Praja dhvani 18

Praja dhvani 18 News Hub

26/08/2026

ಬಸ್ ಪ್ರಯಾಣದ ವೇಳೆ ನರ್ಸಮ್ಮನಿಗೆ ಭರವಸೆ ನೀಡಿ ಬಳಿಕ ಕೈಕೊಟ್ಟಿದ್ದಾರೆ ಎನ್ನಲಾದ ಬಸ್ ಕಂಡಕ್ಟರ್ ವಿರುದ್ಧ ಆರೋಪ ಕೇಳಿಬಂದಿದೆ. ಘಟನೆ ಕುರಿತು ನರ್ಸಮ್ಮ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ. #ನರ್ಸಮ್ಮ #ಬಸ್_ಕಂಡಕ್ಟರ್ #ಕೈಕೊಟ್ಟ_ಕಂಡಕ್ಟರ್ #ಕರ್ನಾಟಕ #ಪ್ರಜಾಧ್ವನಿ18

26/08/2026

KPSC ವಿದ್ಯಾರ್ಥಿಗಳಿಗೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿ ABVP ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರ ಹಾಗೂ ಶಿಕ್ಷಣ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ನ್ಯಾಯ ಸಿಗಲಿ ಎಂಬುದು ಹೋರಾಟಗಾರರ ಒತ್ತಾಯ. #ಕರ್ನಾಟಕ #ವಿದ್ಯಾರ್ಥಿಹೋರಾಟ #ನ್ಯಾಯ_ಸಿಗಲಿ #ಪ್ರಜಾಧ್ವನಿ18

26/08/2026

KPSC ಹಗರಣವನ್ನು CBI ತನಿಖೆಗೆ ವಹಿಸಬೇಕು ಎಂದು ಶಾಂತಿಯುತವಾಗಿ ಹೋರಾಟ ನಡೆಸಿದ ವಿದ್ಯಾರ್ಥಿಗಳ ಬಂಧನಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕಷ್ಟಪಟ್ಟು ಓದಿ ಭವಿಷ್ಯ ಕಟ್ಟಿಕೊಳ್ಳಲು ಮುಂದಾದ ಅಭ್ಯರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಬದಲು, ಆರೋಪಗಳ ಕುರಿತು ಪಾರದರ್ಶಕ ತನಿಖೆ ನಡೆಸಬೇಕು ಎಂಬುದು ಹೋರಾಟಗಾರರ ಒತ್ತಾಯ.

ಭ್ರಷ್ಟಾಚಾರದ ವಿರುದ್ಧ ಪ್ರಶ್ನೆ ಕೇಳುವುದು ಅಪರಾಧವಲ್ಲ. ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. #ಕರ್ನಾಟಕ #ವಿದ್ಯಾರ್ಥಿಗಳಧ್ವನಿ #ನ್ಯಾಯಕ್ಕಾಗಿ_ಹೋರಾಟ

ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪೆಯಿಂದ ನಿಮ್ಮ ಮನೆ-ಮನಗಳಲ್ಲಿ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ನೆಮ್ಮದಿ ಸದಾ ನೆಲೆಸಿರಲಿ ಪ್ರೀತಿಯಿಂದ — ಪ್ರಜ...
21/08/2026

ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪೆಯಿಂದ ನಿಮ್ಮ ಮನೆ-ಮನಗಳಲ್ಲಿ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ನೆಮ್ಮದಿ ಸದಾ ನೆಲೆಸಿರಲಿ ಪ್ರೀತಿಯಿಂದ — ಪ್ರಜಾಧ್ವನಿ 18
ಸತ್ಯವೇ ನಮ್ಮ ಶಕ್ತಿ #ವರಮಹಾಲಕ್ಷ್ಮಿ #ವರಮಹಾಲಕ್ಷ್ಮಿಹಬ್ಬ #ಕರ್ನಾಟಕ

12/08/2026

ಕರ್ನಾಟಕದಲ್ಲಿ ಆಗಸ್ಟ್ 13ರಂದು 12 ಗಂಟೆಗಳ ರಾಜ್ಯವ್ಯಾಪಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ ಎಂದು ವರದಿಯಾಗಿದೆ. ಶಾಲಾ-ಕಾಲೇಜುಗಳು, ಬಸ್ ಸೇವೆಗಳು, ಬ್ಯಾಂಕ್‌ಗಳು ಹಾಗೂ ಸರ್ಕಾರಿ-ಖಾಸಗಿ ಕಚೇರಿಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಗತ್ಯ ಸೇವೆಗಳು ಎಂದಿನಂತೆ ಲಭ್ಯವಿರುವ ಸಾಧ್ಯತೆ ಇದೆ. ಸಾರ್ವಜನಿಕರು ಪ್ರಯಾಣಕ್ಕೂ ಮುನ್ನ ಸ್ಥಳೀಯವಾಗಿ ಅಧಿಕೃತ ಮಾಹಿತಿ ಪರಿಶೀಲಿಸಿ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಮನವಿ. #ಕರ್ನಾಟಕಬಂದ್ #ಕರ್ನಾಟಕ #ಪ್ರಜಾಧ್ವನಿ18

10/08/2026

🚨 ತಾವರೆಕೆರೆ ಬಳಿ ಪೊಲೀಸರಿಂದಲೇ ಟ್ರಾಫಿಕ್ ನಿಯಮ ಉಲ್ಲಂಘನೆ?

