08/08/2026
SDJ ಗೋಲ್ಡ್ ಕಂಪನಿ ವಂಚನೆ ಪ್ರಕರಣ: ಮೋಸಹೋದ ಸಂತ್ರಸ್ತರಿಂದ ಕ್ಲಬ್ 64 ಮೇಲೆ ದಾಳಿ | INDIAN TV
SDJ ಗೋಲ್ಡ್ ಕಂಪನಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಶ್ರೀರಾಂಪುರದ ಬಳಿ ಇರುವ ಕ್ಲಬ್ 64 ಮೇಲೆ ಮೋಸಹೋದ ಸಂತ್ರಸ್ತರು ದಾಳಿ ನಡೆಸಿದ್ದಾರೆ. ಚಿನ್ನತಂಬಿಗೆ ಸೇರಿದ ಕ್ಲಬ್ ಎಂದು ಭಾವಿಸಿ ಕ್ಲಬ್‌ಗೆ ನುಗ್ಗಿದ ಸಂತ್ರಸ್ತರು ಪೀಠೋಪಕರಣಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಚಿನ್ನತಂಬಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ವಂಚನೆಗೊಳಗಾದ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ಪೊಲೀಸರಿಗೆ ಆಗ್ರಹಿಸಿದ್ದಾರೆ.