19/03/2023
ಸೋಮವಾರ 20/03/2023 ರಂದು ಶಶಿಭೂಷಣ್ ಹೆಗಡೆಯವರು ಸಿಎಂ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೆ ನಿರ್ಧರಿಸಲಾಗಿತ್ತು ಆದರೆ ಸಿಎಂ ಲಭ್ಯವಿಲ್ಲದ ಕಾರಣದಿಂದ ಯುಗಾದಿ ನಂತರ ಸೇರ್ಪಡೆ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.
ಕೆ ಜಿ ನಾಯ್ಕ್ ಹಣಜಿಬೈಲ್ ಇವರ ಅಪಾರ ಬೆಂಬಲಿಗರು ಸೇರಿದಂತೆ ಈಡಿಗ ಸಮಾಜ ಬಿಜೆಪಿಗೆ ಬೆಂಬಲಿಸುತ್ತಿದ್ದರು ಕಾಗೇರಿಯವರ ದೊಡ್ಡ ವಿರೋಧಿಯಾಗಿ ನಿಂತಿದೆ. ಈ ವಿರೋಧದಿಂದ ಆಗಬಹುದಾದ ದೊಡ್ಡ ಮಟ್ಟದ ಡ್ಯಾಮೇಜ್ ಕಂಟ್ರೋಲ್ ಮಾಡಲು ಶಶಿಭೂಷಣ್ ಹೆಗಡೆಯವರನ್ನು "ಬಿಜೆಪಿಯೇ ಭರವಸೆ" ಎಂದು ಭರವಸೆಗಳ ಮಹಾಪೂರವನ್ನೇ, ನೀಡಿ ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ.
ರೊಟ್ಟಿ ಹಳಸಿತ್ತು, ನಾಯಿ ಹಸಿದಿತ್ತು, ಎನ್ನುವ ಮಾತಿನಂತೆ ಶಶಿಭೂಷಣ್ ಹೆಗಡೆಯವರಿಗೆ ಬಿಜೆಪಿ ಸೇರುವ ಹೊರತಾಗಿ ಇನ್ನೂ ಉತ್ತಮ ಆಯ್ಕೆ ಯಾವುದು ಅವರ ಮುಂದೆ ಇರಲಿಲ್ಲ.
ಮುಂದಿನ ಲೋಕಸಭೆ ಚುನಾವಣೆಗೆ ನಿಮ್ಮನ್ನು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುತ್ತೇವೆ ಎನ್ನುವ ಭರವಸೆಯನ್ನು ನೀಡಿರುವ ಬಗ್ಗೆ "ನ್ಯೂಸ್21 ಕನ್ನಡಕ್ಕೆ" ಸ್ಪಷ್ಟವಾದ ಮಾಹಿತಿ ಲಭ್ಯವಾಗಿದೆ.
ದಶಕಗಳಿಂದಲೂ ಲೋಕಸಭಾ ಸ್ಥಾನವನ್ನು ಬ್ರಾಹ್ಮಣರಿಗೆಯೇ ನೀಡುತ್ತಿರುವ ಬಿಜೆಪಿಗೆ ಹಿಂದುತ್ವ ಎಂದರೆ ಕೇವಲ ಬ್ರಾಹ್ಮಣರೆ? ಬಿಜೆಪಿ ಕೇವಲ ಬ್ರಾಹ್ಮಣರಿಗೆ ಸೇರಿದೆಯೇ? ಬಿಜೆಪಿಗೆ ಹಿಂದುಳಿದ ವರ್ಗದವರು ಕೇವಲ ಬ್ಯಾನರ್ ಕಟ್ಟಲು , ಬಾವುಟ ಹಿಡಿದುಕೊಳ್ಳಲು ಮಾತ್ರ ಬೇಕಾಗಿದ್ದಾರ? ಎನ್ನುವ ಪ್ರಶ್ನೆ ಈಗಾಗಲೇ ಹಿಂದುಳಿದ ವರ್ಗದವರು ಪ್ರಬಲವಾಗಿ ಕೇಳಲು ಪ್ರಾರಂಭಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಪ್ರಬಲವಾಗಿ ಹಿಂದುಳಿದ ವರ್ಗದ ಗಟ್ಟದ ಕೆಳಗಿನ ವ್ಯಕ್ತಿಗಳಿಗೆ ಲೋಕಸಭಾ ಟಿಕೆಟ್ ಅನ್ನು ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ಈಗಾಗಲೇ ಸ್ಪಷ್ಟವಾಗುತ್ತಿದೆ.
ಕೆ ಜಿ ನಾಯ್ಕ ಹಣಜಿಬೈಲ್ ಇವರಿಗಾಗಿರುವ ಅನ್ಯಾಯ, ಕಿರುಕುಳ ದ ಜೊತೆಗೆ ಕ್ಷೇತ್ರದಲ್ಲಿ ನಡೆದ ಎಲ್ಲಾ ಕಳಪೆ ಕಾಮಗಾರಿಗಳು, ಅಧಿಕಾರಿ ವರ್ಗದಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ, ಶಿರಸಿಯ ಪ್ರಖ್ಯಾತ ವಕೀಲರೊಬ್ಬರಿಂದ ಶಾಸಕರ ಪರವಾಗಿ ನಡೆಯುತ್ತಿರುವ ದೊಡ್ಡ ಮಟ್ಟದ ವ್ಯವಹಾರಗಳಿಂದ, ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತಿರುವ ಶಾಸಕರಿಂದ ದೂರವಾಗಿರುವ ಮತದಾರರನ್ನು ಬಿಜೆಪಿಯತ್ತ ಕರೆ ತರುವುದು ಶಶಿಭೂಷಣ್ ಹೆಗಡೆಯವರಿಂದ ಸಾಧ್ಯವಾಗುವುದೆ ಎನ್ನುವ ಪ್ರಶ್ನೆ ಗೆ ಚುನಾವಣೆ ನಂತರವೇ ಉತ್ತರ ದೊರೆಯಲಿದೆ.
ಹಲವಾರು ಬಾರಿ ರಾಜಕೀಯವಾಗಿ ಎಡವಿದರೂ
ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಜೆಪಿಯವರ ಭರವಸೆಗಳನ್ನು ನಂಬಿಕೊಂಡು ಬಿಜೆಪಿ ಸೇರುತ್ತಿರುವ ಶಶಿಭೂಷಣ್ ಹೆಗಡೆಯವರ ನಡೆ ಅವರ ರಾಜಕೀಯ ಆತ್ಮಹತ್ಯೆ, ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ವಿಶೇಷ ಸುದ್ದಿಗಳಿಗಾಗಿ "NEWS21 KANNADA" Like ಮಾಡಿ follow ಮಾಡಿ.