Voice of Ramanagara

Voice of Ramanagara ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕಿನ ಸಂಕ್ಷಿಪ್ತ ಮಾಹಿತಿಗಾಗಿ.

14/06/2025

*ರಷ್ಯಾ-ಉಕ್ರೇನ್ ಯುದ್ಧದಿಂದ ನೀವು ಏನು ಕಲಿತಿದ್ದೀರಿ...???*
*ಅಣ್ಣಾಮಲೈ ಅವರನ್ನು ಕೇಳಿದ ಪ್ರಶ್ನೆಗೆ,*
ಅವರ ಉತ್ತರ

ನನ್ನ ಸಂಬಳ, ನನ್ನ 4 BHK ಮನೆ / ಬಂಗಲೆ, ನನ್ನ ಕಾರು,
ನನ್ನ ವ್ಯವಹಾರ, ನನ್ನ ತೆಂಗಿನ ತೋಟ, ನನ್ನ ತೋಟದ ಮನೆ, ಇತ್ಯಾದಿ

ನನ್ನ ದೇಶ ಸುರಕ್ಷಿತವಾಗಿರುವವರೆಗೆ ಮಾತ್ರ ಇವೆಲ್ಲವೂ ಸುರಕ್ಷಿತವಾಗಿರುತ್ತವೆ.
ಇಲ್ಲದಿದ್ದರೆ, ಎಲ್ಲವೂ ಕೆಲವೇ ಕ್ಷಣಗಳಲ್ಲಿ ಹೊಗೆಯಾಗಿ ಬದಲಾಗುತ್ತದೆ.

ಇಂದು, ರಷ್ಯಾ-ಉಕ್ರೇನ್ ಯುದ್ಧದಲ್ಲಿ, 2 ಮಿಲಿಯನ್‌ಗಿಂತಲೂ ಹೆಚ್ಚು ಉಕ್ರೇನಿಯನ್ನರು ಎಲ್ಲವನ್ನೂ ತೊರೆದು ಇತರ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.
ಅವರಿಗೆ ಆಶ್ರಯ ನೀಡುವ ನೆರೆಯ ದೇಶಗಳು ಇರುವುದು ಅವರ ಅದೃಷ್ಟ.
ನಮಗೆ ಏನಾಗುತ್ತದೆ...??? ನಾವು ಎಲ್ಲಿಗೆ ಹೋಗಬಹುದು ಎಂದು ನೀವು ಭಾವಿಸುತ್ತೀರಿ...???
ಪಶ್ಚಿಮ: ಪಾಕಿಸ್ತಾನ
ಪೂರ್ವ: ಬಾಂಗ್ಲಾದೇಶ,
ದಕ್ಷಿಣ: ಹಿಂದೂ ಮಹಾಸಾಗರ,
ಉತ್ತರ: ಚೀನಾ,
ದೇಶದೊಳಗೆ ಲೆಕ್ಕವಿಲ್ಲದಷ್ಟು ದೇಶದ್ರೋಹಿಗಳು...!
ನೆನಪಿಡಿ, ನಿಮಗೆ ಆಶ್ರಯ ನೀಡಲು ನಿಮಗೆ ಬೇರೆ ದೇಶವಿಲ್ಲ.
ಆದ್ದರಿಂದ, ಅಗ್ಗದ ಪೆಟ್ರೋಲ್, ಉಚಿತ ಪಡಿತರಕ್ಕಿಂತ ಹೆಚ್ಚು,
ಬಲವಾದ ರಾಷ್ಟ್ರಕ್ಕೆ ಆದ್ಯತೆ ನೀಡಿ."

*ನಿರಾಕರಿಸಲಾಗದ ಸತ್ಯ!*

19/05/2025
 #ಸುಮಾರು 4,000 ಕ್ರಿಶ್ಚಿಯನ್ ಮತ್ತು  ಹಿಂದೂ ಮತ್ತು ಬೌದ್ಧ ಮಹಿಳೆಯರಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿ ಅವರ ಗರ್ಭಕೋಶಗಳನ್ನು ಅನುಮತಿ ಇಲ...
21/04/2025

#ಸುಮಾರು 4,000 ಕ್ರಿಶ್ಚಿಯನ್ ಮತ್ತು ಹಿಂದೂ ಮತ್ತು ಬೌದ್ಧ ಮಹಿಳೆಯರಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿ ಅವರ ಗರ್ಭಕೋಶಗಳನ್ನು ಅನುಮತಿ ಇಲ್ಲದೆ ಕತ್ತರಿಸಿದ ಶ್ರೀಲಂಕಾದ ವೈದ್ಯ ಡಾ. ಮಹಮೂದ್ ಶಫಿ.

ಇದು ಹೊಸ ರೀತಿಯ ಜಿಹಾದ್... ವೈದ್ಯಕೀಯ ಜಿಹಾದ್???

