28/04/2023
*ಬೀದರ ಉತ್ತರ: ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿಯವರಿಗೆ ಬೆಂಬಲಿಸಿ ಸುದ್ದಿಗೋಷ್ಠಿ,*
ಮಾಚ್೯. 1೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷವಾದ ಬಿ.ಜೆ.ಪಿ. ಯನ್ನು ಅಧಿಕಾರಿದಿಂದ ದೂರ ಇಡಲು ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ರವರನ್ನು ಬೆಂಬಲಿಸಿ ಬೀದರ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಸುದ್ದಿಗೋಷ್ಠಿ ಮೂಲಕ ಮಾಧ್ಯಮ ಮಿತ್ರರಿಗೆ ತಿಳಿಸುತ್ತಿದ್ದೇವೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿ.ಜೆ.ಪಿಯ ಡಬಲ್ ಇಂಜನ್ ಸರ್ಕಾರ ಇದೆ ರಾಜ್ಯದಲ್ಲಿ ಯಾವುದೇ ಹೇಳಿಕೊಳ್ಳದ ಪ್ರಗತಿಯಾಗಿರುವುದಿಲ್ಲ. ಪ್ರತಿದಿನ ಬೆಲೆ ಏರಿಕೆ, ಒಂದು ಧರ್ಮ ಒ೦ದು ಜಾತಿಯ ನಡುವೆ ವಿಷಬೀಜ ಬಿತ್ತುವುದೇ ಆಗಿತ್ತು. ಮೀಸಲಾತಿ ಹೆಚ್ಚಳ ಚುನಾವಣೆ ನೆಪಕ್ಕೆ ಮಾತ್ರ ಗೆದ್ದ ನಂತರ ಜಾರಿಯಾಗುವುದಿಲ್ಲ, ಈ ನಿಟ್ಟಿನಲ್ಲಿ ಬಿ.ಜೆ.ಪಿ. ಸರ್ಕಾರವನ್ನು ರಾಜ್ಯದಲ್ಲಿ ಮತ್ತೊಮ್ಮೆ ಬರಬಾರದು, ಬೀದರ ಉತ್ತರ ಕ್ಷೇತ್ರದ 3 ಅವದಿಗೆ ಶಾಸಕರಾಗಿ ಶ್ರೀ ರಹೀಮ್ ಖಾನ್ ರವರು ದಲಿತರನ್ನು ಓಟ ಬ್ಯಾಂಕ ಆಗಿ ಮಾಡಿಕೊಂಡಿದ್ದಾರೆ. ದಲಿತ ಗ್ರಾಮಗಳಲ್ಲಿ ಇನ್ನೂ ಮೂಲಭೂತ ಸೌಕರ್ಯಗಳಿಲ್ಲ. ಅಲ್ಲದೇ ಬೀದರ ನಗರದಲ್ಲಿ ದಲಿತರು ವಾಸವಾಗಿರುವ ಕಾಲೋನಿಗಳಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು, ವಿದ್ಯುತ್ ಮತ್ತು ಮೂಲಭೂತ. ಸೌಕರ್ಯಗಳು ಇರುವುದಿಲ್ಲ ಅಲ್ಲದೆ ಡಾ ಬಿ.ಆರ್, ಅಂಬೇಡ್ಕರ ಭವನಗಳು ಮಂಜೂರು ಮಾಡಿಸಲು ಶಾಸಕರು ಹಿಂದೇಟು ಹಾಕಿದ್ದಾರೆ. ಅಲ್ಲದೇ ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಸಿಗಬೇಕಾಗಿರುವ ಪ್ರತಿ ಕುಟುಂಬಕ್ಕೆ 02 ಎಕರೆ ಜಮೀನು ಕೊಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. 2400 ಮನೆಗಳು ಮಂಜೂರಾಗಿದ್ದರೂ, ಫಲಾನುಭವಿಗಳಿಗೆ ಕೊಡದ ಅದರಲ್ಲಿ 1200 ಮನೆಗಳು ವಾಪಸ್ಸು ಸರ್ಕಾರಕ್ಕೆ ಕಳಿಸಿರುತ್ತಾರೆ. ಅಲ್ಲದೇ ಕ್ಷೇತ್ರದಲ್ಲಿ ವಿದ್ಯಾವಂತ ನಿರುದ್ಯೋ ಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಶಾಸಕರು ಯಾವುದೇ ಯೋಜನೆಗಳನ್ನು ತಂದಿರುವುದಿಲ್ಲ. ಅಲ್ಲದೆ, ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೀದರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲು ಹಿಂದೆಟು ಹಾಕಿದ್ದಾರೆ.
ಯಾವುದೇ ಅಧಿಕಾರವಿಲ್ಲದೇ ಬೀದರ ಜಿಲ್ಲೆಯಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಸಹಕಾರ ಕ್ಷೇತ್ರದಲ್ಲಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕಾಗಿ ಮತ್ತು ಜಿಲ್ಲೆಯ ನಗರದ ಎಲ್ಲಾ ಧಾರ್ಮಿಕ ದೇವಾಲಯಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಬೀದರ ನಗರದಲ್ಲಿ 02 ಎಕರೆ ಜಾಗದಲ್ಲಿ ಭವ್ಯವಾದ ಅಂಬೇಡ್ಕರ ಭವನ ನಿರ್ಮಾಣ ಮಾಡುವುದು, ಬೀದರ ಉತ್ತರ ಕ್ಷೇತ್ರ ಗುಡಿಸಲು ಮುಕ್ತವಾಗಿ, ಎಲ್ಲರಿಗೆ ವಸತಿ ಒದಗಿಸಿಕೊಡುವುದು, ವಿದ್ಯಾವಂತ ನಿರುದ್ಯೋಗಿಗಳಿಗೆ ವಿವಿಧ ಯೋಜನೆಗಳ ಮೂಲಕ ಉದ್ಯೋಗ, ಸ್ವಯಂ ಉದ್ಯೋಗಕ್ಕೆ ಅನುಕೂಲ ಮಾಡಿಕೊಡುವುದು, ದಲಿತ ಓಣಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮುರತಾದ ಬೇಡಿಕೆಗಳನ್ನು ಇಟ್ಟು ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್, ಅಭ್ಯರ್ಥಿಯಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ರವರನ್ನು ಬೆಂಬಲಿಸುತ್ತಿದ್ದೇವೆ
ಕಲ್ಯಾಣರಾವ ಭೊಸ್ಲೆ ( ಜಿಲ್ಲಾ ಸಂಚಾಲಕರು ಕ.ದ.ಸಂ.ಸ.( ಭಿಮವಾದ)
ಚಂದ್ರಕಾಂತ ನಿರಾಟೆ
ರಾಜ್ಯ ಉಪಾಧ್ಯಕ್ಷರು
ದಲಿತ ಸೇನೆ ಬೀದರ
ಮಾರುತಿ ಭೌದ್ದೆ ರಾಜ್ಯ ಸಂಘಟನಾ ಸಂಚಾಲಕರು ಕ.ರಾ.ದ.ಸಂ. ಸ.ಬೀದರ.
ಉಮೆಶ ಸ್ವಾರಳಿಕರ ಜಿಲ್ಲಾ ಸಂಚಾಲಕರು ಬೀದರ.
ಶಾಲಿವಾನ್ ಬಡಿಗೆರ್.ಬಾಬುರಾವ ಮಿಠಾರೆ.ಅಂಬರಿಷ್ ಕುದರೆ ಸೆರಿದ್ದರು.