DL Fashion Designer

DL Fashion Designer Contact information, map and directions, contact form, opening hours, services, ratings, photos, videos and announcements from DL Fashion Designer, Social Media Agency, shimoga, Shimoga.

04/05/2024

ಶಿವಮೊಗ್ಗ : ಹುಬ್ಬಳ್ಳಿಯ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಹಾಳ ದಾರುಣ ಹತ್ಯೆಯು ರಾಜ್ಯದಲ್ಲಿನ ಮಹಿಳಾ ವಿದ್ಯಾರ್ಥಿನಿಯರ ಸುರಕ್ಷತೆಯ ಪ್ರಶ್ನೆಯಾಗಿರುವುದರಿಂದ ಹತ್ಯೆಯ ಆರೋಪಿ ಫಯಾಜ್ ಹಾಗೂ ಆತನಿಗೆ ಸಹಕರಿಸಿರುವವರ ಮೇಲೆ ಕಠೀಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಕಾಲೇಜು ಕ್ಯಾಂಪಸ್ ಅಭದ್ರೆತೆಯು ಈ ಘಟನೆಗೆ ಕಾರಣವಾಗಿರುವುದರಿಂದ ಆಡಳಿತಯ ಮಂಡಳಿಯ ಮೇಲೂ ಕೇಸು ದಾಖಲಿಸಬೇಕು, ಇದೇ ಘಟನೆ ಆಧಾರವಾಗಿಟ್ಟುಕೊಂಡು ರಾಜ್ಯದ ಸರಕಾರಿ ಹಾಗೂ ಅರೆಸರಕಾರಿ, ಖಾಸಗಿ ಕಾಲೇಜು ಕ್ಯಾಂಪಸ್‌ಗಳ ವಿದ್ಯಾರ್ಥಿಗಳ ಭದ್ರತೆಯನ್ನು ಪಶ್ನಿಸಿ ನೋಟಿಸ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಸ್ಥೆಯು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮಾನವ ಹಕ್ಕುಗಳ ಆಯೋಗಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ, ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ದೂರು-ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜ್ಯೋತಿ ಅರಳಪ್ಪ, ಗೌರವ ಅಧ್ಯಕ್ಷರಾದ ಮುಕ್ತಿಯಾರ್ ಅಹ್ಮದ್, ಉಪಾಧ್ಯಕ್ಷರಾದ ಕೆ.ಎಸ್ ಶಶಿ, ಪ್ರಧಾನ ಕಾರ್ಯದರ್ಶಿಗಳಾದ ಗಾರಾ.ಶ್ರೀನಿವಾಸ್ ಸಹ ಕಾರ್ಯದರ್ಶಿ ಚಿರಂಜೀವಿ ಬಾಬು ಹಾಗೂ ನಿರ್ಧೇಶಕರುಗಳಾದ ಸ್ವಪ್ನ ಸಂತೋಷ್ ಗೌಡ, ಮಮತಾ ಶಿವಣ್ಣ, ರುದ್ರೇಶ್ ಯಾದವ್, ಪರಮೇಶ್ವರ್, ಎಲ್,ಕೆ, ಚಂದ್ರಹಾಸ್ ಎನ್ ರಾಯ್ಕರ್, ಅನೀಲ್ ಕುಮಾರ್‌ರವರುಗಳು ಉಪಸ್ಥಿತರಿದ್ದರು.

04/05/2024
03/05/2024
ಶಿವಮೊಗ್ಗ :  ಹಾಸನದ ಸಂಸದರಾದ ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಿಸಿದ  ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಪ್ರಕರಣವು ಮನುಷ್ಯ ಬದುಕಿನ ಮೇಲಿನ ವ...
03/05/2024

ಶಿವಮೊಗ್ಗ : ಹಾಸನದ ಸಂಸದರಾದ ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಪ್ರಕರಣವು ಮನುಷ್ಯ ಬದುಕಿನ ಮೇಲಿನ ವಿಕೃತಕಾರಿ ಸೆಕ್ಸ್ ಭಯೋತ್ಪಾದನೆ ಘಟನೆಯಾಗಿರುವುದರಿಂದ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಅಧ್ಯಕ್ಷರು, ಮಾನವ ಹಕ್ಕುಗಳ ಆಯೋಗ, ಹಾಗೂ ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳವರಿಗೆ ಪ್ರತ್ಯೇಕ ದೂರು ಮನವಿಯನ್ನು ನೀಡಿತು.

ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ನೀಡಿದ ಮನವಿಯಲ್ಲಿ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನವರನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಹಾಗೂ ಈ ಪ್ರಕರಣದಲ್ಲಿರುವ ನೂರಾರು ಸಂತ್ರಸ್ಥೆಯರಿಗೆ ಸೂಕ್ತ ಪೊಲೀಸ್, ಸಾಮಾಜಿಕ ಭದ್ರತೆ ನೀಡಬೇಕು, ಮೊಬೈಲ್‌ನಲ್ಲಿದ್ದ ೨೮೦೦ಕ್ಕೂ ಹೆಚ್ಚು ಅಶ್ಲೀಲ ವೀಡಿಯೋ ತುಣುಕುಗಳನ್ನು ರಾತ್ರೋರಾತ್ರಿ ಸಾವಿರಾರು ಪೆನ್ ಡ್ರೈವ್‌ನಲ್ಲಿ ಡೌನ್‌ಲೋಡ್ ಮಾಡಿ ಹಂಚಿಕೆ ಮಾಡಿರುವ ಕಿಡಿಗೇಡಿಗಳ ಮೇಲೆ ಕಾನೂನು ರಿತ್ಯಾ ಪ್ರಕರಣ ದಾಖಲಿಸಿ ತನಿಖಿಸಬೇಕು ಎಂದು ಆಗ್ರಹಿಸಿದೆ.

