Kannada Medium 24x7

Kannada Medium 24x7 kannadamedium.news brings the latest Kannada news & headlines.

Please do Like the page to get flash news in Kannada politics, sports, Kannada movies, youth, employment, culture and more in your favorite language Kannada.

13/12/2025

ಭದ್ರಾವತಿಯಲ್ಲಿ ಭೀಕರ ಜೋಡಿಕೊಲೆ | ಪ್ರೀತಿ ವಿಚಾರದಲ್ಲಿ ಅನುಮಾನ | ಇಬ್ಬರನ್ನು ಹತ್ಯೆ ಮಾಡಿದ ಹುಡುಗಿಯ ಅಣ್ಣ ಹಾಗು ಆತನ ಸ್ನೇಹಿತರು

13/12/2025

Belgaum ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ | ಡಿಕೆಶಿ-ಸಿದ್ದರಾಮಯ್ಯ ಒಬ್ಬರಿಗೊಬ್ಬರು ಕತ್ತಿ ಮಸೆತ

ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಹಣ ಹೊಂದಿಸಲಾಗುತ್ತಿಲ್ಲ | ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿಕೆ

13/12/2025

Shimoga ಜಿಲ್ಲಾ BJP ಕಚೇರಿಯಲ್ಲಿ ಕಾರ್ಯಕಾರಣಿ ಸಭೆ | Congress ಪಕ್ಷ ದೇಶದಲ್ಲಿ ವಿಫಲವಾದ ಪಕ್ಷ

ಅಧಿಕಾರ ನಡೆಸುವಲ್ಲಿ ಸಿದ್ದರಾಮಯ್ಯ ವಿಫಲ | ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ

13/12/2025

Hl @ 4 | ಭದ್ರಾವತಿಯಲ್ಲಿ ರಕ್ತದೋಕುಳಿ..! | ಹೋರಾಟಕ್ಕೆ ಶಿವಮೊಗ್ಗ ವಿಶೇಷ ಜಿಲ್ಲೆ | ರಾಜ್ಯದಲ್ಲಿ ಕುಸಿದ ಉಷ್ಣಾಂಶ

13/12/2025

LIVE | NEWS@ 4 ಭದ್ರಾವತಿಯಲ್ಲಿ ರಕ್ತದೋಕುಳಿ..! | ಹೋರಾಟಕ್ಕೆ ಶಿವಮೊಗ್ಗ ವಿಶೇಷ ಜಿಲ್ಲೆ | ರಾಜ್ಯದಲ್ಲಿ ಕುಸಿದ ಉಷ್ಣಾಂಶ

13/12/2025

ಸೋಷಿಯಲ್‌ ಮೀಡಿಯಾ ಇನ್ಫ್ಲುಯೆನ್ಸರ್‌ ಜೊತೆ ರೀಲ್ಸ್‌ |
ಸೋಷಿಯಲ್ ಮೀಡಿಯಾದಲ್ಲಿ ಮದ್ಯಪಾನ ಪ್ರಚಾರಕ್ಕೆ ಸಂಬಂಧಿಸಿದಂತೆ ಗದಗ (ಉಚಿಜಚಿg) ಜಿಲ್ಲೆಯ ರೋಣ ತಾಲೂಕಿನ ಆಹಾರ ಸುರಕ್ಷತಾ ಅಧಿಕಾರಿಯೊಬ್ಬರ ರೀಲ್ಸ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಲಕ್ಷಾಂತರ ಫಾಲೋರ‍್ಸ್ ಹೊಂದಿರುವ ಇನ್​ಪ್ಲುಯೆನ್ಸರ್ ಒಬ್ಬರ ಇನ್ಸ್ಟಾಗ್ರಾಂ ಖಾತೆಯಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ವೀಡಿಯೋ ವೈರಲ್ ಆಗಿದೆ. ಆಹಾರ ಸುರಕ್ಷತಾ ಅಧಿಕಾರಿ ಚೇತನ್ ಎಸ್, ಬಿಯರ್ ಹಾಗೂ ವಿಸ್ಕಿಯೊಂದಿಗೆ ರೀಲ್ಸ್ ಮಾಡಿ ಮದ್ಯಪಾನಕ್ಕೆ ಉತ್ತೇಜನ ನೀಡುತ್ತಿರುವ ಆರೋಪ ಎದುರಿಸುತ್ತಿದ್ದು, ಈ ರೀಲ್ಸ್‌ಗಳನ್ನು ಬಾಗಲಕೋಟೆ ಮೂಲದ ಕಂಟೆಂಟ್ ಕ್ರಿಯೇಟರ್ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನಾಗರಾಜ್ ನಿಲುಗಲ್ ಅವರೊಂದಿಗೆ ಸೇರಿ ಮಾಡಲಾಗಿದೆ ಎನ್ನಲಾಗಿದೆ. ಲಕ್ಷಾಂತರ ಫಾಲೋರ‍್ಸ್ ಹೊಂದಿರುವ ನಾಗರಾಜ್ ನಿಲುಗಲ್​ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವೀಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಖುಷಿಯಾಗಿರೋದಕ್ಕೆ ಬಿಯರ್ ಕಾರಣ ಎಂಬ ಸಂದೇಶವನ್ನು ಪರೋಕ್ಷವಾಗಿ ಬಿಂಬಿಸಲಾಗಿದೆ. ಕುಟುಂಬ ಸಮೇತ ಕುಳಿತು ಮದ್ಯಪಾನ ಮಾಡುವ ರೀತಿಯಲ್ಲಿ ಗ್ಲಾಸ್ ಹಾಗೂ ಬಾಟಲ್‌ಗಳನ್ನು ಪ್ರರ‍್ಶಿಸಿ ರೀಲ್ಸ್ ಮಾಡಿರುವುದು ಸರ‍್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

13/12/2025

ದೊಡ್ಡಬಳ್ಳಾಪುರದಲ್ಲಿ ರಾಸುಗಳ ಜಾತ್ರೆ | ಜಾತ್ರೆಯಲ್ಲಿ ವಿವಿಧ ತಳಿಯ ಎತ್ತುಗಳು ಭಾಗಿ |
ಬೆ0ಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಘಾಟಿ ಸುಬ್ರಮಣ್ಯ ರಾಸುಗಳ ಜಾತ್ರೆ ಆರಂಭವಾಗಿದ್ದು ರಾಜ್ಯ ಸೇರಿದಂತೆ ಹೊರ ರಾಜ್ಯದಿಂದ ರಾಸುಗಳು, ರೈತರು ಆಗಮಿಸುತ್ತಿದ್ದಾರೆ. ಅಮೃತ ಮಹಲ್ ಹಳ್ಳಿಕಾರ್ ಸೇರಿದಂತೆ ವಿವಿಧ ತಳಿಯ ಎತ್ತುಗಳು ಜಾತ್ರಯಲ್ಲಿ ಭಾಗಿಯಾಗಲಿವೆ. ಜಾತ್ರೆಯಲ್ಲಿ ರಾಸುಗಳ ಖರೀದಿ ಮತ್ತು ಮಾರಾಟಕ್ಕೆಬಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೂಬುಗೆರೆ ಹೋಬಳಿ ಬಿಜೆಪಿ ಘಟಕದಿಂದ ಉಚಿತ ಅನ್ನ ಸಂತರ್ಪಣೆ ಕಾರ್ಯವನ್ನ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಮುಖಂಡರಾದ ಪ್ರತಾಪ್ ಹಾಗೂ ಹೋಬಳಿ ಘಟಕದ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿಯವರಿಂದ ಅನ್ನ ಸಂತರ್ಪಣೆ ಕಾರ್ಯ ನಡೆಯಲಿದೆ. ಈ ಅನ್ನ ಸಂತರ್ಪಣೆ ಕಾರ್ಯ ಜಾತ್ರೆ ಮುಗಿಯುವ ವರೆಗೂ ನಡೆಯಲಿದೆ.

13/12/2025

ಶಿವಮೊಗ್ಗ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ | ಸುದ್ದಿಗೋಷ್ಠಿಯಲ್ಲಿ ಕೆ.ಈ. ಕಾಂತೇಶ್ ಗಂಭೀರ ಆರೋಪ |
ಶಿವಮೊಗ್ಗ ಪಾಲಿಕೆ ಬಡವರ ಪಾಲಿನ ನರಕವಾಗಿದೆ ಮತ್ತು ಭ್ರಷ್ಠಾಚಾರದ ಬ್ರಹ್ಮಾಂಡವಾಗಿದೆ ಎಂದು ರಾಷ್ಟ್ರಭಕ್ತರ ಬಳದ ಕೆ.ಈ.ಕಾಂತೇಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಮಹಡಿ ಕಟ್ಟಡದಲ್ಲಿ ೧೧೮ ಮಳಿಗೆಗಳಿವೆ. ಕಟ್ಟಿ ಎರಡು ವರ್ಷಗಳಾಗಿವೆ. ಪ್ರತಿತಿಂಗಳು ಒಂದು ಮಳಿಗೆಗೆ ೫ಸಾವಿರ ರೂ ಹಣ ಬಾಡಿಗೆಗೆ ನಿಗದಿ ಪಡಿಸಿ ಹಂಚಿದ್ದರು. ೧ ಕೋಟಿಯ ೪೧ ಲಕ್ಷದ ೬೦ ಸಾವಿರ ಬಾಡಿಗೆ ಬರಬೇಕಿತ್ತು. ಮುಂಗಡಪಾವತಿ ೨೩ ತಿಂಗಳಿಗೆ ಎಂದು ಕಟ್ಟಿಸಿಕೊಂಡಿದ್ದರೂ ೧ಲಕ್ಷದ ೭೦ ಸಾವಿರ ಆಗಬೇಕಿತ್ತು. ಬಂದಿಲ್ಲ. ಗೌರವ ಲಾಡ್ಜ್ ಬಳಿಯಿರುವ ಪಾಲಿಕೆಯ ಚಾಣಿಜ್ಯ ಸಂಕೀರ್ಣದಲ್ಲಿ ೯೮ ಮಳಿಗೆ ಇದೆ. ಐದು ವರ್ಷವಾಗಿದೆ ಪಾಲಿಕೆಗೆ ಹಸ್ತಾಂತರವಾಗಿ, ಆದರೆ ಒಂದು ಮಳಿಗೆಯೂ ಹಂಚಿಕೆಯಾಗಿಲ್ಲ. ಐದು ವರ್ಷದಲ್ಲಿ ಬಾಡಿಗೆ ಹಂಚಿದರೆ ೫ ಕೋಟಿಗೂ ಹೆಚ್ಚು ಹಣ ಬಾಡಿಗೆ ರೂಪದಲ್ಲಿ ಬರಬೇಕಿತ್ತು. ಬಂದಿಲ್ಲ. ಗಾಂಧಿನಗರದಲ್ಲಿ ೧೩ ವಾಣಿಜ್ಯಸಂಕೀರ್ಣವಿದೆ. ಬಾಡಿಗೆ ನೀಡಿದ್ದರೆ ಇದುವರೆಗೂ ೧೧ ಕೋಟಿ ೧೧ ಲಕ್ಷ ರೂ ಸಂಗ್ರಹಿಸಬಹುದಿತ್ತು. ಆದರೆ ಪಾಲಿಕೆಗೆ ಆಸಕ್ತಿಯೇ ಇಲ್ಲವೆಂದು ಆರೋಪಿಸಿದರು. ಇಷ್ಟು ಮಳಿಗೆ ಬಾಡಿಗೆ ಕೊಟ್ಟಿದ್ದರೆ ೫೦೦ ಕುಟುಂಬಗಳು ಬದುಕುತ್ತಿದ್ದವು. ಪಾಲಿಕೆ ಆಯುಕ್ತರಿಗೆ ಏಜೆಂಟರ ಮುಖಾಂತರ ಇ-ಸ್ವತ್ತು ಮಾಡುವುದರಲ್ಲಿ ಬಿಸಿ ಇದ್ದಾರೆ. ಬಡವ ಇ-ಸ್ವತ್ತಿಗೆ ೬೦ ಸಾವಿರ ಲಂಚ ನೀಡಬೇಕಿದೆ. ಜಿಲ್ಲಾಧಿಕಾರಿಗಳ ಆಟದ ಮೈದಾನದ ಬಗ್ಗೆ ಪಾಲಿಕೆ ನವೆಂಬರ್ ಒಳಗೆ ವರದಿ ನೀಡಬೇಕೆಂದು ಸಮಯ ನಿಗದಿ ಪಡಿಸಿದರೂ ಯಾವುದೇ ವರದಿಯನ್ನನ್ಯಾಯಾಲಯಕ್ಕೆ ನೀಡಿಲ್ಲ ಎಂದು ದೂರಿದರು.

