Mysuru Mirror

  • Home
  • Mysuru Mirror

Mysuru Mirror MYSURU MIRROR - mysuruexpress

11/07/2025

ಮೈಸೂರು ರಾಮಾನುಜ ರಸ್ತೆ, ಯಲ್ಲಿ
ಆಟೋ ದಲ್ಲಿ ಹೋಗುತಿದ್ದ ಮಹಿಳೆ ಮೇಲೆ ಹಲ್ಲೆ.
ಪ್ರಾಣಾಪಾಯದಿಂದ
ಪಾರಾದ ಯುವತಿ. ಹಲ್ಲೆ ಮಾಡಿದ ಅಪರಿಚಿತರು.



04/07/2025
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಆಷಾಢ ಮಾಸದ ಅಂಗವಾಗಿ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭ...
29/06/2025

ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಆಷಾಢ ಮಾಸದ ಅಂಗವಾಗಿ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆ ಬೆಟ್ಟಕ್ಕೆ ಇಂದು ಭೇಟಿ ನೀಡಿ ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಕಲ್ಪಿಸಿರುವ ಅಗತ್ಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.

27/06/2025

ಮೈಸೂರು ಜೂ 27(ಕರ್ನಾಟಕ ವಾರ್ತೆ) ತುಂತುರು ಮಳೆ ಹಿಮದ ನಡುವೆ ಚಾಮುಂಡಿ ಬೆಟ್ಟದಲ್ಲಿ ಹೂವೂಗಳು ತಳಿರು ತೋರಣ,ದೀಪಾಲಂಕಾರ ಭಕ್ತರನ್ನ ಸ್ವಾಗತಿಸುತ್ತಿತ್ತು.

ಆಷಾಢ ಶುಕ್ರವಾರ ನಾಡ ಅಧಿದೇವಿ ಚಾಮುಂಡೇಶ್ವರಿ ತಾಯಿಗೆ ಮುಂಜಾನೆ ತಾಯಿಗೆ ಪಂಚಾಮೃತ ಅಭಿಷೇಕ, ಅರ್ಚನೆ ಮಾಡಲಾಯಿತು. ಹೂವಿನ ನಡುವೆ ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಾ ಭಕ್ತರಿಗೆ ದರ್ಶನ ನೀಡಿದರು.ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನಲೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಪ್ರತಿವರ್ಷದಂತೆ ಈ ಬಾರಿಯೂ ಖಾಸಗಿ ವಾಹನಗಳ ಪ್ರವೇಶ ನಿರ್ಭಂಧಿಸಲಾಗಿದ್ದು ಕೆ.ಎಸ್.ಆರ್.ಟಿ.ಸಿ ವತಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಲಲಿತಮಹಲ್ ಪ್ಯಾಲೇಸ್ ಆವರಣದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಭಕ್ತರಿಗೆ ನಾಡದೇವಿಯ ದರುಶನ ಪಡೆಯಲು ಜಿಲ್ಲಾಡಳಿತದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರ ಅನುಕೂಲಕ್ಕಾಗಿ 300ರೂ ,2 ಸಾವಿರ ಟಿಕೇಟ್ ವ್ಯವಸ್ಥೆ ಮಾಡಲಾಗಿದೆ. 2000 ಟಿಕೇಟ್ ಪಡೆದವರಿಗೆ ಲಲಿತ ಮಹಲ್ ಯಿಂದ ಬೆಟ್ಟಕ್ಕೆ ಎಸಿ ಬಸ್ ನಲ್ಲಿ ಕರೆದುಕೊಂಡು ಹೋಗಿ ಬೆಟ್ಟದಲ್ಲಿ ನೇರವಾಗಿ ದರ್ಶನ ಮಾಡಿ ನಂತರ ಪ್ರಸಾದ ರೂಪದಲ್ಲಿ ಚಾಮುಂಡೇಶ್ವರಿ ವಿಗ್ರಹ, ಲಾಡು, ಕುಡಿಯುವ ನೀರಿನ ಬಾಟಲ್ ,ಒಂದು ಬ್ಯಾಗ್ ವಿತರಿಸಲಾಯಿತು.

