Akashavani Mysore

Akashavani Mysore Contact information, map and directions, contact form, opening hours, services, ratings, photos, videos and announcements from Akashavani Mysore, Radio Station, Yadavagiri, Mysore.

ಲೋಕೋ ಬಿನ್ನರುಚಿಃ. ಹಾಗೆಂದೇ ನಿಮ್ಮ ಮೆಚ್ಚಿನ ಆಕಾಶವಾಣಿಯಲ್ಲಿದೆ ಎಲ್ಲ ಬಗೆಯ ರುಚಿ- ಪರಮಾನ್ನದಿಂದ ಪಾರಮಾರ್ಥದವರೆಗೆ. ಒಂದಿಷ್ಟು ಮನರಂಜನೆ, ಬಹಳಷ್ಟು ಕಲಿಕೆ, ನಿತ್ಯ ವಿಷಯಗಳ ಗ್ರಹಿಕೆ, ಹೊಸ ವಿಷಯಗಳ ಮನವರಿಕೆ, ಅರಿತವರಿಂದ ಮಾಹಿತಿ, ಅರಿಯದವರಲ್ಲಿ ಜಾಗೃತಿ. ಭಿನ್ನ ಅಭಿರುಚಿಯ, ಸಂಪನ್ನ ಸಂಸ್ಕೃತಿಯ ಅನಾವರಣ, ಮಧುರ ಗೀತೆಗಳ, ಮನೋಜ್ಞ ನಾಟಕಗಳ ಹೂರಣ... ಕೇಳಿದವರು ಹೇಳ್ತಾರೆ, ಇಷ್ಟೇ ಅಲ್ಲ- ಇನ್ನೂ ಬಹಳಷ್ಟು! ನೀವೂ ಕೇಳಿ FM 100.6 ರಲ್ಲಿ ಆಕಾಶವಾಣಿ ಮೈಸೂರು

ಅಕ್ಟೋಬರ್ 2ರಂದು ಗುರುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತಮ rank...
01/10/2025

ಅಕ್ಟೋಬರ್ 2ರಂದು ಗುರುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತಮ rank ಗಳಿಸಿದ ಮೈಸೂರಿನ ವಿನುತ G R ಅವರೊಂದಿಗೆ ಮಾತುಕತೆ . ಇವರೊಂದಿಗೆ ಭಾಗವಹಿಸುತ್ತಾರೆ ದಿಗ್ವಿಜಯ್ B

