udaya saakshi

udaya saakshi ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಸೀಮಿತಾವಧಿಯಲ್ಲಿ ಶಿವಮೊಗ್ಗ ಮಾತ್ರವಲ್ಲದೆ ರಾಜ್ಯಾದ್ಯಂತ ಜನಪ್ರಿಯತೆ ಸಂಪಾದಿಸಿದ 'ಉದಯ ಸಾಕ್ಷಿ' ಗೆ ನಿಮ್ಮ ಬೆಂಬಲವಿರಲಿ🙏

03/09/2026

ಕೆರೆಯೊಳಗೆ ಅಡಗಿದ್ದ ಆರೋಪಿ...! ಏನೀದು ಪ್ರಕರಣ - ಶಿವಮೊಗ್ಗ SP ಹೇಳಿದ ರಣರೋಚಕ ರಿಯಲ್ ಸ್ಟೋರಿ - ವಿಡಿಯೋ ನೋಡಿ..!!!

02/09/2026

‘ನನ್ನಂತ ಬಡ – ಕೂಲಿಕಾರ್ಮಿಕನ ಮಗ ಉನ್ನತ ಸ್ಥಾನಕ್ಕೇರಲು ಸಂವಿಧಾನ ಕಾರಣ’ : ಶಿವಮೊಗ್ಗ ತಾಪಂ ಇಓ ಪರಮೇಶ್ವರ್

ಶಿವಮೊಗ್ಗ, ಆಗಸ್ಟ್ 02: ‘ನನ್ನಂತ ಬಡ, ಕೂಲಿ ಕಾರ್ಮಿಕನ ಮಗ ದೇಶದ ತೆರಿಗೆದಾರನಾಗಿದ್ದೆನೆ. ಇದಕ್ಕೆ ಕಾರಣವಾಗಿದ್ದು ಸಂವಿಧಾನವಾಗಿದೆ’ ಎಂದು ಶಿವಮೊಗ್ಗ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಹೊರವಲಯ ಶೋಭಾ ಬಡಾವಣೆಯಲ್ಲಿ ಆಗಸ್ಟ್ 02 ರಂದು ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಆಯೋಜಿಸಲಾಗಿದ್ದ ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ಅರ್ಪಣೆ ಹಾಗೂ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾರು ಮಾಡಲಾಗದ ಕೆಲಸವನ್ನು ಯಾವ ವರ್ಗ ಮಾಡುತ್ತದೆಯೋ, ಅದೇ ಶ್ರೇಷ್ಠವಾದ ವರ್ಗವಾಗಿದೆ ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತು ಅಕ್ಷರಶಃ ಸತ್ಯವಾಗಿದೆ. ಹಾಗೆಯೇ ಸಂವಿಧಾನ ಕೂಡ ಸರ್ವರನ್ನು ಸಮಾನರಾಗಿ ನೋಡಬೇಕು ಎಂದು ಹೇಳಿದೆ. ಪೌರ ಕಾರ್ಮಿಕರ ಕಾರ್ಯ ಶ್ರೇಷ್ಠವಾದುದು ಎಂದು ಅಭಿಪ್ರಾಯಪಟ್ಟರು.

ಅಭಿವೃದ್ದಿ ಹೆಸರಲ್ಲಿ ಭಾರೀ ಪ್ರಮಾಣದಲ್ಲಿ ಪರಿಸರ ನಾಶವಾಗಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ನೇಪಾಳದಲ್ಲಿ ಸಂಭವಿಸಿದ ಭೀಕರ ಜಲ ಪ್ರಳಯ, ಹಲವು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತದಂತಹ ಪ್ರಕರಣಗಳು ಇದಕ್ಕೆ ಸಾಕ್ಷಿಯಾಗಿವೆ. ನಾವು ಪರಿಸರಕ್ಕೆ ಏನು ಕೊಡುತ್ತೆವೆಯೋ ಅದು ನಮಗೆ ವಾಪಾಸ್ ದೊರಕುತ್ತದೆ ಎಂಬುವುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ಪ್ರದೇಶಗಳ ಸ್ವಚ್ಛತೆಗೆ ಹಗಲಿರುಳು ಶ್ರಮಿಸುವ ಮಹಿಳಾ ಪೌರ ಕಾರ್ಮಿಕರಿಗೆ ಗೌರವಿಸುವ ಮೂಲಕ ಅವರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸುವ ನಿವಾಸಿಗಳ ಕಾರ್ಯ ಅಭಿನಂದನೀಯ. ಹಾಗೆಯೇ ಪರಸರ ಸಂರಕ್ಷಣೆಗೆ ಕೈಜೋಡಿಸಿರುವುದು ಸ್ವಾಗತಾರ್ಹ ಎಂದು ಇಓ ಪರಮೇಶ್ವರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸಹ ಕಾರ್ಯದರ್ಶಿ ಸಂತೋಷ್ ಕುಮಾರ್ ಅವರು ಮಾತನಾಡಿ, ‘ನಾವೆಲ್ಲರು ಒಂದೇ ಎಂಬ ಭಾವನೆ ಮೂಡಿದಾಗ ಮಾತ್ರ ಸಮಾಜ ಪ್ರಗತಿಯಲ್ಲಿ ಮುನ್ನಡೆಯಲು ಸಾಧ್ಯವಾಗಿದೆ. ಸಮ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಚಿತ್ತ ಹರಿಸೋಣ’ ಎಂದು ಕರೆ ನೀಡಿದರು.

ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ರಾಜಪ್ಪ ಹೆಚ್ ಅವರು ಮಾತನಾಡಿ, ‘ಆಡಳಿತ ಹಾಗೂ ನಾಗರಿಕರ ಸಹಕಾರದಿಂದ ಮಾತ್ರ ಅಭಿವೃದ್ದಿ ಸಾಧ್ಯವಾಗಲಿದೆ. ಸಮಾಜಮುಖಿ ಕಾರ್ಯಗಳನ್ನು ನಿವಾಸಿಗಳು ಮಾಡುತ್ತಿರುವುದು ಅಭಿನಂದನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರ ಬರಹಗಾರರ ಸಂಘದ ಅಧ್ಯಕ್ಷರಾದ ಜಿ ಎಂ ಸುರೇಶ್ ಬಾಬು, ಸಮಾಜ ಸೇವಕರಾದ ನಿವೃತ್ತ ಶಿಕ್ಷಕ ಮಹೇಶ್ ಎಲಿಗಾರ್ ಹಾಗೂ ನಿವಾಸಿಗಳ ಸಂಘದ ಗೌರವಾಧ್ಯಕ್ಷರಾದ ರಾಮಚಂದ್ರಪ್ಪ ಅವರು ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಸಮಾರಂಭದಲ್ಲಿ ಪಾಲಿಕೆ ಮೇಸ್ತಿ ನೇತ್ರಾವತಿ, ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಹಿರಿಯ ಮುಖಂಡರಾದ ಕೊಟ್ರೇಶಪ್ಪ, ನಿವಾಸಿಗಳಾದ ಷಡಾಕ್ಷರಿ, ಪಾಟೀಲ್, ಜಯಮ್ಮ, ಬಸಪ್ಪ, ನಾಗರತ್ನ, ಯುವ ಮುಖಂಡ ಮೇಸ್ತ್ರಿ ನಾಗರಾಜ್ ನಾಯ್ಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

02/09/2026

shimoga news | ಶಿವಮೊಗ್ಗ | ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ಅರ್ಪಿಸಿ ಗೌರವಿಸಿದ ನಾಗರಿಕರು! |

02/09/2026

shimoga news | ಶಿವಮೊಗ್ಗ : ಫುಡ್ ಕೋರ್ಟ್ ಗಳಿಗೆ ದಿಡೀರ್ ಭೇಟಿ – ಆಹಾರದ ಗುಣಮಟ್ಟ ಪರಿಶೀಲನೆ! |

02/09/2026

shimoga news | ಶಿವಮೊಗ್ಗ : ಫುಡ್ ಕೋರ್ಟ್ ಗಳಿಗೆ ದಿಡೀರ್ ಭೇಟಿ – ಆಹಾರದ ಗುಣಮಟ್ಟ ಪರಿಶೀಲನೆ! |

👉 ಪಾಲಿಕೆ – ಗ್ರಾಪಂ ಮಹಿಳಾ ಪೌರ ಕಾರ್ಮಿಕರಿಗೆ ನಾಗರಿಕರ ಬಾಗಿನದ ಗೌರವ! 👉 ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಶಿವಮೊಗ್ಗದ ಶೋಭಾ ಬಡಾವಣೆವರದಿ ...
02/09/2026

👉 ಪಾಲಿಕೆ – ಗ್ರಾಪಂ ಮಹಿಳಾ ಪೌರ ಕಾರ್ಮಿಕರಿಗೆ ನಾಗರಿಕರ ಬಾಗಿನದ ಗೌರವ!
👉 ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಶಿವಮೊಗ್ಗದ ಶೋಭಾ ಬಡಾವಣೆ

ವರದಿ : ಬಿ. ರೇಣುಕೇಶ್

ಶಿವಮೊಗ್ಗ, ಸೆಪ್ಟೆಂಬರ್ 02: ಸ್ವಚ್ಛತಾ ಕಾರ್ಯದಲ್ಲಿ ಹಗಲಿರುಳು ಶ್ರಮಿಸುವ ಪೌರ ಕಾರ್ಮಿಕ ಮಹಿಳೆಯರಿಗೆ, ಬಾಗಿನ ಅರ್ಪಿಸಿ ಗೌರವ ಸಲ್ಲಿಸುವ ಅಪರೂಪದ ಕಾರ್ಯಕ್ರಮವೊಂದು ಶಿವಮೊಗ್ಗ ನಗರದ ಶೋಭಾ ಲೇಔಟ್ ನಲ್ಲಿ ಆಗಸ್ಟ್ 02 ರಂದು ಆಯೋಜನೆಯಾಗಿತ್ತು.

ಕೆಹೆಚ್’ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಪಾಲಿಕೆ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಮಹಾನಗರ ಪಾಲಿಕೆ ಹಾಗೂ ಅಬ್ಬಲಗೆರೆ ಗ್ರಾಮ ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸ್ವಚ್ಛತಾ ಸಿಬ್ಬಂದಿಗಳು ಬಾಗಿನ ಸ್ವೀಕರಿಸಿದರು.

ಇದೇ ವೇಳೆ ಬಡಾವಣೆಯ ಉದ್ಯಾನವನದಲ್ಲಿ ‘ಪ್ರಕೃತಿಗೆ ಬಾಗಿನ’ ಎಂಬ ಪರಿಕಲ್ಪನೆಯಡಿ, ಗಿಡ ನೆಡುವ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು.

ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪರಮೇಶ್ವರ್ ಅವರು ಗಿಡ ನೆಟ್ಟು, ನೀರು ಹಾಕುವ ಮೂಲಕ ವಿಧ್ಯುಕ್ತವಾಗಿ ಕಾರ್ಯಕ್ರಮ ಉದ್ಘಾಟಿಸಿದರು. ತದನಂತರ 8 ಜನ ಪೌರ ಕಾರ್ಮಿಕ ಮಹಿಳೆಯರಿಗೆ ಬಾಗಿನ ಅರ್ಪಿಸಿದರು.

