05/08/2025
ಸೋತಾಗ ಉಗ್ದೋನಿಗೆ ಗೆದ್ದಾಗ ಹೋಗಳಲೇ ಬೇಕಲ್ವಾ?
ಭಾರತ ಕ್ರಿಕೆಟ್ ತಂಡ ಓವಲ್ ನಲ್ಲಿ ರೋಮಾಂಚನಕಾರಿ ಗೆಲುವು ಸಾಧಿಸುವುದರೊಂದಿಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಡ್ರಾನಲ್ಲಿ ಅಂತ್ಯಗೊಂಡಿದೆ. ಮೊಹಮದ್ ಸಿರಾಜ್, ಪ್ರಸಿದ್ ಕೃಷ್ಣ, ಶುಭ್ ಮನ್ ಗಿಲ್, ಆಕಾಶ್ ದೀಪ್, ಜೈಸ್ವಾಲ್, ರಾಹುಲ್ ಎಲ್ರೂ ಈ ಗೆಲುವಿನ ರೂವಾರಿಗಳು. ಎಲ್ರನ್ನೂ ಹಾಡಿ ಹೊಗಳ್ತಾ ಇದ್ದಾರೆ, ಒಬ್ರನ್ನ ಬಿಟ್ಟು. ಅದು ಮತ್ಯಾರು ಅಲ್ಲ ಕೋಚ್ ಗೌತಮ್ ಗಂಭೀರ್. ಭಾರತ ಟೆಸ್ಟ್ ಸೋತಾಗ ಮೊದ್ಲು ಟ್ರೋಲ್ ಗೆ ಒಳಗಾಗೋದು ಕೋಚ್ ಗಂಭೀರ್ 🙄. ಗಂಭೀರ್ ಟೀಂ ಸೆಲೆಕ್ಷನ್ ಮತ್ತು strategy ನೆ ಇದಕ್ಕೆ ಕಾರಣ ಅಂತ ಗಂಭೀರ್ ನ ಮನಸೋ ಇಚ್ಚೆ ಟ್ರೋಲ್ ಮಾಡೋ ಜನ ಇವತ್ತು ಗಂಭೀರ್ ಗೆ ದ್ದಾಗ ಬಾಯಿಗೆ 5 ರೂಪಾಯಿ ಫೇವಿ ಕ್ವೀಕ್ ಹಾಕೊಂಡ್ ಕೂತಿದ್ದಾರೆ 😁 ಗೆದ್ದಾಗ ಟೀಂ ಎಫರ್ಟ್, ಸೋತಾಗ ಕೋಚ್ ಮಿಸ್ಟೇಕ್ ಅಂತಾ ಹೇಳೋರೆ ಜಾಸ್ತಿ 😁 ಇನ್ನು ಕೆಲವ್ರು ಒಂದು ಹೆಜ್ಜೆ ಮುಂದೆ ಹೋಗಿ ಗಂಭೀರ್ ನ ಕೋಚ್ ಸ್ಥಾನದಿಂದ ಕೆಳಗಿಳಸದೆ ಹೋದ್ರೆ ಭಾರತ ಕ್ರಿಕೆಟ್ ತಂಡವನ್ನೇ ಮಕಾಡೆ ಮಲಗಿಸ್ತಾನೆ. ಈ ಸರಣಿಯೆ ಗಂಭೀರ್ ನ ಕೊನೆಯ ಸರಣಿ ಆಗಿರಲಿ ಅಂತಾ ಹೇಳಿದ್ರು. ಆದ್ರೆ ಅದೆಲ್ಲಡಿಕ್ಕೂ ಭಾರತ ಓವಲ್ ಟೆಸ್ಟ್ ಗೆಲುವು ಬ್ರೇಕ್ ಅಂತೂ ಹಾಕಿದೆ.
ಗಂಭೀರ್ ಹೆಸರಿನಲ್ಲಿ ಮಾತ್ರ ಅಲ್ಲ ಸ್ವಭಾವದಲ್ಲೂ ಗಂಭೀರನೇ. ಹಿಂದಿನ ಕೋಚ್ ರವಿ ಶಾಸ್ತ್ರಿ ತರ ಪಾರ್ಟಿ ಫ್ರೀಕ್ ಅಲ್ಲ. ಫಿಟ್ನೆಸ್, ಅಭ್ಯಾಸದ ಕಡೆಗೇನೇ ಜಾಸ್ತಿ ಗಮನ. ಒಂತರ ಸಿಕ್ಕಾಪಟ್ಟೆ ಶಿಸ್ತಿನ ಮನುಷ್ಯ. ಅದೇ ಶಿಸ್ತಿನ ಕಾರಣ 2 ಸಲ KKR ನ ಚಾಂಪಿಯನ್ ಮಾಡಿಸಿದ್ದು ಕ್ಯಾಪ್ಟನ್ ಆಗಿ ಮತ್ತೊಮ್ಮೆ ಮೆಂಟರ್ ಆಗಿ. ಗಂಭೀರ್ ನ ಕೋಚಿಂಗ್ ಮಾಡೆಲ್ ಎಲ್ರಿಗೂ ಇಷ್ಟ ಆಗಲ್ಲ ಬಿಡಿ. ಆದ್ರೆ ಅವಯ್ಯನ ಗುರಿ ಮಾತ್ರ ತಪ್ಪಿಲ್ಲ ಇಲ್ಲಿ ವರೆಗೆ. ಶುಭಮನ್ ಗಿಲ್ ಅಂತ ಸಣ್ಣ ವಯಸ್ಸಿನ ನಾಯಕ, ಗಂಭೀರ್ ನಂತ ಕೋಚ್ ಈ ಜೋಡಿಯ ಜೈತ್ರ ಯಾತ್ರೆ ಇದೆ ತರ ಮುಂದುವರಿಯಲಿ 🔥❤️
2017 ರಲ್ಲಿ ಗಂಭೀರ್ ಬಗ್ಗೆ ಹೊಸದಿಗಂತ ಪತ್ರಿಕೆಗೆ ಬರೆದಿದ್ದ ಲೇಖನ 👇