PrajaaBharata

PrajaaBharata ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಬಿಂಬ

ಸಾಹಿತಿ ಭಾನು ಮುಸ್ತಾಕ್, ಪತ್ರಕರ್ತ ಕೆ.ದೀಪಕ್ ಸೇರಿ ಐವರಿಗೆ ' ಸೌಹಾರ್ದ ಸೇತು ' ಪ್ರಶಸ್ತಿ ಶ್ರೀರಂಗಪಟ್ಟಣ (ಮಂಡ್ಯ): ಮುಸ್ಲಿಂ ಸೌಹಾರ್ದ ಒಕ್ಕ...
24/04/2025

ಸಾಹಿತಿ ಭಾನು ಮುಸ್ತಾಕ್, ಪತ್ರಕರ್ತ ಕೆ.ದೀಪಕ್
ಸೇರಿ ಐವರಿಗೆ ' ಸೌಹಾರ್ದ ಸೇತು ' ಪ್ರಶಸ್ತಿ

ಶ್ರೀರಂಗಪಟ್ಟಣ (ಮಂಡ್ಯ): ಮುಸ್ಲಿಂ ಸೌಹಾರ್ದ ಒಕ್ಕೂಟವು ಕೊಡಮಾಡುವ ಪ್ರತಿಷ್ಠಿತ ' ಸೌಹರ್ದ ಸೇತು' ಸಾಧಕ ವಾರ್ಷಿಕ ಪ್ರಶಸ್ತಿಗೆ ಹಿರಿಯ ಸಾಹಿತಿ ಶ್ರೀಮತಿ ಭಾನು ಮುಸ್ತಾಕ್, ಮೈಸೂರಿನ ಹಿರಿಯ ಪತ್ರಕರ್ತ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಗಾಂಧಿವಾದಿ ಡಾ. ಸುಜಯ್ ಕುಮಾರ್ ಸೇರಿದಂತೆ ಐವರು ಆಯ್ಕೆಯಾಗಿದ್ದಾರೆ. ನಾಗಮಂಗಲ ತಾಲೂಕು ಹೊನ್ನಾವರದ ಡಾ. ಟಿಪ್ಪು ಸುಲ್ತಾನ್, .ದಸರ ಕೇಸರಿ ಪ್ರಶಸ್ತಿ ಪುರಸ್ಕೃತ ಪೈ. ಗಿರೀಶ್ ಈ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೋಮು ಸೌಹಾರ್ದತೆಗಾಗಿ ದುಡಿಯುತ್ತಿರುವ ವಿವಿಧ ಕ್ಷೇತ್ರದ ಗಣ್ಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು 30ರಂದು ಶ್ರೀರಂಗಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಮುಸ್ಲಿಂ ಸೌರ್ಹಾದ ಒಕ್ಕೂಟದ ಗೌರವ ಅಧ್ಯಕ್ಷ ಪ್ರೊ. ಇಲಿಯಾಸ್ ಅಹಮದ್ ಖಾನ್ ತಿಳಿಸಿದ್ದಾರೆ.
ಅಂದು ನಡೆಯುವ ಮುಸ್ಲಿಂ‌ ಸೌಹಾರ್ದ ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎ.ಬಿ. ರಮೇಶ್ ಬಾಬು ಬಂಡಿಸಿದ್ದೇಗೌಡ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಪುರಸಭೆ ಅಧ್ಯಕ್ಷ ಎಂ.ಎಲ್.‌ ದಿನೇಶ್ ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಅಫ್ಸರ್ ವಹಿಸಲಿದ್ದಾರೆ. ಸಾಹಿತಿ‌ ಮಂಗಳೂರು ವಿಜಯ, ಡಿವೈಎಸ್ಪಿ ಶಾಂತಮಲ್ಲಪ್ಪ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಜನಾಬ್ ಅಬ್ದುಲ್ ಬೇಗ್ ಭಾಗವಹಿಸುವರು.

