08/06/2025
ವರದಕ್ಷಿಣೆ ಕಿರುಕುಳ ಪ್ರಕರಣ: ಕಿರುಕುಳಕ್ಕೊಳಗಾದ ನಳಿನಿ ಯವರ ಮನವಿಯ ಮೇರೆಗೆ ಎಫ್‌ಐಆರ್ ದಾಖಲಿಸಿದ ಜ್ಞಾನಭಾರತಿ ಪೋಲೀಸರು....
ಹೊಸಪೇಟೆ, 08 ಜೂನ್ 2025 –
ದಿನಾಂಕ 05.06.2025 ರಂದು ಸಂಜೆ 4 ಗಂಟೆಗೆ ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಜೀರೋ ಎಫ್‌ಐಆರ್ ಸಂಖ್ಯೆ 01/2025 ಅನ್ನು ದಾಖಲಿಸಲಾಗಿದ್ದು, ವರದಕ್ಷಿಣೆ ಕಿರುಕುಳ ಸಂಬಂಧಿತ ಗಂಭೀರ ಆರೋಪಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.
ನಳಿನಿ ಅವರು ದಿನಾಂಕ 11/12/2020 ರಂದು ಎಲ್.ಎ. ಉಮಾಪತಿ ಅವರೊಂದಿಗೆ ಬಲೀಜ್ ಭವನ, ಹೊಸಪೇಟೆಯಲ್ಲಿ ಕುಲ ಸಂಪ್ರದಾಯದಂತೆ ವಿವಾಹವಾದರು. ಮದುವೆಗೆ ಮುನ್ನವೇ ಪತಿ ಉಮಾಪತಿ, ಇವರ ತಾಯಿ ಅನ್ನಪೂರ್ಣಮ್ಮ, ಅಣ್ಣ ಎಲ್.ಎ. ಸಿದ್ದಲಿಂಗೇಶ್ವರ, ಅವರ ಪತ್ನಿ ಪವಿತ್ರಾ ಮತ್ತು ಮಾವ ವೀರಯ್ಯ ಬಿ.ಎಂ ಇವರುಗಳು ತಾವು ಮದುವೆ ಮಾಡಲು ಕೆಲವೊಂದು ವರದಕ್ಷಿಣೆಯ ಬೇಡಿಕೆಗಳನ್ನು ಇಟ್ಟಿದ್ದರು – ರೂ. 3 ಲಕ್ಷ ನಗದು, 5 ತೊಲೆ ಬಂಗಾರ ಮತ್ತು 2 ಕೆ.ಜಿ ಬೆಳ್ಳಿ ಸಾಮಾನುಗಳು.
ನಳಿನಿ ಅವರ ಮನೆಯವರು ಈ ಬೇಡಿಕೆಗೆ ಪ್ರತಿಯಾಗಿ ರೂ. 1 ಲಕ್ಷ ನಗದು, 2 ತೊಲೆ ಬಂಗಾರ ಮತ್ತು 1 ಕೆ.ಜಿ ಬೆಳ್ಳಿ ನೀಡಲು ಒಪ್ಪಿಕೊಂಡು ಮದುವೆ ನೆರವೇರಿತು. ಮದುವೆಯಾದ ಬಳಿಕ ನಳಿನಿ ಯವರು ಬೆಂಗಳೂರಿಗೆ ಪತಿಯೊಂದಿಗೆ ತೆರಳಿದ್ದು, 8 ತಿಂಗಳ ಕಾಲ ಸಹಜವಾಗಿಯೇ ಬದುಕಿದರು. ಆದರೆ ನಂತರ, ಉಮಾಪತಿ ಮತ್ತು ಅವರ ಮನೆಯವರು ಇನ್ನೂ ಹೆಚ್ಚಿನ ಬಂಗಾರ ತರಬೇಕೆಂಬ ನಿಟ್ಟಿನಲ್ಲಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡತೊಡಗಿದರು.
ನಳಿನಿ ಯವರ ತಂದೆ ಈ ಸಂಬಂಧ ಗ್ರಾಮ ಪಂಚಾಯಿತಿ ಸಭೆ ಕರೆದರೂ ಸಮಸ್ಯೆ ಪರಿಹಾರವಾಗಲಿಲ್ಲ. ಕೊನೆಗೆ, ದಿನಾಂಕ 25/12/2024 ರಂದು ತಾನು ತಂದೆಯ ಮನೆಗೆ ಹಿಂಸೆ ತಾಳದೆ ಹೋಗಿರುತ್ತಾರೆ . ಅಲ್ಲೂ ಕೂಡ ಬಿಡದೆ ಉಮಾಪತಿ ಫೋನಿನ ಮೂಲಕ ಹಿಂಸೆ ಕೊಡುತಿದ್ದರು ದಿನಾಂಕ 11/05/2025 ರಂದು ಪತಿ ಜೊತೆ ಮಾತುಗಳಾದಾಗ, ಪತಿ ಸ್ಪಷ್ಟವಾಗಿ "ಹಣ ಮತ್ತು ಬಂಗಾರ ತಂದರೆ ಮಾತ್ರ ಮನೆಗೆ ಸೇರಿಸುವೆ" ಎಂದು ಬೆದರಿಕೆ ಹಾಕಿದನು.
ಈ ಎಲ್ಲಾ ಘಟನೆಯ ಆಧಾರದಲ್ಲಿ ನಳಿನಿ ದಿನಾಂಕ 04/06/2025 ರಂದು ಠಾಣೆಗೆ ದೂರು ನೀಡಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಜೀರೋ ಎಫ್‌ಐಆರ್ ರೂಪದಲ್ಲಿ ದಾಖಲಿಸಿ, ಭಾರತೀಯ ದಂಡ ಸಂಹಿತೆ ಮತ್ತು ಡೌರಿ ಪ್ರೊಹಿಬಿಷನ್ ಆಕ್ಟ್-1961 ನ ಸೆಕ್ಷನ್ 0:85, 115(2), 352, 351(3) / 23(5) 2.2.2-2023 ಹಾಗೂ ಸೆಕ್ಷನ್ 2, 3 ಮತ್ತು 4 ರಂತೆ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸರು ಆರೋಪಿಗಳನ್ನು ಚರ್ಚೆಯ ಆಧಾರದಲ್ಲಿ ತನಿಖೆಗೆ ಒಳಪಡಿಸಿದ್ದು, ಮುಂದಿನ ಹಂತದ ಕ್ರಮ ಮುಂದುವರಿಸುತ್ತಿದ್ದಾರೆ.