30/09/2025

ದಿನಾಂಕ 01-10-2025 ರಂದು ಬುಧವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ದಸರಾ ಚಿಂತನ - ದಸರಾ ಚಿಂತನ – ಡಾ.ವಿ.ರಂಗನಾಥ್ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
6:15:- (ರಾಜ್ಯವ್ಯಾಪಿ) ದಸರಾ ಗೀತಾರಾಧನ
6:35:- “ಭಾವಸೇತು” – ಭಾಷೆ ಬದಲಾದರು ಭಾವ ಬದಲಾಗದಿರಲಿ ಬಾನುಲಿ ಸರಣಿ - ಪ್ರಸ್ತುತಿ : ಸಿ.ಎಸ್.ಪೂರ್ಣಿಮಾ
6:40:- ದಸರಾದಲ್ಲಿ ಇಂದು ಮತ್ತು ನಾಳೆ ನಂತರ ಮೈಸೂರು ದಸರಾ ಎಷ್ಟೊಂದು ಸುಂದರ - ಪ್ರಸ್ತುತಿ – ಶ್ರೀಮಾನ್ . ಎಸ್
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು : ಕೆ.ಎಸ್.ಸುರೇಖಾ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:05:- “ರೇಷ್ಮೆ ಸಿರಿ” ಪ್ರಾಯೋಜಕರು ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆ
9:20:- ಚಿತ್ರಗೀತೆಗಳು
9:30:- ಮೈಸೂರು ಬ್ರಾಂಡ್ ದಸರಾ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ - ಪ್ರಸ್ತುತಿ : ಡಾ.ಮೈಸೂರು ಉಮೇಶ್ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
9:40:- ಮೈಸೂರು ಸಂಸ್ಥಾನದ ಕಲಾ ಪರಂಪರೆ – ದಸರಾ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ
ಸಾಹಿತ್ಯ: ಡಾ.ಜ್ಯೋತಿಶಂಕರ್ - ಪರಿಕಲ್ಪನೆ ಹಾಗೂ ಪ್ರಸ್ತುತಿ: ಹೆಚ್.ಎಲ್.ಶಿವಶಂಕರಸ್ವಾಮಿ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
10:00:- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಪಂಡಿತ್ ಹರಿಪ್ರಸಾದ್ ಚೌರಾಸಿಯಾ – ವೇಣು ವಾದನ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ಹಾಗೂ ಪತ್ರೋತ್ತರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಉದ್ಯೋಗಸ್ಥ ಗರ್ಭಿಣಿಯರ ಮತ್ತು ಬಾಣಂತಿಯರ ಆರೈಕೆ ಕುರಿತು
ಡಾ. ಅರುಣಾ ಕಾಮತ್ ಅವರೊಂದಿಗೆ ಸಂದರ್ಶನ. ಸಂದರ್ಶಕರು : ಮಮತಾ ನವೀನ್ ಶೆಟ್ಟಿ (ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ಜನಪದ ಸಂಗೀತ – ಮಂಡ್ಯಜಿಲ್ಲೆ ಮಳವಳ್ಳಿ ತಾಲೂಕು ಕೀರ್ತಿನಗರದ ಗುರುಬಸವಯ್ಯ ಮತ್ತು ಸಂಗಡಿಗರಿಂದ ಮಂಟೇಸ್ವಾಮಿ ಪದ.
1:00:- (ರಾಜ್ಯವ್ಯಾಪಿ) ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಕಾರ್ಯಕ್ರಮ ಸರಣಿ - ಪ್ರಧಾನಮಂತ್ರಿ ಒಂದು ರಾಷ್ಟ್ರ ಒಂದು ಚಂದಾದಾರಿಕೆ ಕುರಿತು ಮಾಹಿತಿ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಸೇವಾ ಪರ್ವ 2025 – ಜಾಗತಿಕ ಶಕ್ತಿಯಾಗಿ ಉದಯಿಸುತ್ತಿರುವ ಭಾರತ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ – ಅಮೃತಾ ವೆಂಕಟೇಶ್ - ಹಾಡುಗಾರಿಕೆ
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ –“ ಉಮಂಗ್ “ - ಪ್ರಾಯೋಜಕರು: CIET – NCERT, New Delhi
4:00:- ಮಹಿಳಾರಂಗ - ಪ್ರವಾಸಿ ದಸರಾ – ಮೈಸೂರು ಸೀಮೆಯ ದಸರಾ ಸಂಭ್ರಮ ಪ್ರಸ್ತುತಿ: ಕೀರ್ತನಾ.ವಿ, ಸಹನಾ ಹಾಗೂ ನೇತ್ರಾ
4:30:- ಹಿಂದಿ ಚಿತ್ರಗೀತೆಗಳು
4:45:- ಹಿಂದಿ ಪಾಠ – ಪ್ರಸ್ತುತಿ: ಡಾ.ಎಸ್.ಪಿ.ವಿದ್ಯಾಕುಮಾರಿ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಭಾವಸೇತು” – ಭಾಷೆ ಬದಲಾದರು ಭಾವ ಬದಲಾಗದಿರಲಿ ಬಾನುಲಿ ಸರಣಿ - ಪ್ರಸ್ತುತಿ : ಸಿ.ಎಸ್.ಪೂರ್ಣಿಮಾ
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ರಸವಾರ್ತೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ: ಅರಿಸಿಣ ಬೆಳೆಯ ಉತ್ಪಾದಕತೆ ಹೆಚ್ಚಿಸುವಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಕುರಿತು ಚಾಮರಾಜನಗರ ತಾಲೂಕು ಹರದನ ಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಡಾ.ಎನ್.ಟಿ.ನರೇಶ್ ಅವರೊಂದಿಗೆ ಸಂದರ್ಶನ. ಸಂದರ್ಶಕರು : ಎನ್.ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಮೈಸೂರು ಆಕಾಶವಾಣಿ ತೊಂಬತ್ತು – ನೆನಪುಗಳ ಹೊತ್ತು” – ವಿಶೇಷ ಕಾರ್ಯಕ್ರಮ ಸರಣಿ – ಮೈಸೂರು ಆಕಾಶವಾಣಿಯಿಂದ ಸನ್ಮಾನಿತರಾದ ಮೈಸೂರಿನ ಸಮುದ್ಯತಾ ಶ್ರೋತೃ ಬಳಗದ ಅಧ್ಯಕ್ಷರಾದ ವಿ.ಗೋವಿಂದಾಚಾರಿ ಹಾಗೂ ಕಾರ್ಯದರ್ಶಿಗಳಾದ ರಾಜೇಶ್ವರಿ.ಟಿ.ಎನ್ ಅವರೊಂದಿಗೆ ಸಂವಾದ. ಭಾಗವಹಿಸುತ್ತಾರೆ : ಡಾ.ಮೈಸೂರು ಉಮೇಶ್
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- Spot Light programme
9:30:- ಕ್ರೀಡಾಲೋಕ - 2025ರ ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯ ಬಾನುಲಿ ವರದಿ.
(ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
10:00:- ನಾಟಕ – ಭೀಷ್ಮ ಪ್ರತಿಜ್ಞೆ - ರಚನೆ – ಜಿ.ವಿ.ಕೃಷ್ಣಮೂರ್ತಿ - ನಿರ್ದೇಶನ – ವೈ.ಎಂ.ಪುಟ್ಟಣ್ಣಯ್ಯ
10:30:- ಸವಿನೆನಪು