17-11-2021
17/11/2021

17-11-2021

ಉತ್ತರ ಪ್ರದೇಶದ 341 ಕಿಮೀ ಉದ್ದದ ಪೂರ್ವಾಂಚಲ ಎಕ್ಸ್ಪ್ರೆಸ್ ಮಾರ್ಗವನ್ನು ಉದ್ಘಾಟಿಸಲು ರಸ್ತೆಯ ಮೇಲೆ ವಿಮಾನದ ಮೂಲಕ  ಬಂದಿಳಿದ ಪ್ರಧಾನಿ ಮೋದಿ. ...
16/11/2021

ಉತ್ತರ ಪ್ರದೇಶದ 341 ಕಿಮೀ ಉದ್ದದ ಪೂರ್ವಾಂಚಲ ಎಕ್ಸ್ಪ್ರೆಸ್ ಮಾರ್ಗವನ್ನು ಉದ್ಘಾಟಿಸಲು ರಸ್ತೆಯ ಮೇಲೆ ವಿಮಾನದ ಮೂಲಕ ಬಂದಿಳಿದ ಪ್ರಧಾನಿ ಮೋದಿ.

ಕೃಪೆ:ANI

16-11-2021
16/11/2021

16-11-2021

14/11/2021

ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಡೆಪ್ಯುಟಿ ಕಲೆಕ್ಟರ್ (ಜಿಲ್ಲಾಧಿಕಾರಿ) ಮಯಾಂಕ್ ಪಟೇಲ್ ಎಂಬುವವರ....

 # #ಮಳೂರುಪಟ್ಟಣ ಗ್ರಾಮದ ಪ್ರಾಚೀನ # #ಅಮೃತೇಶ್ವರ ಹಾಗೂ ನಾರಾಯಣಸ್ವಾಮಿ" ದೇವಸ್ಥಾನದ ಶೋಚನೀಯ ಸ್ಥಿತಿ. ಮಳೂರುಪಟ್ಟಣ ಚನ್ನಪಟ್ಟಣ ತಾಲೂಕು ಕೇಂದ್...
14/11/2021

# #ಮಳೂರುಪಟ್ಟಣ ಗ್ರಾಮದ ಪ್ರಾಚೀನ
# #ಅಮೃತೇಶ್ವರ ಹಾಗೂ ನಾರಾಯಣಸ್ವಾಮಿ" ದೇವಸ್ಥಾನದ ಶೋಚನೀಯ ಸ್ಥಿತಿ. ಮಳೂರುಪಟ್ಟಣ

ಚನ್ನಪಟ್ಟಣ ತಾಲೂಕು ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಇತಿಹಾಸ ಪ್ರಸಿದ್ಧ, ಪುರಾತನ ಗ್ರಾಮಗಳಲ್ಲಿ ಮಳೂರು ಪಟ್ಟಣವು ಸಹ ಒಂದು. ಮಳೂರು ಪಟ್ಟಣವು ಅತ್ಯಂತ ಪ್ರಾಚೀನ ಗ್ರಾಮವಾಗಿದ್ದು ಚೋಳರ ಕಾಲದ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಮಳೂರು ಪಟ್ಟಣದ ಚೌಡೇಶ್ವರಿ ಕೊಂಗ ನಾಡಿನಿಂದ(ತಮಿಳು ನಾಡು) ಬಂದವರು ಎಂದು ಜನಪದರು ತಿಳಿಸುತ್ತಾರೆ. ಮಳೂರು ಪಟ್ಟಣದ ತಾಯಬ್ಬೆಯ ಮಗಳು ಕಳ್ಳಿಮೇಳಮ್ಮ ಇಲ್ಲಿಂದ ಕಂಚಿಗೆ ಸ್ಥಳಾಂತರಗೊಂಡು ಪ್ರತಿಷ್ಠಾಪನೆಗೊಂಡವಳಾಗಿ ಇಂದಿಗೂ ಜನಪದರು ಸ್ಮರಿಸುವುದು ಕಾಣಬಹುದು .
ಕರ್ನಾಟಕದಲ್ಲಿ ಚೋಳರ ಪ್ರಭಾವ ದಟ್ಟವಾಗಿದ್ದ ಗ್ರಾಮಗಳಲ್ಲಿ "ಮಣಲೂರು ಅಥವಾ ಮಳೂರು ಪಟ್ಟಣ"ಸಹ ಒಂದು ಇದನ್ನು ಚೋಳರ ಕಾಲದಲ್ಲಿ "ಐರಾಜೇಂದ್ರ ಸಿಂಗ ಚತುರ್ವೇದಿಮಂಗಲ" ಎಂದು ಕರೆಯಲಾಗಿದೆ. ಕಿ.ಶ 1014ರ ತಮಿಳು ಶಾಸನದ ಪ್ರಕಾರ ಚೋಳರ ಪ್ರಸಿದ್ಧ ದೊರೆ' ರಾಜೇಂದ್ರ ಚೋಳನು' ಮಣಲೂರನ್ನು( ಮಳೂರು ಪಟ್ಟಣ) ಜಯಗೊಂಡು ಚೋಳ ವಿನ್ನಾಗಾರ್ ದೇವರಿಗೆ ಈ ಗ್ರಾಮವನ್ನು ದಾನ ಬಿಟ್ಟ ಉಲ್ಲೇಖವಿದೆ .ವೈಷ್ಣವಧರ್ಮ ಪ್ರಚಾರವಾಗಿ ಹಲವಾರು ವೈಷ್ಣವ ದೇವಸ್ಥಾನವನ್ನು ಚೋಳರು ಕೂಡ್ಲೂರು ,ಮಳೂರು ಪಟ್ಟಣ ,ಹೊಂಗನೂರು ಮುಂತಾದ ಗ್ರಾಮಗಳಲ್ಲಿ ನಿರ್ಮಿಸಿದ್ದಾರೆ.

