GSS Media

GSS Media GSS Media is a private media company that intends to bring about a positive change in journalism.

India soars to celestial heights with Chandrayaan-3's success! 🚀🌕 A remarkable leap in space exploration that fuels our ...
23/08/2023

India soars to celestial heights with Chandrayaan-3's success! 🚀🌕 A remarkable leap in space exploration that fuels our pride and curiosity. Congratulations, ISRO! 🛰️🌌

ಪ್ರತಿನಿಧಿ ಸಂವಾದ; 3ನೇ ಆವೃತ್ತಿ "ಪ್ರಸ್ತುತ ಶಿಕ್ಷಣದಲ್ಲಿನ ಸವಾಲುಗಳು" (ಗ್ರಾಮಾಂತರ ವಿಭಾಗ)ನವಮಾಧ್ಯಮ ಪ್ರೈವೇಟ್ ಲಿಮಿಟೆಡ್ ನ ಪ್ರತಿನಿಧಿ ದಿ...
12/09/2022

ಪ್ರತಿನಿಧಿ ಸಂವಾದ; 3ನೇ ಆವೃತ್ತಿ

"ಪ್ರಸ್ತುತ ಶಿಕ್ಷಣದಲ್ಲಿನ ಸವಾಲುಗಳು" (ಗ್ರಾಮಾಂತರ ವಿಭಾಗ)

ನವಮಾಧ್ಯಮ ಪ್ರೈವೇಟ್ ಲಿಮಿಟೆಡ್ ನ ಪ್ರತಿನಿಧಿ ದಿನಪತ್ರಿಕೆ ಹಾಗೂ ಜಿಎಸ್ಎಸ್ ಮಾಧ್ಯಮ ವತಿಯಿಂದ "ನಿಮ್ಮದೇ ಕ್ಷೇತ್ರದ ಆಗು-ಹೋಗುಗಳ ಬಗ್ಗೆ ಚರ್ಚೆ" ಸಂವಾದ ನಡೆಯಿತು.

ಮೈಸೂರಿನ ಜಿಎಸ್ಎಸ್ ಕಚೇರಿಯ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದ 3ನೇ ಆವೃತ್ತಿಯಲ್ಲಿ "ಪ್ರಸ್ತುತ ಶಿಕ್ಷಣದಲ್ಲಿನ ಸವಾಲುಗಳು" (ಗ್ರಾಮಾಂತರ) (Challenges in present education in Rural background) ವಿಷಯ ಕುರಿತು ಚರ್ಚಿಸಲಾಯಿತು. ‌

ಜಿಎಸ್ಎಸ್ ಮಾಧ್ಯಮದ ವ್ಯವಸ್ಥಾಪಕ ನಿರ್ದೇಶಕರಾದ
ಡಿ.ಶ್ರೀಹರಿ, ಪ್ರತಿನಿಧಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಸಿ.ಕೆ. ಮಹೇಂದ್ರ, ಕಾರ್ಯನಿರ್ವಾಹಕ ಸಂಪಾದಕರಾದ ಧರ್ಮಾಪುರ ನಾರಾಯಣ ಅವರು, ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸಿದರು.

ಸರ್ಕಾರದ ಕೆಲ ನಿಯಮಗಳು ಖಾಸಗಿ ಶಾಲೆಗಳನ್ನು ಹೇಗೆ ಕಷ್ಟಕ್ಕೆ ಸಿಲುಕಿಸುತ್ತಿವೆ, ಮಧ್ಯಮ ವರ್ಗದವರಿಗೆ ತೆರೆಯಲಾದ ಖಾಸಗಿ ಸಂಸ್ಥೆಗಳ ನಿಜವಾದ ಸಮಸ್ಯೆಗಳೇನು, ಮಕ್ಕಳ ಶಿಕ್ಷಣ ವಿಚಾರದಲ್ಲಿ ಸರ್ಕಾರ, ಸಮಾಜ, ಶಾಲೆಗಳು, ಪೋಷಕರು ಎಡವುತ್ತಿರುವುದು ಎಲ್ಲಿ, ಶಾಲೆಗಳ ನವೀಕರಣ ವಿಚಾರ, ಶುಲ್ಕ ವಿಚಾರ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಸಂವಾದ ಕಾರ್ಯಕ್ರಮದಲ್ಲಿ CISPMAM ಕಾರ್ಯದರ್ಶಿ ಹಾಗೂ ಹುಣಸೂರಿನ ಶಾಸ್ತ್ರಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ರಾಧಾಕೃಷ್ಣ. ಎಸ್, ಕೊಳ್ಳೇಗಾಲದ ನಿಸರ್ಗ ಶಿಕ್ಷಣ ಸಂಸ್ಥೆಯ ಅಸೋಸಿಯೇಟ್ ಪ್ರೊಫೆಸರ್ ಡಾ.ಜಗದೀಶ. ಇ, CISPMAM ಉಪಾಧ್ಯಕ್ಷರು, ತಾಂಡವಪುರ ಕ್ರೈಸ್ಟ್ ಶಾಲೆಯ ಪ್ರಾಂಶುಪಾಲರೂ ಆದ ಫಾದರ್ ಸೆಬಾಸ್ಟಿಯನ್ ಪಿ.ಜೆ, ಬೆಟ್ಟದಪುರದ ಎಸ್ಎಂಎಸ್ ಇನ್ಸ್ಟಿಟ್ಯೂಟ್ ಕಾರ್ಯಾಧ್ಯಕ್ಷ ಬಿ.ವಿ ಮಂಜುನಾಥ್ ಅವರು ಭಾಗಿಯಾಗಿದ್ದರು.