Hindi Pakhwad celebrated at Akashvani Mysuru - Chief Guest : Anitha, Hindi Ofiicer, CFTRI, Mysuru During the celebration...
30/09/2025

Hindi Pakhwad celebrated at Akashvani Mysuru - Chief Guest : Anitha, Hindi Ofiicer, CFTRI, Mysuru

During the celebration Station Head and Assistant director of Programs, T V Vidyashankar, Engineering Section Head, P Anandan and all the staff members were present.

ಸೆಪ್ಟೆಂಬರ್  30  ಮಂಗಳವಾರ ಸಂಜೆ 7.45 ಕ್ಕೆ ಮೈಸೂರು  ಜಂಕ್ಷನ್ ಸಾಪ್ತಾಹಿಕ ಸಂಚಿಕೆ ಆಕಾಶವಾಣಿ ಮೈಸೂರು FM 100.6 ರಲ್ಲಿಪ್ರಸ್ತುತಿ : ದಿಗ್ವಿ...
30/09/2025

ಸೆಪ್ಟೆಂಬರ್ 30 ಮಂಗಳವಾರ ಸಂಜೆ 7.45 ಕ್ಕೆ ಮೈಸೂರು ಜಂಕ್ಷನ್ ಸಾಪ್ತಾಹಿಕ ಸಂಚಿಕೆ
ಆಕಾಶವಾಣಿ ಮೈಸೂರು FM 100.6 ರಲ್ಲಿ
ಪ್ರಸ್ತುತಿ : ದಿಗ್ವಿಜಯ್ ಬಿ
ಭಾಗವಹಿಸುತ್ತಾರೆ : ಕೀರ್ತನ ವಿ ಮತ್ತು ಚಿನ್ಮಯಿ ಕೆ ಎಸ್

ಇದೇ ಬುಧವಾರ 01/10/2025 ರಂದು ಸಂಜೆ 4 ಗಂಟೆಗೆ ಮಹಿಳಾರಂಗದಲ್ಲಿ ಪ್ರವಾಸಿ ದಸರಾ - ಮೈಸೂರು ಸೀಮೆಯ ದಸರಾ ಸಂಭ್ರಮ ಕಾರ್ಯಕ್ರಮದಲ್ಲಿ 1. ದಸರಾ ಹಬ...
30/09/2025

ಇದೇ ಬುಧವಾರ 01/10/2025 ರಂದು ಸಂಜೆ 4 ಗಂಟೆಗೆ ಮಹಿಳಾರಂಗದಲ್ಲಿ ಪ್ರವಾಸಿ ದಸರಾ - ಮೈಸೂರು ಸೀಮೆಯ ದಸರಾ ಸಂಭ್ರಮ ಕಾರ್ಯಕ್ರಮದಲ್ಲಿ
1. ದಸರಾ ಹಬ್ಬದ ಪ್ರಕ್ಯುತ ಪಟ್ಟದ ಬೊಂಬೆ ಹಾಗೂ ಇನ್ನಿತರ ಅಲಕಾರಿಕ ವಸ್ತುಗಳನ್ನು ತಯಾರಿಸೋ
2. ಆಗಿನ ಕಾಲದ ದಸರಾ ಹಾಗೂ ಇಂದಿನ ದಸರಾ ಕುರಿತು ಮೈಸೂರಿನ ಕೆ. ಟಿ . ಶ್ರೀಮತಿ ಅವರೊಂದಿಗೆ ಮಾತುಕತೆ.
3. ಆಯುಧ ಪೂಜೆ ಕುರಿತು ಖ್ಯಾತ ಇತಿಹಾಸಕಾರರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರೊಂದಿಗೆ ಮಾತುಕತೆ.
ಪ್ರಸ್ತುತಿ: ಕೀರ್ತನ.ವಿ, ಸಹನಾ ಹಾಗೂ ನೇತ್ರ. ಕೆ.

