Coorg Express

Coorg Express No1 Kannada News paper in Kodagu, Brought to you by " CHANNEL COORG " (The First NEWS & ENTERTAINMEN Always with you.

No1 Kannada News paper in Kodagu, Brought to you by " CHANNEL COORG " (The First NEWS & ENTERTAINMENT channel in kodagu since 2003)
we, KODAGU NETWORK MEDIA GROUP.

09/08/2024
04/02/2024

ನಾಳಿನ ಕಂದಾಯ ಸಚಿವರ ಭೇಟಿಯಿಂದ ಜಿಲ್ಲೆಯ ಜ್ವಲಂತ ಕಂದಾಯ ಇಲಾಖೆಯ ಸಮಸ್ಯೆಗಳು ಬಗೆಹರಿಯಬಹುದೇ....????

ಇಲ್ಲಿದೆ ಸಚಿವರಿಗೆ ಜಿಲ್ಲೆಯ ಸಮಸ್ಯೆಗಳ ಮಾಹಿತಿ.
Krishna Byre Gowda A.S Ponnanna Mantar Gowda
••••••••••••••••••••••••
CHANNEL COORG /COORG EXPRESS NEWS UPDATE....
••••••••••••••••••••••••

ನಾಳೆ ಸೋಮವಾರ ಕೊಡಗು ಜಿಲ್ಲೆಗೆ ಕಂದಾಯ ಸಚಿವರಾದ ಮಾನ್ಯ ಕೃಷ್ಣ ಬೈರೇಗೌಡರವರು ಭೇಟಿ ನೀಡಿ ಬೆಳಿಗ್ಗೆ 11 ಗಂಟೆಯಿಂದ 3 ಗಂಟೆ ತನಕ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನ ಸಭೆಯನ್ನು ನಡೆಸಲಿದ್ದಾರೆ. ಜಿಲ್ಲೆಗೆ ಆಗಮಿಸುವ ಕಂದಾಯ ಸಚಿವರಿಗೆ ಕೊಡಗು ಜಿಲ್ಲೆಯ ಜನತೆಯ ಪರವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವು ದಶಕಗಳಿಂದ ಇತ್ಯರ್ಥವಾಗದೆ ಇರುವ ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು "ಚಾನಲ್ ಕೂರ್ಗ್" ಅವರ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ.

*ಸಮಸ್ಯೆಗಳು*........

*ಜಿಲ್ಲೆಯಲ್ಲಿ ಎಲ್ಲಾ ವಿಧದ ಬಾಣೇ ಜಾಗಗಳನ್ನು ಸ್ವಯಂ ಪ್ರೇರಿತವಾಗಿ ಸರ್ಕಾರ ಕಂದಾಯ ನಿಗದಿಗೊಳಿಸಬೇಕು.

*ಬಹುತೇಕ ಜಾಗಗಳ ಆರ್ ಟಿ.ಸಿ. ಪಟ್ಟೆದಾರರ ಹೆಸರುಗಳು ನಮೂದಾಗಿದ್ದು ಅವರುಗಳ ಹೆಸರನ್ನು ತೆಗೆದು,, ಜಾಗದಲ್ಲಿ ಅನುಭವ ಸ್ವಾಧೀನದಲ್ಲಿರುವರ ಹೆಸರನ್ನು ಆರ್‌.ಟಿ.ಸಿ ಯಲ್ಲಿ ನಮೂದಿಸಬೇಕು.

* ಜಾಗದ ದೊರಸ್ತಿ. ಪೈಕಿ ಆರ್. ಟಿ.ಸಿ ದುರಸ್ತಿಯಾಗಬೇಕು

*ಜಾನುವಾರು ಗಣತಿ ಅನುಗುಣವಾಗಿ ಎಲ್ಲಾ ಗ್ರಾಮಗಳಲ್ಲಿ ಗೋಮಾಳ ಜಾಗ ಮೀಸಲು ಇಡುವಂತೆ ಕ್ರಮವಹಿಸುವುದು.

*ಕುಟುಂಬದ ಹಲವು ಜನರ ಹೆಸರು ಇರುವ ಜಾಗಕೆ ಸಾಲ, ಬೆಳೆ ಪರಿಹಾರ ಇನ್ನಿತರ ಸೌಲಭ್ಯ ದೊರೆಯದೆ ಇರುವುದನ್ನು ಬಗೆಹರಿಸುವುದು.