13/12/2025

ರಾಜ್ಯದಲ್ಲಿ ವಿಪರೀತ ಚಳಿಯ ವಾತಾವರಣ.. | ಏರಿಕೆಯಾದ ಮೈಕೊರೆಯುವ ಚಳಿ.. | ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆ.. | ಮೈಕೊರೆಯುವ ಚಳಿಗೆ ನಲುಗಿದ ಮಲೆನಾಡು ಜಿಲ್ಲೆಗಳು | ಕೊರೆಯುವ ಚಳಿಗೆ ಗಢಗಢ ನಡುಗಿದ ಕರುನಾಡ ಮಂದಿ

ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವಿದ್ದು, ಮೈಕೊರೆಯುವ ಚಳಿಯಲ್ಲಿಯೂ ಏರಿಕೆಯಾಗುತ್ತಿದೆ. ಬೆಳಗಾವಿ, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ೨ ದಿನಗಳಲ್ಲಿ ಶೀತದ ಅಲೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಲವು ದಿನಗಳಿಂದ ಒಣ ಹವೆಯ ವಾತಾವರಣ ಇದ್ದು, ಇಂದೂ ಅದೇ ಹವಾಮಾನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ೨ ದಿನಗಳವರೆಗೆ ಕರ್ನಾಟಕದಾದ್ಯಂತ ತಾಪಮಾನದಲ್ಲಿ ಇಳಿಕೆಯಾಗಲಿದ್ದು, ಮುಂದಿನ ೨ ದಿನಗಳಲ್ಲಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರ್ಗಿ, ವಿಜಯಪುರ, ರಾಯಚೂರು, ಯಾದಗಿರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ ಮತ್ತು ದಕ್ಷಿಣ ಒಳನಾಡಿನ ವಿಜಯನಗರ ಜಿಲ್ಲೆಗಳಲ್ಲಿ ತೀವ್ರ ಶೀತ ಅಲೆಯ ಸಾಧ್ಯತೆ ಹೆಚ್ಚು. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

13/12/2025

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಭೀಕರ ಕೊಲೆ..! | ಪ್ರೇಮೆಗಳಿಗೆ ಬೆಂಬಲಿಸಿದ್ದಕ್ಕೆ ಡಬಲ್ ಮರ್ಡರ್ | | Horrific murder in Bhadravati, Shivamogga district..! | ಭದ್ರಾವತಿ ಹಳೇ ಠಾಣೆ ವ್ಯಾಪ್ತಿಯಲ್ಲಿ ಘಟನೆ.. | ತಣ್ಣಗಿದ್ದ ಮಲೆನಾಡಿನಲ್ಲಿ ಮತ್ತೆ ಹರಿದ ನೆತ್ತರು..! | ಕಿರಣ್, ಮಂಜುನಾಥ್ ಎಂಬುವರ ಕೊಲೆ | ಪ್ರೀಮಿಗಳಿಗೆ ಓಡಿಹೋಗಲು ಸಹಾಯ ಮಾಡಿದ್ದಾರೆಂದು ಕೊಲೆ | ಮನೆಬಿಟ್ಟು ಹೋಗಿದ್ದ ನಂದೀಶ್, ಸೃಷ್ಠಿ ಎಂಬ ಪ್ರೇಮಿಗಳು | ಹುಡುಗನ ಸ್ನೇಹಿತರ ಮೇಲೆ ದಾಳಿಮಾಡಿದ ಯುವಕರ ಗುಂಪು | ಜಗಳ ನಿಲ್ಲಿಸಲು ಮುಂದಾದಾಗ ಚಾಕುವಿನಿಂದ ಇರಿದು ಕೊಲೆ | ಪ್ರಕರಣದಲ್ಲಿ ಐವರನ್ನು ಬಂಧಿಸಿದ ಪೊಲೀಸರು...

