22/05/2025
ಕಾಂಗರೂ ಕೇರ್ ಆಸ್ಪತ್ರೆಯಿಂದ ಪೊಲೀಸರಿಗೆ ಜಾಕೆಟ್ ಕೊಡುಗೆ
*ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಹೃದಯಸ್ಪರ್ಶಿ ಕಾರ್ಯಕ್ರಮ.
ಮೈಸೂರು: ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿ ಇರುವ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ಮೈಸೂರಿನ ಪೊಲೀಸ್ ಸಿಬ್ಬಂದಿಗೆ ಸುರಕ್ಷತಾ ಜಾಕೆಟ್ ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ವಿಶ್ವ ತಾಯಂದಿರ ದಿನದ ಗೌರವವನ್ನು ಸಲ್ಲಿಸಿತು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪೊಲೀಸ್ ಸಿಬ್ಬಂದಿಗೆ ಜಾಕೇಟ್ ಗಳನ್ನು ನೀಡಿ, ಅವರನ್ನು ಗೌರವಿಸಿದರು. ಬಳಿಕ ಮಾತನಾಡಿದ ಅವರು, “ನಮ್ಮ ರಸ್ತೆ ಸುರಕ್ಷತಾ ವೀರರಿಗೆ ಜಾಕೆಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿರುವುದು ಒಳ್ಳೆಯ ವಿಚಾರ ,ಕಾಂಗರೂ ಆಸ್ಪತ್ರೆಯ ಎರಡನೆಯ ಕಾರ್ಯಕ್ರಮಕ್ಕೆ ನಾನು ಆಗಮಿಸಿದ್ದೇನೆ ಸಾಮಾಜಿಕ ಕಳಕಳಿಯ ಕೆಲಸ ಗಳನ್ನು ಮಾಡುತ್ತಿದೆ, ಸಂಚಾರಿ ಪೋಲಿಸರು ಕಾಯಕದ ಜೊತೆಗೆ ಜನರ ಸೇವೆಯನ್ನು ಮಾಡುತ್ತಾರೆ. ಇಂತಹ ಸೇವೆಗಳನ್ನು ಮಾಡುವವರನ್ನು ಸದಾ ಪ್ರೇರೆಪಿಸಬೇಕು , ಎಲ್ಲರೂ ಈ ರೀತಿಯ ವಿಚಾರಗಳಿಗೆ ಕೈ ಜೋಡಿಸಬೇಕಿದೆ” ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕ ಮತ್ತು ಸಿಇಒ
ಡಾ. ಶೇಖರ್ ಸುಬ್ಬಯ್ಯ ಮಾತನಾಡಿ,ಪೊಲೀಸರು ನಮಗೆ ಸ್ಥಳೀಯವಾಗಿ ಕಣ್ಣಿಗೆ ಕಾಣುವ ಸೂಪರ್ ಹೀರೋಗಳು.ಹೀಗಾಗಿ ಅಂತಹ ನಾಯಕತ್ವ ಗುಣವನ್ನು ಹೊಂದಿರುವವರನ್ನು ಕಾಂಗರೂ ಕೇರ್ ಆಸ್ಪತ್ರೆ ವತಿಯಿಂದ ಗುರುತಿಸಿ, ಸನ್ಮಾನಿಸಲು ನಾವು ಹೆಮ್ಮೆಪಡುತ್ತೇವೆ ಎಂದರು. ನಾವು ನೀಡುತ್ತಿರುವ ಈ ಜಾಕೆಟ್ಗಳು ಕೇವಲ ರಕ್ಷಣಾತ್ಮಕ ಸಾಧನಗಳಲ್ಲ.ಅದಕ್ಕಿಂತ ಹೆಚ್ಚಿನದಾಗಿ ನಮ್ಮ ಪೊಲೀಸ್ ಅಧಿಕಾರಿಗಳ ನಿಸ್ವಾರ್ಥ ಸೇವಾ ಸಮರ್ಪಣೆಗೆ ನಾವು ಸಲ್ಲಿಸುತ್ತಿರುವ ಆಳವಾದ ಕೃತಜ್ಞತೆಯನ್ನು ಪ್ರತಿನಿಧಿಸುತ್ತವೆ ಎಂದರು. ನಮ್ಮ ಆಸ್ಪತ್ರೆಯು ವೈದ್ಯಕೀಯ ಆರೈಕೆಯ ಜೊತೆಗೆ ಸಾಮಾಜಿಕ ಸೇವಾ ಭಾವನೆ ಹೊಂದಿದ್ದು, ಸಮಾಜದಲ್ಲಿ ಬದಲಾವಣೆಗಳನ್ನು ತರುವ ದೈನಂದಿನ ಜೀವನದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ವಲಯವನ್ನು ಬೆಂಬಲಿಸುತ್ತದೆ. ತನ್ಮೂಲಕ ಸುರಕ್ಷಿತ ಸಮುದಾಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದರು. VV Puram Traffic Inspector Lava, Jayalakshmipuram Inspector Kumar, Film actor Darshan mother Meena Thoogudeepa were also present.
