಡಲೇ ಕಾಂಕ್ರೀಟೀಕರಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆಯಲ್ಲಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ ದುರಸ್ತಿ ಮಾಡಬೇಕು ಎಂದು DYFI ಆಗ್ರಹಿಸಿದೆ.*
ಅದೇ ರೀತಿ, ಈಗಾಗಲೇ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರುವ ಭಾಗದಲ್ಲಿ ಜಲಸಿರಿ ಯೋಜನೆಯ ಚೇಂಬರ್‌ಗಳ ಕಾಮಗಾರಿಗಾಗಿ ರಸ್ತೆಯ ಬದಿಯಲ್ಲಿ ಸ್ಥಳಾವಕಾಶ ಬಿಟ್ಟು ಮಣ್ಣು ತುಂಬಿಸಿರುವ ಕಾಮಗಾರಿ ಅಪೂರ್ಣವಾಗಿದ್ದು, ಅದನ್ನೂ ಶೀಘ್ರವಾಗಿ ಪೂರ್ಣಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
*ಈ ಸಂದರ್ಭದಲ್ಲಿ DYFI ಬೆಂಗ್ರೆ ಗ್ರಾಮ ಸಮಿತಿ ಅಧ್ಯಕ್ಷ ರಿಝ್ವಾನ್ ಬೆಂಗ್ರೆ ಕಾರ್ಯದರ್ಶಿ ಜಂಶೀರ್ ಬೆಂಗ್ರೆ, ಕೋಶಾಧಿಕಾರಿ ಮುಹಾಝ್ ಬೆಂಗ್ರೆ ಹಾಗೂ ಮುಖಂಡರಾದ ಹನಿಫ್ ಬೆಂಗ್ರೆ, ತೈಯೂಬ್ ಬೆಂಗ್ರೆ ಮತ್ತು ನಾಸಿರ್ ಬಾಸ್, ಫಯಾಜ್ ಬೆಂಗ್ರೆ ಉಪಸ್ಥಿತರಿದ್ದರು.*