ಇಂದು ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ - ಯುವ ಸೆಲೆಬ್ರಿಟಿ - ರೂಪದರ್ಶಿ ಹಾಗೂ ಚಿತ್ರನಟಿ ಆರೋಹಿ ಗೌಡ ಅವರೊಂದಿಗೆ ಮಾತುಕತೆ.ನ...
29/09/2025

ಇಂದು ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ - ಯುವ ಸೆಲೆಬ್ರಿಟಿ - ರೂಪದರ್ಶಿ ಹಾಗೂ ಚಿತ್ರನಟಿ ಆರೋಹಿ ಗೌಡ ಅವರೊಂದಿಗೆ ಮಾತುಕತೆ.ನಡೆಸಿಕೊಡುತ್ತಾರೆ ದಿಗ್ವಿಜಯ್ ಬಿ

ಇದೇ ಸೋಮವಾರ ಸೆಪ್ಟೆಂಬರ್ 29ರಂದು ಸಂಜೆ 4 ಗಂಟೆಗೆ ಮಹಿಳಾರಂಗದಲ್ಲಿ ಭಾವಸಂಗಮ - ಭಾವಗೀತೆಗಳನ್ನು ಆಧರಿಸಿದ ಕಾರ್ಯಕ್ರಮ.‌ ಪ್ರಸ್ತುತಿ :ಸುಮಾ ಮಹೇ...
29/09/2025

ಇದೇ ಸೋಮವಾರ ಸೆಪ್ಟೆಂಬರ್ 29ರಂದು ಸಂಜೆ 4 ಗಂಟೆಗೆ ಮಹಿಳಾರಂಗದಲ್ಲಿ ಭಾವಸಂಗಮ - ಭಾವಗೀತೆಗಳನ್ನು ಆಧರಿಸಿದ ಕಾರ್ಯಕ್ರಮ.‌ ಪ್ರಸ್ತುತಿ :ಸುಮಾ ಮಹೇಶ್

