Praja Sindhu Kannada

Praja Sindhu Kannada Welcome To Praja Sindhu Kannada News channel, Edited By Arif Antaragangi -

Paid Promotion: [email protected]
(1)

17/08/2026

Follow page

ಮಕ್ಕಳ ಕನಸಿಗೆ ರೆಕ್ಕೆ ನೀಡೋಣ..! | ಸಚಿವ ಎಂ.ಬಿ. ಪಾಟೀಲವಿಜಯಪುರ ಜಿಲ್ಲೆಯ ಮಮದಾಪುರ ಸರ್ಕಾರಿ ಶಾಲೆಗೆ ಸಂಬಂಧಿಸಿದ ಮಗುವಿನೊಂದಿಗೆ ಸಚಿವ ಎಂ.ಬಿ...
11/08/2026

ಮಕ್ಕಳ ಕನಸಿಗೆ ರೆಕ್ಕೆ ನೀಡೋಣ..! | ಸಚಿವ ಎಂ.ಬಿ. ಪಾಟೀಲ

ವಿಜಯಪುರ ಜಿಲ್ಲೆಯ ಮಮದಾಪುರ ಸರ್ಕಾರಿ ಶಾಲೆಗೆ ಸಂಬಂಧಿಸಿದ ಮಗುವಿನೊಂದಿಗೆ ಸಚಿವ ಎಂ.ಬಿ. ಪಾಟೀಲ ಅವರು ಆತ್ಮೀಯವಾಗಿ ಭೇಟಿಯಾದ ಕ್ಷಣದ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರ ಕನಸುಗಳಿಗೆ ರೆಕ್ಕೆ ನೀಡುವುದೇ ಅತ್ಯಂತ ಶ್ರೇಷ್ಠ ಸೇವೆ” ಎಂದು ಸಚಿವ ಎಂ.ಬಿ. ಪಾಟೀಲ ಅವರು ಫೋಟೋ ಹಂಚಿಕೊಳ್ಳುವ ಮೂಲಕ ಶಿಕ್ಷಣದ ಮಹತ್ವವನ್ನು ಸಾರಿದ್ದಾರೆ.

ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ, ಉತ್ತಮ ಅವಕಾಶಗಳು ಹಾಗೂ ಭವಿಷ್ಯದ ಕನಸುಗಳನ್ನು ನನಸು ಮಾಡಿಕೊಳ್ಳಲು ಅಗತ್ಯವಾದ ಪ್ರೋತ್ಸಾಹ ದೊರೆಯಬೇಕು ಎಂಬ ಸಂದೇಶವನ್ನು ಸಚಿವರ ಈ ನಡೆ ಬಿಂಬಿಸಿದೆ.

10/08/2026

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ನೂತನ ಸಾರಥಿಗಳು..!

ಸಿಂದಗಿ:ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಶಿವು ಎಸ್. ಹತ್ತಿ ಅವರು ಅಧ್ಯಕ್ಷರಾಗಿ ಹಾಗೂ ಸಿದ್ದಾರ್ಥ್ ರೂಗಿ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಶಿವು ಎಸ್.ಹತ್ತಿ ಹಾಗೂ ಉಪಾಧ್ಯಕ್ಷ ಸಿದ್ದಾರ್ಥ್ ರೂಗಿ ಅವರನ್ನು ಶಾಸಕ ಅಶೋಕ ಮನಗೂಳಿ ಅಭಿನಂದಿಸಿ ಸನ್ಮಾನಿಸಿದರು

ಈ ಸಂದರ್ಭದಲ್ಲಿ ಬ್ಯಾಂಕಿನ ಎಲ್ಲಾ ನಿರ್ದೇಶಕರು, ಮುಖಂಡರು ಹಾಗೂ ಪ್ರಮುಖರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಬ್ಯಾಂಕಿನ ಅಭಿವೃದ್ಧಿ ಹಾಗೂ ರೈತರ ಹಿತಕ್ಕಾಗಿ ನೂತನ ಅಧ್ಯಕ್ಷ–ಉಪಾಧ್ಯಕ್ಷರು ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಮುಖಂಡರು ಆಶಯ ವ್ಯಕ್ತಪಡಿಸಿದರು.

