
19/12/2022
ಇದು ಇಡೀ ಚಿತ್ರರಂಗವೇ ತಲೆ ತಗ್ಗಿಸುವಂತ ಸುದ್ದಿ. ಅಂತಹ ಕೃತ್ಯ ಮಾಡಿದವನು ಮತ್ತೊಬ್ಬರ ಅಭಿಮಾನಿಯೆಂಬ ಮಾತಿರಲಿ, ಕನಿಷ್ಟ ಮನುಷ್ಯನೂ ಆಗಿರಲಾರ. ಎಲ್ಲರನ್ನೂ ಪ್ರೀತಿಸುವ ಗುಣ ಎಲ್ಲರಲ್ಲಿಯೂ ಇರುವುದಿಲ್ಲ ನಿಜ, ಆದರೆ ಯಾರನ್ನಾದರೂ ದ್ವೇಷಿಸುವ ಮುನ್ನ ನಾವೆಷ್ಟು ಸರಿ ಇದ್ದೇವೆ ಎಂಬುದನ್ನ ಯೋಚಿಸಬೇಕಾಗುತ್ತದೆ.
ಇದನ್ನೆಲ್ಲಾ ಸಹಿಸಿ ಮತ್ತಷ್ಟು ಗಟ್ಟಿಯಾಗುವ ಶಕ್ತಿ ದರ್ಶನ್ ಸರ್ ಗೆ ಖಂಡಿತಾ ಇದೆ. ಅವರಿಗೆ ಲಕ್ಷಾಂತರ ಜನ ಅಭಿಮಾನಿಗಳ ಶ್ರೀರಕ್ಷೆ ಇದೆ. ಅವರ ಅಭಿಮಾನಿಗಳಲ್ಲೊಬ್ಬನಾಗಿ ನಾನು ಅವರೊಂದಿಗಿದ್ದೇನೆ. ಇಂತಹವು ಕನ್ನಡ ನೆಲದಲ್ಲಿ ಮರುಕಳಿಸದಿರಲಿ ಎಂದು ಬೇಡಿಕೊಳ್ಳುತ್ತೇನೆ