17/07/2026
ಮನುಷ್ಯತ್ವ ಮರೆಯಾಗುತ್ತಿದೆ...
ಶಾಜಹಾನ್ ತನ್ನ ಪತ್ನಿಯ ಮೇಲಿರುವ ಪ್ರೀತಿಯನ್ನು ತಾಜ್ ಮಹಲ್ ಮೂಲಕ ವ್ಯಕ್ತಪಡಿಸಿದ. ಹೀಗೆ ಹಲವಾರು ಹಲವು ರೀತಿಯಲ್ಲಿ ತಮ್ಮ ಪ್ರೇಯಸಿಯರೊಂದಿಗೆ/ಜೀವನ ಸಂಗಾತಿಯರೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ನಿನ್ನೆ ಬಿಸಿ ರೋಡಿನಲ್ಲಿ ನಡೆದ ಘಟನೆ ಎಲ್ಲರೂ ನೋಡಿರಬಹುದು. ಅದೂ ಕೂಡ ಒಂದು ಪ್ರೀತಿ ಪ್ರಕಟಣೆ,ತಾನು ಪ್ರೀತಿಸಿದ ಹುಡುಗಿ ತನ್ನನ್ನು ಪ್ರೀತಿಸದ ಕಾರಣ ಅವಳನ್ನು ಈ ಲೋಕದಿಂದಲೇ ಕಳುಹಿಸಿಬಿಟ್ಟ ಆ ಮನುಷ್ಯತ್ವವಿಲ್ಲದ ಕೊಲೆಗಾರ.
"ಹೇಗಪ್ಪಾ ಒಬ್ಬ ಮನುಷ್ಯನಿಗೆ ಈ ರೀತಿಯಲ್ಲಿ ಕೊಲೆಗೈಯಲು ಸಾಧ್ಯವಾಗುವುದು ?" ಎಂದು ಹಲವರು ಚಿಂತಿಸಿರಬಹುದು.
ಪ್ರಧಾನ ಕಾರಣ, ಪ್ರೀತಿ ಎಂಬ ಹುಚ್ಚು. ಈ ಹುಚ್ಚು ತಲೆಗೆ ಹತ್ತಿದರೆ ಸುತ್ತಮುತ್ತಲಿನ ಯಾವುದೂ ಕಾಣಿಸುವುದಿಲ್ಲ. ಸ್ವಂತದವರೆಂದು ನನಗಿರುವ ತಂದೆ ತಾಯಂದಿರನ್ನು ಕೂಡಾ ಮರೆತುಹೋಗುತ್ತಾರೆ. ಪ್ರಿಯತಮನಿಗೊಸ್ಕರ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುವ ಗಂಡನನ್ನೇ ಕೊಂದ ಘಟನೆ ನಾವು ಕಂಡಿದ್ದೇವೆ.
ಮತ್ತೊಂದು ಕಾರಣ, ಇಂದಿನ ಕಾಲದ ಸಿನಿಮಾ ಸ್ಟೈಲ್. ಅಂದರೆ, ಸಿನಿಮಾದಲ್ಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಕಾಣುವ ಶಾರ್ಟ್ ವಿಡಿಯೋಗಳು. "ಅದರಲ್ಲಿ ಇರುವ ಹಾಗೆ ನನಗೆ ಜೀವಿಸಬೇಕು, ಅದರಲ್ಲಿರುವ ನಾಯಕನ ಹಾಗೆ ನನಗೆ ಪ್ರೀತಿಸಬೇಕು, ಪ್ರೇಯಸಿಯನ್ನು ಮದುವೆ ಮಾಡಬೇಕು" ಹೀಗೆ ಹಲವಾರು ಚಿಂತೆಗಳು ಮನುಷ್ಯನನ್ನು ಈ ರೀತಿಯ ಕೆಲಸಕ್ಕೆ ಕರೆದೊಯ್ಯುತ್ತದೆ.
ಅದರಲ್ಲಿರುವುದು ಕೇವಲ ನಟನೆಯೆಂದೂ, ಅದರಲ್ಲಿರುವ ಪಾತ್ರ ಕೇವಲ ನಟನೆಗೆ ಬೇಕಾಗಿ ಎಂದೂ ಕೂಡ ಅರ್ಥೈಸುವಷ್ಟು ಬುದ್ಧಿ ನಮ್ಮ ಈ ಜೆನ್ಝಿ ಯುವಕ/ಯುವತಿಯರಿಗೆ ಇಲ್ಲ ಎಂಬುವುದೇ ನಗ್ನಸತ್ಯ. ಹಿರಿಯರ ಮಾತಿಗೆ ಬೆಲೆ ಕೊಡದೆ, ಬುದ್ಧಿಮಾತು ಹೇಳುವವರನ್ನು ಕಡೆಗಣಿಸಿ ಜೀವಿಸುವ ಈ ತಲೆಮಾರು ಹೀಗಾದರೆ, ಇನ್ನು ಬರುವ ತಲೆಮಾರು ಹೇಗಿರಬಹುದು ?
✒️ ಹಾಫಿಝ್ ಸಿನಾನ್ ಕಬಕ