#ಸಿಂದಗಿ #ವಿಜಯಪುರ #ಸಹಕಾರಿಬ್ಯಾಂಕ್ #ಪ್ರಾಥಮಿಕಸಹಕಾರಿಬ್ಯಾಂಕ್ #ಕೃಷಿಮತ್ತುಗ್ರಾಮೀಣಅಭಿವೃದ್ಧಿ #ಶಿವುಎಸ್_ಹತ್ತಿ #ಸಿದ್ದಾರ್ಥ್_ರೂಗಿ #ಅಶೋಕಮನಗೂಳಿ #ಅವಿರೋಧಆಯ್ಕೆ #ಸಹಕಾರಿಕ್ಷೇತ್ರ #ರೈತರು #ರೈತರಹಿತ

09/08/2026

ಚಟ್ಟರಕಿ ಗ್ರಾಮ ಪಂಚಾಯಿತಿ ಸಮಗ್ರ ವರದಿ ವೀಕ್ಷಿಸಿ ಅತಿ ಶೀಘ್ರದಲ್ಲೇ|

#ಚಟ್ಟರಕಿ #ಚಟ್ಟರಕಿಗ್ರಾಮಪಂಚಾಯಿತಿ #ಸಿಂದಗಿ #ಸಿಂದಗಿತಾಲೂಕು #ವಿಜಯಪುರ #ಗ್ರಾಮಪಂಚಾಯಿತಿ #ಸಮಗ್ರವರದಿ #ಗ್ರಾಮೀಣಸಮಸ್ಯೆಗಳು #ಅಭಿವೃದ್ಧಿ #ಜನಸ್ಪಂದನೆ #ಹೇಳ್ರಿನಿಮ್ಮಪ್ರಾಬ್ಲಮ್

ಸಿಂದಗಿ ಕ್ಷೇತ್ರದಲ್ಲಿ ಬರ ಪರಿಸ್ಥಿತಿ ವೀಕ್ಷಿಸಿದ ಸಚಿವ ಎಂ.ಬಿ. ಪಾಟೀಲಸಿಂದಗಿ: ಮತಕ್ಷೇತ್ರದ ಕನ್ನೊಳ್ಳಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳಲ್ಲಿ...
09/08/2026

ಸಿಂದಗಿ ಕ್ಷೇತ್ರದಲ್ಲಿ ಬರ ಪರಿಸ್ಥಿತಿ ವೀಕ್ಷಿಸಿದ ಸಚಿವ ಎಂ.ಬಿ. ಪಾಟೀಲ

ಸಿಂದಗಿ: ಮತಕ್ಷೇತ್ರದ ಕನ್ನೊಳ್ಳಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳಲ್ಲಿ ಬರ ಪರಿಸ್ಥಿತಿಯನ್ನು ಸಚಿವ ಎಂ.ಬಿ. ಪಾಟೀಲ ಅವರು ಖುದ್ದು ವೀಕ್ಷಿಸಿದರು.

ಕೈಕೊಟ್ಟ ಮುಂಗಾರು ಮಳೆಯಿಂದಾಗಿ ಕಬ್ಬು, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಗ್ರಾಮಗಳಲ್ಲಿ ಬಿತ್ತನೆ ಕಾರ್ಯವೇ ನಡೆದಿಲ್ಲ ಎಂದು ರೈತರು ಸಚಿವರ ಗಮನಕ್ಕೆ ತಂದರು.

ಬೆಳೆಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಎಂ.ಬಿ. ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಡಾ. ಆನಂದ್ ಕೆ., ಜಿಪಂ ಸಿಇಒ ರಿಷಿ ಆನಂದ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

#ಬರಪರಿಸ್ಥಿತಿ #ಸಿಂದಗಿ #ವಿಜಯಪುರ #ರೈತರು #ರೈತರಸಮಸ್ಯೆ #ಬೆಳೆಹಾನಿ #ಕೃಷಿಸುದ್ದಿ #ಮುಂಗಾರುಮಳೆ #ರೈತರಿಗೆಪರಿಹಾರ

09/08/2026

ಬರಗಾಲ ಹಿನ್ನಲೆ ವಿಜಯಪುರದ ಹಿಟ್ಟಿನಹಳ್ಳಿಗೆ ಭೇಟಿ ನೀಡಿ ಹತ್ತಿ ಬೆಳೆ ವಿಕ್ಷಿಸಿದ ಸಚಿವ ಎಂ.ಬಿ‌.ಪಾಟೀಲ್.