ಬೆಂಗಳೂರು ಮಾಗಡಿ ರಸ್ತೆ, ತಾವರೆಕೆರೆ ಸಮೀಪ ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ಸಂಚರಿಸಿರುವ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಾಮಾನ್ಯ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸುವ ಪೊಲೀಸರು, ತಾವೇ ನಿಯಮ ಪಾಲಿಸದಿರುವುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ.

ರಸ್ತೆ ಸುರಕ್ಷತೆ ಹಾಗೂ ಕಾನೂನು ಪಾಲನೆಯ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳೇ ನಿಯಮ ಉಲ್ಲಂಘಿಸಿದರೆ, ಸಾರ್ವಜನಿಕರಿಗೆ ಯಾವ ಸಂದೇಶ ಹೋಗುತ್ತದೆ ಎಂಬ ಪ್ರಶ್ನೆ ಇದೀಗ ಕೇಳಿಬರುತ್ತಿದೆ.

ಈ ಕುರಿತು ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. 🚔

#ತಾವರೆಕೆರೆ #ಮಾಗಡಿರಸ್ತೆ #ಬೆಂಗಳೂರು

17/07/2026

ದಕ್ಷಿಣ ಕನ್ನಡ ಜಿಲ್ಲೆಯ ಬಿಸಿ ರೋಡ್‌ ಬಸ್‌ ನಿಲ್ದಾಣದಲ್ಲಿ 25 ವರ್ಷದ ಲಾವಣ್ಯ ಎಂಬ ಮಹಿಳೆ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಶಂಕಿತ ವ್ಯಕ್ತಿಯೊಬ್ಬ ಬಸ್‌ಗೆ ಏರಿ ಅವರನ್ನು ಬಲವಂತವಾಗಿ ಹೊರಗೆ ಎಳೆದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಲಾವಣ್ಯ ಮೃತಪಟ್ಟಿದ್ದಾರೆ. ಆರೋಪಿ ಪರಾರಿಯಾಗಿದ್ದು, ಬಂಟ್ವಾಳ ಟೌನ್‌ ಪೊಲೀಸರು ಪ್ರಕರಣ ದಾಖಲಿಸಿ ಸಿಸಿಟಿವಿ ದೃಶ್ಯಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳ ಆಧಾರದ ಮೇಲೆ ತನಿಖೆ ಮತ್ತು ಶೋಧ ಕಾರ್ಯ ಮುಂದುವರಿಸಿದ್ದಾರೆ.

14/07/2026

ಬಿಡದಿಯಲ್ಲಿ ಜೆಎಂಸಿ (JMC) ಸರ್ವೇ ನಡೆಸಲು ಬಂದ ಅಧಿಕಾರಿಗಳ ವಾಹನವನ್ನು ಆಕ್ರೋಶಗೊಂಡ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ಭೂಮಾಪನಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸ್ಥಳದಲ್ಲಿದ್ದರು.
#ರೈತರಪ್ರತಿಭಟನೆ #ಬಿಡದಿ #ಕರ್ನಾಟಕ #ಬ್ರೇಕಿಂಗ್‌ನ್ಯೂಸ್

14/07/2026

ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾದ ವ್ಯಕ್ತಿಗೆ ಸಹಪ್ರಯಾಣಿಕರು ಬಸ್ಸಿನಲ್ಲೇ ಧರ್ಮದೇಟು ನೀಡಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
#ಬ್ರೇಕಿಂಗ್‌ನ್ಯೂಸ್ #ಬಸ್ #ವೈರಲ್ #ಕರ್ನಾಟಕ #ಸುದ್ದಿ

13/07/2026

ಸರ್ವೇ ಕಾರ್ಯಕ್ಕಾಗಿ ಸ್ಥಳಕ್ಕೆ ತೆರಳಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರು ಪೊರಕೆ ನೀಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ನಡೆದಿದೆ. ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. #ಕರ್ನಾಟಕ #ಬ್ರೇಕಿಂಗ್‌ನ್ಯೂಸ್ #ಗ್ರಾಮಸ್ಥರಪ್ರತಿಭಟನೆ #ಸರ್ವೇ

Address

Shettihalli
Tumkur
572102

Website

Alerts

Be the first to know and let us send you an email when Praja dhvani 18 posts news and promotions. Your email address will not be used for any other purpose, and you can unsubscribe at any time.

Shortcuts

Share