Baraguru Tv

Baraguru Tv Contact information, map and directions, contact form, opening hours, services, ratings, photos, videos and announcements from Baraguru Tv, News & Media Website, Sira.

ಈ ನೆಲ ಜಲದ ಬಗ್ಗೆ ನಮ್ಮ ಹೋರಾಟ ನಿರಂತರವಾಗಿರುತ್ತೆ. ನಿಮ್ಮ ಊರಿನ ಯಾವುದೇ ಸಮಸ್ಯೆ ಇದ್ದರು. ನಮ್ಮ ಮಾದ್ಯಮ ಮುಂದೆ ಇರುತ್ತೆ . ಯಾವುದೇ ಸುದ್ದಿಯಾದರೂ ಬಿತ್ತರಿಸಲು ನಾವ್ ರೆಡಿ. ಸದಾ ನಿಮ್ಮೊಂದಿಗೆ ಬರಗೂರು Tv DIGITAL MEDIA NEWS CHANNEL

25/09/2025

ಕುಂಚಿಟಿಗರೆ ಬೇರೆ ಜಾತಿ ಬರೆಸಿ ಗಂಡಾಂತರಕ್ಕೆ ಸಿಲುಕಬೇಡಿ -ಎಸ್ ವಿ ರಂಗನಾಥ್.
------------------------------------------------------
ಹಿರಿಯೂರು :ಕರ್ನಾಟಕ ರಾಜ್ಯದ ಬಯಲು ಸೀಮೆ,ಮಲೆನಾಡು,ಕರಾವಳಿ,ಕಲ್ಯಾಣ ಕರ್ನಾಟಕ,ಹಳೆ ಮೈಸೂರು ಪ್ರಾಂತ್ಯ ಸೇರಿದಂತೆ 19 ಜಿಲ್ಲೆ 47 ತಾಲ್ಲೋಕುಗಳಲ್ಲಿ 27 ಲಕ್ಷಕ್ಕೂ ಅತ್ಯಧಿಕ ಸಂಖ್ಯೆಯಲ್ಲಿರುವ ಸಮಸ್ಥ ಕುಂಚಿಟಿಗರು ಒಗ್ಗಟ್ಟು ಪ್ರದರ್ಶನ ಮಾಡಿ ಇದೇ ಸೆಪ್ಟೆಂಬರ್ 22 ರಿಂದ ಪ್ರಾರಂಭ ಆಗಿರುವ ಜಾತಿ ಗಣತಿಯಲ್ಲಿ "ಕುಂಚಿಟಿಗ "ಎಂದು ಬರೆಯಿಸಬೇಕೆಂದು ಕುಂಚಿಟಿಗ ಹೋರಾಟಗಾರ ಎಸ್ ವಿ ರಂಗನಾಥ್ ಮನವಿ ಮಾಡಿದ್ದಾರೆ.
1928 ರಲ್ಲಿ ಮೈಸೂರು ಸರ್ಕಾರ ಹೊರಡಿಸಿದ ಆದೇಶ,ರಾಜ್ಯ ಸರ್ಕಾರ ನಡೆಸಿದ ಕುಲಶಾಸ್ತ್ರೀಯ ಅಧ್ಯಯನ ವರದಿ ಹಾಗೂ ವಿವಿಧ ತಾಲ್ಲೋಕಿನ ತಹಶೀಲ್ದಾರರಿಂದ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳ ಪ್ರಕಾರ ಕುಂಚಿಟಿಗ ಯಾವುದೇ ಜಾತಿಯ ಉಪಜಾತಿ ಅಲ್ಲ.ಆದ್ದರಿಂದ ಜಾತಿ ಕಾಲಂ ನಲ್ಲಿ ಕುಂಚಿಟಿಗ ಹಾಗೂ ಉಪಜಾತಿ ಕಾಲಂನಲ್ಲಿ ಕುಂಚವಕ್ಕಲ್,ನಾಮಧಾರಿ ಕುಂಚಿಟಿಗ, ಕುಂಚಿಟಿಗ ಲಿಂಗಾಯಿತ,ರೆಡ್ಡಿ ಕುಂಚಿಟಿಗ,ಕುಂಚಿಟಿಗ ಒಕ್ಕಲಿಗ ಇತ್ಯಾದಿಯಾಗಿ ಬರೆಯಿಸಲು ಸರ್ಕಾರಿ ದಾಖಲೆಗಳ ಸಹಿತ ಮನವಿ ಮಾಡಿದ್ದಾರೆ.
ಕುಂಚಿಟಿಗ ಜಾತಿಗೆ ಕೇಂದ್ರ ಸರ್ಕಾರದ ಓ.ಬಿ. ಸಿ.ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಈಗಾಗಲೆ ಶಿಫಾರಸ್ಸು ಮಾಡಿರುವುದರಿಂದ ಎಲ್ಲರು ಕುಂಚಿಟಿಗ ಎಂದು ಬರೆಯಿಸಿದರೆ ಮುಂದೆ ಕೇಂದ್ರ ಸರ್ಕಾರದ ಮೀಸಲಾತಿ ಪಡೆಯಲು ಅನುಕೂಲ ಆಗುತ್ತದೆ ಹಾಗೂ ಕುಂಚಿಟಿಗ ಕುಲ ಶಾಸ್ತ್ರೀಯ ಅಧ್ಯಯನ ವರದಿ ಶಿಫಾರಸ್ಸು ಪ್ರಕಾರ ರಾಜ್ಯ ಸರ್ಕಾರದಲ್ಲಿ ಪ್ರವರ್ಗ 1 ರಲ್ಲಿ ಮೀಸಲಾತಿ ಪಡೆಯಲು ಅನುಕೂಲ ಆಗುತ್ತದೆ ಎಂದು ಎಸ್.ವಿ.ರಂಗನಾಥ್ ತಿಳಿಸಿದ್ದಾರೆ.