ತಣ್ಣಗಿದ್ದ ಮಲೆನಾಡಿ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ರಕ್ತದೋಕುಳಿ ನಡೆದಿದೆ. ತಡರಾತ್ರಿ ಭದ್ರಾವತಿಯ ಜೈಭೀಮ್ ಬಡಾವಣೆಯಲ್ಲಿ ಇಬ್ಬರು ಯವಕರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಹೌದು. ಪ್ರೇಮಿಗಳನ್ನು ಒಂದು ಮಾಡುವಲ್ಲಿ ಇವರಿಬ್ಬರು ಹುಡುಗನಿಗೆ ಸಹಾಯ ಮಾಡಿದ್ದಾರೆ ಎಂದು ಆಕ್ರೋಶರಾದ ಯುವಕರ ಗುಂಪು ತಡರಾತ್ರಿ ಗಲಾಟೆ ಮಾಡಿದೆ. ಗಲಾಟೆ ಮಾಡಲು ಮುಂದಾದ ಯುವಕರನ್ನು ತಡೆಯಲು ಕಿರಣ್ ಹಾಗು ಮಂಜುನಾಥ್ ಎಂಬುವರು ತಡೆಯಲು ಮುಂದಾಗಿದ್ದಾರೆ. ಕಿರಣ್ ಹಾಗು ಮಂಜುನಾಥ್ ಹತ್ತಿರ ಆಗಮಿಸುತ್ತಿದ್ದಂತೆ ಯುವಕರ ಗುಂಪು ಚಾಕುವಿನಿಂದ ಇರಿದು ಇವರಿಬ್ಬರನ್ನ ಕೊಲೆ ಮಾಡಿದೆ. ಕಳೆದ ೨ ದಿನಗಳ ಹಿಂದೆ ನಂದೀಶ್ ಹಾಗು ಸೃಷ್ಠಿ ಎಂಬ ಇಬ್ಬರು ಪ್ರೇಮಿಗಳು ಪ್ರೀತಿಸಿ ಮನೆಬಿಟ್ಟು ಹೋಗಿದ್ದರು. ನಿನ್ನೆಸಂಜೆ ಪ್ರೇಮಿಗಳು ವಾಪಾಸ್ಸು ಹಳೇ ಪೊಲೀಸ್ ಠಾಣೆಗೆ ಬಂದಿದ್ರು ಎಂದು ತಿಳಿದು ಬಂದಿದೆ. ಸದ್ಯ ಈ ಹತ್ಯೆಯು ಭದ್ರಾವತಿಯ ಹಳೇ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

13/12/2025

LIVE | NEWS@ 1 ಭದ್ರಾವತಿಯಲ್ಲಿ ಭೀಕರ ಕೊಲೆ..! | ಶಿವಮೊಗ್ಗ ಪಾಲಿಕೆಯಲ್ಲಿ ಭ್ರಷ್ಟಾಚಾರ..? | ಗಢಗಢ ನಡುಗಿದ ಜನರು..

12/12/2025

ಮಾಧ್ಯಮಗಳ ಮೇಲಿನ ನಿರ್ಬಂಧ ಸರಿಯಲ್ಲ | ರಾಜ್ಯ ಸರ್ಕಾರ ತುರ್ತು ಪರೀಸ್ಥಿತಿ 2.0 ತಂದಿದೆ



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

Address

Prakash Complex, Shankar Mutt Road
Shimoga
577201

Telephone

+916366100394

Website

http://www.kannadamedium.news/

Alerts

Be the first to know and let us send you an email when Kannada Medium 24x7 posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Medium 24x7:

Share

ಕನ್ನಡ ಮೀಡಿಯಂ ನ್ಯೂಸ್

ಕನ್ನಡ ಎಂದರೆ ಬರೀ ಭಾಷೆ ಅಲ್ಲ. ಅದು ಜೀವನ. ಸಮೃದ್ಧ ಸಂಸ್ಕೃತಿಯ ಆಗರ. ಜೊತೆಗೆ ಬದುಕಿನ ಎಲ್ಲ ನೋವು-ನಲಿವುಗಳ ಸಾಕ್ಷಿಯೂ ಹೌದು. ಈ ಕನ್ನಡ ನೆಲದ ನಿಜ ಪ್ರತಿನಿಧಿಯಾಗಿ ಕನ್ನಡ ಮೀಡಿಯಂ ಜಾಲತಾಣ ರೂಪಿಸುವ ಗುರಿ ನಮ್ಮದು.

ಹರಸಿ, ಹಾರೈಸಿ...

- ಹೊನ್ನಾಳಿ ಚಂದ್ರಶೇಖರ್

ಪ್ರಧಾನ ಸಂಪಾದಕ