ನಾಗಠಾಣ:ಮತಕ್ಷೇತ್ರದ ಹಿಟ್ನಳ್ಳಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳಲ್ಲಿ ಬರ ಪರಿಸ್ಥಿತಿಯನ್ನು ಸಚಿವ ಎಂ.ಬಿ. ಪಾಟೀಲ ಅವರು ಖುದ್ದು ವೀಕ್ಷಿಸಿದರು.

ಕೈಕೊಟ್ಟ ಮುಂಗಾರು ಮಳೆಯಿಂದಾಗಿ ಕಬ್ಬು, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಗ್ರಾಮಗಳಲ್ಲಿ ಬಿತ್ತನೆ ಕಾರ್ಯವೇ ನಡೆದಿಲ್ಲ ಎಂದು ರೈತರು ಸಚಿವರ ಗಮನಕ್ಕೆ ತಂದರು.

ಬೆಳೆಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಎಂ.ಬಿ. ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕಡೊಂದ, ಜಿಲ್ಲಾಧಿಕಾರಿ ಡಾ. ಆನಂದ್ ಕೆ., ಜಿಪಂ ಸಿಇಒ ರಿಷಿ ಆನಂದ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

#ಬರಪರಿಸ್ಥಿತಿ #ವಿಜಯಪುರ #ರೈತರು #ರೈತರಸಮಸ್ಯೆ #ಬೆಳೆಹಾನಿ #ಕೃಷಿಸುದ್ದಿ #ಮುಂಗಾರುಮಳೆ #ರೈತರಿಗೆಪರಿಹಾರ

08/08/2026

ಪ್ರಕೃತಿ ವಿಸ್ಮಯ ಗುಜರಾತಿನಮೊರ್ಬಿ ತಾಲ್ಲೂಕಿನ ವಿರ್ಪಾರ್ಡಾ ಗ್ರಾಮದಲ್ಲಿ ಕೃಷಿ ಬಾವಿಯ ನೀರು ಅಲೆಗಳಂತೆ ಚಲಿಸುತ್ತಿರುವ ವಿಚಿತ್ರ ಘಟನೆ ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ಹರಿದಾಡುತ್ತಿದ್ದಂತೆ, ಜಿಲ್ಲಾಧಿಕಾರಿ ಸ್ವಪ್ನಿಲ್ ಖರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಭೂವಿಜ್ಞಾನಿಗಳಿಗೆ ಸೂಚಿಸಿದ್ದಾರೆ.

ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಬಾವಿಯ ನೀರಿನ ಕೆಳಗೆ ಸಿಲುಕಿರುವ ಗಾಳಿಯಿಂದಾಗಿ ನೀರಿನ ಮೇಲ್ಮೈನಲ್ಲಿ ಅಲೆಗಳಂತಹ ಚಲನೆ ಉಂಟಾಗುತ್ತಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಲುಕಿರುವ ಗಾಳಿ ಸ್ಥಳಾಂತರಗೊಂಡಾಗ ನೀರಿನ ಮೇಲ್ಮೈ ಚಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಕುರಿತು ಗುಜರಾತ್ ಅಂತರ್ಜಲ ಸಂಶೋಧನಾ ಸಂಸ್ಥೆಗೆ ವಿವರವಾದ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

#ಪ್ರಕೃತಿವಿಸ್ಮಯ #ಗುಜರಾತ್ #ಮೊರ್ಬಿ #ವಿರ್ಪಾರ್ಡಾ #ಬಾವಿನೀರು #ವಿಚಿತ್ರಘಟನೆ #ಅಚ್ಚರಿಘಟನೆ

08/08/2026

ಸಿಂದಗಿ ನಗರಸಭೆಗೆ ಕಚೇರಿಗೆ ಲೋಕಾಯುಕ್ತ ದಿಢೀರ್ ಭೇಟಿ;ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆ.!


07/08/2026

ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ: "ಕಾಂಗ್ರೆಸ್‌ನಲ್ಲೇ ಇರುತ್ತೇನೆ, ಸಚಿವ ಸ್ಥಾನಕ್ಕಾಗಿ ಇನ್ನು ನಿರೀಕ್ಷೆ ಇಲ್ಲ"

06/08/2026

Celebrating my 1st year on Facebook. Thank you for your continuing support. I could never have made it without you. 🙏🤗🎉

Address

Sindagi
Vijayapura

Website

Alerts

Be the first to know and let us send you an email when Praja Sindhu Kannada posts news and promotions. Your email address will not be used for any other purpose, and you can unsubscribe at any time.

Shortcuts

Share