20/05/2025
ಶಿರಾ ನಗರದ ಜೌಹರ್ ಗ್ರೂಪ್ ವತಿಯಿಂದ 14 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು.
ಜೌಹರ್ ಗ್ರೂಪ್ ನ ಅಲ್ ಹಜ್ ದಿವಂಗತ ಸೈಯದ್ ಆಸಿಂ ಸಾಹೇಬ್ ಕುಟುಂಬಸ್ಥರಾದ ಜೌಹರ್ ಗ್ರೂಪ್ ಮಾಲೀಕರಾದ ಸೈಯದ್ ಇಕ್ಬಾಲ್ ರವರ ಮಗ ವೈದ್ಯ ಡಾ.ಸೈಯದ್ ಉಮರ್ ಮದುವೆ ಅಂಗವಾಗಿ ಸಾಮಾಜಿಕ ಚಿಂತನೆಯೊಂದಿಗೆ ಬಡವರಿಗೆ ಆಸರೆ ಆಗಬೇಕೆಂಬ ದೂರ ದೃಷ್ಟಿಯಿಂದ 14 ಜೋಡಿಗಳಿಗೆ ಪ್ರತಿ ಜೋಡಿಗಳಿಗೆ ವಧುವಿಗೆ 3 ಗ್ರಾಂ ಚಿನ್ನದ ಓಲೆ, ವರನಿಗೆ ಬೆಳ್ಳಿ ಉಂಗುರ, ಬಟ್ಟೆ, ಬೀರು, ಮಂಚ, ಹಾಸಿಗೆ, ಮೂರು ತಿಂಗಳ ದವಸಧಾನ್ಯ ನೀಡುವ ಮೂಲಕ ವಿಶೇಷ ರೀತಿ 14 ಜೋಡಿಗಳ ವಿವಾಹವನ್ನು ನೆರವೇರಿಸುವ ಮೂಲಕ ಸಮಾಜಕ್ಕೆ ಮಾದರಿಯಾದರು.
ಜೌಹರ್ ಗ್ರೂಪ್ ಸೈಯದ್ ಇಮ್ರಾನ್ ಸಾಮೂಹಿಕ ಮದುವೆಗಳ ಉಸ್ತವಾರಿ ವಹಿಸಿದ್ದರು.
ಸಂದರ್ಭದಲ್ಲಿ ಬೇಗ ಮೊಹಲ್ಲಾ ಫ್ರೆಂಡ್ಸ್ ವೆಲ್ಫೇರ್ ಆರ್ಗ ನೇಶನ್ ನ ನಾಸಿರ್ ಖಾನ್, ಆತಿಮ್ ಖಾನ್, ಕರೀಮ್ ಸಾಬ್, ಇಲಿಯಾಸ್ ಖಾನ್ ಸೇರಿದಂತೆ ಶಿರಾನಗರದ ಹಲವಾರು ಮುಖಂಡರು ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಧುವರರಿಗೆ ಆಶೀರ್ವಾದ ಮಾಡಿದರು.
ಜೌಹರ್ ಗ್ರೂಪ್ ನ ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.