ತಾಪಂ ಇಓ ಪರಮೇಶ್ವರ್ ಅವರು ಮಾತನಾಡಿ, ‘ನಿಜಕ್ಕೂ ಇದೊಂದು ವಿನೂನತ ಕಾರ್ಯಕ್ರಮವಾಗಿದೆ. ನಮ್ಮ ಪ್ರದೇಶಗಳ ಸ್ವಚ್ಛತೆಗೆ ಹಗಲಿರುಳು ಶ್ರಮಿಸುವ ಮಹಿಳಾ ಪೌರ ಕಾರ್ಮಿಕರಿಗೆ ಗೌರವಿಸುವ ಮೂಲಕ ಅವರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸುವ ನಿವಾಸಿಗಳ ಕಾರ್ಯ ಅಭಿನಂದನೀಯ. ಹಾಗೆಯೇ ಪರಸರ ಸಂರಕ್ಷಣೆಗೆ ಕೈಜೋಡಿಸಿರುವುದು ಸ್ವಾಗತಾರ್ಹ ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸಹ ಕಾರ್ಯದರ್ಶಿ ಸಂತೋಷ್ ಕುಮಾರ್ ಅವರು ಮಾತನಾಡಿ, ‘ಪೌರ ಕಾರ್ಮಿಕರ ನಿಸ್ವಾರ್ಥ ಸೇವೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ಅವರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಸಂತಸಕರ’ ಎಂದು ತಿಳಿಸಿದರು.

ಪಿಡಿಓ ರಾಜಪ್ಪ ಹೆಚ್ ಅವರು ಮಾತನಾಡಿ, ‘ಆಡಳಿತದೊಂದಿಗೆ ನಾಗರಿಕರು ಕೈ ಜೋಡಿಸಿದಾಗ ಸಮಾಜದಲ್ಲಿ ಹೊಸ ಬದಲಾವಣೆ ಸಾಧ್ಯವಾಗಲಿದೆ. ಪ್ರಸ್ತುತ ನಾಗರಿಕರು ಹಮ್ಮಿಕೊಂಡಿರುವ ಸಮಾಜಮುಖಿ ಕಾರ್ಯಕ್ರಮವು ಮಾದರಿಯಾಗಿದೆ’ ಎಂದು ಹೇಳಿದರು.

ಜಿಲ್ಲಾ ಅಧಿಕೃತ ಪತ್ರ ಬರಹಗಾರರ ಸಂಘದ ಅಧ್ಯಕ್ಷರಾದ ಜಿ ಎಂ ಸುರೇಶ್ ಬಾಬು ಅವರು ಮಾತನಾಡಿ, ‘ಪರಿಸರ ಸಂರಕ್ಷಣೆಯ ಅಗತ್ಯತೆ ಪ್ರಸ್ತುತ ಹೆಚ್ಚಿದೆ. ನಗರ ಪ್ರದೇಶಗಳಲ್ಲಿ ಗದ್ದೆ-ತೋಟಗಳು ಕಣ್ಮರೆಯಾಗಿ, ಲೇಔಟ್ ಗಳು ತಲೆ ಎತ್ತುತ್ತಿವೆ. ಪ್ರತಿಯೋರ್ವರು ಗಿಡ ಮರ ಸಂರಕ್ಷಣೆಯ ಪ್ರತಿಜ್ಞೆ ಮಾಡಬೇಕಾಗಿದೆ ಎಂದರು.

ನಿವಾಸಿಗಳ ಸಂಘದ ಗೌರವಾಧ್ಯಕ್ಷರಾದ ರಾಮಚಂದ್ರಪ್ಪ ಅವರು ಮಾತನಾಡಿ, ‘ಪೌರ ಕಾರ್ಮಿಕರ ಸೇವೆ ಅವಿಸ್ಮರಣೀಯ. ಇವರೆಲ್ಲರೂ ನಮ್ಮ ಸಹೋದರ – ಸಹೋದರರಿಯರಿದ್ದಂತೆ. ಮಹಿಳಾ ಪೌರ ಕಾರ್ಮಿಕರು ನಮ್ಮ ಕುಟುಂಬದವರೆಂಬ ಭಾವನೆಯಿಂದ ಬಾಗಿನ ಅರ್ಪಿಸುವ ಕಾರ್ಯ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಸಮಾಜ ಸೇವಕರಾದ ನಿವೃತ್ತ ಶಿಕ್ಷಕ ಮಹೇಶ್ ಎಲಿಗಾರ್ ಅವರು ಮಾತನಾಡಿ, ಸಮಾಜದಲ್ಲಿ ಮೇಲು – ಕೀಳು ಭಾವನೆಗಳು ತೊಲಗಬೇಕು. ನಾವೆಲ್ಲರೂ ಒಂದೇ ಎಂಬ ಮನೋಭಾವ ಬೆಳೆಯಬೇಕು. ಆಗ ಮಾತ್ರ ನಮ್ಮ ಸಮಾಜ ಪ್ರಗತಿಯತ್ತ ಮುನ್ನಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಪೌರ ಕಾರ್ಮಿಕರಿಗೆ ಯುವ ಮುಖಂಡ ಗುರು ಚರಣ್ ಅವರು ಅಕ್ಕಿ ಪ್ಯಾಕೆಟ್ ವಿತರಿಸಿದರು. ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಮುಖಂಡ ಕೊಟ್ರೇಶಪ್ಪ ಅವರು ವಂದನಾರ್ಪಣೆ ನೆರವೇರಸಿದರು.

