Jaya Bharatha

Jaya Bharatha ಈ ನೆಲ, ನಾಡು, ನುಡಿ, ಜಲದ ಅಂತರಾಳವ ತಿಳಿಸುವ ಪ್ರತಿಬಿಂಬ....
ಸದಾ ನಿಮ್ಮೊಂದಿಗೆ ನಾವು....

ಸಾವಲ್ಲೂ ಸಾರ್ಥಕತೆ: ಮೂವರಿಗೆ ಅಂಗಾಂಗ ದಾನ   ಮೈಸೂರು: ಅಪಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ 32 ವರ್ಷದ ವ್ಯಕ್ತಿಯೊಬ್ಬನ ಅಂಗಾಂಗಳ ದಾ...
13/06/2026

ಸಾವಲ್ಲೂ ಸಾರ್ಥಕತೆ: ಮೂವರಿಗೆ ಅಂಗಾಂಗ ದಾನ

ಮೈಸೂರು: ಅಪಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ 32 ವರ್ಷದ ವ್ಯಕ್ತಿಯೊಬ್ಬನ ಅಂಗಾಂಗಳ ದಾನದ ಮೂಲಕ ಇತರೆ ಮೂವರು ಮಂದಿಗೆ ಜೀವದಾನ ಮಾಡಿ ಸಾರ್ಥಕತೆ ಮಾಡಿರುವ ಘಟನೆ ನಗರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
32 ವರ್ಷ ವಯಸ್ಸಿನ ಕೆ.ಎಂ.ದೊಡ್ಡಿ ಕ್ಯಾತಘಟ್ಟ ಗ್ರಾಮದ ಗಿರೀಗೌಡ(ರಂಜಿತ್) ಎಂಬುವವರೇ ತಮ್ಮ ಸಾವಿನ ಬಳಿಕವೂ ಮೂವರಿಗೆ ಜೀವಕ್ಕೆ ನೆರವಾದವರಾಗಿದ್ದಾರೆ. ಜೂ.11ರಂದು ಭಾರತೀನಗರದ ಮದ್ದೂರು ಮಳವಳ್ಳಿ ರಸ್ತೆ ಸಮಯದಲ್ಲಿ ಆಲಭುಜನಹಳ್ಳಿ ಕಡೆ ತಿರುವಿನ ವೇಳೆ ದ್ವಿಚಕ್ರವಾಹನ ಅಪಘಾತ ಸಂಭವಿಸಿದೆ. ಬಳಿಕ ಅವರನ್ನು ಅಂದೇ ರಾತ್ರಿ ಮೈಸೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೆದುಳು ನಿಷ್ಕ್ರಿಯಗೊಂಡಿದೆ. ಕೊನೆಗೆ ಅಂಗಾಂಗ ದಾನದ ವಿಚಾರವನ್ನು ಪತ್ನಿಸ್ಪಂದನ ಅವರಕ್ಕೆ ವೈದ್ಯರು ತಂದಿದ್ದಾರೆ.
ಅವರ ಸ್ವಯಂ ಅನುಮತಿ ಮೇರೆಗೆ ಯಕೃತ್‌, ಎರಡು ಮೂತ್ರಪಿಂಡವನ್ನು ಅವಶ್ಯಕತೆ ಇರುವವರಿಗೆ ವರ್ಗಾಯಿಸುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದು ಇತರರಿಗೆ ಪ್ರೇರಣೆಯಾಗಿದ್ದಾರೆ. ಮೃತರ ಕುಟುಂಬಸ್ಥರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮೃತರು ಸಿವಿಕ್ಷ, ರಿತ್ವಿಕ್, ಗೌತಮಿ ಎಂಬ ಮೂವರು ಮಕ್ಕಳನ್ನು ಹಾಗೂ ತಾಯಿ ಚಿಕ್ಕತಾಯಮ್ಮರನ್ನು ಅಗಲಿದ್ದಾರೆ.
#ಜಯಭಾರತ