ಡಾ. ಅಂಬೇಡ್ಕರ್ ಗೆ ಅಪಮಾನ : ಸಿಎಂ ಸಿದ್ದರಾಮಯ್ಯ ಕ್ಷೇತ್ರದವಾಜಮಂಗಲದಲ್ಲಿ ನೀಚ ಕೃತ್ಯಮೈಸೂರು : ಮಹಾನ್ ಮಾನವತಾವಾದಿ, ವಿಶ್ವ ಜ್ಞಾನಿ ಡಾ. ಬಿ.ಆ...
19/04/2025

ಡಾ. ಅಂಬೇಡ್ಕರ್ ಗೆ ಅಪಮಾನ :
ಸಿಎಂ ಸಿದ್ದರಾಮಯ್ಯ ಕ್ಷೇತ್ರದ
ವಾಜಮಂಗಲದಲ್ಲಿ ನೀಚ ಕೃತ್ಯ
ಮೈಸೂರು : ಮಹಾನ್ ಮಾನವತಾವಾದಿ, ವಿಶ್ವ ಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಮೈಸೂರು ತಾಲೂಕು ವಾಜಮಂಗಲ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರ, ಫ್ಲೆಕ್ಸ್ ಗಳಿಗೆ ಚಪ್ಪಲಿ ಹಾರ ಹಾಕಿ, ಮಲ ಎರಚಿ, ನೀಲಿ ಧ್ವಜಗಳನ್ನು ಹರಿದು ವಿಕೃತಿ ಮೆರೆದಿರುವ ದುರ್ಘಟನೆ ಇಂದು ಜರುಗಿದೆ.
ಶುಕ್ರವಾರ ಮಧ್ಯರಾತ್ರಿ ಕಳೆದು ಇಂದು ಮುಂಜಾನೆ 3ರ ನಡುವೆ ಈ ಕೃತ್ಯ ನಡೆದಿದ್ದು ವಾಜಮಂಗಲ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾ ವ್ಯಾಪ್ತಿಗೆ ಬರುವ ವಾಜಮಂಗಲದಲ್ಲಿ ಈ ಕೃತ್ಯ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಏಪ್ರಿಲ್‌ 14 ರಂದು ಇಲ್ಲಿನ ಸಿದ್ಧಾರ್ಥ ಯುವಕರ ಸಂಘವು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಆಚರಿಸಿ, ಮೆರವಣಿಗೆ, ಅನ್ನದಾನ ಕಾರ್ಯಕ್ರಮ ಜರುಗಿತ್ತು.
ಈ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಡಾ. ಅಂಬೇಡ್ಕರ್ ಅವರ ಫ್ಲೆಕ್ಸ್, ಕಟೌಟ್ ಗಳನ್ನು ಹರಿದು, ಮಲ ಎರಚಿ ವಿಕೃತ ಮೆರೆಯಲಾಗಿದೆ. ನೀಲಿ‌ ಧ್ವಜಗಳನ್ನು ಹರಿದು ಹಾಕಲಾಗಿದೆ. ನೀಚರ ಈ ಕೃತ್ಯದಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಬೀದಿಗಿಳಿದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ.

15/04/2025

' ಬಲಿತ ' ದಲಿತರ ಗುಲಾಮಗಿರಿ ಕಳವಳಕಾರಿ...!
ಮಂಡ್ಯದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ವಿಶ್ವ ಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಪತ್ರಕರ್ತ ಕೆ.ದೀಪಕ್ ಮಾಡಿದ ಪ್ರಧಾನ ಭಾಷಣದ ಪ್ರಧಾನ ಅಂಶಗಳು...

https://youtube.com/live/EMpPV1e9W4A
20/12/2024

https://youtube.com/live/EMpPV1e9W4A

LIVE :🔴 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2024 ನೇರ ಪ್ರಸಾರ

ನೋ ಕಾಮೆಂಟ್ಸ್...ಸರ್... ತಾವು ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ಉದ್ದೇಶ ಇದೆ ಎಂಬ ಚರ್ಚೆಗಳು ನಡೆಯುತ್ತಿದೆ. ನಿಜವೇ ?ಈ...
10/12/2024