28/09/2025

ದಿನಾಂಕ 29-09-2025 ರಂದು ಸೋಮವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ದಸರಾ ಚಿಂತನ – ಡಾ.ವಿ.ರಂಗನಾಥ್ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
6:15:- (ರಾಜ್ಯವ್ಯಾಪಿ) ದಸರಾ ಗೀತಾರಾಧನ
6:35:- “ಸಸ್ಯ ಸಿರಿ” – ಮನೆಯಂಗಳದಲ್ಲಿರುವ ಔಷಧೀಯ ಸಸ್ಯಗಳು - ಪ್ರಸ್ತುತಿ : ಡಾ.ಟಿ.ಶಿವಕುಮಾರ್
6:40:- ದಸರಾದಲ್ಲಿ ಇಂದು ಮತ್ತು ನಾಳೆ ನಂತರ ಮೈಸೂರು ದಸರಾ ಎಷ್ಟೊಂದು ಸುಂದರ - ಪ್ರಸ್ತುತಿ – ಶ್ರೀಮಾನ್ . ಎಸ್
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು - ಅಜಯ್ ವಾರಿಯರ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಪ್ರಾಯೋಜಿತ ಕಾರ್ಯಕ್ರಮ – ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆರೋಗ್ಯ ಕಾರ್ಯಕ್ರಮ
ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಹೃದಯ ದಿನದ ಸಂದೇಶ, ಮಹತ್ವ ಮತ್ತು ಹೃದಯದ ಪಿಸುಮಾತು ಈ ಕುರಿತು ತಿಳಿಸಿಕೊಡುತ್ತಾರೆ ಹಿರಿಯ ಹೃದ್ರೋಗ ತಜ್ಞರು ಹಾಗೂ ಹೃದಯ ವಿಜ್ಞಾನಗಳ ವಿಭಾಗದ ನಿರ್ದೇಶಕರಾದ
ಡಾ. ಕೇಶವ ಮೂರ್ತಿ .ವಿ. ನಡೆಸಿಕೊಡುತ್ತಾರೆ – ಬೇದ್ರೆ ಮಂಜುನಾಥ್ - ಪ್ರಾಯೋಜಕರು – ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು.
9:30:- ಮೈಸೂರು ಬ್ರಾಂಡ್ ದಸರಾ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ - ಪ್ರಸ್ತುತಿ : ಡಾ.ಮೈಸೂರು ಉಮೇಶ್ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
9:40:- ಮೈಸೂರು ಸಂಸ್ಥಾನದ ಕಲಾ ಪರಂಪರೆ – ದಸರಾ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ
ಸಾಹಿತ್ಯ: ಡಾ.ಜ್ಯೋತಿಶಂಕರ್ - ಪರಿಕಲ್ಪನೆ ಹಾಗೂ ಪ್ರಸ್ತುತಿ: ಹೆಚ್.ಎಲ್.ಶಿವಶಂಕರಸ್ವಾಮಿ
(ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ವಿವಿಧ ಕಲಾವಿದರಿಂದ ದೇವಿ ಕೃತಿಗಳು
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ಗೇಮ್ ಷೋ - ಪ್ರಸ್ತುತಿ : ಬಿ. ದಿಗ್ವಿಜಯ್, ಕೀರ್ತನಾ ವಿ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ –ಹೃದಯದ ಕಾಳಜಿ ಈ ಕುರಿತು ಡಾ ರವಿವರ್ಮ ಪಾಟೀಲ ಅವರೊಂದಿಗೆ ಸಂದರ್ಶನ ಸಂದರ್ಶಕರು ಮಂಜುಳಾ ಪುರಾಣಿಕ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ನಮ್ಮ ಆರೋಗ್ಯ : ವಿಶ್ವ ಹೃದಯ ದಿನಾಚರಣೆಯ ಸಂದರ್ಭದಲ್ಲಿ – ಹೃದಯ ದಿನಾಚರಣೆಯ ಸಂದೇಶ ಮಹತ್ವ ಮತ್ತು ಹೃದಯದ ಆರೋಗ್ಯ’ ಕುರಿತು ತಿಳಿಸಿಕೊಡಲಿದ್ದಾರೆ ಮಂಡ್ಯದ ಇಂಟರ್ ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಹೇಮಾ ಎಸ್. ಇವರೊಂದಿಗೆ ಭಾಗವಹಿಸುತ್ತಾರೆ: ಡಾ. ಕುಲದೀಪ್ . ಎನ್