ಈ ಸಂವಾದ ಕಾರ್ಯಕ್ರಮವು ಯಾವುದೇ ವ್ಯಕ್ತಿ ಅಥವಾ ಪಕ್ಷವನ್ನು ದೂರುವ ಉದ್ದೇಶ ಹೊಂದಿಲ್ಲ. ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿದೆ.

ಪ್ರತಿನಿಧಿ ಸಂವಾದ; 2ನೇ ಆವೃತ್ತಿ ನವಮಾಧ್ಯಮ ಪ್ರೈವೇಟ್ ಲಿಮಿಟೆಡ್ ನ ಪ್ರತಿನಿಧಿ ದಿನಪತ್ರಿಕೆ ಹಾಗೂ ಜಿಎಸ್ಎಸ್ ಮಾಧ್ಯಮ ವತಿಯಿಂದ "ನಿಮ್ಮದೇ ಕ್ಷ...
02/09/2022

ಪ್ರತಿನಿಧಿ ಸಂವಾದ; 2ನೇ ಆವೃತ್ತಿ

ನವಮಾಧ್ಯಮ ಪ್ರೈವೇಟ್ ಲಿಮಿಟೆಡ್ ನ ಪ್ರತಿನಿಧಿ ದಿನಪತ್ರಿಕೆ ಹಾಗೂ ಜಿಎಸ್ಎಸ್ ಮಾಧ್ಯಮ ವತಿಯಿಂದ "ನಿಮ್ಮದೇ ಕ್ಷೇತ್ರದ ಆಗು-ಹೋಗುಗಳ ಬಗ್ಗೆ ಚರ್ಚೆ" ಸಂವಾದ ಆಯೋಜಿಸಲಾಗಿತ್ತು.

ಮೈಸೂರಿನ ಜಿಎಸ್ಎಸ್ ಕಚೇರಿಯ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದ 2ನೇ ಆವೃತ್ತಿಯಲ್ಲಿ "ಪ್ರಸ್ತುತ ಶಿಕ್ಷಣದಲ್ಲಿನ ಸವಾಲುಗಳು" (Challenges in present education) ವಿಷಯ ಕುರಿತು ಚರ್ಚಿಸಲಾಯಿತು. ‌

ಜಿಎಸ್ಎಸ್ ಮಾಧ್ಯಮದ ವ್ಯವಸ್ಥಾಪಕ ನಿರ್ದೇಶಕರಾದ
ಡಿ.ಶ್ರೀಹರಿ, ಪ್ರತಿನಿಧಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಧರ್ಮಾಪುರ ನಾರಾಯಣ ಅವರು, ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸಿದರು.

ಶಿಕ್ಷಣ ಕ್ಷೇತ್ರದಲ್ಲಿನ ಸವಾಲುಗಳು, ಪ್ರಸ್ತುತ ಶಿಕ್ಷಕರಿಗಿರುವ ಸವಾಲುಗಳು, ಖಾಸಗಿ ಶಾಲೆಗಳ ಮೇಲೆ ತೋರಲಾಗುವ ಮಲತಾಯಿ ಧೋರಣೆ, ವಿದ್ಯಾರ್ಥಿಗಳ ಮನಸ್ಥಿತಿ, ಶಿಕ್ಷಣ ಕ್ಷೇತ್ರದಲ್ಲಿ ಜಿಎಸ್ಟಿ ಅಳವಡಿಕೆ, ಶಿಕ್ಷಣ ಕ್ಷೇತ್ರದಲ್ಲಿ ತೆಗೆದುಕೊಳ್ಳಲಾಗುವ ಕೆಲ ಅವೈಜ್ಞಾನಿಕ ನಿರ್ಧಾರಗಳು ಇತ್ಯಾದಿ ವಿಚಾರಗಳ ಬಗ್ಗೆ ಸಂವಾದದಲ್ಲಿ ಚರ್ಚಿಸಲಾಯಿತು.