# #ಮಳೂರುಪಟ್ಟಣದ"ಅಮೃತೇಶ್ವರ ದೇವಾಲಯ".

ಈ ದೇವಾಲಯದ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು, ಚೋಳ ದಾಖಲೆಗಳ ಪ್ರಕಾರ "ಅರು ಮಾದೇಶ್ವರಂ" ಎಂದು ಶಾಸನದಲ್ಲಿ ಉಲ್ಲೇಖವಿದೆ. ಇದೇ ದೇವಾಲಯದ ಮುಂಭಾಗದ ಮಂಟಪದ ಕಂಬದಲ್ಲಿರುವ ಏಕಲವ್ಯನ ಶೀಲಾ ಮೂರ್ತಿಯಿದ್ದು ಚೋಳ ಶಾಸನಗಳ ಪ್ರಕಾರ "ದ್ವಾಪರಯುಗದ ಏಕಲವ್ಯ" ಹುಟ್ಟಿದ ಸ್ಥಳ ಎಂದಿದೆ. ಈ ದೇವಾಲಯವು ಚೋಳರು ಹಾಗೂ ಗಂಗರಸರ ಮಾದರಿಯಲ್ಲಿದ್ದು, ದೇವಾಲಯದ ಅರ್ಧಮಂಟಪ, ಕಂಬಗಳು ತಲಕಾಡಿನ ಮರಳೇಶ್ವರ ಮತ್ತು ಪಾತಾಳೇಶ್ವರ ಗುಡಿಯನ್ನು ಹೋಲುತ್ತದೆ .ಅಲ್ಲದೆ, ಅಮೃತೇಶ್ವರ ಲಿಂಗವು ಬೃಹದಾಕಾರವಾಗಿ ಗ್ರಾಮಸ್ಥರ ಆರಾಧ್ಯದೈವವಾಗಿದ್ದು. ಸುಮಾರು ವರ್ಷಗಳ ಹಿಂದೆ ಗ್ರಾಮದ ಕೆಲವು ಕಿಡಿಗೇಡಿಗಳು ಈ ಲಿಂಗವನ್ನು ಕದ್ದೊಯ್ದು ಬೇರೆಯವರಿಗೆ ಮಾರಲು ಮುಂದಾದಾಗ ಇವರನ್ನು ಗ್ರಾಮಸ್ಥರು ತಡೆಯುತ್ತಾರೆ. ಹೆದರಿಕೆಯಿಂದ ಲಿಂಗವನ್ನು ಭತ್ತದ ಹುಲ್ಲಿನ ಮೆದೆಗೆ ಇಡುತ್ತಾರೆ .ನಂತರ, ಮೆದೆ ಹೊತ್ತಿಕೊಂಡು ಉರಿಯುತ್ತದೆ, ಇದಾದನಂತರ ಇಲ್ಲಿದ್ದ ಶಿವ ಲಿಂಗವು ಹುಲುವಾಡಿ ಗ್ರಾಮದ ಅಂಕನಾಥೇಶ್ವರ ನಾಗಿ ಪ್ರತಿಷ್ಠಾಪನೆಗೊಂಡಿದೆ ಎಂದು ಊರಿನ ಹಿರಿಯರು, ಜನಪದರು ಸ್ಮರಿಸಿಕೊಳ್ಳುತ್ತಾರೆ.