ಪತ್ರಿಕಾ ಪ್ರಕಟಣೆಪಯಣ ಕಾರು ಸಂಗ್ರಹಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ3000ಕ್ಕೂ ಅಧಿಕ ಶಿಕ್ಷಣಾರ್ಥಿಗಳಿಂದ ಯೋಗ ಪ್ರದರ್ಶನಮೈಸೂರು: 19 ಜೂ...
19/06/2025

ಪತ್ರಿಕಾ ಪ್ರಕಟಣೆ

ಪಯಣ ಕಾರು ಸಂಗ್ರಹಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

3000ಕ್ಕೂ ಅಧಿಕ ಶಿಕ್ಷಣಾರ್ಥಿಗಳಿಂದ ಯೋಗ ಪ್ರದರ್ಶನ

ಮೈಸೂರು: 19 ಜೂನ್‌- ವಿಶ್ವದಾದ್ಯಂತ ಆರೋಗ್ಯದ ಮಹತ್ವವನ್ನು ಸಾರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಮೈಸೂರು ಹೊರವಲಯದ ಪಯಣ ಕಾರು ಸಂಗ್ರಹಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.



ಈ ವಿಶಿಷ್ಟ ಕಾರ್ಯಕ್ರಮವು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು, ಉಜಿರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌, ಶಾಂತಿವನ ಯೋಗ ಮತ್ತು ನೈತಿಕ ಶಿಕ್ಷಣ ವಿಭಾಗ , ಸೌಖ್ಯವನ, ಕ್ಷೇಮವನ ಸೇರಿ ಹಲವು ಸಂಸ್ಥೆಗಳ ಸಹಕಾರದಿಂದ ಆಯೋಜನೆಗೊಂಡಿದೆ.



ಈ ಮಹತ್ವದ ಯೋಗ ದಿನಾಚರಣೆಯಲ್ಲಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಒಳಗೊಂಡಂತೆ 3000ಕ್ಕೂ ಹೆಚ್ಚು ಯೋಗ ಶಿಕ್ಷಣಾರ್ಥಿಗಳು ಭಾಗವಹಿಸಲಿದ್ದು, ಯೋಗದ ಪ್ರಾಚೀನ ತತ್ವಗಳನ್ನು ಪ್ರತಿಪಾದಿಸುತ್ತಾ ಆರೋಗ್ಯಕರ ಜೀವನಶೈಲಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಮುಖ ಕಾರ್ಯಪ್ರದರ್ಶನಗಳು ನಡೆಯಲಿವೆ. ಈ ಕಾರ್ಯಕ್ರಮವು ಕೇಂದ್ರ ಹಾಗೂ ರಾಜ್ಯ ಆಯುಷ್‌ ಮಂತ್ರಾಲಯಗಳ ಆಶ್ರಯದಲ್ಲಿ ನಡೆಯಲಿದ್ದು, ಆರೋಗ್ಯದ ಮೇಲೆ ಯೋಗದ ಮಹತ್ವ ಹಾಗೂ ಅವಶ್ಯಕತೆಯನ್ನು ಸಾರಲಿದೆ..



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ವಹಿಸಲಿದ್ದು, ಮೈಸೂರು ರಾಮಕೃಷ್ಣಾಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್‌ ಉದ್ಘಾಟನಾ ಭಾಷಣ ನೀಡಲಿದ್ದಾರೆ. ಈ ಅದ್ಧೂರಿ ಸಮಾರಂಭದಲ್ಲಿ ಮೈಸೂರು-ಕೊಡಗು ಸಂಸದ ಶ್ರೀ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಕೃಷಿ ಸಚಿವ ಶ್ರೀ ಎನ್‌ ಚಲುವರಾಯಸ್ವಾಮಿ, ಶ್ರೀರಂಗಪಟ್ಟಣ ಶಾಸಕರಾದ ಶ್ರೀ ರಮೇಶ್‌ ಬಂಡಿಸಿದ್ದೇಗೌಡ ಹಾಗೂ ಮಾಜಿ ಸಚಿವ ಶ್ರೀ ಸಿ. ಎಸ್. ಪುಟ್ಟರಾಜು ಮುಖ್ಯ ಅಥಿತಿಗಳಾಗಿ ಪಾಲ್ಗೊಳ್ಳಲಿದ್ದಾರೆ.



