Karnataka public news

Karnataka public news ಕರ್ನಾಟಕ ಪಬ್ಲಿಕ್ ನ್ಯೂಸ್ - A digital media channel, Brings to you a reality news updates/vblogs/videos

06/08/2025

#ಶಿರಾ ತಾಲ್ಲೂಕಿನ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಹಾಗೂ ಅರೋಗ್ಯ ಅರಿವು, ಮತ್ತು ಆರೋಗ್ಯ ತಪಾಸಣೆ ಶಿಬಿರ ಎತ್ತಿನಹೊಳೆ ನೀರು ಬಳಸಲು 500 ಕೋಟಿ ವೆಚ್ಚದಲ್ಲಿ ಶೋದಿಸಿದ ಕುಡಿಯುವ ನೀರಿನ ಯೋಜನೆಗೆ ವ್ಯವಸ್ಥೆ ಮಾಡಲಾಗುತ್ತಿದೆ.

ತಾಲ್ಲೂಕಿನ 750 ಗರ್ಭಿಣಿಯರಿಗೆ ನಡೆದ ಸಾಮೂಹಿಕ ಸೀಮಂತ ಹಾಗೂ ಆರೋಗ್ಯ ತಪಾಸಣೆ ಶಿಬಿರ

06/08/2025

#ಶಿರಾತಾಲ್ಲೂಕು #ಗರ್ಭಿಣಿಯರಿಗೆ ನಡೆದ #ಸಾಮೂಹಿಕ #ಸೀಮಂತ ಹಾಗೂ #ಅರೋಗ್ಯ #ಅರಿವು, ಮತ್ತು #ಆರೋಗ್ಯ #ತಪಾಸಣೆ.
ನೆರೆದಿದ್ದ ಜನಸಾಮಾನ್ಯರಿಗೆ ಊಟದ ವ್ಯವಸ್ಥೆ ಕಲ್ಪಿಸಿದ #ಜೀನಿ ಸಂಸ್ಥೆ ಸಂಸ್ಥಾಪಕರಾದ #ದಿಲೀಪ್ ಕುಮಾರ್.
ಸಹಯೋಗ : ಟಿಬಿಜೆ ಅಭಿಮಾನಿಗಳ ಬಳಗ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ.
Karnataka public news

06/08/2025

20/08/2025 ಬುಧವಾರ #ಶ್ರೀಕೃಷ್ಣಜನ್ಮಾಷ್ಟಮಿಜಯಂತಿ ಕಾರ್ಯಕ್ರಮ ಪ್ರಯುಕ್ತ #ಗೊಲ್ಲರಹಟ್ಟಿಗಳಿಗೆ ಪ್ರಚಾರ ಪ್ರಾರಂಭ ಮಾಗೋಡ್ ರಂಗನಾಥ ಸ್ವಾಮಿ ದೇವಸ್ಥಾನದಿಂದ ಪೂಜೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಗೆ ಸಿರಾ ತಾಲೂಕಿನ ಎಲ್ಲ ಸಮಾಜದ ಹಿರಿಯ ಮುಖಂಡರು ಮತ್ತು ಯುವಕರು ಹೆಚ್ಚಿನ ಸಂಖ್ಯೆ ಬನ್ನಿ ಎಂದು ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷರು ಹಾರೋಗೆರೆ ಮಹೇಶ್ ಬಂದಕುಂಟೆ ಮಂಜುನಾಥ ಶ್ರೀಧರ್ ರಾಜು ಚಿತ್ತಾಯ್ಯ ಈರಣ್ಣ ಬೇವಿನಹಳ್ಳಿ ಶ್ರೀನಿವಾಸ್ಡೀಲ್ ರಾಜಣ್ಣ ಮಹಾಲಿಂಗಪ್ಪ ಈರಣ್ಣ ಮಂಜು ಬಸವರಾಜು ಕೃಷ್ಣಮೂರ್ತಿ