# #ಮಳೂರು ಪಟ್ಟಣ" ನಾರಾಯಣಸ್ವಾಮಿ ದೇವಾಲಯ"

ಇಲ್ಲಿನ ಸಣ್ಣ ಗುಡಿಯಾಗಿರುವ ನಾರಾಯಣಸ್ವಾಮಿ ಗುಡಿಯು ಚೋಳರ ಕಾಲದಲ್ಲಿ ಕ್ರಿ.ಶ 1000 ರಲ್ಲಿ ನಿರ್ಮಾಣವಾಗಿದ್ದು. ಇಲ್ಲಿನ ಪ್ರಮುಖ ದೇವರು ನಾರಾಯಣಸ್ವಾಮಿ ಆಗಿದೆ. ಇದರ ಗೋಡೆಯಮೇಲೆ 7 ತಮಿಳು ಶಾಸನಗಳಿವೆ .ಪಶ್ಚಿಮದ ಬಾಗಿಲಲ್ಲಿ ಇರುವ ಕ್ರಿ. ಶ 1007ರ ಶಾಸನವು' ರಾಜರಾಜ ಚೋಳ'ನದಾಗಿದ್ದು ನೀಲಗಿರಿ ಚೊಳ ಜಯಗೊಂಡ ಆಳ್ವಾರ್ ದೇವರಿಗೆ ದತ್ತಿ ಬಿಟ್ಟ ವಿಚಾರ ತಿಳಿಸುತ್ತಾರೆ. ಅಲ್ಲದೆ ದಿನನಿತ್ಯ ಪೂಜಾಕೈಂಕರ್ಯಗಳು ತಪ್ಪದೆ ನಡೆಯಲು ವ್ಯವಸ್ಥೆ ಮಾಡಿರುವುದನ್ನು ಶಾಸನ ತಿಳಿಸುತ್ತದೆ. ಕ್ರಿಸ್ತಶಕ 1014 ಶಾಸನವು ರಾಜೇಂದ್ರ ಚೋಳನದಾಗಿದ್ದು ಹಲವು ದತ್ತಿಗಳನ್ನು ನೀಡಿದ ವಿವರಗಳಿವೆ.

ಐತಿಹಾಸಿಕ ,ಪುರಾಣ ಪ್ರಸಿದ್ಧ "ಮಳೂರು ಪಟ್ಟಣ" ಗ್ರಾಮದ" ಅಮೃತೇಶ್ವರ ಹಾಗು ನಾರಾಯಣಸ್ವಾಮಿ" ದೇವಾಲಯವು ತೀವ್ರ ಶೀತಲಾವಸ್ಥೆ ತಲುಪಿದ್ದು ಅಮೃತೇಶ್ವರ ದೇವಾಲಯವಂತೂ ಪೂರ್ತಿ ಹಾಳಾಗಿದೆ. ನಾರಾಯಣಸ್ವಾಮಿ ದೇವಸ್ಥಾನವು ಆಗಲೋ ಈಗಲೋ ಬೀಳುವಂಥ ಆತಂಕದಲ್ಲಿದೆ. ಇಂತಹ ಅತ್ಯುನ್ನತ ಇತಿಹಾಸವನ್ನು, ವೈಶಿಷ್ಟ್ಯವನ್ನು ಹೊಂದಿರುವ ಈ ಪುರಾತನ ದೇವಾಲಯಗಳನ್ನು ಆದಷ್ಟು ಬೇಗ ಪುನರ್ ನಿರ್ಮಾಣ ಮಾಡಿ ಇತಿಹಾಸದ ಕುರುಹುಗಳನ್ನು ಉಳಿಸಬೇಕು." ಪುರಾತತ್ವ ಇಲಾಖೆಯ "ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಶೀಘ್ರಗತಿಯಲ್ಲಿ ಈ ದೇವಸ್ಥಾನಗಳನ್ನು ಪುನರ್ ನಿರ್ಮಿಸಬೇಕು ಎಂಬುದು ಭಕ್ತಾದಿಗಳು ಹಾಗೂ ಇತಿಹಾಸ ಪ್ರಿಯರ ವಿನಮ್ರತೆ ಮನವಿ .

Ancient Archeology
Shalvapille Iyengar
Inscription Stones of Bangalore

ಸಂಗ್ರಹ ಮತ್ತು ಬರಹ:
ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು
ಯುವ ಲೇಖಕ.
9632505776

14/11/2021

ಪ್ರೇಕ್ಷಣಿಯ ಸ್ಥಳವಾದ
BV ಹಳ್ಳಿ ಕೆರೆ .
ಹಲವಾರು ವರ್ಷಗಳ ಬಳಿಕ ಕೆರೆ ಕೋಡಿ ಹೊಡೆದಿರುವ ದೃಶ್ಯ ಕಣ್ತುಂಬಿಕೊಳ್ಳುತ್ತಿರುವ ಜನರು.

Address

) Karnataka State
Ramanagara
562160

Website

Alerts

Be the first to know and let us send you an email when Voice of Ramanagara posts news and promotions. Your email address will not be used for any other purpose, and you can unsubscribe at any time.

Contact The Business

Send a message to Voice of Ramanagara:

Share