ಸಮಾರಂಭದಲ್ಲಿ ಪಾಲಿಕೆ 1 ನೇ ವಾರ್ಡ್ ಮೇಸ್ತಿ ನೇತ್ರಾವತಿ, ನಿವಾಸಿಗಳಾದ ಷಡಾಕ್ಷರಿ, ಪಾಟೀಲ್, ಜಯಮ್ಮ, ಬಸಪ್ಪ, ನಾಗರತ್ನ, ಯುವ ಮುಖಂಡ ಮೇಸ್ತ್ರಿ ನಾಗರಾಜ್ ನಾಯ್ಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಶಿವಮೊಗ್ಗ : 1.9.2026 ರಂದು ಶಿವಮೊಗ್ಗ ನಗರದ ಮೀನಾಕ್ಷಿ ಭವನ ಸುತ್ತಲಿನ  ಪ್ರದೇಶದಲ್ಲಿ COTPA ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ದಾಳಿಗಳನ...
02/09/2026

ಶಿವಮೊಗ್ಗ : 1.9.2026 ರಂದು ಶಿವಮೊಗ್ಗ ನಗರದ ಮೀನಾಕ್ಷಿ ಭವನ ಸುತ್ತಲಿನ ಪ್ರದೇಶದಲ್ಲಿ COTPA ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ದಾಳಿಗಳನ್ನು ಹಮ್ಮಿಕೊಳ್ಳಲಾಯಿತು. ಒಟ್ಟು 14 ಪ್ರಕರಣಗಳನ್ನು ದಾಖಲಿಸಿ 2700 ದಂಡವನ್ನು ಸಂಗ್ರಹಿಸಲಾಯಿತು. ತಂಡದಲ್ಲಿ ತಂಡದ ನೇತೃತ್ವವನ್ನು ಡಾ. ಚಂದ್ರಶೇಖರ್ ತಾಲ್ಲೂಕು ಆರೋಗ್ಯ ಅಧಿಕಾರಿಗಳು ವಹಿಸಿದ್ದರು. ಹೇಮಂತ್ ರಾಜ್ ಅರಸ್ ಜಿಲ್ಲಾ ಸಲಹೆಗಾರರು, ರವಿರಾಜ್ ಸಮಾಜ ಕಾರ್ಯಕರ್ತರು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಆರೋಗ್ಯ ಇಲಾಖೆ ಇವರು ಭಾಗವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು. ದಾಳಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಸೇವನೆ ಉಂಟಾಗುವ ದುಷ್ಪರಿಣಾಮಗಳು ಹಾಗೂ COTPA ಕಾಯ್ದೆ ಕುರಿತು ಅರಿವು ಮೂಡಿಸಲಾಯಿತು.

Address

Shivamogga
Shimoga
577204

Alerts

Be the first to know and let us send you an email when udaya saakshi posts news and promotions. Your email address will not be used for any other purpose, and you can unsubscribe at any time.

Contact The Business

Send a message to udaya saakshi:

Shortcuts

Share