ಈ ಪ್ರಕರಣದ ಸುದ್ದಿಯನ್ನು ಟಿಆರ್‌ಪಿಗಾಗಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಯಥಾವತ್ತಾಗಿ ಬಿತ್ತರಿಸುತ್ತಿರುವ ಸುದ್ದಿವಾಹಿನಿ, ಸಾಮಾಜಿಕ ಜಾಲತಾಣಗಳ ಮೇಲೆ ಕಡಿವಾಣವಾಕಬೇಕು, ಇದೊಂದು ಮಹಿಳಾ ಗೌರವ ಪ್ರಧಾನವಾದ ದೇಶದಲ್ಲಿ ಮೊಟ್ಟ ಮೊದಲನೆ ಭಾರಿಗೆ ಮಹಿಳೆಯರನ್ನು ಈ ರೀತಿಯಾಗಿ ತನ್ನ ಕಾಮತೃಷೆಗೆ ಬಳಸಿಕೊಂಡ ಪ್ರಕರಣವಾಗಿದ್ದು ಯಾವ ಉದ್ದೇಶಕ್ಕಾಗಿ ಇದನ್ನು ಚಿತ್ರಿಕರಿಸಿಕೊಂಡಿದ್ದರು ಎನ್ನುವುದರ ಬಗ್ಗೆಯ ಸೂಕ್ತ ತನಿಖೆಗೊಳಪಡಿಸಬೇಕು, ೨೦೨೩ರ ಸಾಲಿನಿಂದಲೂ ಈ ಪ್ರಕರಣದ ಬಗ್ಗೆ ನಾಗರೀಕ ವಲಯದಲ್ಲಿ ಸುದ್ದಿಗಳಿದ್ದರು ಹಾಸನದ ಜಿಲ್ಲಾ ರಕ್ಷಣಾಧಿಕಾರಿಗಳವರು ತಾತ್ಸಾರತೆ ಹೊಂದಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿರುವುದರಿಂದ ಇವರನ್ನು ಕೂಡ ಈ ಪ್ರಕರಣದಲ್ಲಿ ತನಿಖಿಸಬೇಕು, ಇದೊಂದು ಮನುಷ್ಯ ಬದುಕಿನ ಮೇಲಿನ ವಿಕೃತಕಾರಿ ಸೆಕ್ಸ್ ಭಯೋತ್ಪಾದನೆಯಾಗಿರುವುದರಿಂದ ಇದನ್ನು ಗಂಭೀರತೆಯಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ಖುದ್ದು ಮಾನವ ಹಕ್ಕುಗಳ ಆಯೋಗ ಕೇಸು ದಾಖಲಿಸಿಕೊಳ್ಳಬೇಕು ಹಾಗೂ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖಿಸಲು ಆದೇಶಿಸಬೇಕೆಂದು ತಿಳಿಸಿದೆ.

ಈ ದೂರು ಮನವಿಯ ಸಂದರ್ಭದಲ್ಲಿ ಅಧ್ಯಕ್ಷರಾದ ಜ್ಯೋತಿ ಅರಳಪ್ಪ, ಗೌರವ ಅಧ್ಯಕ್ಷರಾದ ಮುಕ್ತಿಯಾರ್ ಅಹ್ಮದ್, ಉಪಾಧ್ಯಕ್ಷರಾದ ಕೆ.ಎಸ್ ಶಶಿ, ಪ್ರಧಾನ ಕಾರ್ಯದರ್ಶಿಗಳಾದ ಗಾರಾ.ಶ್ರೀನಿವಾಸ್ ಸಹ ಕಾರ್ಯದರ್ಶಿ ಚಿರಂಜೀವಿ ಬಾಬು ಹಾಗೂ ನಿರ್ಧೇಶಕರುಗಳಾದ ಸ್ವಪ್ನ ಸಂತೋಷ್ ಗೌಡ, ಮಮತಾ ಶಿವಣ್ಣ, ರುದ್ರೇಶ್ ಯಾದವ್, ಪರಮೇಶ್ವರ್, ಎಲ್,ಕೆ, ಚಂದ್ರಹಾಸ್ ಎನ್ ರಾಯ್ಕರ್, ಅನೀಲ್ ಕುಮಾರ್‌ರವರುಗಳು ಉಪಸ್ಥಿತರಿದ್ದರು.

ಶಿವಮೊಗ್ಗ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ: ಸಂತ್ರಸ್ತೆಯರ ರಕ್ಷಣೆಗೆ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಸ್ಥೆ ನಗರದಲ್ಲಿ ಜಿಲ್ಲಾಧಿಕಾರಿಗೆ ಮನವಿ https://public.app/video/sp_i0wplsh2yjgwd?utm_medium=android&utm_source=share

Address

Shimoga
Shimoga

Website

Alerts

Be the first to know and let us send you an email when DL Fashion Designer posts news and promotions. Your email address will not be used for any other purpose, and you can unsubscribe at any time.

Share