19/09/2025
Youths Save Girl from Choking on Chewing Gum Viral Video ಜೀವ ಉಳಿಸಿದ ಯುವಕರು
, , , , ,
ಕೆಲವೊಮ್ಮೆ ಜೀವಕ್ಕೆ ಕಂಟಕವಾಗುತ್ತದೆ ಚ್ಯೂಯಿಂಗ್ ಗಮ್ ಎನ್ನುವುದಕ್ಕೆ ಸದ್ಯ ಕೇರಳದಲ್ಲಿ ನಡೆದ ಘಟನೆಯ ವಿಡಿಯೋ ಸಾಕ್ಷ್ಯವಾಗುತ್ತಿದೆ. ಈ ಘಟನೆಯಲ್ಲಿ ಮಗುವಿನ ಪ್ರಜ್ಞೆ ಹಾಗೂ ಅಲ್ಲಿದ್ದವರ ಮಾನವೀಯತೆಯ ಎರಡು ಸಹ ದೃಶ್ಯದಲ್ಲಿ ವಿಶೇಷವಾಗಿ ಕಂಡಿದೆ.
ಕಣ್ಣೂರು ಜಿಲ್ಲೆಯ ಪಳಯಂಗಡಿ ಪಲ್ಲಿಕ್ಕರದಲ್ಲಿ ಚೂಯಿಂಗ್ ಗಮ್ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟುತ್ತಿದ್ದ ಎಂಟು ವರ್ಷದ ಬಾಲಕಿಯ ಜೀವವನ್ನು ಅಲ್ಲಿಯೇ ಇದ್ದ ಯುವಕರು ಕಾಪಾಡಿದ್ದಾರೆ.ಮೇಲಾಗಿ ಘಟನೆಯ ದೃಶ್ಯ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ವತಃ ಕೇರಳ ಸರ್ಕಾರದ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಅವರು ವಿಡಿಯೋವನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ
ನಡೆದಿದ್ದೇನು?
ಇಲ್ಲಿನ ರಸ್ತೆ ಪಕ್ಕದಲ್ಲಿ ಕೆಲ ಯುವಕರು ತಮ್ಮ ಪಾಡಿಗೆ ನಿಂತಿದ್ದರು. ಅದೇ ಸಂದರ್ಭದಲ್ಲಿ ಇನ್ನೊಂದು ಬದಿಯಲ್ಲಿ ಸೈಕಲ್ ತುಳಿಯುತ್ತಾ ಬಂದ ಬಾಲಕಿಗೆ ತಾನು ತಿನ್ನುತ್ತಿದ್ದ ಚ್ಯೂಯಿಂಗ್ ಗಂಟಲಿಗೆ ಹೋಗಿ ಸಿಕ್ಕಿರುವುದು ಅನುಭವಕ್ಕೆ ಬಂದಿದೆ. ಅಲ್ಲದೆ ಉಸಿರಾಡಲು ಸಮಸ್ಯೆಯಾಗುತ್ತಿರುವುದನ್ನ ಗಮನಿಸಿದ ಅವಳು ಸೈಕಲ್ ತುಳಿದು ಅಲ್ಲಿದ್ದ ಯುವಕರ ಬಳಿ ಬಂದು ಗಂಟಲಿಗೆ ಚ್ಯೂಯಿಂಗ್ ಗಮ್ ಸಿಕ್ಕಿಬಿದ್ದಿದೆ ಎಂದಿದ್ದಾಳೆ. ಇದನ್ನು ತಿಳಿಯುತ್ತಲೇ ಯುವಕರು ಆಕೆ ಬೆನ್ನು ಪಡಿದು ಹೊಟ್ಟೆ ಒತ್ತಿ ಚ್ಯೂಯಿಂಗ್ ಹೊರಬೀಳುವಂತೆ ಮಾಡಿದ್ದಾರೆ. ಪುಟಾಣಿ ಬಾಯಿಂದ ಚ್ಯೂಯಿಗ್ ಹೊರಬಿದ್ದು ಆಕೆ ನಿರಾಳವಾದ ಹೊತ್ತಲ್ಲಿ ಆಕೆಯನ್ನು ಬಚಾವ್ ಮಾಡಲು ಪ್ರಯತ್ನಿಸಿದ್ದ ಯುವಕರ ಮುಖದಲ್ಲಿ ಕಾಣುತ್ತಿದ್ದ ನಿಟ್ಟುಸಿರು ಮಾನವೀಯತೆಯ ಮುಖವನ್ನು ತೋರುತ್ತಿತ್ತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಯುವಕರನ್ನು ಹೊಗಳಿದ್ದಾರೆ