25/09/2025

ನಮ್ಮ ಜನರಿಗೆ ತುಂಬಾ ಕನ್ಫ್ಯೂಷನ್ ಆಗಿದೆ, ಯಾವುದು ಬರೆಸಬೇಕು ಹೇಳಿ.

25/09/2025

ಕುಂಚಿಟಿಗರೇ ಗೊಂದಲ ಬೇಡ 2 ನಿಮಿಷ ಈ ವೀಡಿಯೋ ನೋಡಿ..!
ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಕುಂಚಿಟಿಗ ಜನಾಂಗದ ಬಗ್ಗೆ ಬಹಳ ಕ್ಲಿಯರಾಗಿ ಸ್ಪಷ್ಟನೆ ನೀಡಿ, ಒಬಿಸಿಗೆ ಶಿಫಾರಸ್ಸು ಮಾಡಿದ್ದೇವೆ ಎಂದು ಮಾಧ್ಯಮದ ಮೂಲಕ ಎಲ್ಲಾ ಕುಂಚಿಟಿಗ ಕುಲಬಾಂಧವರಿಗೆ ತಿಳಿಸಿದ್ದಾರೆ , ನೀವುಗಳು ಎಚ್ಚೆತ್ತು ನಿಮ್ಮ ಜಾತಿಯನ್ನು ಬದಲಾವಣೆ ಮಾಡಿ ಗೊಂದಲಕೀಡಾಗದೆ, ನೀವು ನಿಮ್ಮ ಈಗಿರುವ ಜಾತಿ ಅಂದರೆ ಕುಂಚಿಟಿಗ ಜಾತಿ ಎಂದು ಬರೆಸಿ.

#ಆಯುಕ್ತರು

24/09/2025

ಬಹಳ ಸುಲಭವಾಗಿ ಅರ್ಥ ಆಗುತ್ತೆ, ನಿರ್ಧಾರ ನಿಮ್ಮದು..!

