23/09/2025
#ಕುಂಚಿಟಿಗ ಸಮುದಾಯದ #ಯುವಕರ #ಭವಿಷ್ಯದ # ದೃಷ್ಟಿಯಿಂದ ಜಾತಿ ಕಲಂ ನಲ್ಲಿ #ಒಕ್ಕಲಿಗ #, ಉಪ ಜಾತಿ #ಕಲಂನಲ್ಲಿ #ಕುಂಚಿಟಿಗ #, ಧರ್ಮ ಹಿಂದೂ ಎಂದು #ಬರೆಸಲು # ಸಭೆಯಲ್ಲಿ #ನಿರ್ಣಯ : #ನಂಜಾವಧೂತ ಶ್ರೀ #
#ಸರ್ಕಾರ #ಕೈಗೊಂಡಿರುವ # ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿ ಜನಗಣತಿ ವಿಚಾರವಾಗಿ ಕುಂಚಿಟಿಗರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನು ಪ್ರಜ್ಞಾವಂತರು ಅರ್ಥ ಮಾಡಿಕೊಳ್ಳಬೇಕಿದ್ದು, ಕುಂಚಿಟಿಗರು ಜಾತಿ ಕಲಂ ನಲ್ಲಿ ಒಕ್ಕಲಿಗ ಎಂದು, ಉಪಜಾತಿ ಕಲಂ ನಲ್ಲಿ ಕುಂಚಿಟಿಗ ಎಂದು, ಧರ್ಮ ಹಿಂದೂ ಎಂದು ಬರೆಸುವ ಮೂಲಕ ಒಕ್ಕಲಿಗ ಸಮುದಾಯದ ನೆರಳಲ್ಲಿ ಓಬಿಸಿ ಮೀಸಲಾತಿ ಪಡೆಯಲು ಮುನ್ನುಡಿ ಬರೆಯಬೇಕಾಗಿದೆ ಎಂದು
ಸ್ಫಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಜಾಗೃತಿ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ನಮಗೆ ಯಾರು ಬೆದರಿಸಿ ಹೆದರಿಸಿ ಒಕ್ಕಲಿಗ ಎನ್ನುವಂತೆ ಹೇಳಿಲ್ಲ ನಾವು ಮೂಲದಲ್ಲಿ ಕುಂಚ ಒಕ್ಕಲಿಗ ರಾಗಿದ್ದು ನೇಗಿಲು ಹಿಡಿದು ದುಡಿಯುವ ಕಾರಣ ಒಕ್ಕಲಿಗರಾಗಿದ್ದೇವೆ ಇದನ್ನು ಮರೆಮಾಚಿ ನಾವು ಸ್ವತಂತ್ರ ಅಸ್ತಿತ್ವ ಹೊಂದಿರುವ ಜಾತಿ ಎಂದು ಪ್ರಚಾರ ಮಾಡುತ್ತಾರೆ ಅದರೆ ಒಕ್ಕಲಿಗ ಜಾತಿಯ ಉಪ ಜಾತಿಯಾಗಿ ಕುಂಚಿಟಿಗ ಇದೆ ಇದನ್ನು ಅರಿಯಬೇಕಿದೆ ಎಂದರು.
ಅಪಪ್ರಚಾರ ಗಳನ್ನು ನಂಬದೆ ಎಲ್ಲರೂ ಸಮೀಕ್ಷೆ ಸಮಯದಲ್ಲಿ ಒಕ್ಕಲಿಗ ಜಾತಿ, ಕುಂಚಿಟಿಗ ಉಪಜಾತಿ ಎಂದು ಬರೆಸಬೇಕೆಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದ ದೆಹಲಿ ವಿಶೇಷ ಪ್ರತಿನಿಧಿ
ಶಾಸಕ ಟಿ.ಬಿ.ಜಯಚಂದ್ರ ನಾವು ರಾಜಕೀಯವಾಗಿ ಪ್ರಬಲರಾಗಬೇಕಾದರೆ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕಿದೆ ನಮ್ಮತನವನ್ನು ಕಳೆದುಕೊಳ್ಳದೆ ನಾವು ಉಳಿಯಬೇಕಿದೆ ಜಾತಿ ಮತ್ತು ನೀರಾವರಿ ಹೋರಾಟದಲ್ಲಿ ನಾನು ಎಂದು ಸೋತಿಲ್ಲ. ಒಕ್ಕಲಿಗ ಸಮುದಾಯದ ಉಪಜಾತಿಯಾಗಿ ಸಮುದಾಯ ಹೋದಾಗ ಮಾತ್ರ ರಾಜ್ಯದಲ್ಲಿ ರಾಜಕೀಯ ಮತ್ತು ಇತರೆ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಪಡೆಯಲು ಸಾಧ್ಯ. ಜೊತೆಗೆ ಒಬಿಸಿ ಮೀಸಲಾತಿ ಸೌಲಭ್ಯ ದೊರೆಯಲಿದ್ದು ಪ್ರತಿಭಾವಂತ ವಿದ್ಯಾರ್ಥಿಗಳು ಐಎಎಸ್ ಐಪಿಎಸ್ ನಂತಹ ಉನ್ನತ ಪದವಿ ಪಡೆಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಜಾತಿ ಒಕ್ಕಲಿಗ, ಉಪಜಾತಿ ಕುಂಚಿಟಿಗ ಎಂದು ಬರೆಸುವಂತೆ ಇದ್ದ ಸಮುದಾಯದ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹುಟ್ಟಿನಿಂದ ನಾನು ಕುಂಚಿಟಿಗ , ಆದರೆ ನಾವು ಒಕ್ಕಲುತನ ಮಾಡಿ ಒಕ್ಕಲಿಗರಾಗಿದ್ದೇವೆ ಇತರೆ ಸಮುದಾಯ ಕೂಡ ನಮ್ಮನ್ನು ಒಕ್ಕಲಿಗರ ಎಂದೇ ಕರೆಯುತ್ತಾರೆ. ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಬಲಿಷ್ಠವಾಗಬೇಕೆಂದರೆ ಒಕ್ಕಲಿಗ ಜಾತಿ ಎಂದೇ ನಮೂದಿಸಬೇಕು ಎಂದರು.
ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ ಕುಂಚಿಟಿಗ ಸಮುದಾಯ ಪ್ರತ್ಯೇಕ ಜಾತಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ , ಸಮೀಕ್ಷೆಯಲ್ಲಿ ಕುಂಚಿಟಿಗ ಜಾತಿಯೆಂದು ನಮೂದಿಸಿದರೆ ಸಮೀಕ್ಷೆ ನಂತರ ಬರುವ ವರದಿಗಳು ನಾವು ಆರ್ಥಿಕವಾಗಿ ಮುಂದುವರಿದ ಸಮುದಾಯ ಎಂದು ಗುರುತಿಸಲಿದ್ದಾರೆ. ಇದರಿಂದ ಓಬಿಸಿ ಮೀಸಲಾತಿ ಸೌಲಭ್ಯ ವಂಚಿತರಾಗಲಿದ್ದೇವೆ. ಶ್ರೀ ನಂಜಾವಧೂತ ಮಹಾಸ್ವಾಮಿಜಿಗಳು ಸಮುದಾಯದ ಮುಂದಿನ ಯುವಕರ ಮುಂದಿನ ಭವಿಷ್ಯಕ್ಕಾಗಿ ಉತ್ತಮ ಸಲಹೆಯನ್ನು ನೀಡಿದ್ದಾರೆ ಆದ್ದರಿಂದ ಶ್ರೀಗಳ ಸಲಹೆಯಂತೆ ನಡೆಯುವುದು ಸೂಕ್ತ ಎಂದರು.
ಜೆಡಿಎಸ್ ಮುಖಂಡ ಅರ್.ಉಗ್ರೇಶ್ ಮಾತನಾಡಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಜಾತಿ ಜನಗಣತಿಯಲ್ಲಿ ಕುಂಚಿಟಿಗ ಸಮುದಾಯ ಜಾತಿ ಕಲಂ ನಲ್ಲಿ ಒಕ್ಕಲಿಗ ಎಂದೇ ಬರೆಸಿ ಎಂದರು.
ಸೂಡ ಅಧ್ಯಕ್ಷ ಪಿ.ಅರ್.ಮಂಜುನಾಥ್,
ಕೆ.ಅರ್.ಎಸ್ ಫೌಂಡೇಷನ್ ನ ಎ.ಅರ್.ಶ್ರೀನಿವಾಸಯ್ಯ, ಗಂಗವಾಹಿನಿ ಪತ್ರಿಕೆ ಸಂಪಾದಕ ಕಾಮರಾಜು, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್. ರಾಮಕೃಷ್ಣ, ಜೆಡಿಎಸ್ ಮುಖಂಡ ಯಶೋಧರ ,ಶಿವಪ್ರಸಾದ್,
ಕುಂಚಿಟಿಗರ ಸಂಘದ ನಿರ್ದೇಶಕರಾದ ಹಾಲಗುಂಡೆಗೌಡ, ರಾಧಕೃಷ್ಣ, ಬೊಪ್ಪಣ್ಣ, ಸತ್ಯನಾರಾಯಣ, ಡಿ.ಸಿ.ಅಶೋಕ್, ನಗರಸಭೆ ಸದಸ್ಯ ಉಮಾ ವಿಜಯರಾಜು, ಹುಲಿಕುಂಟೆ ಗ್ರಾ.ಪಂ.ಅಧ್ಯಕ್ಷ ರವಿಕುಮಾರ್, ಕಳ್ಳಂಬೆಳ್ಳ ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಮುಖಂಡರಾದ ರವೀಂದ್ರಪ್ಪ, ಡಿ.ಯಶೋಧರ್, ಮಂದಲಹಳ್ಳಿ ನಾಗರಾಜ್, ಕಾಮರಾಜ್ ,ಹೊರಕೇರಪ್ಪ ,ಮಧುಸೂದನ್, ದಯಾನಂದಗೌಡ,ಲಿಂಗದಹಳ್ಳಿ ಚೇತನ್ ಕುಮಾರ್, ಚನ್ನಕೇಶವ, ನರಸಿಂಹಯ್ಯ , ಯುವ ಜೆಡಿಎಸ್ ತಾಲೂಕ ಅಧ್ಯಕ್ಷ ಪುನೀತ್ ಗೌಡ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಜಯಣ್ಣ ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದರು.