23/06/2025
ಮದುವೆಯಲ್ಲಿ ಅರುಂಧತಿ ನಕ್ಷತ್ರ ದರ್ಶನ ಮಾಡುವ ಔಚಿತ್ಯ
ವೈದಿಕ ವಿವಾಹ ಆಚರಣೆಗಳಲ್ಲಿ ವರನು ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮುಖ್ಯ ಸಂಪ್ರದಾಯವಾಗಿದೆ.
ವಶಿಷ್ಠ (Mizar) ಹಾಗೂ ಅರುಂಧತಿ (Alcor) ಅವಳಿ ನಕ್ಷತ್ರಗಳು. ಸಪ್ತರ್ಷಿ ಮಂಡಲದ (Ursa Major) ತುದಿಯಿಂದ ಮರೀಚಿಯ (Alkaid) ನಂತರದ ಎರಡನೆಯ ಸ್ಥಾನ ವಶಿಷ್ಠ ಹಾಗೂ ಅದಕ್ಕೆ ಅಂಟಿಕೊಂಡಂತೆ ಪಕ್ಕದಲ್ಲಿರುವುದೇ ಅರುಂಧತಿ ನಕ್ಷತ್ರ. ಇವೆರಡೂ ಅವಳಿ ನಕ್ಷತ್ರಗಳು.
ಖಗೋಳಶಾಸ್ತ್ರದಲ್ಲಿ ಅವಳಿ ನಕ್ಷತ್ರಗಳೆಂದರೆ ಒಂದು ನಕ್ಷತ್ರವನ್ನು ಇನ್ನೊಂದು ನಕ್ಷತ್ರವು ಸುತ್ತುವುದು. ಆದರೆ ವಶಿಷ್ಠ-ಅರುಂಧತಿಯ ವಿಷಯದಲ್ಲಿ ಈ ನಿಯಮ ಬೇರೆ ಆಯಾಮ ಹೊಂದಿದೆ.
ವಶಿಷ್ಠ-ಅರುಂಧತಿಗಳು ಪರಸ್ಪರ ಒಂದರ ಸುತ್ತು ಇನ್ನೊಂದು ಸುತ್ತುತ್ತವೆ. ಇದು ಖಗೋಳ ಸೋಜಿಗ. ಮತ್ತೆಲ್ಲಿಯೂ ಇಂಥ ಉದಾಹರಣೆಗಳಿಲ್ಲ. ವಶಿಷ್ಠ-ಅರುಂಧತಿ ನಕ್ಷತ್ರಗಳು ಪರಸ್ಪರ ಒಂದರ ಸುತ್ತ ಇನ್ನೊಂದು ಸದಾ ಸುತ್ತುತ್ತಿರುತ್ತವೆಯೆಂಬ ವಿಷಯವನ್ನು ಆಧುನಿಕ ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.
ಪೌರಾಣಿಕವಾಗಿ ವಶಿಷ್ಠ-ಅರುಂಧತಿಯರದು ಆದರ್ಶ ಜೋಡಿ. ಅವರು ಪರಸ್ಪರ ಗೌರವ ಕೊಟ್ಟು ಆದರ್ಶ ಬದುಕು ನಡೆಸುತ್ತಾರೆ. ಎಂಥ ಕಠಿಣ ಸಮಯದಲ್ಲಿಯೂ ಲೋಕಕಲ್ಯಾಣಕ್ಕಾಗಿ ಕಂಕಣಬದ್ಧರಾಗಿರುತ್ತಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇವರು ಬಾಳುವ ರೀತಿ ನೂತನ ವಧು-ವೃರಿಗೆ ಆದರ್ಶವಾಗಲಿ ಎಂಬುದೇ ಪ್ರಾಚೀನರ ಆಶಯ. ಹಳೆಯ ಕಾಲದಲ್ಲಿ ಅರುಂಧತಿ ದರ್ಶನವನ್ನು ಸಂಧ್ಯಾ ಕಾಲದ ನಂತರ ಮಾಡಿಸಲಾಗುತ್ತಿತ್ತು. ಅದು ಸರಿಯಾದ ಸಮಯ. ಆದರೆ ಈಗ ಸಂಜೆ ಯ ಒಳಗೆ ಗಂಡಿನ ಕಡೆಯವರು ಹೊರಟುಬಿಡುವುದರಿಂದ ಸಂಪ್ರದಾಯವು ಮಾತ್ರ ಉಳಿದಿದೆ.
ಆದರೂ ವೈದಿಕ ಮದುವೆಗಳು ಅರುಂಧತಿ ದರ್ಶನವಿಲ್ಲದೇ ಪೂರ್ಣಗೊಳ್ಳುವುದಿಲ್ಲ.
ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ನಮ್ಮ ಋಷಿ_ಮುನಿಗಳು ಇಂಥ ಗಹನ ವಿಷಯಗಳನ್ನು ಬರಿಗಣ್ಣಿನಿಂದಲೇ ಗುರುತಿಸಿ, ಅದಕ್ಕೊಂದು ಧಾರ್ಮಿಕ, ಕೌಟುಂಬಿಕ ಆಚರಣೆಯನ್ನು ನೀಡಿ ಸಂಪ್ರದಾಯಗಳನ್ನು ಸಶಕ್ತವಾಗಿ ಕಟ್ಟಿರುವುದು ಸೋಜಿಗವೇ ಸರಿ.
ಮುಂದುವರೆಯುವುದು
ಪ್ರಶಾಂತ ಭಟ್, ಕೋಟೇಶ್ವರ
9886600332
************************************
ಆಧ್ಯಾತ್ಮಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಾಹಿತಿಯನ್ನು ನಿಮ್ಮ ವಾಟ್ಸಪ್ ನಲ್ಲಿ ಪಡೆಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, ಫಾಲೋ ಬಟನ್ ಒತ್ತಿ
►Join Jnānadā Info - ಜ್ಞಾನದಾ Official WhatsApp channel
https://whatsapp.com/channel/0029VaBpVR5BVJl0IPE0lC1Q
SUBSCRIBE TO OUR YouTube CHANNEL 👇
https://youtube.com/?si=yxBNHkmFsi3BrHjO