ಅಲ್ಲದೇ ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಆಯುಕ್ತ ಶ್ರೀ ದೇವರಾಜು ಎ. ಕ.ಆ.ಸೇ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥ ಶ್ರೀ ಕೆ. ಶಿವಕುಮಾರ್ ಉಪಸ್ಥಿತರಿದ್ದು, ಸಮಾರಂಭದ ಗೌರವವನ್ನು ಹೆಚ್ಚಿಸಲಿದ್ದಾರೆ.

https://mysurumirror.com/irritable-bowel-syndrome-ibs/
13/06/2025

https://mysurumirror.com/irritable-bowel-syndrome-ibs/

ಹಿಂದಿನ ಲೇಖನದಲ್ಲಿ ನಾವು Irritable Bowel Syndrome (IBS) ಅಥವಾ ಗ್ರಹಣಿ ರೋಗದ ಪರಿಚಯ ಮತ್ತು ಕಾರಣಗಳನ್ನು ವಿವರಿಸಿದ್ದೇವೆ. ಈ ಲೇಖನದಲ್ಲಿ ಅದರ ಪ್ರಮುಖ...

03/06/2025

ಆರ್ ಸಿ ಬಿ ಗೆಲ್ಲಲಿ ಎಂದು ಮಹಿಳೆಯರು ಉಪವಾಸದಲ್ಲಿ ಚಾಮುಂಡೇಶ್ವರಿ ಪೂಜೆ ಸಲ್ಲಿಸಿದರು

ನಗರದ ಕೆ ಜಿ ಕೊಪ್ಪಲ್ ನಲ್ಲಿರುವ ಆದಿಶಕ್ತಿ ಚಾಮುಂಡೇಶ್ವರಿ ದೇವಿಯಲ್ಲಿ ಶ್ರೀ ದುರ್ಗಾಪೌಂಡೇಶನ್ ವತಿಯಿಂದ
ಆರ್ ಸಿ ಬಿ ತಂಡದ ಹೆಸರಿನಲ್ಲಿ
ಉಪವಾಸದಲ್ಲಿ ಕುಂಕುಮ ಅಭಿಷೇಕ ಮಾಡಿ ಆರ್‌ಸಿಬಿ ತಂಡ ಜಯಗಳಿಸಲಿ ಎಂದು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು

ಈ ಸಂದರ್ಭದಲ್ಲಿ ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಮೂಡ ಮಾಜಿ ಸದಸ್ಯರಾದ ಲಕ್ಷ್ಮೀದೇವಿ, ವಕೀಲರಾದ ಜಯಶ್ರೀ ಶಿವರಾಮ್, ಸುಶೀಲ, ರೂಪ,
ಹೇಮಾ, ವಿಜಯ, ಸುವರ್ಣ, ಹಾಗೂ ಇನ್ನಿತರರು ಪೂಜೆಯಲ್ಲಿ ಭಾಗಿಯಾಗಿದ್ದರು.











ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಮತ್ತು ಸಾಧನೆ ಕುರಿತು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
27/05/2025

ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಮತ್ತು ಸಾಧನೆ ಕುರಿತು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

*ನಾಚನಹಳ್ಳಿ ಪಾಳ್ಯದಲ್ಲಿ ಶಾಸಕ ಟಿ ಎಸ್ ಶ್ರೀವತ್ಸ ಪಾದಯಾತ್ರೆ*            ಕೆ ಆರ್ ಕ್ಷೇತ್ರದ ವಾರ್ಡ್ ನಂಬರ್ 62 ರಲ್ಲಿ ಇಂದು ಬೆಳಗ್ಗೆ ಶಾಸಕ...
24/05/2025

