
12/09/2025
ಗುಬ್ಬಿ: ಹೇಮಾವತಿ ಎಕ್ಸ್ ಪ್ರೆಸ್ ಕ್ಯಾನಲ್ ಯೋಜನೆಯನ್ನು ವೀಕ್ಷಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್,
ಗುಬ್ಬಿ ತಾಲೂಕು ಸುಂಕಾಪುರ ಬಳಿ ಎಪ್ಪತ್ತನೇ ಮೈಲಿಯಿಂದ ಬೆಂಗಳೂರು ಗ್ರಾಮಾಂತರಕ್ಕೆ ಪೈಪ್ ಲೈನ್ ಮೂಲಕ ನೀರು ತೆಗೆದುಕೊಂಡು ಹೋಗುವ ಯೋಜನೆಗೆ ಈಗಾಗಲೇ ಹಲವು ಹೋರಾಟಗಳು ನೆಡೆದು ಕಾಮಗಾರಿ ಸ್ಥಗಿತವಾಗಿದ್ದ ಕಾರಣ
ಈ ಬಗ್ಗೆ ಕೂಲಂಕುಷವಾಗಿ ಸ್ಥಳ ಪರೀಶೀಲನೆ ಮಾಡಿ ಕೆಲಸ ಪ್ರಾರಂಭಿಸಲು ಇಂದು ಡಿ ಕೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು,
ತಮಿಳುನಾಡು ರೈತರು ಮತ್ತು ನಾವು ಕಾವೇರಿಗೆ ಹೋರಾಟ ಮಾಡಿದಂತೆ ನಮ್ಮ ನಮ್ಮ ನಡುವೆ ಹೋರಾಟ ಮಾಡಿಕೊಂಡರೆ ಹೇಗೆ ಯಾರಿಗೂ ತೊಂದರೆಯಾಗದಂತೆ ಸ್ಕಾಡ ಅಳವಡಿಸಿ ನೀರು ತೆಗೆದುಕೊಂಡುಹೋಗುತ್ತಿವಿ ಇದನ್ನು ಎಲ್ಲಾ ರೈತರು ವೀಕ್ಷಿಸಬಹುದು ಎಂದರು,
ಹೋರಾಟಗಾರರಜೊತೆ ಹಾಗೂ ನಮ್ಮ ಮಿತ್ರರಾದ ಬಿ ಜೆ ಪಿ ಹಾಗೂ ಜೆ ಡಿ ಎಸ್ ಶಾಸಕರ ಜೊತೆ ಚರ್ಚಿಸಿ ಕಾಮಗಾರಿ ಪ್ರಾರಂಭಿಸುತ್ತೇವೆ, ಈಗಾಗಲೇ ಈ ಯೋಜನೆಯ ಪೈಪ್ ಗಳಿಗೆ 300 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸಲಾಗದು ಎಂದರು,
ಈ ಸಂದರ್ಭದಲ್ಲಿ ಕುಣಿಗಲ್ ಶಾಸಕ ಡಾ ರಂಗನಾಥ್ ಮಾತನಾಡಿ ಪ್ರತಿ ವರ್ಷ ನಮಗೆ ಸಿಗಬೇಕಾದ ಪ್ರಮಾಣದಷ್ಟು ನೀರು ಸಿಗುತ್ತಿಲ್ಲ ಆ ಕಾರಣಕ್ಕೆ ಹಿಂದೆ ಕಾಂಗ್ರೆಸ್ ಸರ್ಕಾರ ಈ ಯೋಜನೆ ರೂಪಿಸಿತ್ತು ಆದರೆ ಬಿ ಜೆ ಪಿ ಸರ್ಕಾರ ಬಂದ ಮೇಲೆ ಇದನ್ನು ರದ್ದು ಗೊಳಿಸಿತ್ತು ಈಗ ಯೋಜನೆಯ ಮೊತ್ತ ದುಪ್ಪಟ್ಟಾಗಿದೆ ಎಂದರು,
ಶಾಸಕ ಎಸ್ ಆರ್ ಶ್ರೀನಿವಾಸ್ ಯೋಜನೆಗೆ ವಿರೋಧಿಸಿದ್ದಾರೆ ಎಂಬ ಪ್ರಶ್ನೆಗೆ ಈಗ ನಮ್ಮ ಜೊತೆ ಬಂದಿದ್ದರೆಂದರೆ ಯೋಜನೆಯ ಪರವಾಗಿದ್ದಾರೆ ಎಂಬಂತೆ ಅಲ್ಲವೇ ಎಂದರು,
ಈ ಸಂದರ್ಭದಲ್ಲಿ ಶಾಸಕರಾದ ಟಿ ಬಿ ಜಯಚಂದ್ರ, ಎಸ್ ಆರ್ ಶ್ರೀನಿವಾಸ್,
ಹೇಮಾವತಿ ಎಂ ಡಿ ಫಣೀಂದ್ರ, ನೀರಾವರಿ ಸಲಹೆಗಾರ ಜಯಪ್ರಕಾಶ್, ಜಿಲ್ಲಾ ಪಂಚಾಯ್ತಿ ಸಿ ಇ ಓ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು