18/01/2025
ದುಷ್ಟರನ್ನು ದುಷ್ಟ ನೀತಿಯಲ್ಲಿಯೇ ಹೊಡೆಯಬೇಕು
ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ , ಕರ್ಣ ಹಾಗೂ ಅರ್ಜುನನ ನಡುವೆ ಯುದ್ಧ ನಡೆಯುವಾಗ ,
ಕರ್ಣನ ರಥದ ಗಾಲಿ ಯುಧ್ದ ಭೂಮಿಯಲ್ಲಿ ಹೂತು ಹೋಗುತ್ತದೆ , ಆಗ ಹೂತ ರಥದ ಗಾಲಿಯನ್ನು ಮೇಲೆತ್ತಲು ಕರ್ಣ ರಥದಿಂದ ಕೆಳಗೆ ಇಳಿದು , ಗಾಲಿಯನ್ನು ಮೇಲೆತ್ತುವಾಗ ಕರ್ಣ ನಿಶಸ್ತ್ರನಾಗತ್ತಾನೆ,
ಅದೇ ಸಂದರ್ಭದಲ್ಲಿ ಭಗವಾನ ಶ್ರೀ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ. ಈಗ ಬಾಣವನ್ನು ಕರ್ಣನ ಮೇಲೆ ಹೂಡು ಎಂದು ,
ಆಗ ಅರ್ಜುನ ಶ್ರೀ ಕೃಷ್ಣನಿಗೆ ಹೇಳುತ್ತಾನೆ ನಿಶಸ್ತ್ರದಾರಿಗಳ ಮೇಲೆ ಶಸ್ತ್ರ ಪ್ರಯೋಗಿಸುವುದು ಕ್ಷತ್ರಿಯ ಹಾಗೂ ಯುದ್ಧ ಧರ್ಮಕ್ಕೆ ವಿರುದ್ಧ ಎಂದು ,
ಆಗ ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ " ದುಷ್ಟರನ್ನು ದುಷ್ಟ ನೀತಿಯಲ್ಲಿಯೇ ಹೊಡೆಯ ಬೇಕೆಂದು "
ಅದೇ ಕೆಲಸವನ್ನು ಮಾನ್ಯ ಸಂಸದರಾದ ಅನಂತಕುಮಾರ ಹೆಗಡೆಯವರು , ಮಾನ್ಯ ಸಿದ್ದರಾಮಯ್ಯ ನವರ ಮೇಲೆ ಮಾಡಿದ್ದಾರೆ ಅಷ್ಟೆ.
ಅಲ್ಲ ಈ ಸಿದ್ದರಾಮಯ್ಯನವರನ್ನು ಕಳೆದ ಹತ್ತು ಹನ್ನೆರಡು ವರ್ಷಗಳಿಂದ ರಾಜಕೀಯ ಜೀವನದಲ್ಲಿ ನೋಡುತ್ತಾ ಬಂದಿದ್ದೇವೆ. ಏಕವಚನದಲ್ಲಿ ಎಲ್ಲರ ಮೇಲೆ ಪ್ರಯೋಗಿಸುತ್ತ ಗೌರವ ಹೇಳುವ ಶಬ್ದವನ್ನು ಈ ಅಯ್ಯ ಮರೆತಂತಿದೆ .
ಇದು ಅವರ ತಪ್ಪಲ್ಲ ಬಿಡಿ , ಎಲ್ಲ ಕುರ್ಚಿಯ ಮಹಿಮೆ, ಅಧಿಕಾರದ ಮದ , ಪಿತ್ತ ನೆತ್ತಿಗೇರಿ ಕುಳಿತಿದೆ ಅದಕ್ಕೆ ಅವರ ಅಹಂ ಮತ್ತು ಸೊಕ್ಕಿನ ಮಾತುಗಳು ತುಂಬಾ ವರ್ಷಗಳಿಂದ ನಡೆಯುತ್ತಾ ಬಂದಿದೆ.
ಎಷ್ಟು ದಿನ ನಡೆಯುತ್ತೆ ಇಂತಹ ಅಹಂಕಾರದ ಮಾತುಗಳು , ಒಂದಲ್ಲಾ ಒಂದು ದಿನ ಇದಕ್ಕೆ ಪೂರ್ಣ ವಿರಾಮ ಹಾಕಬೇಕಲ್ಲವೆ , ಆ ಕೆಲಸವನ್ನು ಅನಂತಕುಮಾರ ಹೆಗಡೆಯವರು ಅವರ ನೀತಿಯಲ್ಲಿಯೇ ತಿರುಗಿಸಿ ಕೊಟ್ಟಿದ್ದಾರೆ , ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು ಅಷ್ಟೆ.
