CBS Kumar Belavadi

CBS Kumar Belavadi MLA Suresh Baabu C B ರವರ IT ವಿಂಗ್ (ಮಾಹಿತಿ ತಂತ್ರಜ್ಞಾನದ) ಅಧ್ಯಕ್ಷ

03/09/2026
02/09/2026

ನಮ್ಮ ತಾಲ್ಲೂಕಿನ ಹೇಮಾವತಿ ಹರಿಕಾರ

02/09/2026

ಈ ಹಳ್ಳಿಯ ಸೊಗಡು ನೋಡಲು ಚೆಂದ! ❤️

ಇದು ಕೇವಲ ಗ್ರಾಮೀಣ ಬದುಕಿನ ಸೊಗಡಲ್ಲ… ಗ್ರಾಮೀಣ ಭಾಗದ ಪ್ರತಿಭೆಯ ಅನಾವರಣ

ಜನರ ಮನವಿಗೆ ಸ್ಥಳದಲ್ಲೇ ಸ್ಪಂದನೆ  #ಬುಕ್ಕಾಪಟ್ಟಣ ಹೋಬಳಿ,  #ಹುಯಿಲ್‌ದೊರೆ ಗ್ರಾಮದ ಗ್ರಾಮಸ್ಥರು  #ಕುಡಿಯುವ ನೀರಿನ ಯೋಜನೆ ಕಲ್ಪಿಸುವಂತೆ ಹಾಗೂ...
02/09/2026

ಜನರ ಮನವಿಗೆ ಸ್ಥಳದಲ್ಲೇ ಸ್ಪಂದನೆ
#ಬುಕ್ಕಾಪಟ್ಟಣ ಹೋಬಳಿ, #ಹುಯಿಲ್‌ದೊರೆ ಗ್ರಾಮದ ಗ್ರಾಮಸ್ಥರು #ಕುಡಿಯುವ ನೀರಿನ ಯೋಜನೆ ಕಲ್ಪಿಸುವಂತೆ ಹಾಗೂ #ಎತ್ತಿನಹೊಳೆ ಯೋಜನೆಯಿಂದ ಬರುವ ನೀರನ್ನು ಗ್ರಾಮದ ಕೆರೆಗೆ ಹರಿಸುವಂತೆ ಮನವಿ ಸಲ್ಲಿಸಿದರು.
ಗ್ರಾಮಸ್ಥರ ಮನವಿಯನ್ನು ಆಲಿಸಿ, ಈ ಕುರಿತು ಸಂಬಂಧಪಟ್ಟ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಜನರ ಮೂಲಭೂತ ಅಗತ್ಯಗಳಿಗೆ ಸ್ಪಂದಿಸಿ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲಾಗುವುದು

ಆತ್ಮೀಯ ಭೇಟಿ ಹಾಗೂ ಸಮಾಜಮುಖಿ ಕಾರ್ಯ #ಬುಕ್ಕಾಪಟ್ಟಣ ಹೋಬಳಿಯ   ಸದಸ್ಯರು ಹಾಗೂ  #ಉದ್ಭವ ಗಣಪತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಬಿ.ಜೆ.  #ಶಾಂತ...
02/09/2026

ಆತ್ಮೀಯ ಭೇಟಿ ಹಾಗೂ ಸಮಾಜಮುಖಿ ಕಾರ್ಯ
#ಬುಕ್ಕಾಪಟ್ಟಣ ಹೋಬಳಿಯ ಸದಸ್ಯರು ಹಾಗೂ #ಉದ್ಭವ ಗಣಪತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಬಿ.ಜೆ. #ಶಾಂತಕುಮಾರ್ ಅವರನ್ನು ಆತ್ಮೀಯವಾಗಿ ಭೇಟಿ ಮಾಡಲಾಯಿತು.
ಉದ್ಭವ ಗಣಪತಿ ದೇವಸ್ಥಾನದ ಜಮೀನನ್ನು ಸ್ವಚ್ಛಗೊಳಿಸುವ ಮೂಲಕ ಧಾರ್ಮಿಕ ಕ್ಷೇತ್ರದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಅವರು ಕೈಗೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ.
ಧಾರ್ಮಿಕ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಶ್ರೀ ಶಾಂತಕುಮಾರ್ ಅವರ ಸಮಾಜಮುಖಿ ಸೇವಾ ಕಾರ್ಯಗಳು ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ.
ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆ ಹಾಗೂ ಸ್ವಚ್ಛತೆಯ ಮೂಲಕ ನಮ್ಮ ಗ್ರಾಮಗಳ ಸೌಂದರ್ಯ ಮತ್ತು ಪಾವಿತ್ರ್ಯವನ್ನು ಮತ್ತಷ್ಟು ಹೆಚ್ಚಿಸೋಣ.

 #ಹುಳಿಯಾರು ಹೋಬಳಿ,  #ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ  #ರಾಮನಗರ  #ಕಾಲುವೆದಾರಿಯಲ್ಲಿ ಹಲವು ಕುಟುಂಬಗಳು ವಾಸವಾಗಿದ್ದು, ರಸ್ತೆ ಹಾಗೂ ಸೇತ...
02/09/2026

#ಹುಳಿಯಾರು ಹೋಬಳಿ, #ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ #ರಾಮನಗರ #ಕಾಲುವೆದಾರಿಯಲ್ಲಿ ಹಲವು ಕುಟುಂಬಗಳು ವಾಸವಾಗಿದ್ದು, ರಸ್ತೆ ಹಾಗೂ ಸೇತುವೆ ಸಮಸ್ಯೆಯಿಂದ ಸ್ಥಳೀಯರು ಎದುರಿಸುತ್ತಿರುವ ತೊಂದರೆಯ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಸ್ಥಳೀಯರೊಂದಿಗೆ ಆತ್ಮೀಯವಾಗಿ ಮಾತನಾಡಿ ಅವರ ಸಮಸ್ಯೆಯನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತಕ್ಷಣ ಅಗತ್ಯ ಕ್ರಮ ಕೈಗೊಂಡು ರಸ್ತೆ ಹಾಗೂ ಸೇತುವೆ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸೂಚಿಸಲಾಯಿತು.

ಜನರ ಸಮಸ್ಯೆಗಳನ್ನು ಆಲಿಸುವುದು ಮಾತ್ರವಲ್ಲ, ಅವರ ಜೊತೆ ನಿಂತು ಪರಿಹಾರ ಕಂಡುಕೊಳ್ಳುವುದು ನನ್ನ ಸದಾ ಬದ್ಧತೆ.

ಶಾಲೆಗೆ ಭೇಟಿ – ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳ ಪರಿಶೀಲನೆ 📚 #ಹುಳಿಯಾರು ಹೋಬಳಿ,  #ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ  #ಅಂಬಾರಪು...
02/09/2026

ಶಾಲೆಗೆ ಭೇಟಿ – ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳ ಪರಿಶೀಲನೆ 📚

#ಹುಳಿಯಾರು ಹೋಬಳಿ, #ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ #ಅಂಬಾರಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಮೂಲಭೂತ ಸೌಕರ್ಯಗಳು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳ ಕುರಿತು ಶಿಕ್ಷಕರೊಂದಿಗೆ ಆತ್ಮೀಯವಾಗಿ ಚರ್ಚಿಸಲಾಯಿತು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ನಮ್ಮ ಪ್ರಮುಖ ಆದ್ಯತೆ. ಮಕ್ಕಳ ಭವಿಷ್ಯ ಉತ್ತಮವಾಗಿಸಲು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸದಾ ಹೆಚ್ಚಿನ ಒತ್ತು ನೀಡಲಾಗುವುದು.

ಶ್ರೀ ಉಡುಸಲಮ್ಮ ದೇವಿಯ ಸನ್ನಿಧಿಯಲ್ಲಿ #ಚಿಕ್ಕನಾಯಕನಹಳ್ಳಿ ತಾಲ್ಲೂಕು  #ಹೊಸಕೆರೆ 7 ಹಳ್ಳಿಗಳ ಗ್ರಾಮದೇವತೆ  ಶ್ರೀ  #ಉಡುಸಲಮ್ಮ ದೇವಿ ದೇವಾಲಯದ ...
02/09/2026

ಶ್ರೀ ಉಡುಸಲಮ್ಮ ದೇವಿಯ ಸನ್ನಿಧಿಯಲ್ಲಿ
#ಚಿಕ್ಕನಾಯಕನಹಳ್ಳಿ ತಾಲ್ಲೂಕು #ಹೊಸಕೆರೆ 7 ಹಳ್ಳಿಗಳ ಗ್ರಾಮದೇವತೆ ಶ್ರೀ #ಉಡುಸಲಮ್ಮ ದೇವಿ ದೇವಾಲಯದ ನಿರ್ಮಾಣ ಹಂತದಲ್ಲಿರುವ ಕಾಮಗಾರಿಯನ್ನು ಜನಪ್ರತಿನಿಧಿಗಳು, ಮುಖಂಡರು ಹಾಗೂ ಆತ್ಮೀಯರೊಂದಿಗೆ ತೆರಳಿ ವೀಕ್ಷಿಸಿ, ವಿಶೇಷ ಪೂಜೆ ಸಲ್ಲಿಸಿದೆ.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯೊಂದಿಗೆ ಚರ್ಚಿಸಿ, ದೇವಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದೆ. ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ, ಶೀಘ್ರ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದೆ.
ಶ್ರೀ ಉಡುಸಲಮ್ಮ ದೇವಿಯ ದರ್ಶನ ಪಡೆದು, ಕ್ಷೇತ್ರದ ಜನರ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದೆ.
ಎಲ್ಲರ ಮೇಲೂ ಅಮ್ಮನ ಕೃಪಾಶೀರ್ವಾದ ಸದಾ ಇರಲಿ.

 #ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ  #ಕ್ಯಾತನಾಯಕನಹಳ್ಳಿ ಗ್ರಾಮದ ಶ್ರೀ  #ಬಸವೇಶ್ವರ ಸ್ವಾಮಿ ಸನ್ನಿಧಿಗೆ ಜನಪ್ರತಿನಿಧಿಗಳು, ಮುಖಂಡರ...
02/09/2026

#ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ #ಕ್ಯಾತನಾಯಕನಹಳ್ಳಿ ಗ್ರಾಮದ ಶ್ರೀ #ಬಸವೇಶ್ವರ ಸ್ವಾಮಿ ಸನ್ನಿಧಿಗೆ ಜನಪ್ರತಿನಿಧಿಗಳು, ಮುಖಂಡರು ಹಾಗೂ ಆತ್ಮೀಯರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ
ಸ್ವಾಮಿಯ ದರ್ಶನ ಪಡೆದು, ಕ್ಷೇತ್ರದ ಜನರ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದೆ.
ಎಲ್ಲರ ಮೇಲೂ ಶ್ರೀ ಬಸವೇಶ್ವರ ಸ್ವಾಮಿಯ ಕೃಪಾಶೀರ್ವಾದ ಸದಾ ಇರಲಿ.

Address

Belavadi Thimmanahalli Kandikere Chikkanayanahalli
Tumkur
572228

Alerts

Be the first to know and let us send you an email when CBS Kumar Belavadi posts news and promotions. Your email address will not be used for any other purpose, and you can unsubscribe at any time.

Contact The Business

Send a message to CBS Kumar Belavadi:

Shortcuts

Share