13/06/2026

Free free free 100% saree free ಮೈಸೂರಲ್ಲಿ ಅವನಿ ಸೀರೆ ಮೇಳ ಒಂದು ಕೊಂಡರೆ ಇನ್ನೊಂದು ಉಚಿತ...
ಶೇ.50% ಉಚಿತ ಉಚಿತ ಉಚಿತ...
ಮೂರು ದಿನಗಳ ಅವನಿ ಸೀರೆ ಮೇಳಕ್ಕೆ ಚಾಲನೆ ಅವನಿ ಸಿಲ್ಕ್‌ ಅಂಡ್‌ ಸ್ಯಾರಿವತಿಯಿಂದ ನಗರದ ವಿಜಯನಗರದಲ್ಲಿರುವ ಕೊಡಗು ಗೌಡ ಸಮಾಜದಲ್ಲಿ ಮೂರು ದಿನಗಳ ಪಾರಂಪರಿಕ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ದೊರೆಯಿತು.
ಮೇಳದಲ್ಲಿ ವಿವಿಧ ರಾಜ್ಯಗಳ ಪ್ಯೂರ್ ಸಿಲ್ಕ್, ಕಾಂಜಿವರಂ, ಬನರಾಸ್, ಸೆಮಿ ಸಿಲ್ಕ್, ಫ್ಯಾನ್ಸಿ ಹಾಗೂ ಎಲ್ಲಾ ರೀತಿ ೫೦ ವಿಭಿನ್ನ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನೋಡುಗರ ಕಣ್ಮನ ಸೆಳೆಯುತ್ತಿದೆ. ಇನ್ನೂ ಪ್ರದರ್ಶನದ ಅಂಗವಾಗಿ ೫೦೦ ರೂ. ನಿಂದ ೨೫ಸಾವಿರದವರೆಗಿನ ಸೀರೆಗಳು ಮಾರಾಟಕ್ಕೆ ಲಭ್ಯವಿದ್ದು ಅನೇಕ ಸೀರೆಗಳ ಬೆಲೆಯಲ್ಲಿ ಶೇ.40ರಷ್ಟು ವಿನಾಯಿತಿ ಹಾಗೂ ಕೈಗೆಟಕುವ ದರದಲ್ಲಿ ಮಾರಾಟ ಸಹ ಮಾಡುತ್ತಿರುವುದು ಮತ್ತೊಂದು ವಿಶೇಷ...

#100%free #ಜಯಭಾರತ #ಮೈಸೂರು #ವಿಜಯನಗರ #ಕೊಡಗುಗೌಡಸಮಾಜ #ಸೀರೆಮೇಳ #ಸೀರೆ

10/06/2026

ಮೈಸೂರಲ್ಲಿ ಆಶಾಗಳ ಪ್ರತಿಭಟನೆ ಗೌರವಧನ ಬಿಡುಗಡೆ ಸೇರಿ ಹಕವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

#ಆಶಾ #ಆಶಾಕಾರ್ಯಕರ್ತೆಯರು #ಅಂಗನವಾಡಿ #ಮೈಸೂರು #ಜಯಭಾರತ

09/06/2026

ಉಚಿತ ಬಸ್‌ ಪಾಸ್‌ ಅರ್ಜಿ ವಿತರಿಸಿ ಎನ್‌ಎಸ್‌ಯುಐ ಸಂಭ್ರಮಾಚರಣೆ
ಮೈಸೂರು: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದಿಂದ ನಗರ ಬಸ್‌ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಅರ್ಜಿ ಹಾಗೂ ಸಿಹಿ ವಿತರಿಸುವ ಮೂಲಕ ಸಂಭ್ರಮ ಆಚರಿಸಿದರು.
ಒಕ್ಕೂಟದ ನಗರ ಅಧ್ಯಕ್ಷ ಎನ್‌.ಮನೋಜ್‌ ಕುಮಾರ್‌ ಮಾತನಾಡಿ, ನೂತನವಾಗಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಮೊಟ್ಟ ಮೊದಲನೆಯದಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ಘೋಷಿಸಿದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಹಾಗೂ ಉಚಿತ ಕಾರ್ಡ್‌ಗಳನ್ನು ವಿತರಿಸಿ ಸಂಭ್ರಮಿಸಲಾಯಿತು. ಯಾವುದೇ ಜಾತಿ, ಮತ ಬೇಧವಿಲ್ಲದೆ ಎಲ್ಲರಿಗೂ ಯೋಜನೆ ವಿಸ್ತರಿಸುವ ಮೂಲಕ ಸರ್ಕಾರ ಮತ್ತೊಂದು ಕೊಡುಗೆ ನೀಡಿದೆ ಎಂದರು.
ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಸೀಮಿತವಾಗಿವೆ ಎಂದು ಕೆಲವರು ಟೀಕಿಸುತ್ತಿದ್ದರೂ ಆದರೆ, ಉಚಿತ ಬಸ್‌ ಪಾಸ್‌ ಯೋಜನೆ ಎಲ್ಲರಿಗೂ ನೀಡಿರುವುದು ಸಂತಸದ ಸಂಗತಿ. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆರ್ಥಿಕ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಮಹತ್ವದ ಯೋಜನೆಯು ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಯು.ಐ ಉಪಾಧ್ಯಕ್ಷ ರಜತ್ ಅರ್.ಅಭಯ್, ಪ್ರಧಾನ ಕಾರ್ಯದರ್ಶಿ ನಹುಷ್, ಇಬ್ರಾಹಿಂ ಪಾಷ, ಹರ್ಷವರ್ಧನ್, ಅಮರ್ತ ಗಣೇಶ್, ಸ್ಟಾಲಿನ್, ಯೋಗೇಶ್, ಗೌರವ್ ಸೇರಿ ಅನೇಕರು ಉಪಸ್ಥಿತರಿದ್ದರು.