ಇದಕ್ಕೆ ಕಾಂಗ್ರೆಸ್ ನಾಯಕರುಗಳು ಹಾಗೂ ಕಾರ್ಯಕರ್ತರು ಬಿದಿಗಿಳಿದು ರಂಪಾಟ ಪ್ರಾರಂಭ ಮಾಡುತ್ತಿದ್ದಾರೆ ಅನಂತಣ್ಣನ ಮೇಲೆ .
ಅಲ್ಲಾರಿ ಇದಕ್ಕೆ ಮೊದಲು ಸಿದ್ದಾರಾಮಯ್ಯನವರೇ 145 ಕೋಟಿ ಜನರ ಪ್ರತಿನಿಧಿಯಾದ ಮಾನ್ಯ ಪ್ರಧಾನಿಗಳಾದ ಮೋದಿ ಜೀ ಯವರ ಮೇಲೆ ಎಷ್ಟೊಂದು ಸಲ ಏಕವಚನ ಪ್ರಯೋಗಿಸಿಲ್ಲ ? ಸರ್ಜಿಕಲ್ ಸ್ಟ್ರೈಕ್ ಬಗ್ಹೆ "
ಮೋದಿ ಏನು ಯೋಧರ ಸಂಗಡ ಗನ್ ಹಿಡಿದು ಸರ್ಜಿಕಲ್ ಸ್ಟೇಟ್ಸ್ ಮಾಡ್ಲಿಕ್ಲೆ ಹೋಗಿದ್ನಾ ? ವಿದೇಶದಿಂದ ಕಪ್ಪು ಹಣ ತಂದಿದಾನ? ನಿಮ್ಮ ಖಾತೆಗೆ ಹಣ ಹಾಕದ್ನಾ ?? ಅಂತ. ಸುಳ್ಳುಗಾರ ಈ ಮೋದಿ ಎಂದು ಎಷ್ಟು ಸಲ ಅವರ ಮೇಲೆ ಏಕವಚನದಲ್ಲಿ ದಾಳಿ ಮಾಡಿದ್ದಾರೆ
ಮಾನ್ಯ ಪ್ರಧಾನಿಗಳನ್ನೆ ಏಕವಚನದಲ್ಲಿ ಕರೆಯುವ ಇವರು ಸಂಸ್ಕಾರವಂತರಾ ?
ಕುತುಗೊಳಯ್ಯ ಕಂಡಿವಿನಿ ಸಾಕು ಅಂತ ಎಷ್ಟೋ ಶಾಸಕರುಗಳಿಗೆ ವಿಧಾನ ಸಭೆಯಲ್ಲಿ ಏಕವಚನ ಪ್ರಯೋಗಿಸಿಲ್ಲ , ಇದು ಸಂಸ್ಕಾರವಂತರ ಲಕ್ಷಣನಾ ??
ಪತ್ರಕರ್ತರು ಕೇಳುವ ಎಷ್ಟೋ ಪ್ರಶ್ನೆಗಳಿಗೆ ಉಡಾಪೆಯ ಮಾತನ್ನು ಆಡಿ , ಎಷ್ಟೋಂದು ಸಲ ಇವರು ಅವರಿಗೆ ಏಕವಚನ ಪ್ರಯೋಗಿಸಿ ಅವರನ್ನು ಮುಜುಗರ ಪಡಿಸಿಲ್ಲ ?
ಈಗ ಅನಂತಕುಮಾರ ಹೆಗಡೆ ನಿಮ್ಮ ಮೇಲೆ ಏಕವಚನ ಪ್ರಯೋಗಿಸಿದ ತಕ್ಷಣ ಈಗ ಸಂಸ್ಕಾರದ ನೆನಪಾಯಿತೆ ?
ಸ್ವಾಮಿ ಇಂದು ತಿಳಿದುಕೊಳ್ಳಿ , ಅನಂತಕುಮಾರ ಹೆಗಡೆಯವರು ಕೇವಲ ನಿಮ್ಮ ಮೇಲೆ ಮಾತ್ರ ಏಕವಚನ ಪ್ರಯೋಗಿಸಿದ್ದಾರೆ , ಬೇರೆ ಯವರ ಮೇಲೆ ಎಂದಿಗೂ ಪ್ರಯೋಗಿಸಿಲ್ಲವಲ್ಲ ಅವರು .
