10/02/2026
ಶಿರಸಿ- ಇಸ್ಪೀಟ್ ಅಡ್ಡಗಳಲ್ಲಿ ಅಡಿಕೆ-ಬಾಳೆಗೊನೆಗಳ ಆರ್ತನಾದ..!
ಶಿರಸಿ ಪಟ್ಟಣದಲ್ಲಿ ಕಾರ್ಯಾಚರಿಸುತ್ತಿರುವ 9ರಿಂದ 10 ಇಸ್ಪೀಟ್ ಅಡ್ಡಗಳು
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ವಾಣಿಜ್ಯ ನಗರಿ ಶಿರಸಿಯಲ್ಲಿ ಕಳೆದ ಎರಡು ವರ್ಷಗಳಿಂದ ಇಸ್ವೀಟ್ ಅಡ್ಡಗಳಿಗೆ ಲಗಾಮ ಹಾಕಲಾಗಿತ್ತು. ಆದರೆ ಈಗ ಕಳೆದ ಎರಡು ತಿಂಗಳಿಂದ ಈ ಇಸ್ಪೀಟ್ ಅಡ್ಡಗಳು ಪುನ: ಜೀವಂತಿಕೆ ಪಡೆದುಕೊಳ್ಳುತ್ತಿವೆ.ಒಂದು ಮೂಲದ ಪ್ರಕಾರ ಶಿರಸಿ ತಾಲೂಕಿನ ಬೈರುoಬೆ ಸಮೀಪದ ರೆಸಾರ್ಟ್ ಒಂದರಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡ ಮೇಲೆ ಪೊಲೀಸ್ ಇಲಾಖೆ ದಾಳಿ ನಡೆಸಿತ್ತು.ಆದರೆ ಈ ಪ್ರಕರಣದಲ್ಲಿ ಕಾನೂನಿನ ಹಿನ್ನಡೆ ಅನುಭವಿಸಿದ ಇಲಾಖೆ ಈಗ ಮೌನಕ್ಕೆ ಜಾರಿರುವುದು ಇಸ್ಪೀಟ್ ಕುಳಗಳಿಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದೆ. ರಿಕ್ರಿಯೆeಶನ್ ಕ್ಲಬ್ ಹೆಸರಲ್ಲಿ ನಡೆಯುತ್ತಿರುವ ಹಲವಾರು ಇಸ್ಪೀಟ್ ಅಡ್ಡಗಳಲ್ಲಿ ರಮ್ಮಿ ಅಷ್ಟೇ ಅಲ್ಲದೆ,ಇತರ ನಿಷೇಧಿತ ಇಸ್ಪೀಟ್ ಆಟ ಹಾಗೂ ಹಣ ಹೂಡಿಕೆ ಆಟ ನಡೆಯುತ್ತಿರುವುದು ಕೇಳಿ ಬರುತ್ತಿದೆ. ಶಿರಸಿ ನಗರದ ಶಿವಾಜಿ ಚೌಕದಲ್ಲಿ ಎರಡು, ದೇವಿಕೆರೆ -ಹೊಸಪೇಟೆ ರಸ್ತೆಯಲ್ಲಿ ಎರಡು, ಶಿರಸಿ ಸಿಪಿ ಬಜಾರ್ ರಸ್ತೆಯಲ್ಲಿ ಒಂದು (ರಮೇಶ ಹೆಗಡೆ)ದುಂಡಸಿ ನಗರದಲ್ಲಿ ಒಂದು, ಟಿಎಸ್ಎಸ್ ರಸ್ತೆಯಲ್ಲಿ ಒಂದು.... ಹೀಗೆ ಇಸ್ಪೀಟ್ ಅಡ್ಡಗಳು ಯಾವುದೇ ಕಡಿವಾಣವಿಲ್ಲದ ರೀತಿಯಲ್ಲಿ ಕಾರ್ಯಾಚರಿಸುತ್ತಿರುವುದು ತಿಳಿದು ಬರುತ್ತಲಿದೆ. ಶಿರಸಿ ನಗರಸಭೆ ಹಕ್ಕಿನ ಆಶ್ರಮದ ಜಾಗ ಲಪಟಾಯಿಸಲು ಹೊರಟಿರುವ ರಮೇಶ ಹೆಗಡೆ ಕೂಡ ಇಲ್ಲಿ ಒಂದು ಇಸ್ಪೀಟ್ ಕ್ಲಬ್ಬಿನ ಮಾಲೀಕ!ಇನ್ನುಳಿದಂತೆ ಈ ಇಸ್ಪೀಟ್ ಅಡ್ಡಗಳಲ್ಲಿ ಕಿಂಗ್ ಪಿನ್ ಪ್ರಕಾಶ ಹೆಗಡೆ, ಕೃಷ್ಣ ಹೆಗಡೆ ಕಾನಗೋಡ, ಶ್ರೀಧರ ಭಟ್, ಪರಮೇಶ್ವರ ಭಟ್, ಸುರೇಶ್ ಬೆಣಗಿ, ಚಂದ್ರು, ವಿನಾಯಕ,ಪ್ರಕಾಶ ಹೆಗಡೆ ಹಲಗೆ.... ಇವು ಶಿರಸಿ ಇಸ್ಪೀಟ್ ಅಡ್ಡದಲ್ಲಿ ಪ್ರಚಲಿತದಲ್ಲಿರುವ ಹೆಸರುಗಳಾಗಿವೆ.ಕಾನೂನು ನಿಯಮಾವಳಿಗಳನ್ನು ತಮ್ಮ ಮನಸ್ಸಿಗೆ ಬಂದಂತೆ ಅರ್ಥೈಸಿ ಹಾಡೇ ಹಗಲು ನಡೆಸುವ ಈ ಇಸ್ಪೀಟ್ ಅಡ್ಡಗಳಲ್ಲಿ ಕೃಷಿಕ ವರ್ಗಕ್ಕೆ ಸೇರಿದ ವಿಶೇಷವಾಗಿ ಇಸ್ಪೀಟ್ ಮೋಹಕ್ಕೆ ದಾಸರಾದ ಹತ್ತು -ಹಲವಾರು ಅಡಿಕೆ, ತೆಂಗು, ಬಾಳೆ ಬೆಳೆಗಾರರು ಹಣವನ್ನು ಜೂಜಿನಲ್ಲಿ ಕಳೆದುಕೊಂಡು ಬರ್ಬಾದ್ ಆಗುತ್ತಿರುವುದು ಕಾಣ ಬರುತ್ತದೆ.ಕೂಡಲೇ ಕಾನೂನು ಬಾಹಿರವಾಗಿ ನಡೆಯುತ್ತಿರುವ ಈ ಇಸ್ಪೀಟ್ ಕ್ಲಬ್ ಗಳನ್ನು ಬಂದ್ ಮಾಡುವಲ್ಲಿ ಇಲಾಖೆ ಕ್ರಮವಹಿಸಬೇಕಾದದ್ದು ಅತ್ಯಂತ ಜರೂರಾಗಿದೆ.ಇದು ಜನರ ಆಗ್ರಹ ಕೂಡ ಆಗಿದೆ.
ಕೃಪೆ: ಪೃಥ್ವಿರಾಜ ನ್ಯೂಸ್