ನೋ ಕಾಮೆಂಟ್ಸ್...
ಸರ್... ತಾವು ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ಉದ್ದೇಶ ಇದೆ ಎಂಬ ಚರ್ಚೆಗಳು ನಡೆಯುತ್ತಿದೆ. ನಿಜವೇ ?
ಈ ಪ್ರಶ್ನೆಗೆ `ನೋ ಕಾಮೆಂಟ್ಸ್' ಎಂದಿದ್ದರು ಈ ನಾಡುಕಂಡ ಮುತ್ಸದ್ಧಿ ರಾಜಕಾರಣಿ, ಅಂದಿನ ಮುಖ್ಯಮಂತ್ರಿ ಶ್ರೀ ಎಂ.ಎಸ್. ಕೃಷ್ಣ.
(21 ವರ್ಷಗಳ ಹಿಂದಿನ ಚಿತ್ರವಿದು. ಮುಖ್ಯಮಂತ್ರಿಯಾಗಿ ಮೈಸೂರು ನಗರದ ಲಲಿತಮಹಲ್ ಹೆಲಿಪ್ಯಾಡ್‍ಗೆ ಬಂದಿಳಿಯುತ್ತಿದ್ದ ಶ್ರೀ ಎಸ್.ಎಂ.ಕೃಷ್ಣ ಅವರನ್ನು ನಾನು ಸ್ಥಳೀಯ ಸುದ್ದಿ ವಾಹಿನಿ ಸಿಟಿ ಚಾನಲ್‍ನಲ್ಲಿ ವರದಿಗಾರನಾಗಿ ಹತ್ತಾರು ಬಾರಿ ಸಂದರ್ಶಿಸುವ ಅವಕಾಶ ದೊರಕಿತ್ತು. ಈ ಚಿತ್ರವನ್ನು ಕ್ಲಿಕ್ಕಿಸಿದವರು ಪೊಲೀಸ್ ಇಲಾಖೆಯ ಸಿಬ್ಬಂದಿ ಶ್ರೀ ಸುಬ್ಬಣ್ಣ.
ಎಸ್. ಎಂ. ಕೃಷ್ಣರವರು ಮೈಸೂರಿಗೆ ಬಂದಾಗಲೆಲ್ಲ, ದೂರದಲ್ಲಿ ನಿಲ್ಲುತ್ತಿದ್ದ ನನ್ನನ್ನು ಗಮನಿ, ಬನ್ನಿ ಯಂಗ್ ಜರ್ನಲಿಸ್ಟ್ ಏನ್ ಕೇಳಬೇಕು ಕೇಳಿ ಎನ್ನುತ್ತಿದ್ದ ಮಾತು ಸದಾ ನೆನಪಾಗುತ್ತದೆ )
ವರನಟ ಡಾ. ರಾಜಕುಮಾರ್ ಅಪಹರಣ, ಮಾಜಿ ಸಚಿವ ಶ್ರೀ ನಾಗಪ್ಪ ಅವರ ಅಪಹರಣ ಮತ್ತು ಹತ್ಯೆ, ಕಾವೇರಿ ವಿವಾದ, ರಾಜ್ಯದಲ್ಲಿ ಭೀಕರ ಬರ, ಪಕ್ಷದೊಳಗಿನ ಆಂತರಿಕ ಕಲಹ, ಆರ್ಥಿಕ ಸಂಕಷ್ಟ...ಹೀಗೆ ಸಾಲು ಸಾಲು ಸವಾಲು, ಸಂಕಷ್ಟ ಸಂದಿಗ್ಧತೆಗಳ ನಡುವೆ `ಸಿಲಿಕಾಲ್ ಸಿಟಿಯನ್ನು ಸೃಷ್ಟಿಸಿ ಇಡೀ ಜಗತ್ತು ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ ದೂರದೃಷ್ಟಿಯ ಧೀಮಂತ ನಾಯಕ ಶ್ರೀ ಎಸ್.ಎಂ. ಕೃಷ್ಣ.
ಇದಕ್ಕೂ ಮೀರಿದ್ದು ಇವರು ರಾಜಕಾರಣಿಯಾಗಿ ಸಾರ್ವಜನಿಕ ಬದುಕಿನಲ್ಲಿ ಕಾಣಿಸಿಕೊಂಡ ರೀತಿ, ನಡೆದುಕೊಂಡ ರೀತಿ. ಇವರ ಡ್ರೆಸ್ ಕೋಡ್ ಅನನ್ಯ, ಮಾತು ಮಾಧುರ್ಯ. ಪತ್ರಕರ್ತರ ಮುಂದೆ ಬಂದಾಗಲಂತ್ತೂ ಬಹಳ ಹೆಚ್ಚರಿಕೆಯಿಂದ ವರ್ತಿಸುತ್ತಿದ್ದರು. ಶ್ರೀ ಎಸ್.ಎಂ.ಕೃಷ್ಣ ಅವರಿಂದ ವಿಷಯ ಬಾಯಿ ಬಿಡಿಸುವುದು ಪತ್ರಕರ್ತರಿಗೆ ಸುಲಭದ ಮಾತಾಗಿರಲಿಲ್ಲ. ರಾಜಕೀಯ ವಿರೋಧಿಗಳನ್ನೂ ಟೀಕಿಸುವಾಗ ಅಳೆದು ತೂಗಿ ಆಡುತ್ತಿದ್ದ ಮಾತು ಇಂದಿನ ಹರಕು ಬಾಯಿ ರಾಜಕಾರಣಿಗಳಿಗೆ ಆದರ್ಶ.
ಮೈಸೂರು ಪತ್ರಕರ್ತರನ್ನು ಕಂಡರೆ ವಿಶೇಷ ಪ್ರೀತಿ ಗೌರವ. ಇವರು ಮೈಸೂರಿನ ಹಿರಿಯ ಪತ್ರಕರ್ತರಾದ ಶ್ರೀ ರಾಮಣ್ಣ ಅವರ ' ವಿಜಯ' ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದನ್ನು ಎಸ್ಎಂಕೆ ಮೈಸೂರಿಗೆ ಬಂದಾಗಲೆಲ್ಲ ನೆನಪಿಸಿಕೊಳ್ಳುತ್ತಿದ್ದರು. ಕೊಟ್ಟ ಮಾತಿನಂತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಕೇರ್ಗಳ್ಳಿಯಲ್ಲಿ ಆರು ಎಕರೆ ಭೂಮಿಯನ್ನು ಕೊಟ್ಟು 90ಕ್ಕೂ ಹೆಚ್ಚು ಪತ್ರಕರ್ತರಿಗೆ ನಿವೇಶನ ದೊರಕಿಸಿಕೊಟ್ಟ ಉದಾರಿ. ಇಂದು ಅನೇಕ ಪತ್ರಕರ್ತರು ಮೈಸೂರಿನಲ್ಲಿ ಸ್ವಂತ ಸೂರು ಕಟ್ಟಿಕೊಂಡು ಸ್ವಾಭಿಮಾನದ ಬದುಕು ನಡೆಸಲು ನೆರವಾದ ಶ್ರೀಮಾನ್ ಎಸ್.ಎಂ.ಕೃಷ್ಣ ಅವರ ನಿಧನ ಅತೀವ ನೋವನ್ನುಂಟು ಮಾಡಿದೆ.
ಶ್ರೀ ಎಸ್.ಎಂ.ಕೃಷ್ಣರವರು ಕರ್ನಾಟಕ ಸಭ್ಯ ರಾಜಕಾರಣದ ಅಸ್ಮಿತೆ ಎನ್ನುವುದರಲ್ಲಿ ಎರಡು ಮಾತ್ತಿಲ್ಲ.
ಸರ್... ನೀವು ನಡೆದ ದಾರಿ, ಬದುಕಿದ ರೀತಿ, ಮಾಡಿದ ರಾಜಕಾರಣ, ಕೊಟ್ಟ ಕೊಡುಗೆಗಳ ಬಗ್ಗೆ ನೋ ಕಾಮೆಂಟ್ಸ್...