#ಸಂಭ್ರಮಾಚರಣೆ #ಮೈಸೂರು

08/06/2026

ನಗರದಲ್ಲೇ ಕಾಂಪೌಂಡ್ ಹಾರಿದ ಚಿರತೆ
ಚಿರತೆ ಪ್ರತ್ಯಕ್ಷಕ್ಕೆ ಗ್ರಾಮಸ್ಥರಲ್ಲಿ ಆತಂಕ
ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದಲ್ಲಿ ಘಟನೆ
ವಸತಿ ಪ್ರದೇಶದಲ್ಲೇ ಚಿರತೆ ಸಂಚಾರ
ಮನೆಯ ಕಾಂಪೌಂಡ್ ಹಾರಿ ಆಹಾರಕ್ಕಾಗಿ ಹುಡುಕಾಟ
ಚಿರತೆ ಸಂಚಾರದ ವಿಡಿಯೋ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆ.
ಗ್ರಾಮದ ಶಿವಲಿಂಗಣ್ಣನವರ ಮಾದೇಗೌಡ ಎಂಬುವವರ ಮನೆ ಆವರಣದಲ್ಲಿ ಚಿರತೆ ಸಂಚಾರ.
ಚಿರತೆ ಸಂಚಾರದ ವಿಷಯ ತಿಳಿದು ಆತಂಕಗೊಂಡಿರುವ ಗ್ರಾಮಸ್ಥರು.
ಕೂಡಲೇ ಬೋನ್ ಇಟ್ಟು ಚಿರತೆ ಸೆರೆಹಿಡಿಯುವಂತೆ ಆಗ್ರಹ.
ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿರುವ ಗ್ರಾಮಸ್ಥರು

#ಚಿರತೆ #ಮಂಡ್ಯ #ಅರಣ್ಯ #ಅರಣ್ಯಇಲಾಖೆ

07/06/2026

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರದಲ್ಲಿ ಪ್ರಕೃತಿ ವಿಸ್ಮಯ ಶ್ರೀ ಕ್ಷೇತ್ರದ ಪುಷ್ಪೋದ್ಯಾನದಲ್ಲಿ ಭಕ್ತರಿಗೆ ದರ್ಶನ...
ತೆಂಗಿನ ಮರದ ಮೇಲೆ ಬೆಳೆದ ಅರಳಿ ಮರದ ಗಿಡ
ಸಸಿ ಕಂಡ ಭಕ್ತರು ಮೂಕ ವಿಸ್ಮಿತರು...

ನೀವು ಒಮ್ಮೆ ದರ್ಶನ ಮಾಡಿ...

#ಕುಕ್ಕೆಸುಬ್ರಹ್ಮಣ್ಯ #ಶ್ರೀಕ್ಷೇತ್ರಕುಕ್ಕಸುಬ್ರಹ್ಮಣ್ಯ #ದಕ್ಷಿಣಕನ್ನಡ #ಕುಕ್ಕೆಶ್ರೀ
#ತೆಂಗಿನಮರ #ಅರಳಿಮರ #ಪ್ರಕೃತಿವಿಸ್ಮಯ

05/06/2026

ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ಸಾಲು ಸಾಲು ಸಮಸ್ಯೆ ಹೇಳಿಕೊಂಡ ಉಪಮೇಯರ್ ಶೈಲೇಂದ್ರ, ಸಮಸ್ಯೆ ಪರಿಹಾರಕ್ಕೆ ಮನವಿಯನ್ನು ಮಾಡಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
Deputy Mayor Shailendra, who expressed his problems to the Union Tourism Minister, appealed to MP Yaduveera Krishnadatta Chamaraja Wodeyar to resolve the problem

ಡಿಕೆಶಿ ಸಂಪುಟದಲ್ಲಿ ಖಾತೆ- ಖ್ಯಾತೆ ಆಗುತ್ತಾ?ಆಗುತ್ತೇ ಅನ್ನೋದಾದ್ರೆ ಲೈಕ್ ಮಾಡಿ ಆಗಲ್ಲ ಅನ್ನೋದಾದ್ರೆ ಕಾಮೆಂಟ್ ಮಾಡಿ....
04/06/2026

ಡಿಕೆಶಿ ಸಂಪುಟದಲ್ಲಿ ಖಾತೆ- ಖ್ಯಾತೆ ಆಗುತ್ತಾ?
ಆಗುತ್ತೇ ಅನ್ನೋದಾದ್ರೆ ಲೈಕ್ ಮಾಡಿ ಆಗಲ್ಲ ಅನ್ನೋದಾದ್ರೆ ಕಾಮೆಂಟ್ ಮಾಡಿ....

04/06/2026

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಸ್ನೇಕ್ ರಕ್ಷಕ ಮಹದೇವಸ್ವಾಮಿ ಮೀನು ಹಿಡಿಯುವ ಬಲೆಯಲ್ಲಿ ಸಿಲುಕಿಕೊಂಡಿದ್ದ 6 ಅಡಿ ಉದ್ದದ ಬೃಹತ್ ನಾಗರಹಾವನ್ನು ಸಂರಕ್ಷಿಸಿದರು.

#ಜಯಭಾರತ #ಗುಂಡ್ಲುಪೇಟೆ

03/06/2026

ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ
Cm Dk Shivakumar #ಜಯಭಾರತ

Address

Bannur Main Road
Mysore
570029

Alerts

Be the first to know and let us send you an email when Jaya Bharatha posts news and promotions. Your email address will not be used for any other purpose, and you can unsubscribe at any time.

Share