*ಭೂ ಪರಿವರ್ತನೆ ಸಂದರ್ಭ ಇಳಿಜಾರು, ಜಲ ಮೂಲಗಳ ಸಂರಕ್ಷಣೆ ನಿಯಮಗಳನ್ನು ಪಾಲಿಸದೆ ಭೂ ಪರಿವರ್ತನೆ ಆದೇಶವನ್ನು ನೀಡುವುದರ ಬಗ್ಗೆ ಪರಿಶೀಲಿಸುವುದು.

*ಉಪ ನೊಂದಾವಣೆ ಕಚೇರಿಯಲ್ಲಿ ಆಗಾಗ ಕಾಡುತ್ತಿರುವ ಸರ್ವರ್ ಸಮಸ್ಯೆ ಬಗೆಹರಿಸುವುದು.

*ಕಾವೇರಿ ನದಿ, ಲಕ್ಷ್ಮಣ ತೀರ್ಥ ನದಿ ,ರಾಜ ಕಾಲುವೆಯಗಳನ್ನು ಒತ್ತುವರಿ ತೆರುವುಗೊಳಿಸಲು ಕೂಡಲೆ ಕ್ರಮ ವಹಿಸುವುದು

*ಪೊನ್ನಂಪೇಟೆ ಹಾಗೂ ಕುಶಾಲನಗರದಲ್ಲಿ ಪ್ರತ್ಯೇಕ ತಾಲೂಕು ಆಗಿದ್ದರು ಮೂಲಭೂತ ಸೌಕರ್ಯ, ಕಟ್ಟಡ, ವಿವಿಧ ಇಲಾಖೆಗಳ ಸ್ಥಾಪನೆ ಬಗ್ಗೆ ಗಮನ ಹರಿಸುವುದು.

*ಜಿಲ್ಲೆಯಲ್ಲಿ ಸರ್ಕಾರಿ ಭೂಮಾಪಕರ ಹುದ್ದೆ ಭರ್ತಿ ಮಾಡಿ ಹಲವು ದಶಕಗಳಿಂದ ಜನರು ಅನುಭವಿಸುತ್ತಿರುವ ಯಾತನೆಯನ್ನು ನೀಗಿಸುವುದು.

*ಕೊಡಗು ಜಿಲ್ಲೆಯ
ಐದು ತಾಲೂಕುಗಳಿಗೆ ಹೆಚ್ಚುವರಿಯಾಗಿ ಇನ್ನೊಂದು ಉಪ ವಿಭಾಗಾಧಿಕಾರಿಗಳ ಹುದ್ದೆಯನ್ನು ಸೃಷ್ಟಿಸಿ ಸಮಸ್ಯೆಗಳನ್ನು ಬಗೆಹರಿಸುವುದು.

*ಸೋಮಾವಾರಪೇಟೆ ತಾಲೂಕಿನ
ಯಲಕನೂರು, ಹೊಸಳ್ಳಿ ಭಾಗದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜಿಲ್ಲೆಯ ವಿವಿಧಡೆ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ಕಾನೂನನ್ನು ಬಿಗಿಗೊಳಿಸುವುದು.

*ಕಂದಾಯ ಇಲಾಖೆಯಲ್ಲಿ ಕಾಡುತ್ತಿರುವ ಸಿಬ್ಬಂದಿಗಳ ಕೊರತೆ ನೀಗಿಸುವುದು.

*ತಾಲೂಕು ಕೇಂದ್ರ ಮಡಿಕೇರಿಯಲ್ಲಿ ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿ ಆರಂಭಗೊಂಡು ಐದು ವರ್ಷ ಕಳೆದರೂ ಪೂರ್ಣಗೊಳ್ಳದ ಬಗ್ಗೆ ಕ್ರಮವಹಿಸುವುದು.

*ಪರಿಶಿಷ್ಟ ಪಂಗಡ, ಜಾತಿಗಳ ವಸತಿ ಉದ್ದೇಶಕೆ ಪೈಸಾರಿ ಜಾಗ ನೀಡಲು ವಿಳಂಬ ಧೋರಣೆ ಅನುಸರಿಸುವುದನ್ನು ತಪ್ಪಿಸುವುದು.

*ಅಕ್ರಮ ಸಕ್ರಮ ಅಧ್ಯಕ್ಷರ ನೇಮಕ ವಾಗದೆ ಅರ್ಜಿಗಳು ವಿಲೇವಾರಿಯಾಗದೆ ಸಮಸ್ಯೆಯ ಸುಳಿಯಲ್ಲಿ ಹಲವರು ಸಿಲುಕಿರುವುದನ್ನು ತಪ್ಪಿಸುವುದು.