1:00:- ಪ್ರಗತಿಪಥ - ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತ ಕಾರ್ಯಕ್ರಮ ಸರಣಿ - ಪ್ರಧಾನಮಂತ್ರಿ ಅಲ್ಪಾಸಂಖ್ಯಾತರಿಗಾಗಿ ಇರುವ ಪ್ರಧಾನಮಂತ್ರಿಗಳ 15 ಅಂಶಗಳ ಯೋಜನೆ ಕುರಿತು ಮಾತನಾಡುತ್ತಾರೆ ಪತ್ರಕರ್ತರಾದ ಬಿ. ಸತೀಶ್ ಆರಾಧ್ಯ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಸೇವಾ ಪರ್ವ 2025- ಆತ್ಮ ನಿರ್ಭರ ಭಾರತ್
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಸರಳಾಯ ಸಹೋದರಿಯರ ಯುಗಳ ಹಾಡುಗಾರಿಕೆ
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ – ಉಮಂಗ್ - ಪ್ರಾಯೋಜಕರು: ಸಿ ಐ ಇ ಟಿ, ಎನ್ ಸಿ ಇ ಆರ್ ಟಿ, ನವದೆಹಲಿ
4:00:- ಮಹಿಳಾರಂಗ - ಭಾವಸಂಗಮ – ಭಾವಗೀತೆಗಳನ್ನಾಧರಿಸಿದ ಕಾರ್ಯಕ್ರಮ
4:30:- ನೆನಪಿನಂಗಳ (ಧ್ವನಿ ಭಂಡಾರದಿಂದ) – ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರೊಂದಿಗೆ ಡಾ.ಪ್ರಧಾನ ಗುರುದತ್ತ ಹಾಗೂ ಎಂ.ಎಸ್.ಕೆ.ಪ್ರಭು ಅವರು ನಡೆಸಿದ್ದ ಸಂವಾದದ ಮೊದಲ ಭಾಗ
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- “ಸಸ್ಯ ಸಿರಿ” – ಮನೆಯಂಗಳದಲ್ಲಿರುವ ಔಷಧೀಯ ಸಸ್ಯಗಳು - ಪ್ರಸ್ತುತಿ : ಡಾ.ಟಿ.ಶಿವಕುಮಾರ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಜಿಲ್ಲಾ ವಾರ್ತಾಪತ್ರ
6:50:- ಕೃಷಿರಂಗ - ಸಿರಿಧಾನ್ಯ ಬೆಳೆಗಳು ಮತ್ತು ಮೌಲ್ಯವರ್ಧನೆ ಕುರಿತು ಸಂವಾದ. ಭಾಗವಹಿಸುತ್ತಾರೆ : ಮಂಡ್ಯದ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಡಾ.ಚಂದ್ರಕಲಾ ಹಣಗಿ ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ.ಸಿ.ಎಂ.ಸುನಿಲ್. ಪ್ರಸ್ತುತಿ - ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಯುವವಾಣಿ : ಯುವ ಸೆಲೆಬ್ರೆಟಿ – ಚಿತ್ರನಟಿ ಹಾಗೂ ರೂಪದರ್ಶಿ ಆರೋಹಿಗೌಡ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ : ದಿಗ್ವಿಜಯ್.ಬಿ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ : ಗಾಯತ್ರಿ ವೆಂಕಟರಾಘವನ್ - ಹಾಡುಗಾರಿಕೆ
10:00:- ನಿನಾದ : ವೈಣಿಕ ವಾಗ್ಗೇಯ ವಾಹಿನಿ
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲಿಷ್ ವಾರ್ತಾಪ್ರಸಾರ