*ನಾಚನಹಳ್ಳಿ ಪಾಳ್ಯದಲ್ಲಿ ಶಾಸಕ ಟಿ ಎಸ್ ಶ್ರೀವತ್ಸ ಪಾದಯಾತ್ರೆ* ಕೆ ಆರ್ ಕ್ಷೇತ್ರದ ವಾರ್ಡ್ ನಂಬರ್ 62 ರಲ್ಲಿ ಇಂದು ಬೆಳಗ್ಗೆ ಶಾಸಕರಾದ ಟಿ ಎಸ್ ಶ್ರೀವತ್ಸ ರವರು ನಾಚನಹಳ್ಳಿ ಪಾಳ್ಯದಲ್ಲಿ ಪಾದಯಾತ್ರೆ ಮಾಡಿದರು ಈ ಭಾಗದಲ್ಲಿ ಪ್ರಮುಖವಾಗಿ ಮಳೆ ನೀರು ಹರಿಯಲು ಹಲವಾರು ವರ್ಷಗಳಿಂದ ಬೇಡಿಕೆ ಇರುವಂತೆ ಡಕ್ ಗಳನ್ನು ನಿರ್ಮಿಸಿಕೊಡಲು ಹಾಗೂ ಯುಜಿಡಿ ಸಮಸ್ಯೆಯಿಂದ ಮನೆಗಳಿಗೆ ನೀರು ನುಗ್ಗಿ ಬರುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಹೇಳಿದರು ಹಾಗೂ ಈಗಾಗಲೇ ಈ ಬಾಗದಲ್ಲಿ ಕೆ ಆರ್ ಐ ಡಿ ಎಲ್ ನಿಂದು ಸುಮಾರು 100 ಲಕ್ಷ ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು ಮತ್ತು ಹೆಚ್ ಡಿ ಕೋಟೆ ಮುಖ್ಯ ರಸ್ತೆಯಲ್ಲಿ ಪಿ ಡಬ್ಲ್ಯೂ ಡಿ ರವರು ಮಾಡಿರುವ ಮೋರಿ ಒತ್ತುವರಿ ಆಗಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಶಾಸಕರ ಗಮನಕ್ಕೆ ತಂದರು ಒತ್ತುವರಿ ಆಗಿರುವ ಬಗ್ಗೆ ಸರ್ವೆ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮಾನಂದವಾಡಿ ರಸ್ತೆ ಹಾಗೂ ಪಾಳ್ಯ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸುವ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಕೆ ಆರ್ ಸಂಚಾರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ತಿರುವಿನಲ್ಲಿ ಅನಗತ್ಯವಾಗಿ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ತೆರುವು ಗೊಳಿಸುವಂತೆ ಸೂಚನೆ ನೀಡಿದರು ಈ ಸಂದರ್ಭದಲ್ಲಿ ಮಾಜಿ ನಗರಪಾಲಿಕೆ ಸದಸ್ಯರಾದ ಶಾಂತಮ್ಮ.ವಡಿವೇಲು.ವಾರ್ಡ್ ಅಧ್ಯಕ್ಷ ರಾಘವೇಂದ್ರ.ಬೇಕರಿ ಚಂದ್ರು.ದೇವರಾಜೇಗೌಡ.ಬಿಲ್ಲಯ್ಯ.ಮದು. ಮುರಳಿ. ಜೆ ರವಿ. ಜಯರಾಮ್.ಆಶಾ ಲಕ್ಷ್ಮಿ ನಾರಾಯಣ.ರಾದಮ್ಮ.ಮುಂತಾದ ಪ್ರಮುಖರು ಮತ್ತು ವಲಯ ಕಚೇರಿ ಅಧಿಕಾರಿಗಳು.ಫೋಲಿಸ್ ಸಿಬ್ಬಂದಿ ಇದ್ದರು

*ಬೆಂಗಳೂರು ಜೆ.ಸಿ. ನಗರದಲ್ಲಿರುವ ಸೈನಿಕ ಸ್ಮಾರಕ ಸಂರಕ್ಷಿಸಿ: ಯದುವೀರ್‌ ಒಡೆಯರ್‌*ಮೈಸೂರು: ಆಪರೇಷನ್‌ ಸಿಂಧೂರ ನಂತರ ನಮ್ಮ ಭಾರತೀಯ ಸೇನಾ ಪಡೆಗ...
24/05/2025