#ಆಯುಕ್ತರು

24/09/2025

ಸಿರಾ ಬಿಸಿಎಂ ಹಾಸ್ಟೆಲ್ ಡಿಪ್ಲಮೋ ವಿದ್ಯಾರ್ಥಿ ಸಾ***,

ಹತ್ತ ತಾಯಿಯ ರೋ # # # ನೋಡಲು ಸಾಧ್ಯವಿಲ್ಲ. ಇನ್ನು ಹೆಚ್ಚಿನ ಮಾಹಿತಿ ಸಿಕ್ಕಿದ ತಕ್ಷಣ ತಿಳಿಸುತ್ತೇನೆ.
#ಆಯುಕ್ತರು

ಅಂತಿಮ ನಿರ್ಧಾರ ಹೊರಬಿದ್ದಿದೆ..!
24/09/2025

ಅಂತಿಮ ನಿರ್ಧಾರ ಹೊರಬಿದ್ದಿದೆ..!

24/09/2025

ಮೊಹಮದ್ ರಫಿ ಡಿಪ್ಲಮೋ ವಿದ್ಯಾರ್ಥಿ ಹಾಸ್ಟೆಲ್ ಬಾತ್ರೂಂ ನಲ್ಲಿ ಸಾವು ಸ್ವಂತ ಊರು ಹೊಸಹಳ್ಳಿ ಪಟ್ಟನಾಯಕನಹಳ್ಳಿ ಹತ್ತಿರ

24/09/2025

ಇಂದು ಜಾತಿ ಗಣತಿ ಭವಿಷ್ಯ?

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆದಿದೆ. ಅರ್ಜಿದಾರರು ಮತ್ತು ಸರ್ಕಾರದ ಪರ ವಕೀಲರ ವಾದ ಮತ್ತು ಪ್ರತಿವಾದ ಆಲಿಸಿದ ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ.ಜೋಶಿ ನೇತೃತ್ವದ ಪೀಠ ವಿಚಾರಣೆಯನ್ನ ಇವತ್ತಿಗೆ ಮುಂದೂಡಿದೆ.
ಒಟ್ಟಾರೆ.. ಗೊಂದಲ.. ಗದ್ದಲ.. ವಿರೋಧದ ನಡುವೆಯೇ ರಾಜ್ಯದಲ್ಲಿ ಜಾತಿ ಗಣತಿ ಶುರುವಾಗಿದೆ. ಆದ್ರೆ ದಿನ ನಿತ್ಯವೂ ಒಂದಲ್ಲ ಒಂದು ಸಮಸ್ಯೆ ಎದುರಾಗ್ತಿದ್ದು, ಸರ್ಕಾರ ಇದನ್ನು ಬಗೆಹರಿಸುತ್ತಾ? ಇಲ್ವಾ ಅನ್ನೋದನ್ನು ಕಾದನೋಡಬೇಕಿದೆ

24/09/2025

ಸಿರಾ ಕುಂಚಿಟಿಗರ ಸಂಘದ ನಿರ್ಧಾರ ಏನು..?

#ಆಯುಕ್ತರು

23/09/2025

ಒಕ್ಕಲಿಗರು, ಕುಂಚಿಟಿಗರು ಅಂತ ಬರೆಸಿ ನೋಡೋಣ, ಸತ್ಯ ಪ್ರಕಾಶ್..!

ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಸಮಸ್ತ ಕುಂಚಿಟಿಗ ಬಾಂಧವರಿಗೆ ನೆನ್ನೆ (ಅಂದರೆ ದಿನಾಂಕ 22,9,2025 ) ಪಟ್ಟನಾಯಕನಹಳ್ಳಿಯಲ್ಲಿ ಕುಂಚಿಟಿಗರನ್ನು ಸಮಾಜದ ಮುಖಂಡರು, ಸ್ವಾಮೀಜಿಗಳ ಅನುಪಸ್ಥಿತಿಯಲ್ಲಿ ಸರ್ಕಾರ ನಡೆಸುವ ಜಾತಿ ಸಮೀಕ್ಷೆಯಲ್ಲಿ ಮುಖ್ಯ ಜಾತಿಯಲ್ಲಿ ಒಕ್ಕಲಿಗರು ಎಂದು ಬರೆಸಿ, ಉಪಜಾತಿಯಲ್ಲಿ ಕುಂಚಿಟಿಗ ಬರೆಸಿ ಎಂದು ಸಮಾಜದ ಗಣ್ಯ ವ್ಯಕ್ತಿಗಳು, ರಾಜಕೀಯ ಮುಖಂಡರು, ಸ್ವಾಮೀಜಿಗಳು ಕರೆ ನೀಡಿದ್ದರು. ಇದರ ವಿಷಯವಾಗಿ ಇಂದು ಶಿರಾ ನಗರದ ಕುಂಚಿಟಿಗರ ಸಂಘದಲ್ಲಿ ಕುಂಚಿಟಿಗ ಕುಲಬಾಂಧವರು ಸಭೆ ಕರೆದು, ನಾವು ಒಮ್ಮತದಿಂದ ಎಲ್ಲರೂ ಸೇರಿ ನಮ್ಮ ಜಾತಿಯನ್ನು ಕುಂಚಿಟಿಗ ಅಂತ ಬರೆಸೋಣ ಎಂದು ನಿರ್ಧರಿಸಿದರು, ಅದರ ವಿಷಯವಾಗಿ ಸಮಾಜದ ಮುಖಂಡರಾದ ಸತ್ಯಪ್ರಕಾಶ್ ರವರು ನಮ್ಮ ಜಾತಿ ಬದಲಾದರೆ ಏನು ತೊಂದರೆಯಾಗುವುದೆಂದು ಕೆಲವು ಉದಾಹರಣೆಗಳನ್ನು ಕೊಟ್ಟು ಕುಲಬಾಂಧವರಿಗೆ ತಿಳಿಹೇಳಿ, ನೀವು ಯಾರ ಒತ್ತಡಕ್ಕೂ ಮಣಿಯದೆ, ಯಾರ ಮಾತನ್ನು ಕೇಳದೆ, ನಿಮ್ಮ ಅಪ್ಪನ ಜಾತಿ ಕುಂಚಿಟಿಗ ಆಗಿದ್ದರೆ ಕುಂಚಿಟಿಗ ಎಂದು ಬರೆಸಿ ಅಂತ ಮನವಿ ಮಾಡಿದರು, ಅಲ್ಲದೆ ಒಕ್ಕಲಿಗರನ್ನು ಈಗಲೇ ಆಹ್ವಾನ ಮಾಡುತ್ತೇವೆ ನೀವುಗಳು ಕುಂಚಿಟಿಗರು ಅಂತ ಬರೆಸಿ ನೋಡೋಣ ಎಂದರು, ಇದು ಸಾಧ್ಯವಾಗೋದಿಲ್ಲ ವೆಂದರೆ ನಾವು ಸಹ ಒಕ್ಕಲಿಗರು ಎಂದು ಬರಿಸಲು ಸಾಧ್ಯವಿಲ್ಲ, ಕುಂಚಿಟಿಗರು ಎಂದೇ ಬರೆಸುತ್ತೇವೆ ಅಂತ ಗೊಂದಲಕ್ಕೆ ತೆರೆ ಹೇಳಿದರು.


ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
23/09/2025

ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

ನೀನೆ ನನ್ ಲವರ್ ಕಣೆ || NEENE NAN LOVER KANE . ಇದು ಕೇವಲ ಮನೋರಂಜನೆಯ ಉದ್ದೇಶದಿಂದ ಮಾಡಿದ್ದು, ಯಾರ ಜೀವನಕ್ಕೂ ಸಂಬಂಧಿಸಿದ್ದಲ್ಲ, ಒಂದು ವೇಳೆ ಆ ರೀತ.....

ಕುಂಚಿಟಿಗರು ಕುಂಚಿಟಿಗ ಎಂದೆ ಬರೆಸಿ.
22/09/2025

ಕುಂಚಿಟಿಗರು ಕುಂಚಿಟಿಗ ಎಂದೆ ಬರೆಸಿ.

Address

Sira

Telephone

+919844525820

Website

Alerts

Be the first to know and let us send you an email when Baraguru Tv posts news and promotions. Your email address will not be used for any other purpose, and you can unsubscribe at any time.

Share