27/09/2025

ದಿನಾಂಕ 28-09-2025 ರಂದು ಭಾನುವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ದಸರಾ ಚಿಂತನ : ಡಾ.ಟಿ.ವಿ.ಸತ್ಯನಾರಾಯಣ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
6:15:- (ರಾಜ್ಯವ್ಯಾಪಿ) ದಸರಾ ಗೀತಾರಾಧನ
6:35:- ಸಿನೆಮಾ ಯಾನ – ಜನ ಮೆಚ್ಚಿದ ಕನ್ನಡ ಚಿತ್ರಗಳ ನೆನಪಿನ ಮಾಲೆ - ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್
6:40:- ದಸರಾದಲ್ಲಿ ಇಂದು ಮತ್ತು ನಾಳೆ ನಂತರ ಮೈಸೂರು ದಸರಾ ಎಷ್ಟೊಂದು ಸುಂದರ - ಪ್ರಸ್ತುತಿ – ಶ್ರೀಮಾನ್ . ಎಸ್
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು - ಸಂಗೀತಾ ಕಟ್ಟಿ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ನಮ್ಮ ಆರೋಗ್ಯ – ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆಯ ಸಂದರ್ಭದಲ್ಲಿ ’ಹಿರಿಯ ನಾಗರಿಕರ ಆರೋಗ್ಯ ಕಾಳಜಿ’ ಕುರಿತು ಫಿಸಿಷಿಯನ್ ಮತ್ತು ಡಯಾಬಿಟಾಲಜಿಸ್ಟ್ ಡಾ.ಕಾರ್ತಿಕ್ ಉಡುಪ.ಎನ್ ಅವರೊಂದಿಗೆ ಮಾತುಕತೆ. - ಇವರೊಂದಿಗೆ ಭಾಗವಹಿಸುತ್ತಾರೆ – ಬೇದ್ರೆ ಮಂಜುನಾಥ್
8:45:- ಚಿತ್ರಗೀತೆಗಳು
9:05:- ಮಕ್ಕಳ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ - ಪ್ರಾಯೋಜಕರು : ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಕರ್ನಾಟಕ ಚಾಪ್ಟರ್
9:10:- ಚಿತ್ರಗೀತೆಗಳು
9:30:- (ರಾಜ್ಯವ್ಯಾಪಿ) ಮೈಸೂರು ಬ್ರಾಂಡ್ ದಸರಾ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಪ್ರಸ್ತುತಿ : ಡಾ.ಮೈಸೂರು ಉಮೇಶ್ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
9:40:- (ರಾಜ್ಯವ್ಯಾಪಿ) ಮೈಸೂರು ಸಂಸ್ಥಾನದ ಕಲಾ ಪರಂಪರೆ – ದಸರಾ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ - ಸಾಹಿತ್ಯ: ಡಾ.ಜ್ಯೋತಿಶಂಕರ್ ಪರಿಕಲ್ಪನೆ ಹಾಗೂ ಪ್ರಸ್ತುತಿ: ಹೆಚ್.ಎಲ್.ಶಿವಶಂಕರಸ್ವಾಮಿ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
10:00:- ಕೇಳಿ ಗಿಳಿಗಳೇ - ಲಿಂಗಾಬುಧಿಪಾಳ್ಯದ ಅರಿವು ಶಾಲೆಯ ಪುಟ್ಟ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ
10:15:- ಕನ್ನಡ ಚಿತ್ರಗೀತೆಗಳು
10:30:- KRISH – TRISH and Balty boy – ನಾವು ಭಾರತೀಯರು “ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ತೆರೆಮರೆಯ ನಾಯಕರ ಬಗ್ಗೆ ಬೆಳಕ ಚೆಲ್ಲುವ ಬಾನುಲಿ ಸರಣಿ”
10:45:- ಚಿತ್ರಗೀತೆಗಳು
11:00:- ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರದ ಜನತೆಯೊಡನೆ ಹಂಚಿಕೊಳ್ಳುವ ಮನದ ಮಾತು ನಂತರ ಮನದ ಮಾತಿನ ಕನ್ನಡ ಅನುವಾದ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ವಾಗ್ದೇವಿ ಭಜನಾ ಮಂಡಳಿ ಸದಸ್ಯರಿಂದ ನವರಾತ್ರಿ ಕಾರ್ಯಕ್ರಮ.
(ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
12:35:- ಭಕ್ತಿಗೀತೆಗಳು
12:45:- ಜನಪದ ಸಂಗೀತ : ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ನಿಲಘಟ್ಟ ಗ್ರಾಮದ ಪುಟ್ಟನಂಜಮ್ಮ ಮತ್ತು ಸಂಗಡಿಗರಿಂದ ಚಾಮುಂಡೇಶ್ವರಿ ಹಾಡು
1:00:- (ರಾಜ್ಯವ್ಯಾಪಿ) ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಬಾನುಲಿ ಸರಣಿ - ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಕುರಿತು ಮಾಹಿತಿ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ಸಾಯಿ ತೇಜಸ್ ಚಂದ್ರಶೇಖರ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ನಕ್ಷತ್ರಲೋಕ – ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ಸಂದರ್ಶನ - ಇವರೊಂದಿಗೆ ಭಾಗವಹಿಸಿದ್ದಾರೆ – ಜಿ.ಶಾಂತಕುಮಾರ್ ಹಾಗೂ ಶ್ರೀಮಾನ್.ಎಸ್
3:40:- ಸಿರಿಗನ್ನಡಂ ಗೆಲ್ಗೆ, ಪ್ರಸ್ತುತಿ : ಜಿ. ಕೆ. ರವೀಂದ್ರಕುಮಾರ್
3:45:- ಕರ್ನಾಟಕ ಶಾಸ್ತ್ರೀಯ ಸಂಗೀತ – ಸಿಕ್ಕಿಲ್ ಮಾಲಾ ಚಂದ್ರಶೇಖರ್ – ವೇಣುವಾದನ
4:45:- ಚಿತ್ರಗೀತೆಗಳು
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05- ಇಂಗ್ಲೀಷ್ ವಾರ್ತಾಪ್ರಸಾರ
6:10:- ಸಿನೆಮಾ ಯಾನ – ಜನ ಮೆಚ್ಚಿದ ಕನ್ನಡ ಚಿತ್ರಗಳ ನೆನಪಿನ ಮಾಲೆ - ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ವಿಜ್ಞಾನದ ಮುನ್ನಡೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ : 1.ತೋರಣ ಹೂರಣ – ಸಾಪ್ತಾಹಿಕ ಸರಣಿ ಕಾರ್ಯಕ್ರಮ ಪ್ರಸ್ತುತಿ:- ಎನ್. ಕೇಶವಮೂರ್ತಿ, ಆರ್. ಲೋಕೇಶ್ವರಿ, ಟಿ.ವಿ.ವಿದ್ಯಾಶಂಕರ್ 2. ಕೃಷಿ ಲೋಕ 3.ಕೃಷಿ ದರ್ಪಣ – ವಾರದ ಕೃಷಿರಂಗ / ಕಿಸಾನ್ ವಾಣಿ ಕಾರ್ಯಕ್ರಮಗಳ ಮುನ್ನೋಟ
7:35:- ಕನ್ನಡ ವಾರ್ತಾಪ್ರಸಾರ
7:45:- ಏಷ್ಯಾ ಕಪ್ ಕ್ರಿಕೆಟ್ 2025ರ ಅಂಗವಾಗಿ ಭಾರತ ಮತ್ತು ತಂಡಗಳ ನಡುವೆ ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ 20 ಫೈನಲ್ ಪಂದ್ಯದ ವೀಕ್ಷಕ ವಿವರಣೆ
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ ಮುಂದುವರೆಯುತ್ತದೆ
11:05:- ಇಂಗ್ಲೀಷ್ ವಾರ್ತಾಪ್ರಸಾರ
11:10:- ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ ಮುಂದುವರೆಯುತ್ತದೆ