*ಬೆಂಗಳೂರು ಜೆ.ಸಿ. ನಗರದಲ್ಲಿರುವ ಸೈನಿಕ ಸ್ಮಾರಕ ಸಂರಕ್ಷಿಸಿ: ಯದುವೀರ್‌ ಒಡೆಯರ್‌*

ಮೈಸೂರು: ಆಪರೇಷನ್‌ ಸಿಂಧೂರ ನಂತರ ನಮ್ಮ ಭಾರತೀಯ ಸೇನಾ ಪಡೆಗಳ ಮೇಲೆ ಎಲ್ಲೆಡೆ ಗೌರವ ಹೆಚ್ಚಾಗಿದೆ. ಆದರೆ ಬೆಂಗಳೂರಿನಲ್ಲಿ ಸೇನಾ ಸ್ಮಾರಕಗಳನ್ನು ಅತ್ಯಂತ ನಿರ್ಲಕ್ಷ್ಯ ಮಾಡಿರುವುದು, ಕಿಡಿಗೇಡಿಗಳು ಇದನ್ನು ವಿರೂಪಗೊಳಿಸುತ್ತಿರುವುದು ಆಕ್ಷೇಪಾರ್ಹ ಎಂದು *ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌* ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಸ್ಮಾರಕ ವೀಕ್ಷಿಸಿದ ಕೂಡಲೇ ಸಂಬಂಧಪಟ್ಟವರಿಗೆ ಪತ್ರ ಬರೆದಿರುವ ಸಂಸದರು ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೊದಲನೇ ಮಹಾಯುದ್ಧದ ಸ್ಮಾರಕವಾಗಿ ಬೆಂಗಳೂರಿನ ಜೆ.ಸಿ. ನಗರದಲ್ಲಿ ಸುಮಾರು ನೂರು ವರ್ಷಗಳ ಹಿಂದೆ ಇದನ್ನು ಮೈಸೂರು ಮಹಾರಾಜರು ಸ್ಥಾಪಿಸಿದ್ದರು ಎಂದು ಸಂಸದರು ನೆನಪಿನ ಬುತ್ತಿಗೆ ಜಾರಿದರು.

ಭಾರತೀಯ ಸೇನಾ ಪಿಆರ್‌ಟಿಸಿ ಮುಂಬಾಗದಲ್ಲಿರುವ ಈ ಸ್ಮಾರಕವನ್ನು ಕೆಲವು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಾರೆ. ಇಡೀ ದೇಶದಲ್ಲಿ ಈಗ ಸೇನಾ ಯೋಧರ ಬಗ್ಗೆ, ಹುತಾತ್ಮರ ಬಗ್ಗೆ ವಿಶೇಷ ಗೌರವ ಇರುವಾಗ, ಸೈನಿಕರ ಸ್ಮಾರಕಗಳಿಗೆ ಅಗೌರವ ತೋರುವುದು ಸರಿಯಲ್ಲ ಎಂದು ಸಂಸದರು ತಿಳಿಸಿದರು.

ಭಾರತೀಯ ಸೇನೆಯ ಶೌರ್ಯವನ್ನು ನಾವು ಶ್ಲಾಘಿಸುತ್ತಿರುವ ಈ ಸಮಯದಲ್ಲಿ. ಭಾರತಕ್ಕಾಗಿ ಪ್ರಾಣ ನೀಡಿದ ಹುತಾತ್ಮರ ಗೌರವವನ್ನು ನಾವು ರಕ್ಷಿಸಲು ಸಾಧ್ಯವಾಗದಿರುವುದು ತೀವ್ರ ದುರದೃಷ್ಟಕರ ಎಂದು ಯದುವೀರ್‌ ತಿಳಿಸಿದರು.

ಇಂಥ ಸ್ಮಾರಕಗಳಿಗೆ ಗೌರವ ಕೊಡಲು ಆಗದವರು, ಇದನ್ನು ರಕ್ಷಿಸಿಕೊಳ್ಳಲು ಆಗದವರು ಕೂಡಲೇ ಇದನ್ನು ಭಾರತೀಯ ಸೇನೆಗೆ ವಹಿಸಿಕೊಡಬೇಕು. ಇಲ್ಲವೇ ಭಾರತೀಯ ಸೇನೆಯೇ ಇದನ್ನು ಸ್ವಾಧೀನಪಡಿಸಿಕೊಂಡು ನಿರ್ವಹಣೆ ಮಾಡಿದರೆ ನಮ್ಮ ಯೋಧರಿಗೆ ಗೌರವ ಸಿಗುವಂತಾಗುತ್ತದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಸೇನೆಗೆ ಪತ್ರ ಬರೆದಿದ್ದು, ಈ ಸ್ಮಾರಕಕ್ಕೆ ಗೌರವ ಸಿಗುವಂತಾಗಬೇಕು. ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸಂಸದ ಯದುವೀರ್‌ ಒಡೆಯರ್‌ ಆಗ್ರಹಿಸಿದರು.

*EoM*

https://www.facebook.com/share/p/1ANjfCvquV/
23/05/2025

https://www.facebook.com/share/p/1ANjfCvquV/

ಕನ್ನಡದವರಿಗೆ ಮನ್ನಣೆ ನೀಡದೇ ತಮನ್ನಾ ಭಾಟಿಯಾಗೆ 6.2 ಕೋಟಿ ರೂ. ನೀಡುವ ಅಗತ್ಯವೇನಿತ್ತು: ಸಂಸದ ಯದುವೀರ್‌ ಆರೋಪ ಮೈಸೂರು, ಮೇ 22: ಮೈಸೂರು ಸ....