ಸಂವಾದ ಕಾರ್ಯಕ್ರಮದಲ್ಲಿ CISPMAM ಅಧ್ಯಕ್ಷರಾದ ವಿ.ವೆಂಕಟೇಶ್, ಶ್ರೀ ಶಾರದಾ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಮಂಜುನಾಥ್ ಶ್ರೀವತ್ಸ, ಶಾರದಾ ವಿಲಾಸ ಕಾಲೇಜು ಆಫ್ ಫಾರ್ಮಸಿ ಪ್ರಾಂಶುಪಾಲರಾದ ಡಾ. ಹನುಮಂತಾಚಾರ್ ಜೋಶಿ, ಪ್ರಮತಿ ಹಿಲ್ ವ್ಯೂ ಅಕಾಡೆಮಿ ಪ್ರಾಂಶುಪಾಲರಾದ ಸುದರ್ಶನ್, ಶಿಕ್ಷಣ ಸಲಹೆಗಾರರಾದ ಡಾ. ಎಲ್. ಸವಿತಾ, ವಿಜಯ ವಿಠ್ಠಲ ಪಿಯು ಕಾಲೇಜು ಪ್ರಾಂಶುಪಾಲರಾದ ಸತ್ಯಪ್ರಸಾದ್ ಐಯ್ಯರ್. ಎಚ್ ಅವರು ಭಾಗಿಯಾಗಿದ್ದರು.

ನವಮಾಧ್ಯಮ ಪ್ರೈವೇಟ್ ಲಿಮಿಟೆಡ್ ನ ಪ್ರತಿನಿಧಿ ದಿನಪತ್ರಿಕೆ ಹಾಗೂ ಜಿಎಸ್ಎಸ್ ಮೀಡಿಯಾ ವತಿಯಿಂದ "ನಿಮ್ಮದೇ ಕ್ಷೇತ್ರದ ಆಗು-ಹೋಗುಗಳ ಬಗ್ಗೆ ಚರ್ಚೆ"...
30/08/2022

ನವಮಾಧ್ಯಮ ಪ್ರೈವೇಟ್ ಲಿಮಿಟೆಡ್ ನ ಪ್ರತಿನಿಧಿ ದಿನಪತ್ರಿಕೆ ಹಾಗೂ ಜಿಎಸ್ಎಸ್ ಮೀಡಿಯಾ ವತಿಯಿಂದ "ನಿಮ್ಮದೇ ಕ್ಷೇತ್ರದ ಆಗು-ಹೋಗುಗಳ ಬಗ್ಗೆ ಚರ್ಚೆ" ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೈಸೂರಿನ ಜಿಎಸ್ಎಸ್ ಕಚೇರಿಯ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಿ.ಆರ್ (Completion Report) ಕುರಿತು ಚರ್ಚಿಸಲಾಯಿತು. ‌

ಪ್ರತಿನಿಧಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಸಿ.ಕೆ.ಮಹೇಂದ್ರ, ಕಾರ್ಯನಿರ್ವಾಹಕ ಸಂಪಾದಕರಾದ ಧರ್ಮಾಪುರ ನಾರಾಯಣ ಅವರು, ಕ್ರೆಡಾಯ್, ಬಿಎಐ, NAREDCO ಸಂಸ್ಥೆಗಳ ಕೆಲ‌ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದರು.

ಕ್ರೆಡಾಯ್ ಮೈಸೂರು ಅಧ್ಯಕ್ಷರಾದ ಎನ್ .ಎಸ್ ಮುರಳೀಧರ್, ಬಿಎಐ ಮೈಸೂರು ಚೇರ್ಮನ್ ಆರ್ ರಘುನಾಥ್, ಬಿಎಐ ಮೈಸೂರು ಪಾಸ್ಟ್ ಚೇರ್ಮನ್ ಎ.ವಿ. ಶ್ರೀಧರ್(ನಿಕಟಪೂರ್ವ ಚೇರ್ಮನ್), ಕರ್ನಾಟಕ NAREDCO ಪಾಸ್ಟ್ ಇಮಿಡಿಯೇಟ್ ಪ್ರೆಸಿಡೆಂಟ್ ಮನೋಜ್ ಲೋಧ ಎಮ್(ನಿಕಟಪೂರ್ವ ಅಧ್ಯಕ್ಷರು),
ಕರ್ನಾಟಕ NAREDCO ಗೌರವ ಕಾರ್ಯದರ್ಶಿ ನಾಗೇಶ್ ಎಂ ಎಲ್ ಭಾಗಿಯಾಗಿ ಸಿ.ಆರ್ (Completion Report) ವಿಚಾರದಲ್ಲಿ ತಾವು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

Address

#1105, Udayaravi Road Kuvempu Nagara
Mysore
570023

Opening Hours

Monday 10am - 7pm
Tuesday 10am - 7pm
Wednesday 10am - 7pm
Thursday 10am - 7pm
Friday 10am - 7pm
Saturday 10am - 7pm

Website

Alerts

Be the first to know and let us send you an email when GSS Media posts news and promotions. Your email address will not be used for any other purpose, and you can unsubscribe at any time.

Share