ಇದೇ ಭಾನುವಾರ ಸೆಪ್ಟೆಂಬರ್ 28 ರ ಬೆಳಿಗ್ಗೆ 10.00 ಗಂಟೆಗೆ ಕೇಳಿ ಗಿಳಿಗಳೇ ಕಾರ್ಯಕ್ರಮದಲ್ಲಿ  ಅರಿವು ವಿದ್ಯಾ ಸಂಸ್ಥೆಯ ಪುಟ್ಟ ಮಕ್ಕಳಿಂದ ಕಾರ್ಯ...
27/09/2025

ಇದೇ ಭಾನುವಾರ ಸೆಪ್ಟೆಂಬರ್ 28 ರ ಬೆಳಿಗ್ಗೆ 10.00 ಗಂಟೆಗೆ ಕೇಳಿ ಗಿಳಿಗಳೇ ಕಾರ್ಯಕ್ರಮದಲ್ಲಿ ಅರಿವು ವಿದ್ಯಾ ಸಂಸ್ಥೆಯ ಪುಟ್ಟ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ.

ಇಂದು ಶನಿವಾರ ಮಧ್ಯಾಹ್ನ 3.30 ಕ್ಕೆ ಮಕ್ಕಳ ಮಂಟಪದಲ್ಲಿ ನಾಗಮಂಗಲ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳಿಂದ ಮೂಡಲಪಾಯ ಯಕ್ಷ...
27/09/2025

ಇಂದು ಶನಿವಾರ ಮಧ್ಯಾಹ್ನ 3.30 ಕ್ಕೆ ಮಕ್ಕಳ ಮಂಟಪದಲ್ಲಿ ನಾಗಮಂಗಲ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳಿಂದ ಮೂಡಲಪಾಯ ಯಕ್ಷಗಾನದಲ್ಲಿ ದೇವಿ ಮಹಾತ್ಮೆ ಪ್ರಸಂಗದ ಎರಡನೇ ಭಾಗವನ್ನು ಕೇಳುವಿರಿ.

ಆಕಾಶವಾಣಿ ಮೈಸೂರು FM 100.6 ಮನೆ ಮನೆಯ ಹಣತೆ - ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನಾಧರಿಸಿದ ಪ್ರಾಯೋಜಿತ ಬಾನುಲಿ  ಸರಣಿ ಕಾರ್ಯಕ್ರಮರ...
26/09/2025

ಆಕಾಶವಾಣಿ ಮೈಸೂರು FM 100.6

ಮನೆ ಮನೆಯ ಹಣತೆ - ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನಾಧರಿಸಿದ ಪ್ರಾಯೋಜಿತ ಬಾನುಲಿ ಸರಣಿ ಕಾರ್ಯಕ್ರಮ

ರೂಪಕ - ಕಾರ್ಮಿಕ ಹಕ್ಕುಗಳ ನೇತಾರ ಅಂಬೇಡ್ಕರ್

ರಚನೆ - ಡಾ ಆರ್ ಛಾಯಾ , ಸಹಪ್ರಾಧ್ಯಾಪಕಿ , ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

ಪ್ರಸ್ತುತಿ - ಡಾ ಮೈಸೂರು ಉಮೇಶ್

ಪ್ರಾಯೋಜಕರು: ಡಾ. ಬಿ. ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆ
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ

ಆಕಾಶವಾಣಿ ಮೈಸೂರು FM 100.6 ಮನೆ ಮನೆಯ ಹಣತೆ - ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನಾಧರಿಸಿದ ಪ್ರಾಯೋಜಿತ ಬಾನುಲಿ ಸರಣಿ ಕಾರ್ಯಕ್ರಮ.....

Address

Yadavagiri
Mysore
570020

Alerts

Be the first to know and let us send you an email when Akashavani Mysore posts news and promotions. Your email address will not be used for any other purpose, and you can unsubscribe at any time.

Contact The Business

Send a message to Akashavani Mysore:

Share

Category