01/04/2025
*ವನಸಿರಿ ಪೌಂಡೇಷನ್ ನಿಂದ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 118 ನೇ ಜಯಂತಿ ಹಾಗೂ ಎಪ್ರೀಲ್ ಕೂಲ್ ಆಚರಣೆ*
ಸಿಂಧನೂರಿನ ನಟರಾಜ ಕಾಲೋನಿಯ ರಾಜೇಂದ್ರ ಕುಮಾರ ಮೆಮೋರಿಯಲ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪೌಂಡೇಷನ್ (ರಿ)ರಾಜ್ಯ ಘಟಕ ರಾಯಚೂರು ವತಿಯಿಂದ
ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 118 ನೇ ಜಯಂತಿ ಅಂಗವಾಗಿ ಅನ್ನದಾಸೋಹ ಹಾಗೂ ಎಪ್ರೀಲ್ ಕೂಲ್ ಪಕ್ಷಿಗಳ ಅರವಟ್ಟಿಗೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪೂಜ್ಯರು, ಗಣ್ಯವ್ಯಕ್ತಿಗಳು
ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ,ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ದಾಹ ತೀರಿಸಲು ಮಣ್ಣಿನ ಮಡಿಕೆ ಕಟ್ಟಿ ನೀರು ಹಾಕಿ ಎಪ್ರೀಲ್ ಪೂಲ್ ಬದಲಿಗೆ ಎಪ್ರೀಲ್ ಕೂಲ್ ಕಾರ್ಯಕ್ರವನ್ನು ಉದ್ಘಾಟಿಸಿದರು.ನಂತರ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಶ್ರೀ ಸದಾನಂದ ಶರಣರು ಸಿದ್ಧಾಶ್ರಮ ಬಂಗಾರಿ ಕ್ಯಾಂಪ್, ವನಸಿರಿ ಅಮರೇಗೌಡ ಮಲ್ಲಾಪುರ,ಅಮರೇಗೌಡ ವಕೀಲರು,ಅಶೋಕ ಗದ್ರಟಗಿ, ಬಸವರಾಜ ನಾಡಗೌಡ, ಅಮರಯ್ಯ ಸ್ವಾಮಿ ಅಲಬನೂರು,ಸೋಮನಗೌಡ ಬಾದರ್ಲಿ,ಬಸವರಾಜ ಸಾಹುಕಾರ ವಕೀಲರು, ಅಶೋಕ GJ ಗುತ್ತಿಗೆದಾರರು, ರಾಜೂಗೌಡ ಬಾದರ್ಲಿ, ಶಿವನಗೌಡ ಗೊರೇಬಾಳ, ಬಸವರಾಜ NGO, ಪಂಪಯ್ಯ ಸ್ವಾಮಿ ಸಾಲಿಮಠ,ತಿಮ್ಮಣ್ಣ ಸಾಹುಕಾರ ಕುರಕುಂದಿ, ರಾಜೇಂದ್ರ ಮೆಮೋರಿಯಲ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮುಖ್ಯ ಗುರುಗಳು ಹಾಗೂ ಶಿಕ್ಷಕರ ವರ್ಗದವರು, ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲೆ ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮುಖಂಡರು,ವನಸಿರಿ ಪೌಂಡೇಷನ್ ಸದಸ್ಯರು,ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು,ಪರಿಸರ ಪ್ರೇಮಿಗಳು ಇನ್ನಿತರರು ಇದ್ದರು.