*ಮಾಜಿ ಸೈನಿಕರಿಗೆ ಸರ್ಕಾರಿ ಜಾಗ ಮಂಜೂರು ಮಾಡದೆ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಮುಂದುವರಿಸದಂತೆ ನೋಡಿಕೊಳ್ಳುವುದು.

*ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡವರು ಫಾರಂ 57 ರಲ್ಲಿ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡದಿರುವ ಬಗ್ಗೆ ಕ್ರಮ ವಹಿಸುವುದು.

*ಪೈಸಾರಿ ಜಾಗದಲ್ಲಿ ಮನೆ ನಿರ್ಮಿಸಿ 94 ಸಿ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ಕೂಡಲೆ ಪರಿಶೀಲಿಸಿ ಹಕ್ಕು ಪತ್ರ ನೀಡಲು ಕ್ರಮವಹಿಸುವುದು.

* ಜನಸ್ಪಂದನ, ಜನತಾದರ್ಶನ ಕಾರ್ಯಕ್ರಮದ ಮೂಲ ಉದ್ದೇಶ ಜಾರಿಯಾಗುವಂತೆ ನೋಡಿಕೊಳ್ಳುವುದು.

* ಭ್ರಷ್ಟಚಾರ ಹಾಗೂ ಮಧ್ಯವರ್ತಿಗಳ ಸಹವಾಸದಿಂದ ಮುಕ್ತವಾದ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ನಡೆಯುವಂತಾಗಬೇಕು

~~~~~~~~~~~~

ಇವಿಷ್ಟು ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಕಾಡುತ್ತಿರುವ ಪ್ರಮುಖ ಸಮಸ್ಯೆಗಳು. ಕೆಲವು ಸಮಸ್ಯೆಗಳಿಗೆ ಅರ್ಧ ಶತಮಾನ ಕಳೆದರೂ ಮುಕ್ತಿ ದೊರಕಿಲ್ಲ. ಇನ್ನು ಕೆಲವು ಸಮಸ್ಯೆಗಳಿಗೆ ಎರಡು ದಶಕಗಳು ಪೂರೈಸಿದರು ಸಮಸ್ಯೆ ಬಗೆಹರಿದಿಲ್ಲ. ಈಗಿನ ಕಂದಾಯ ಸಚಿವರಾದ ಮಾನ್ಯ ಕೃಷ್ಣ ಬೈರೇಗೌಡರವರು ಜಿಲ್ಲೆಯ ಜನತೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ನಂಬಿಕೆ ಇಬ್ಬರು ಶಾಸಕರು ಹಾಗೂ ಜಿಲ್ಲೆಯ ಜನತೆ ಅಭಿಲಾಷೆ ಹೊಂದಿದ್ದಾರೆ.

ನಾಳಿನ ಪ್ರಗತಿ ಪರಿಶೀಲನ ಸಭೆಯಲ್ಲಿ ಜನತೆಯ ಪರವಾಗಿ ನಾವು ಮುಂದಿಟ್ಟಿರುವ ಬೇಡಿಕೆಗಳನ್ನು ಬಗೆಹರಿಸುತ್ತಾರೋ ಅಥವಾ ಹಿಂದಿನ ಸಚಿವರಗಳಂತೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟು ತೆರಳುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ.

(ಸೂಚನೆ... ಈ ಬೇಡಿಕೆಗಳನ್ನು ಸಚಿವರಿಗೆ ತಲುಪುವಂತೆ ವಿವಿಧ ಸಂಘಟನೆಗಳು ಹಾಗೂ ಪಕ್ಷದ ಪ್ರಮುಖರು ಕ್ರಮ ಕೈಗೊಂಡರೆ ಸಚಿವರಿಂದ ಉತ್ತಮ ಫಲಿತಾಂಶ ದೊರಕುವ ನಿರೀಕ್ಷೆ ಇದೆ. SHARE ಮಾಡಿ ಸಹಕರಿಸಿ..)

Address

Mercara

Alerts

Be the first to know and let us send you an email when Coorg Express posts news and promotions. Your email address will not be used for any other purpose, and you can unsubscribe at any time.

Contact The Business

Send a message to Coorg Express:

Share