24/04/2024
ಪೊಲೀಸ್ ಠಾಣೆಗೆ ದೇವರೇ ಬಂದೂ ಅಥಿತ್ಯ ಸ್ವೀಕಾರ ಮಾಡುತ್ತದೆ.
ಪ್ರತಿ ವರ್ಷ ಆಥಿತ್ಯ ಸ್ವೀಕರಿಸಿ ಬಾಂಧವ್ಯ ಬೆಳೆಸುವ ಹುದಿಕೇರಿ ಅಜ್ಜಪ್ಪ ತೆರೆ.
ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾದ ಹುದಿಕೇರಿಯ ಅಜ್ಜಪ್ಪ ತೆರೆ.
ಮಡಿಕೇರಿ ಏಪ್ರಿಲ್ 18 :- ಪ್ರತಿ ವರ್ಷ ಹುದಿಕೇರಿಯಲ್ಲಿ ಕಲ್ಯಾಟoಡ ಪೊನ್ನಪ್ಪ ಅಜ್ಜಪ್ಪ ತೆರೆ ಕೊಡವರ ಹೊಸ ವರ್ಷ ಎಡಮಾರ್ ಒಂದರಂದು ಅಂದರೆ ಏಪ್ರಿಲ್ 14ರಂದು ನಡೆಯುತ್ತದೆ. ತಲತಲಾಂತರದಿಂದ ಬಯವಂಡ ಕುಟುಂಬಸ್ಥರು ಈ ತರೆಯನ್ನು ನಡೆಸುತ್ತಿದ್ದರು ಆದರೆ ಕಳೆದ ಐದು ವರ್ಷದಿಂದ ಸಮಿತಿ ಒಂದನ್ನು ರಚಿಸಿ ದಡ್ಡೆರ ಕುಟುಂಬಸ್ಥರ ತಕ್ಕ ಮುಖ್ಯಸ್ಥಿಕೆಯಲ್ಲಿ ಅಜ್ಜಪ್ಪ ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ತೆರೆ ನಡೆಯುತ್ತಿದೆ. ಹುದಿಕೇರಿಯ ಜನತಾ ಪ್ರೌಢಶಾಲೆ ಹಿಂಭಾಗದ ಮೈದಾನದ ಸಮೀಪ ಅಜ್ಜಪ್ಪನ ದೇವಾಲಯವಿದೆ. ಅಸಂಖ್ಯಾ ಭಕ್ತಾದಿಗಳು ಇಲ್ಲಿ ಸೇರ್ಪಡೆಗೊಳ್ಳುತ್ತಾರೆ. ಆದರೆ ವಿಶೇಷ ಅಜ್ಜಪ್ಪ ತೆರೆ ಬೆಳಿಗ್ಗೆ ಇಲ್ಲಿನ ಪೊಲೀಸ್ ಠಾಣೆಗೆ ತೆರಳಿ ಆಥಿತ್ಯ ವನ್ನು ಸ್ವೀಕರಿಸುತ್ತದೆ. ಅಜ್ಜಪ್ಪ ತೆರೆ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಕಾಲು ತೊಳೆದು ಬರಮಾಡಿಕೊಳ್ಳಲಾಗುತ್ತದೆ ಹಾಗೆ ಅಜ್ಜಪ್ಪ ತೆರೆ ತಂದ ಫಲಹಾರವನ್ನು ಮತ್ತು ಪೊಲೀಸ್ ಠಾಣೆಯಲ್ಲಿ ನೀಡುವ ಫಲಹಾರವನ್ನು ಒಟ್ಟಿಗೆ ಪೊಲೀಸರೊಂದಿಗೆ ಸೇವಿಸುವುದು ವಾಡಿಕೆ. ಈ ಬಾರಿಯೂ ಕೂಡ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅಜ್ಜಪ್ಪ ತೆರೆ ಆತಿಥ್ಯವನ್ನು ಸ್ವೀಕರಿಸಿದೆ.
#ಹಿನ್ನೆಲೆ.
ಬ್ರಿಟಿಷರ ಅವಧಿಯಲ್ಲಿ ಅಜ್ಜಪ್ಪ ತೆರೆ ಕಟ್ಟುವವನನ್ನು ಕ್ಷಲಕ್ಕ ಕಾರಣಕ್ಕಾಗಿ ಪೊಲೀಸರು ಬಂಧಿಸಿ ಲಾಕಪ್ಪಿನಲ್ಲಿ ಹಾಕಿದಾಗ ತನಗೆ ಅಜ್ಜಪ್ಪ ತೆರೆ ಕಟ್ಟಬೇಕು ನನ್ನನ್ನು ಬಿಡಿ ಎಂದು ಅಂಗಲಾಚಿದಾಗ ಪೊಲೀಸರು ಬಿಡದಿದ್ದಾಗ ಮರುದಿನ ಠಾಣೆಯಲ್ಲಿ ಅಜ್ಜಪ್ಪ ತೆರೆ ಬಂದು ಬಾಗಿಲ ಬೀಗ ತೆರೆದುಕೊಂಡು ಮೈದಾನದ ಸಮೀಪದ ತನ್ನ ಸ್ಥಾನದಲ್ಲಿ ಕುಣಿಯಲು ಆರಂಭಿಸಿದಾಗ ಪೊಲೀಸರು ಅಲ್ಲಿಗೆ ತೆರಳಿ ತಾವು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿ ಪ್ರತಿವರ್ಷ ತಮ್ಮ ಸ್ಥಾನಕ್ಕೆ ಬಂದು ಆತಿತಿಯನ್ನು ಸ್ವೀಕರಿಸುವಂತೆ ಅಜ್ಜಪ್ಪ ತೆರೆಯಲ್ಲಿ ಕೋರಿಕೊಂಡಾಗ, ಪ್ರತಿ ವರ್ಷ ತಮ್ಮ ಅರಮನೆಗೆ ನಾನು ಭೇಟಿ ನೀಡುತ್ತೇನೆ ಎಂದು ಮಾತು ಕೊಟ್ಟಂತೆ ವಾಡಿಕೆಯಂತೆ ಪ್ರತಿ ವರ್ಷ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಥಿತ್ಯ ವನ್ನು ಸ್ವೀಕರಿಸಿ ತನ್ನ ಸ್ಥಾನಕ್ಕೆ ಸೇರುತ್ತದೆ. ಮೊನ್ನೆ ಏಪ್ರಿಲ್ 14ರಂದು ಅಜ್ಜಪ್ಪ ತೆರೆ ಜರುಗಿ ಹಲವು ಭಕ್ತಾದಿಗಳು ಸಾಕ್ಷಿಕರಿಸಿದರು.