
05/08/2025
#ಹೊಸಪುಸ್ತಕ
ನಿಮ್ಮ ಕೊನೆ ವೇತನವನ್ನು ನಿಮ್ಮ ಮಗಳು ಅಥವಾ ಮಗ ಮೊದಲ ತಿಂಗಳ ವೇತನವನ್ನಾಗಿ ಪಡೆಯುವ ಸಾಧ್ಯತೆ ಎಷ್ಟು? ಆ ಮಟ್ಟದ ಸಂಬಳ ಪಡೆಯಲು ಅವರೆಷ್ಟು ಸೈಕಲ್ ಹೊಡೆಯಬೇಕು ಗೊತ್ತಲ್ವಾ?
ಅದೇ ಉದ್ದಿಮೆ ಕಟ್ಟಿದವನು ನಿವೃತ್ತಿ ಹೊಂದಿದ ತಿಂಗಳು ಪಡೆದುಕೊಂಡ ಲಾಭ ಆತನ ಮಗಳು ಅಥವಾ ಮಗ ಮುಂದಿನ ತಿಂಗಳು ಪಡೆದುಕೊಳ್ಳಬಹುದು, ಅದಕ್ಕಿಂತ ಹೆಚ್ಚು ಆಗಬಹುದು. ಕಡಿಮೆಯಾದರೂ ತುಂಬಾ ಕುಸಿತವಂತೂ ಇರುವುದಿಲ್ಲ.
ಅರ್ಥವಿಷ್ಟೇ, ನೀವೆಷ್ಟೇ ವರ್ಷ ಕೆಲಸ ಮಾಡಿ, ನೀವು ಆ ಲೆಗೆಸಿಯ ಕಂಟಿನ್ಯೂಟಿ ನಿಮ್ಮ ಮಕ್ಕಳಿಗೆ ಬಿಟ್ಟು ಹೋಗಲಾರಿರಿ. ಅಂದರೆ ನೀವೆಷ್ಟೆ ಮೆಟ್ಟಿಲು ಹತ್ತದ್ದಿರೂ ನಿಮ್ಮ ಮಕ್ಕಳು ಮತ್ತೆ ಮೊದಲ ಮೆಟ್ಟಿಲಿಂದ ಶುರು ಮಾಡಬೇಕು! ಉದ್ದಿಮೆಯಲ್ಲಿ ನೀವು ಎಷ್ಟು ಮೆಟ್ಟಿಲು ಏರಿರುತ್ತೀರಿ, ನಿಮ್ಮ ಮಕ್ಕಳು ಅಲ್ಲಿಂದ ಶುರು ಮಾಡುತ್ತಾರೆ. ಅವರಿಗೆ ಒಂದು ತಲೆಮಾರಿನ ಕಷ್ಟದ ಲಾಭ ಸಿಗುತ್ತೆ. ಅಂದರೆ ಕಂಟಿನ್ಯೂಟಿ ಸಿಗುತ್ತದೆ. ಇದರ ಜೊತೆಗೆ AI ಬರುತ್ತಿದೆ. ಅದು ಸಣ್ಣ ಉದ್ದಿಮೆ ಕಟ್ಟುವುದನ್ನು ಆಯ್ಕೆಯಾಗಿ ಉಳಿಸುವುದಿಲ್ಲ. ಅನಿವಾರ್ಯವಾಗಿಸಲಿದೆ.
ಈ ನಿಟ್ಟಿನಲ್ಲಿ:
ಸಣ್ಣ ಉದ್ದಿಮೆ ಕಟ್ಟುವುದು ಹೇಗೆ? ಅದಕ್ಕೆ ಬೇಕಾದ ಮನಸ್ಥಿತಿಯೇನು? ಯಾವ ಫಾರ್ಮ್ಯಾಟ್ ಆಯ್ಕೆ ಮಾಡಿಕೊಳ್ಳಬೇಕು? ಉದ್ದಿಮೆ ತೆರೆಯಲು ಬೇಕಾಗುವ ಅನುಮತಿ ಪತ್ರಗಳು ಯಾವುವು? ಅವುಗಳನ್ನು ಪಡೆಯುವುದು ಹೇಗೆ? ಫಂಡ್ ರೈಸಿಂಗ್ ಹೇಗೆ? ಒಟ್ಟಾರೆ ಸಣ್ಣ ಉದ್ದಿಮೆ ಕಟ್ಟಲು ಬೇಕಾಗುವ ಎಲ್ಲಾ ಅವಶ್ಯ ಮಾಹಿತಿ ಇಲ್ಲಿದೆ.