05/08/2025

*ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ದ್ವಾರನ ಕುಂಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಲಕ್ಷ್ಮಿಕಾಂತ್*.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಜೆ.ತಿಮ್ಮರಾಜು, ಕಾಳಿದಾಸ ಪ್ರೌಢಶಾಲೆಯ ಶಿಕ್ಷಕ ರವೀಂದ್ರ, ಶುಶ್ರೂಷಕಿ ಕವಿತಾ, ಆರೋಗ್ಯ ಇಲಾಖೆಯ ರಘು, ನಿರಂಜನ್, ಫಾತಿಮಾ, ವಿಜಯಲಕ್ಷ್ಮಿ ಸೇರಿದಂತೆ ಆಶಾ ಕಾರ್ಯಕರ್ತರು ಹಾಗೂ ಕಾಳಿದಾಸ ಪ್ರೌಢಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು # # KARANATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #

04/08/2025

#ಜೀನಿಸ್ಲಿಮ್ #99% ರಿಸಲ್ಟ್

04/08/2025

ಶಿರಾ ತಾಲೂಕಿನ ತೊಗರಗುಂಟೆ ಗ್ರಾಮದಲ್ಲಿ ಸ್ಪೂರ್ತಿ ಕ್ರಿಕೆಟರ್ಸ್ ಹಾಗೂ ಆರ್. ಉಗ್ರೇಶ್ ಅಭಿಮಾನಿ ಬಳಗ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿ ಮೆಂಟ್ ಉದ್ಘಾಟಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ಜೆಡಿಎಸ್ ಹಿರಿಯ ಮುಖಂಡ ಆರ್. ಉಗ್ರೇಶ್.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ. ಡಿ. ಮಲ್ಲೇಶ್, ಮೇಲ್ಕುಂಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಡಿ. ನರಸಿಂಹಮೂರ್ತಿ, ಬಂದ ಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ತಿಮ್ಮೇಗೌಡ, ಗ್ರಾಮ ಪಂಚಾಯತಿ ಸದಸ್ಯ ಚಂದ್ರಕುಮಾರ್, ಜೆಡಿಎಸ್ ಮುಖಂಡ ರವಿಗೌಡ, ಮೆಡಿಕಲ್ ನಾಗಣ್ಣ, ದಿವಾಕರ್, ಅಪ್ರೋಜ್, ಹರೀಶ್ ಚಿದಾನಂದ ಸೇರಿದಂತೆ ಹಲವಾರು ಗ್ರಾಮಗಳ ಕ್ರಿಕೆಟ್ ತಂಡಗಳು ಪಾಲ್ಗೊಂಡಿದ್ದವು # # KARANATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #

04/08/2025

*ಶಿರಾ ತಾಲ್ಲೂಕಿನ ಸೀಬಿ ಗ್ರಾಮದಲ್ಲಿ ಶಿರಾ ಲಯನ್ಸ್ ಕ್ಲಬ್, ವೈಷ್ಣವಿ ಲಯನ್ ಸಂಸ್ಥೆ ಸೆಂಟರ್*, *ಶಿರಾ ಆರ್. ಉಗ್ರೇಶ್* *ಅಭಿಮಾನಿ ಬಳಗ ಇವರಸಂಯುಕ್ತಾಶ್ರಯದಲ್ಲಿ
*ಬೃಹತ್ ಉಚಿತ ನೇತ್ರ* *ತಪಾಸಣೆ ಮತ್ತು* *ಶಸ್ತ್ರಚಿಕಿತ್ಸಾ ಶಿಬಿರ*
ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹುಂಜುನಾಳ ರಾಜಣ್ಣ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಣ್ಣ, ತಿಮ್ಮನಹಳ್ಳಿ ಹಟ್ಟಿ
ಪರಮೇಶ್, ಸೀಬಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಪಯ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷೆ ಅನುಸೂಯ ಗುರುರಾಜ್, ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ, ಸದಸ್ಯ ಶಶಿಕುಮಾರ್, ಮುಖಂಡರಾದ ದೊಡ್ಡ ಮುದ್ದಯ್ಯ, ದೊರೆಗೌಡ, ಪುಟ್ಟರಾಜು, ರಾಮಣ್ಣ ಸೀಬಿ ಅಗ್ರಹಾರ, ಮಂಜಣ್ಣ ರಾಮಣ್ಣ ಹಾಗೂ ಆರ್ ಉಗ್ರೇಶ್ ಅಭಿಮಾನಿ ಬಳಗದ ಪದಾಧಿಕಾರಿಗಳಾದ ಮೆಡಿಕಲ್ ನಾಗಣ್ಣ ಯಶಸ್ವಿನಿ ಮಂಜುನಾಥ್, ವನಿತಾ,ಸುರೇಶ್, ನಟರಾಜ್, ರಮೇಶ್, ಕರಿಯಣ್ಣ