ಕಾಂಗರೂ ಕೇರ್  ಆಸ್ಪತ್ರೆಯಿಂದ  ಪೊಲೀಸರಿಗೆ ಜಾಕೆಟ್ ಕೊಡುಗೆ*ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಹೃದಯಸ್ಪರ್ಶಿ ಕಾರ್ಯಕ್ರಮ. ಮೈಸೂರು: ತಾಯಿ ಮತ...
22/05/2025

ಕಾಂಗರೂ ಕೇರ್ ಆಸ್ಪತ್ರೆಯಿಂದ ಪೊಲೀಸರಿಗೆ ಜಾಕೆಟ್ ಕೊಡುಗೆ

*ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಹೃದಯಸ್ಪರ್ಶಿ ಕಾರ್ಯಕ್ರಮ.



ಮೈಸೂರು: ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿ ಇರುವ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ಮೈಸೂರಿನ ಪೊಲೀಸ್ ಸಿಬ್ಬಂದಿಗೆ ಸುರಕ್ಷತಾ ಜಾಕೆಟ್ ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ವಿಶ್ವ ತಾಯಂದಿರ ದಿನದ ಗೌರವವನ್ನು ಸಲ್ಲಿಸಿತು.



ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪೊಲೀಸ್ ಸಿಬ್ಬಂದಿಗೆ ಜಾಕೇಟ್ ಗಳನ್ನು ನೀಡಿ, ಅವರನ್ನು ಗೌರವಿಸಿದರು. ಬಳಿಕ ಮಾತನಾಡಿದ ಅವರು, “ನಮ್ಮ ರಸ್ತೆ ಸುರಕ್ಷತಾ ವೀರರಿಗೆ ಜಾಕೆಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿರುವುದು ಒಳ್ಳೆಯ ವಿಚಾರ ,‌ಕಾಂಗರೂ ಆಸ್ಪತ್ರೆಯ ಎರಡನೆಯ ಕಾರ್ಯಕ್ರಮಕ್ಕೆ ನಾನು ಆಗಮಿಸಿದ್ದೇನೆ ಸಾಮಾಜಿಕ ಕಳಕಳಿಯ ಕೆಲಸ ಗಳನ್ನು ಮಾಡುತ್ತಿದೆ, ಸಂಚಾರಿ ಪೋಲಿಸರು ಕಾಯಕದ ಜೊತೆಗೆ ಜನರ ಸೇವೆಯನ್ನು ಮಾಡುತ್ತಾರೆ. ಇಂತಹ ಸೇವೆಗಳನ್ನು ಮಾಡುವವರನ್ನು ಸದಾ ಪ್ರೇರೆಪಿಸಬೇಕು , ಎಲ್ಲರೂ ಈ ರೀತಿಯ ವಿಚಾರಗಳಿಗೆ ಕೈ ಜೋಡಿಸಬೇಕಿದೆ” ಎಂದರು



ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕ ಮತ್ತು ಸಿಇಒ

ಡಾ. ಶೇಖರ್ ಸುಬ್ಬಯ್ಯ ಮಾತನಾಡಿ,ಪೊಲೀಸರು ನಮಗೆ ಸ್ಥಳೀಯವಾಗಿ ಕಣ್ಣಿಗೆ ಕಾಣುವ ಸೂಪರ್ ಹೀರೋಗಳು.ಹೀಗಾಗಿ ಅಂತಹ ನಾಯಕತ್ವ ಗುಣವನ್ನು ಹೊಂದಿರುವವರನ್ನು ಕಾಂಗರೂ ಕೇರ್ ಆಸ್ಪತ್ರೆ ವತಿಯಿಂದ ಗುರುತಿಸಿ, ಸನ್ಮಾನಿಸಲು ನಾವು ಹೆಮ್ಮೆಪಡುತ್ತೇವೆ ಎಂದರು. ನಾವು ನೀಡುತ್ತಿರುವ ಈ ಜಾಕೆಟ್‌ಗಳು ಕೇವಲ ರಕ್ಷಣಾತ್ಮಕ ಸಾಧನಗಳಲ್ಲ.ಅದಕ್ಕಿಂತ ಹೆಚ್ಚಿನದಾಗಿ ನಮ್ಮ ಪೊಲೀಸ್ ಅಧಿಕಾರಿಗಳ ನಿಸ್ವಾರ್ಥ ಸೇವಾ ಸಮರ್ಪಣೆಗೆ ನಾವು ಸಲ್ಲಿಸುತ್ತಿರುವ ಆಳವಾದ ಕೃತಜ್ಞತೆಯನ್ನು ಪ್ರತಿನಿಧಿಸುತ್ತವೆ ಎಂದರು. ನಮ್ಮ ಆಸ್ಪತ್ರೆಯು ವೈದ್ಯಕೀಯ ಆರೈಕೆಯ ಜೊತೆಗೆ ಸಾಮಾಜಿಕ ಸೇವಾ ಭಾವನೆ ಹೊಂದಿದ್ದು, ಸಮಾಜದಲ್ಲಿ ಬದಲಾವಣೆಗಳನ್ನು ತರುವ ದೈನಂದಿನ ಜೀವನದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ವಲಯವನ್ನು ಬೆಂಬಲಿಸುತ್ತದೆ. ತನ್ಮೂಲಕ ಸುರಕ್ಷಿತ ಸಮುದಾಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದರು. VV Puram Traffic Inspector Lava, Jayalakshmipuram Inspector Kumar, Film actor Darshan mother Meena Thoogudeepa were also present.



ಈ ಉಪಕ್ರಮದೊಂದಿಗೆ, ಕಾಂಗರೂ ಕೇರ್ ಆರೋಗ್ಯ ಸೇವೆ ಒದಗಿಸುವವರಾಗಿ ಮಾತ್ರವಲ್ಲದೆ ಸಹಾನುಭೂತಿಯ ಸಮುದಾಯ ಪಾಲುದಾರರಾಗಿಯೂ ತನ್ನ ಪಾತ್ರವನ್ನು ಬಲಪಡಿಸುತ್ತಿದೆ. ಆರೈಕೆ ಆಸ್ಪತ್ರೆಯ ನಾಲ್ಕು ಗೋಡೆಗಳ ಒಳಗೆ ಮಾತ್ರ ಸೀಮಿತವಾಗದೆ,ಅದನ್ನು ಮೀರಿ ವಿಸ್ತರಿಸುತ್ತದೆ ಎಂಬುದನ್ನು ಪ್ರದರ್ಶಿಸುತ್ತದೆ ಎಂದರು

--------------------ಬಾಕ್ಸ್---------

ಸೇವಾ ವಿಸ್ತರಣೆ

ಮೈಸೂರು: ಮಹಿಳಾ ಮತ್ತು ಮಕ್ಕಳ ಆರೋಗ್ಯ ಸೌಲಭ್ಯದ ವಿಷಯವಾಗಿ ಸಮರ್ಪಿತಾ ಸೇವಾ ಮನೋಭಾವನೆಯಿಂದ ಮೈಸೂರಿನಲ್ಲಿ ಮೊದಲಿಗೆ ಸ್ಥಾಪನೆಯಾದ ಕಾಂಗರೂ ಕೇರ್ ಆಸ್ಪತ್ರೆಯು ಬೆಂಗಳೂರು, ಮೈಸೂರು ಮತ್ತು ರಾಮನಗರದಲ್ಲಿ ಶಾಖೆಗಳನ್ನು ಹೊಂದಿದೆ. ವಿಶ್ವಾಸಾರ್ಹ ಆರೋಗ್ಯ ಸೇವೆಯನ್ನು ಉತ್ಕೃಷ್ಟ ಮಟ್ಟದಲ್ಲಿ ಪೂರೈಕೆ ಮಾಡುವ ಮಟ್ಟಿಗೆ ಬೆಳೆವಣಿಗೆ ಕಂಡಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಮತ್ತು ಬೆಂಗಳೂರಿನ ಆರ್.ಆರ್. ನಗರದಲ್ಲಿ ಆಸ್ಪತ್ರೆಯನ್ನು ಸ್ಥಾಪನೆ ಮಾಡಿ,ಆರೋಗ್ಯ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಯೋಜಿಸಲಾಗಿದೆ.

--------

Address


Alerts

Be the first to know and let us send you an email when Mysuru Mirror posts news and promotions. Your email address will not be used for any other purpose, and you can unsubscribe at any time.

Contact The Business

Send a message to Mysuru Mirror:

  • Want your business to be the top-listed Media Company?

Share