ಕೆ.ದೀಪಕ್
ಅಧ್ಯಕ್ಷ
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ.

26/11/2024

ಸಂವಿಧಾನದ ಬಗ್ಗೆ ಪೇಜಾವರ ಶ್ರೀಗಳ ಅಪಸ್ವರ :
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ನಂಜನಗೂಡಿನಲ್ಲಿ ಇಂದು ನಡೆದ ಸಂವಿಧಾನ ದಿನಾಚರಣೆಯಲ್ಲಿ ಪತ್ರಕರ್ತ ಕೆ.ದೀಪಕ್ ಖಡಕ್ ಭಾಷಣ...

07/11/2024

ಯುವಕರು ಕೇಳಲೇ ಬೇಕಾದ‌‌ ಭಾಷಣ...
ಕರ್ನಾಟಕ ರಾಜ್ಯ ಮುಕ್ತ ವಿವಿಯ ಪತ್ರಿಕೋದ್ಯಮ‌ ವಿಭಾಗದ ವತಿಯಿಂದ ಇಂದು‌ ನಡೆದ ' ಆರ್ಟ್ ಅಂಡ್ ಮೈಂಡ್ ಫೆಸ್ಟ್ 'ನಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಹೇಳಿದ್ದೇನು ?

ಪತ್ರಕರ್ತರ ಮೇಲಿನ ಪೊಲೀಸ್ ದೌರ್ಜನ್ಯ ಡಿಸಿಯಿಂದ ಸೂಕ್ತ ಕ್ರಮದ ಭರವಸೆಮೈಸೂರು : ದಸರಾ ಜಂಬೂಸವಾರಿ ವೇಳೆ ಪತ್ರಿಕಾ ಛಾಯಾಗ್ರಾಹಕರ ಮೇಲೆ ನಡೆದ ಪೊಲ...
14/10/2024

ಪತ್ರಕರ್ತರ ಮೇಲಿನ ಪೊಲೀಸ್ ದೌರ್ಜನ್ಯ
ಡಿಸಿಯಿಂದ ಸೂಕ್ತ ಕ್ರಮದ ಭರವಸೆ

ಮೈಸೂರು : ದಸರಾ ಜಂಬೂಸವಾರಿ ವೇಳೆ ಪತ್ರಿಕಾ ಛಾಯಾಗ್ರಾಹಕರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ವಿರುದ್ಧ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಧ್ವನಿ ಎತ್ತಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಶ್ರೀ ಲಕ್ಷ್ಮೀಕಾಂತ ರೆಡ್ಡಿ ಅವರು ತುರ್ತು ಸಭೆ ನಡೆಸಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರಲ್ಲದೆ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಅರಮನೆ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ದೌರ್ಜನ್ಯಕ್ಕೆ ಒಳಗಾದ ಮಾಧ್ಯಮದ ಸದಸ್ಯರಿಂದ ಮಾಹಿತಿ ಪಡೆದರು.
ದಸರೆಯ ಯಶಸ್ಸಿನಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ. ಸಾವಿರಾರು ಜನ ಸೇರಿದ ಸಂದರ್ಭದಲ್ಲಿ ಇಂತಹ ಅಹಿತಕರ ಘಟನೆಗಳು ನಡೆದು ಹೋಗುತ್ತದೆ. ಆದರೆ, ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದು ನಮ್ಮ ಕರ್ತವ್ಯ. ಮುಂದಿನ ದಿನಗಳಲ್ಲಿ ಆಗಿರುವ ತಪ್ಪುಗಳು ಮರುಕಳಿಸದಂತೆ ಗಮನ ಹರಿಸುವುದಾಗಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ದಸರೆ ಸಂದರ್ಭದಲ್ಲಿ ಆನೆ, ಅಂಬಾರಿ, ಜಾನಪದ ಕಲಾ ತಂಡಗಳು ವಿಜೃಂಭಿಸಬೇಕಾದ ಜಾಗದಲ್ಲಿ ಪೊಲೀಸರ ದರ್ಪ, ದೌರ್ಜನ್ಯ, ಅವ್ಯವಸ್ಥೆ ವಿಜೃಂಭಿಸಬಾರದು. ಮೈಸೂರು ದಸರೆ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿರುವ ಮೈಸೂರಿನ ಪತ್ರಕರ್ತರು ಎಲ್ಲ ಬಗೆಯ ಅವ್ಯವಸ್ಥೆ, ದೌರ್ಜನ್ಯ ಸಹಿಸಿಕೊಂಡು ಕರ್ತವ್ಯ ನಿರ್ವಹಿಸಿದ್ದಾರೆ. ಇದನ್ನು ನಮ್ಮ ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ತಿಳಿಸಿದರು.
ನಂತರ ಛಾಯಾಗ್ರಾಹಕರ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಯಿತು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ನಗರ ಕಾರ್ಯದರ್ಶಿ ಕೃಷ್ಣೋಜಿ ರಾವ್, ಖಜಾಂಚಿ ಎನ್. ಸುರೇಶ್, ವಾರ್ತಾ ಇಲಾಖೆಯ ಅಧಿಕಾರಿ ಹರೀಶ್, ಹಿರಿಯ ಛಾಯಾಗ್ರಾಹಕರಾದ ಪ್ರಗತಿ ಗೋಪಾಲಕೃಷ್ಣ, ಶ್ರೀರಾಂ, ಸಂಘದ ನಿರ್ದೇಶಕರಾದ ಸೋಮಶೇಖರ್ ಚಿಕ್ಕಮರಳಿ, ರವಿಚಂದ್ರ ಹಂಚ್ಯಾ ಮತ್ತು ಛಾಯಾಗ್ರಾಹಕರು ಉಪಸ್ಥಿತರಿದ್ದರು.

13/10/2024

ಇವರಿಗೆ,
ಶ್ರೀ ಲಕ್ಷ್ಮೀಕಾಂತ ರೆಡ್ಡಿ
ಮಾನ್ಯ ಜಿಲ್ಲಾಧಿಕಾರಿಗಳು,
ಮೈಸೂರು ಜಿಲ್ಲೆ.