03/08/2025

ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಾರ್ಟಿ ದೇಶದ ಅತೀ ದೊಡ್ಡ ಸಂಘಟನಾತ್ಮಕ ರಾಜಕೀಯ ಪಕ್ಷ,, ಇಂತಹ ಪಕ್ಷಕ್ಕೆ ಕಾರ್ಯಕರ್ತರಾದ ನಾವೆಲ್ಲರೂ ಹೆಚ್ಚಿನದಾಗಿ ಬಲ ತುಂಬುವುದರ ಜೊತೆಗೆ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕಿದೆ, ಸಮಾಜದಲ್ಲಿ ದೌರ್ಜನ್ಯಗಳು, ಅಕ್ರಮಗಳು, ಶೋಷಣೆಗಳು ನಡೆದಾಗ ನಾವೆಲ್ಲ ಧ್ವನಿ ಎತ್ತುವ ಮನೋಭಾವ ಬೆಳೆಸಿಕೊಂಡು ನೊಂದವರಿಗೆ ನ್ಯಾಯ ಒದಗಿಸಿಕೋಡುವ ಕೆಲಸ ಮಾಡಬೇಕು, ಕಾರ್ಯಕರ್ತರ ನೋವುಗಳಿಗೆ ಸ್ಪಂದಿಸುತ್ತ ಪಕ್ಷ ಕಟ್ಟುವಲ್ಲಿ ಮುನ್ನುಗ್ಗಬೇಕು ಎಂದು ನಗರದ ಗೃಹ ಕಚೇರಿ ಸೇವಾ ಸದನದಲ್ಲಿ ಭಾನುವಾರ ನಡೆದ ಶಿರಾ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಶಾಸಕ ಹಾಗೂ ಮಧುಗಿರಿ ಬಿಜೆಪಿ ಸಂಘಟನಾತ್ಮಕ ಅಧ್ಯಕ್ಷ ಚಿದಾನಂದ್ ಎಂ. ಗೌಡ.

02/08/2025

ನಾಗ ದೇವತಾ ಪ್ರತಿಷ್ಠಾಪನೆಯು ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಇದು ಪ್ರಾದೇಶಿಕ ವೃದ್ಧಿ, ಲೋಕ ಕಲ್ಯಾಣ ಮತ್ತು ಸಮೃದ್ಧಿಗೆ ಸಂಬಂಧಿಸಿದಂತೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ರೀತಿಯ ನಾಗ ದೇವತಾ ಪ್ರತಿಷ್ಠಾಪನೆಯನ್ನು ಚಿರತಹಳ್ಳಿ ಗ್ರಾಮ ಗಣೇಶ್ ಗುಡಿ ಎಸ್ಟೇಟ್ ಆವರಣದಲ್ಲಿ ಮಾಜಿ ಶಾಸಕ ಡಾ. ರಾಜೇಶ್ ಗೌಡ ಅವರ ಧರ್ಮಪತ್ನಿ ಡಾ. ತೇಜಸ್ವಿನಿ, ಕುಟುಂಬಸ್ಥರು ಹಾಗೂ ಸ್ಥಳೀಯ ಗ್ರಾಮಸ್ಥತರ ಸಮ್ಮುಖದಲ್ಲಿ 45 ದಿನಗಳ ವಿವಿಧ ಮಾಸ ಕಾಲದ ಹಾಗೂ ಮಂಡಲ ಪೂಜೆಗಳ ನಂತರ,ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜೂಲೈ 31 ಗುರುವಾರ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಿದರು

02/08/2025

ಶಿರಾ : ಶಿರಾ ತಾಲ್ಲೂಕಿನ ರೈತರ ಜೀವ ನಾಡಿ ಹೈನುಗಾರಿಕೆಯಾಗಿದ್ದು, ಹಾಲು ಉತ್ಪಾದಕ ರೈತರು ತಮ್ಮ ರಾಸುಗಳು ಆನಾರೋಗ್ಯಕ್ಕೆ ಒಳಗಾದಗ ಅವುಗಳಿಗೆ ಚಿಕಿತ್ಸೆ ಕಷ್ಟಕರವಾಗಿತ್ತು ಇದನ್ನು ಅರಿತ ತುಮಕೂರು ಹಾಲು ಒಕ್ಕೂಟ ಆನಾರೋಗ್ಯ ಪೀಡಿತ ರಾಸುಗಳ ಪೋಷಣೆ ಹಾಗೂ ಪ್ರಾಥಮಿಕ ಚಿಕಿತ್ಸೆ ನೀಡಲು ಸುಲಭವಾಗಿಸುವ ನಿಟ್ಟಿನಲ್ಲಿ ಶಿರಾ ತಾಲ್ಲೂಕಿನ 10 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕೌ ಲಿಫ್ಟಿರ್ ವಿತರಣೆಮಾಡಲಾಗಿದ್ದು, ಇದರ ಸದುಪಯೋಗವನ್ನು ಹಾಲು ಉತ್ಪಾದಕರು ಪಡೆದುಕೊಳ್ಳಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.

ಶಿರಾ ನಗರದ ನಂದಿನಿ ಕ್ಷೀರ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಸು ಎತ್ತುವ ಯಂತ್ರಗಳನ್ನು ವಿತರಣೆಮಾಡಿ ಮಾತನಾಡಿದರು. ಶಿರಾ ತಾಲೂಕಿನಲ್ಲಿ ಮಳೆಯ ಅಭಾವ ಎದುರಾಗಿದ್ದು ಹೈನುಗಾರಿಕೆ ರೈತರಿಗೆ ಆರ್ಥಿಕ ಶಕ್ತಿ ನೀಡಿದೆ. ಹಾಲು ಉತ್ಪಾದಕರು ಹಾಲಿನ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಿ ಹೆಚ್ಚು ಹಾಲು ಉತ್ಪಾದನೆ ಮಾಡುವತ್ತ ಕಾಳಜಿ ವಹಿಸಿದರೆ ಹೈನುಗಾರಿಕೆಯಿಂದ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದರು.

ಉಪ ವ್ಯವಸ್ತಾಪಕ ಬಿ. ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಸಮಾಲೋಚಕ ಪ್ರವೀಣ್, ಬಾಬ ಫಕ್ರುದ್ದಿನ್ ಪಿ.ಎಂ., ಹನುಮಂತರಾಯಪ್ಪ , ಪಿ. ಎಲ್. ಡಿ. ಬ್ಯಾಂಕ್ ನಿರ್ದೇಶಕ ಅಜ್ಜಣ್ಣ, ಮುಖಂಡ ಕಿರಣ್ ಗೌಡ, ನೇಜಂತಿ ಅಭಿಲಾಷ್ ಗೌಡ, ತಿಮ್ಮರಾಜು, ಶ್ರೀನಿವಾಸ್, ಅಶ್ವಥ್ ಕುಮಾರ್ ಸೇರಿದಂತೆ ಶಿರಾ ತಾಲ್ಲೂಕಿನ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಉಪಸ್ಥಿತರಿದ್ದರು # # KARNATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #

02/08/2025

*ನೀರಾವರಿ ಹರಿಕಾರ*,
*ಪ್ರಬುದ್ಧ ರಾಜಕಾರಣಿ, 50 ವರ್ಷಗಳ ಸುದೀರ್ಘ* *ರಾಜಕಾರಣದಲ್ಲಿ ಅತ್ಯಂತ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ, ಅಭಿವೃದ್ಧಿಯಲ್ಲಿ ಯುವ ರಾಜಕಾರಣಿಗಳಿಗೆ ಆದರ್ಶವಾಗಿರುವ ಶಿರಾ ಕ್ಷೇತ್ರದ ಶಾಸಕರಾದ ಟಿ.ಬಿ. ಜಯಚಂದ್ರರವರಿಗೆ* *ಸಂಪುಟ ಪುನರ್ ರಚನೆಯಲ್ಲಿ ಸಚಿವ ಸ್ಥಾನ ನೀಡುವಂತೆ ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು*.
ಶಿರಾ ತಾಲೂಕಿನ ಓಜುಗುಂಟೆ ಗ್ರಾಮದಲ್ಲಿ ಶುಕ್ರವಾರ ನಡೆದ ಜೀರಿಗೆ ಅಮ್ಮಾಜಿಗೆ ಸೇರಿದ ಓಜು ಗುಂಟೆ ಅಮಾವಾಸ್ಯೆ ಬುಡಕಟ್ಟಿಗೆ ಸೇರಿದ
ಶ್ರೀ ಮಹಾಲಕ್ಷ್ಮಿ ಅಮ್ಮನವರ ನೂತನ ಚರಬಿಂಬ ಪ್ರತಿಷ್ಠಾಪನೆ ಮತ್ತು ನೇತ್ರೋನ್ಮಿಲನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.
ಒಬ್ಬ ಮನುಷ್ಯ ದೇವಸ್ಥಾನಕ್ಕೆ ಹೋದ ಮೇಲೆ ತನ್ನೆಲ್ಲ ಅಂಧಕಾರ ಅಜ್ಞಾನ ದೂರ ಮಾಡಿಕೊಂಡು ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳುವಂತಹ ಸಂಕಲ್ಪ ಮಾಡಬೇಕು.
ಇದ್ದಷ್ಟು ದಿನ ಒಳ್ಳೆಯ ಕೆಲಸ ಮಾಡಬೇಕು, ತನ್ನತನವನ್ನು ಬಿಟ್ಟು ಮನುಷ್ಯ ಬದುಕಬಾರದು.
ಹಬ್ಬ ,ಜಾತ್ರೆ, ದೇವತಾ ಉತ್ಸವಗಳು ಮನಸ್ಸಿನ ಗೊಂದಲ ದೂರ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತವೆ. ಎಲ್ಲರೂ ನಮ್ಮವರೇ ಎಂಬ ಭಾವನೆ ಯೊಂದಿಗೆ ಬದುಕು ಕಟ್ಟು ಕೊಂಡಾಗ, ಸಮಾಜ ನಮ್ಮನ್ನು ಗೌರವಿಸಲಿದ್ದು ಯಶಸ್ವಿ ಜೀವನ ನಿಮ್ಮದಾಗಲಿದೆ.
ಶ್ರೀ ಮಹಾಲಕ್ಷ್ಮಿ ತಾಯಿ ನಾಡಿಗೆ ಸುಭಿಕ್ಷೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಕಾಂಗ್ರೆಸ್ ಯುವ ನಾಯಕ ಸಂಜಯ್ ಜಯಚಂದ್ರ ಮಾತನಾಡಿ ಶಿರಾ ಕ್ಷೇತ್ರದ ಬರ ನೀಗಿಸಬೇಕೆಂಬ ದೂರ ದೃಷ್ಟಿ ಆಲೋಚನೆಯೊಂದಿಗೆ 22 ವರ್ಷಗಳಿಂದ ಸತತವಾಗಿ ಹೇಮಾವತಿ ನೀರು ಶಿರಾ ಕ್ಷೇತ್ರಕ್ಕೆ ಹರಿದು ಕೆರೆಗಳು ಭರ್ತಿಯಾದ ಕಾರಣ, ಇಂತಹ ಮಳೆಯ ಕೊರತೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉದ್ದವಾಗಿಲ್ಲ, ದೂರ ದೃಷ್ಟಿ ಅಭಿವೃದ್ಧಿಯ ಹರಿಕಾರ ಶಾಸಕ ಟಿ.ಬಿ. ಜಯಚಂದ್ರರವರು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ರಾಜ್ಯಕ್ಕೆ ಮಾದರಿ. ಗ್ರಾಮಗಳಲ್ಲಿ ನೂತನ ದೇವಸ್ಥಾನ ಸ್ಥಾಪನೆ ಮಾಡಿ ದೇವರಿಗೆ ಶ್ರದ್ಧೆ ಭಕ್ತಿ ಹಾಗೂ ಮುಗ್ಧ ಮನಸ್ಸಿನಿಂದ ಆರಾಧಿಸಿದರೆ ತಮ್ಮೆಲ್ಲ ಇಷ್ಟಾರ್ಥಗಳು ಸಿದ್ಧಿಗೊಳಲಿವೆ. ಶ್ರೀ ಮಹಾಲಕ್ಷ್ಮಿ ತಾಯಿ ಸರ್ವರಿಗೂ ಒಳಿತನ್ನು ಮಾಡಲಿ ಎಂದರು.
ಶ್ರೀ ಮಹಾಲಕ್ಷ್ಮಿ ಅಮ್ಮನವರಿಗೆ ನೂರಾರು ಮಹಿಳೆಯರು ಆರತಿ ಉತ್ಸವ ನೆರವೇರಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಪೂಜಾರ್ ಗಿರಿಯಪ್ಪ, ಓಜುಗುಂಟೆ, ಮಂಚಲ ದೊರೆ ಮಠ, ಜೋಗಿಹಳ್ಳಿ, ಯರಬಳ್ಳಿ, ಕುಂಟೆ ರಾಮನ ಹಟ್ಟಿ, ಮತೀಕೆರೆ ಗ್ರಾಮಗಳ ಅಣ್ಣ- ತಮ್ಮಂದಿರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು # # KARANATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #

31/07/2025

*ಸಿರಾ ನಗರದ ಶ್ರೀನಿವಾಸನಗರ (ಕರೇಕಲ್ಲಹಟ್ಟಿ) ಯಲ್ಲಿರುವ ಶ್ರೀ ಮೂಡಲಗಿರಿ ತಿಮ್ಮಪ್ಪ ಸ್ವಾಮಿ ದೇವಸ್ಥಾನ ಪ್ರಯಾಂಗಣ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾನ್ಯ ಜನಪ್ರಿಯ ವಿಧಾನ ಪರಿಷತ್ ಶಾಸಕರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಚಿದಾನಂದ್ ಎಂ ಗೌಡ ಅವರ ಭಾಗವಹಿಸಿ, ಸ್ಥಳೀಯ ಮುಖಂಡರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದರು.*
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಗಿರಿಧರ್, ನಗರಸಭೆ ಮಾಜಿ ಸದಸ್ಯರಾದ ನಟರಾಜ್ ಸಂತೆಪೇಟೆ, ನಿವೃತ್ತ ನ್ಯಾಯಾಲಯದ ಶಿರಸ್ತಿದಾರರಾದ ಎಸ್ ಟಿ ಶ್ರೀನಿವಾಸ್, ಹಿರಿಯ ಮುಖಂಡರಾದ ದೇವಕುಮಾರ್, ಮಲ್ಲಿಕಾಪುರ ಮಂಜುನಾಥ್, ಸೈಯದ್ ಬಾಬಾ, ಎಸ್ ಟಿ ಮಂಜುನಾಥ್, ಶಾಂತಕುಮಾರ್, ರೇವಣಸಿದ್ದೇಶ್ವರ, ಶ್ರೀಮತಿ ಮಂಜುಳಾ ಭಾಸ್ಕರ್, ಗೌರಮ್ಮ, ಬಸವರಾಜು, ರಾಮಚಂದ್ರಪ್ಪ, ಹೇಮಂತ್ ಕುಮಾರ್, ರಂಗಪ್ಪ ಮುದಿಗೆರೆ, ವಸಂತಕುಮಾರ್, ಎ ಜಿ ಮಂಜುಳಾ, ಶೋಭಾ, ತುಳಸಮ್ಮ, ಸಮುದಾಯದ ಮುಖಂಡರು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು # # KARNATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #

Address

Yaliyuru
Sira
572137

Telephone

+19008559118

Website

Alerts

Be the first to know and let us send you an email when Karnataka public news posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka public news:

Share