ಈ ಉಪಕ್ರಮದೊಂದಿಗೆ, ಕಾಂಗರೂ ಕೇರ್ ಆರೋಗ್ಯ ಸೇವೆ ಒದಗಿಸುವವರಾಗಿ ಮಾತ್ರವಲ್ಲದೆ ಸಹಾನುಭೂತಿಯ ಸಮುದಾಯ ಪಾಲುದಾರರಾಗಿಯೂ ತನ್ನ ಪಾತ್ರವನ್ನು ಬಲಪಡಿಸುತ್ತಿದೆ. ಆರೈಕೆ ಆಸ್ಪತ್ರೆಯ ನಾಲ್ಕು ಗೋಡೆಗಳ ಒಳಗೆ ಮಾತ್ರ ಸೀಮಿತವಾಗದೆ,ಅದನ್ನು ಮೀರಿ ವಿಸ್ತರಿಸುತ್ತದೆ ಎಂಬುದನ್ನು ಪ್ರದರ್ಶಿಸುತ್ತದೆ ಎಂದರು
--------------------ಬಾಕ್ಸ್---------
ಸೇವಾ ವಿಸ್ತರಣೆ
ಮೈಸೂರು: ಮಹಿಳಾ ಮತ್ತು ಮಕ್ಕಳ ಆರೋಗ್ಯ ಸೌಲಭ್ಯದ ವಿಷಯವಾಗಿ ಸಮರ್ಪಿತಾ ಸೇವಾ ಮನೋಭಾವನೆಯಿಂದ ಮೈಸೂರಿನಲ್ಲಿ ಮೊದಲಿಗೆ ಸ್ಥಾಪನೆಯಾದ ಕಾಂಗರೂ ಕೇರ್ ಆಸ್ಪತ್ರೆಯು ಬೆಂಗಳೂರು, ಮೈಸೂರು ಮತ್ತು ರಾಮನಗರದಲ್ಲಿ ಶಾಖೆಗಳನ್ನು ಹೊಂದಿದೆ. ವಿಶ್ವಾಸಾರ್ಹ ಆರೋಗ್ಯ ಸೇವೆಯನ್ನು ಉತ್ಕೃಷ್ಟ ಮಟ್ಟದಲ್ಲಿ ಪೂರೈಕೆ ಮಾಡುವ ಮಟ್ಟಿಗೆ ಬೆಳೆವಣಿಗೆ ಕಂಡಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಮತ್ತು ಬೆಂಗಳೂರಿನ ಆರ್.ಆರ್. ನಗರದಲ್ಲಿ ಆಸ್ಪತ್ರೆಯನ್ನು ಸ್ಥಾಪನೆ ಮಾಡಿ,ಆರೋಗ್ಯ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಯೋಜಿಸಲಾಗಿದೆ.
--------