ಇಂದ,
ಕೆ.ದೀಪಕ್
ಅಧ್ಯಕ್ಷರು,
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ
ಮೈಸೂರು.

ಮಾನ್ಯರೇ

ವಿಷಯ : ದಸರಾ ಜಂಬೂ ಸವಾರಿ ಸಂದರ್ಭದಲ್ಲಿ ಪತ್ರಿಕಾ ಛಾಯಾಗ್ರಾಹಕರ ಮೇಲೆ ದುಂಡಾವರ್ತನೆ ಎಸಗಿದ ಪೊಲೀಸ್ ಸಿಬ್ಬಂದಿಗಳ ಅಮಾನತ್ತಿಗೆ ಒತ್ತಾಯ :-

ನಾಡಹಬ್ಬ ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಪೊಲೀಸ್ ಸಿಬ್ಬಂದಿ‌ಗಳು ಅಕ್ಷರ ಸಹ ಗೂಂಡಗಳಂತೆ ವರ್ತಿಸಿ, ವಿಜಯವಾಣಿ ಪತ್ರಿಕೆಯ ಹಿರಿಯ ಛಾಯಾಗ್ರಾಹಕರಾದ ಶ್ರೀ ಹೆಚ್.ಕೆ. ಚಂದ್ರು ಅವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯವೆಸಗಿರುವುದು ಖಂಡನೀಯ.
ವಿಶ್ವ ವಿಖ್ಯಾತ ದಸರಾ ಉತ್ಸವದ ಯಶಸ್ವಿಗೆ ಕಳೆದ ಎರಡು ತಿಂಗಳಿನಿಂದ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಮಾಧ್ಯಮದ ಪ್ರತಿನಿಧಿಗಳನ್ನು ಪೊಲೀಸ್ ಸಿಬ್ಬಂದಿಗಳು ಅಮಾನವೀಯವಾಗಿ ನಡೆಸಿಕೊಂಡಿರುವುದು ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಶೋಭೆ ತರುವ ವಿಷಯವಲ್ಲ. ಇದು ಮಾಧ್ಯಮ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಈ ಕೃತ್ಯವನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಉಗ್ರವಾಗಿ ಖಂಡಿಸುತ್ತದೆ.
ಆದ್ದರಿಂದ ಜಂಬೂಸವಾರಿಯ ದಿನ ಅರಮನೆಯ ಆವರಣದಲ್ಲಿ ಪತ್ರಿಕಾ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಪೊಲೀಸ್ ಸಿಬ್ಬಂದಿಗಳನ್ನು ಕೂಡಲೆ ಅಮಾನತ್ತುಗೊಳಿಸಿ ಶಿಸ್ತು ಕ್ರಮ ಜರುಗಿಸಬೇಕಾಗಿ ಒತ್ತಾಯ. ಒಂದು ವೇಳೆ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಮಾಧ್ಯಮದ ಪ್ರತಿನಿಧಿಗಳು ಪ್ರತಿಭಟನೆಯ ಮೂಲಕ ನ್ಯಾಯ ಕಂಡುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ತಿಳಿಸಲು ಭಯಸುತ್ತೇವೆ.

ವಂದನೆಗಳೊಂದಿಗೆ

ಕೆ.ದೀಪಕ್

ಪ್ರತಿ :
ಶ್ರೀ ಸಿದ್ದರಾಮಯ್ಯ
ಸನ್ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರಕಾರ.

ಡಾ.ಹೆಚ್. ಸಿ. ಮಹಾದೇವಪ್ಪ
ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು.

ಡಾ. ಜಿ.ಪರಮೇಶ್ವರ್
ಮಾನ್ಯ ಗೃಹ ಸಚಿವರು
ಕರ್ನಾಟಕ ಸರಕಾರ.

ವಿ. ಸೂಚನೆ : ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೋ ತುಣಕು ಮತ್ತು ಛಾಯಾಚಿತ್ರವನ್ನು ಇದರೊಂದಿಗೆ ರವಾನಿಸಿದ್ದೇನೆ.

Address

Mysore
570009

Alerts

Be the first to know and let us send you an email when PrajaaBharata posts news and promotions. Your email address will not be used for any other purpose, and you can unsubscribe at any time.

Contact The Business

Send a message to PrajaaBharata:

Share