18/08/2025
ಪಬ್ ನಲ್ಲಿ ಸಿಸಿಬಿ ಪೊಲೀಸ್ ಅಧಿಕಾರಿಯ ಕಿರಿಕ್...ಗುಂಡಿನ ಮತ್ತಿನಲ್ಲಿ ಆವಾಜ್...ವಿಡಿಯೋ ವೈರಲ್...
ಮೈಸೂರಿನ ಚೌಮುಂಡಿ ಬೆಟ್ಟದ ರಸ್ತೆಯ ಜೆಸಿ ನಗರದ ಪಬ್ ಒಂದರಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಕಿರಿಕ್ ತೆಗೆದಿದ್ದಾರೆ.ಅಲ್ಲಿನ ಸಿಬ್ಬಂದಿಗಳಿಗೆ ಆವಾಜ್ ಹಾಕಿದ್ದಾರೆ.
ಬಿಲ್ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಖಾಸಗಿ ಇವೆಂಟ್ ನಲ್ಲಿ ಪಾಸ್ ಇಲ್ಲದೆ ಎಂಟ್ರಿಯಾಗಿದ್ದಾರೆಂದು ಹೇಳಲಾಗಿದೆ. ಎಂಟ್ರಿ ಆಗುವಾಗಲೇ ಫುಲ್ ಟೈಟು ಎಂದು ಕೇಳಿಬಂದಿದೆ. ನಾನು ಸಿಸಿಬಿ ಆಫೀಸರ್ ಎಂದು ಧಮ್ಕಿ ಹಾಕಿದ್ದಾರೆ.ಅಧಿಕಾರ ದುರುಪಯೋಗ ಪಡಿಸಿಕೊಂಡ ಅಧಿಕಾರಿ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತೆ ಮಾಡಿದ್ದಾರೆ.ವಿಡಿಯೋ ಮಾಡುದ್ರೆ ಕೇಸ್ ಮಾಡ್ತಿನಿ ಎಂದು ಹೆದರಿಸಿದ್ದಾರೆ. ನನ್ನ ನೀವು ಏನೂ ಮಾಡೋಕೆ ಆಗಲ್ಲಾ ಎಂದು ಆವಾಜ್ ಹಾಕಿದ್ದಾರೆ.ಸಧ್ಯ ವಿಡಿಯೋ ವೈರಲ್ ಆಗಿದೆ.ಇಂತಹ ಅಧಿಕಾರಿ ವಿರುದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ...?
Mysore City ನಮ್ಮ ಕೆ.ಆರ್ ನಗರ / Namma K.R Nagara Hunsur updates Periyapatna Nagara ಪಿರಿಯಾಪಟ್ಟಣ ನಗರ Namma Karnataka - Namma Bengaluru Tv1kannada TV1kannada Siddaramaiah DK Shivakumar Namma Bengaluru ನಮ್ಮ ಬೆಂಗಳೂರು Karnataka Police Magazine