ಮೇಲ್ಜಾತಿಯವರು ಹೇಗೆ ಹಿಂದುಳಿದವರ ಮೇಲೆ ಎಷ್ಟೊಂದು ದಬ್ಬಾಳಿಕೆ ನಡೆಸುತ್ತದ್ದಾರೆಂದು ಅನಂತಕುಮಾರ ಹೆಗಡೆ ವಿರುಧ್ದ , ನಿಮ್ಮ ಹಿಂಬಾಲಕರನ್ನು ,ನಿಮಗೆ ಬಕೆಟ್ ಹಿಡಿಯುವವರನ್ನು ಬಿಟ್ಟು ಮೇಲ್ಜಾತಿ ಕೆಳಜಾತಿ ಎಂಬ ರಾಜಕೀಯ ಲೇಪ ಹಚ್ಚಿ ರಂಪಾ ಮಾಡುತ್ತಿದ್ದಿರಿ , ಇದೆಲ್ಲ ರಾಜ್ಯದ ಜನತೆ ಗಮನಿಸುತ್ತಿದೆ ನೆನಪಿಟ್ಟುಕೊಳ್ಳಿ
ಹೌದು , ನೀವು ಹಾಗಾದರೆ ಇದೇ ಮೇಲ್ಜಾತಿಯ ದಿವಂಗತ ಮಾನ್ಯ ರಾಮಕೃಷ್ಣ ಹೆಗಡೆಯವರ ಗರಡಿಯಲ್ಲಿ ರಾಜಕೀಯಲ್ಲಿ ಬೆಳದವರಲ್ಲವೆ ? ಆಗ ಎಲ್ಲಿ ಹೋಗಿತ್ತು ನಿಮ್ಮ ಜಾತಿ ಲೆಕ್ಕಾಚಾರ ? ಏಕೆ ಇಬ್ಬಗೆಯ ನೀತಿ ಜಾತಿ ಲೆಕ್ಕಾಚಾರದಲ್ಲಿ ??
ಇವತ್ತು ನೀವು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲಿಕ್ಕೆ ಮಾನ್ಯ ರಾಮಕೃಷ್ಣ ಹೆಗಡೆಯವರಿಂದ ಕಲಿತ ನಾಯಕತ್ವದಿಂದ . ಆದರೆ ಅವರಿಂದ ಕಲಿತ ನಾಕತ್ವದ ಗುಣ ಇದೇನಾ? ಅವರ ಒಂದು ಗುಣವನ್ನು ಅಥವಾ ರಾಜ್ಯದ ಸಮಗ್ರ ಅಭಿವೃದ್ಧಿಯ ಒಂದಾದರೂ ಚಿಂತನೆ ನಿಮ್ಮಲ್ಲಿ ಇದೆಯಾ ? ಪರಾಮರ್ಶೆ ಮಾಡಿಕೊಳ್ಳಿ ಸ್ವಾಮಿ .
ಇಷ್ಟು ದಿನ ರಾಜ್ಯದ ಬಿ.ಜೆ.ಪಿ. ಕೆಲವು ನಾಯಕರುಗಳು ನಿಮ್ಮ ಏಕವಚನದ ಪ್ರಯೋಗಕ್ಲೆ ಮೂಕ ಪ್ರೇಕ್ಷಕರಾಗಿ ಇಲ್ಲಿ ವೀಕ್ಷಿಸುತ್ತಿದ್ದರು . ಆದರೆ ಇಲ್ಲಿ ಅನಂತಕುಮಾರ ಹೆಗಡೆಯವರು ನಿಮ್ಮ ದಾಟಿಯಲ್ಲಿಯೆ ಉತ್ತರಿಸಿದ್ದಾರೆ "
ದುಷ್ಟರನ್ನು ದುಷ್ಟ ನೀತಿಯಲ್ಲಿಯೇ ಹೊಡೆದಿದ್ದಾರೆ ಅನಂತಣ್ಣನವರು ಅಷ್ಟೆ
ಕಮ್ಯುನಿಸ್ಟ್ ಮನಸ್ಥಿತಿ ಯನ್ನು ಹೊಂದಿದ ನೀವು ನಿಮಗೆಲ್ಲಿ ಅರ್ಥವಾಗುತ್ತದೆ ಇದು .
ಸತ್ಯ ಹೆಗಡೆ , ಶಿರಸಿ